ಬಡ ಮತ್ತು ಮಧ್ಯಮ ವರ್ಗದವರಿಗೂ ಬೆಂಗಳೂರಿನಲ್ಲಿ ಮನೆ ಕಟ್ಟಲು ನಿವೇಶನ ನೀಡುವುದಕ್ಕೆ ರಾಜ್ಯ ಸಮ್ಮಿಶ್ರ ಸರ್ಕಾರ ಮುಂದಾಗಿದ್ದು, ಬಹು ನಿರೀಕ್ಷಿತ ಕೆಂಪೇಗೌಡ ಬಡಾವಣೆಯ ಸೈಟು ಹಂಚಿಕೆಗೆ ಕೊನೆಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದಾರೆ.

hdk bengaluru lakes

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲಹಂತದಲ್ಲಿ 5 ಸಾವಿರ ನಿವೇಶನಗಳನ್ನು ಸಾರ್ವಜನಿಕರಿಗೆ ಈಗಾಗಲೇ ಹಂಚಿಕೆಮಾಡಿದ್ದು, ಎರಡನೆಹಂತದಲ್ಲೂ 5 ಸಾವಿರ ನಿವೇಶನಗಳ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಗೃಹ ಹಾಗೂ ನಗರಾಭಿವೃದ್ಧಿ ಸಚಿವರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್ ನಲ್ಲಿ ತಿಳಿಸಿದರು.

ರಿಜ್ವಾನ್ ಅರ್ಷದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಿವೇಶನ ಹಂಚಿಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ತಾತ್ಕಾಲಿಕ ಹಂಚಿಕೆ ಪಟ್ಟಿಯನ್ನು ಪ್ರಾಧಿಕಾರದ ಅಂತರ್ಜಾಲದಲ್ಲಿ ಪ್ರಚುರಪಡಿಸಿ ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಲಿಖಿತರೂಪದಲ್ಲಿ ದೂರುಸಲ್ಲಿಸಲು 10.7.2018 ರೊಳಗೆ ಅವಕಾಶ ಕಲ್ಪಿಸಲಾಗಿದೆ ಎಂದೆರು.

ಸಾರ್ವಜನಿಕರು ಯಾವುದಾದರೂ ಆಕ್ಷೇಪಣೆ ಸಲ್ಲಿಸಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಿ, ಅಂತಿಮಪಟ್ಟಿ ಪ್ರಕಟಿಸಲಾಗುವುದು. ಒಟ್ಟಾರೆ ಒಂದುವಾರದೊಳಗೆ ಕ್ರಮಕೈಗೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದರು. ಅಲ್ಲದೆ, ಬಡಾವಣೆಯಲ್ಲಿ ಅಗತ್ಯ ಮೂಲಭೂತಸೌಲಭ್ಯ ಒದಗಿಸುವುದಾಗಿ ಅವರುಹೇಳಿದರು.

ಈ ಬಗ್ಗೆ ಈಗಾಗಲೇ ಬಿಡಿಎಗೆ ಅರ್ಜಿ ಸಲ್ಲಿಸಿ ಹಣ ಕಟ್ಟಿರುವವರು ನಿವೇಶನ ಹಂಚಿಕೆ ಸಂಬಂಧಿಸಿದಂತೆ ಯಾಶವುದೇ ಆಕ್ಷೇಪಣೆಗಳಿದ್ದರೆ ಪ್ರಧಿಕಾರಕ್ಕೆ ಲಿಖಿತ ದೂರು ನೀಡಬಹುದಾಗಿದ್ದು ಈ ದೂರುಗಳ ಪರಿಶಿಲನೆಯ ನಂತರ ನಿವೇಶನ ಆಲಾಟ್ಮೆಂಟ್ ಆಗಲಿದೆ.

Congress-JDS
Please follow and like us:
0
https://kannadadalli.com/wp-content/uploads/2018/07/kempegowda-layout.jpghttps://kannadadalli.com/wp-content/uploads/2018/07/kempegowda-layout-150x100.jpgKannadadalli Editorಸುದ್ದಿ5000 kempegowda layout site distribution,Congress,dr.g parameshwar,HD kumarswamy,JDSಬಡ ಮತ್ತು ಮಧ್ಯಮ ವರ್ಗದವರಿಗೂ ಬೆಂಗಳೂರಿನಲ್ಲಿ ಮನೆ ಕಟ್ಟಲು ನಿವೇಶನ ನೀಡುವುದಕ್ಕೆ ರಾಜ್ಯ ಸಮ್ಮಿಶ್ರ ಸರ್ಕಾರ ಮುಂದಾಗಿದ್ದು, ಬಹು ನಿರೀಕ್ಷಿತ ಕೆಂಪೇಗೌಡ ಬಡಾವಣೆಯ ಸೈಟು ಹಂಚಿಕೆಗೆ ಕೊನೆಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದಾರೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲಹಂತದಲ್ಲಿ 5 ಸಾವಿರ ನಿವೇಶನಗಳನ್ನು ಸಾರ್ವಜನಿಕರಿಗೆ ಈಗಾಗಲೇ ಹಂಚಿಕೆಮಾಡಿದ್ದು, ಎರಡನೆಹಂತದಲ್ಲೂ 5 ಸಾವಿರ ನಿವೇಶನಗಳ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಗೃಹ ಹಾಗೂ ನಗರಾಭಿವೃದ್ಧಿ ಸಚಿವರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್...ಕನ್ನಡಿಗರ ವೆಬ್​ ಚಾನೆಲ್​