ಸ್ಯಾಂಡಲ್ ವುಡ್ : ಸ್ಯಾಂಡಲ್ ವುಡ್ ನ ರಾಧ ರಮಣ ಧಾರಾವಾಹಿ ಖ್ಯಾತಿಯ ನಟ ಸ್ಕಂದ ಅಶೋಕ್ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹು ದಿನದ ಗೆಳತಿ ಶಿಕಾ ಪ್ರಸಾದ್ ಜೊತೆಯಲ್ಲಿ ರಮಣ್ ವಿವಾಹವಾಗುತ್ತಿರುವ ವಿಚಾರ ಎಲ್ಲರಿಗೂ ಈಗಾಗಲೇ ತಿಳಿದಿದೆ.

ಅಂದಹಾಗೆ, ಧಾರಾವಾಹಿಗೂ ಮುನ್ನವೇ ಸ್ಕಂದ ಅಶೋಕ್ ಸಾಕಷ್ಟು ಸಿನಿಮಾಗಳಲ್ಲಿಯೂ ಅಭಿನಯ ಮಾಡಿದ್ದಾರೆ. ತಮಿಳು, ತೆಲುಗು ಸೇರಿದಂತೆ ಮಲೆಯಾಳಂ ಚಿತ್ರಗಳಲ್ಲಿಯೂ ಸ್ಕಂದ ಅವರ ಅಭಿನಯವಿದೆ. ಕನ್ನಡದ ‘ಚಾರುಲತಾ’ ಚಿತ್ರದಲ್ಲಿಯೂ ನಾಯಕನಾಗಿ ಕಾಣಿಸಿಕೊಂಡಿದ್ದರು.ಇತ್ತೀಚಿಗಷ್ಟೆ ಸ್ಕಂದ ಹಾಗೂ ಶಿಕಾ ಪ್ರಸಾದ್ ಇಬ್ಬರ ನಿಶ್ಚಿತಾರ್ಥ ನಡೆದಿದ್ದು ಇದೇ ತಿಂಗಳ 31 ರಂದು ಗುರು ಹಿರಿಯರ ಸಮ್ಮುಖದಲ್ಲಿ ವಿವಾಹ ಆಗಲಿದ್ದಾರೆ. ಸಾವಿರಾರು ಹುಡುಗಿಯರ ಮನಸ್ಸು ಕದ್ದಿರುವ ನಾಯಕನ ಮದುವೆ ಆರು ದಿನಗಳು ನಡೆಯಲಿದೆ. ಹಾಗಾದರೆ ಹೇಗೆ ನಡೆಯಲಿದೆ ಮದುವೆ ಅಂತೀರಾ? ಎಲ್ಲಿ ನಡೆಯುತ್ತೆ ಅಂತೀರಾ..? ಖಂಡಿತ ಹೇಳ್ತೀವಿ ಮುಂದೆ ಓದಿ.ಬೆಳ್ಳಿ ತೆರೆ ಹಾಗೂ ಕಿರುತೆರೆಯಿಂದಲೇ ಪ್ರಖ್ಯಾತಿ ಗಳಿಸಿರುವ ನಟ ಸ್ಕಂದ ಅಶೋಕ್ ಮದುವೆ ಆರು ದಿನಗಳ ಕಾಲ ನಡೆಯಲಿದೆ. ಒಂದೊಂದು ಶಾಸ್ತ್ರ ಸಮಾರಂಭ ಒಂದೊಂದು ಕಡೆಯಲ್ಲಿ ಜರುಗಲಿದೆ.

ಹೌದು, ಮೇ 30 ರಂದು ಸ್ಕಂದ ಹಾಗೂ ಶಿಕಾ ಮದುವೆ ಸಮಾರಂಭ ಜರುಗಲಿದ್ದು ಅದಕ್ಕೂ ಮುನ್ನವಾಗಿ ಅಂದರೆ ಮೇ 25 ರಂದು ಬಸವನಗುಡಿಯಲ್ಲಿರುವ ಗಂಜಂ ಕಲ್ಯಾಣ ಮಂಟಪದಲ್ಲಿ ಹಳದಿ ಶಾಸ್ತ್ರ ನಡೆಯಲಿದೆ.

ಅರಿಶಿನ ಶಾಸ್ತ್ರದ ನಂತರ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮೆಹೆಂದಿ ಸಮಾರಂಭವನ್ನು ಆಯೋಜಿಸಲಾಗಿದೆ. ಮೇ 28 ರಂದು ಮೆಹೆಂದಿ ಶಾಸ್ತ್ರ ಜರುಗಲಿದೆ.ಮೆಹೆಂದಿ ನಡೆದ ನಂತರ ಸಂಜೆ ತಾಜ್ ವೆಸ್ಟ್ ಎಂಡ್ ನಲ್ಲಿ ಸಂಗೀತ್ ಕಾರ್ಯಕ್ರಮ ಜರುಗಲಿದೆ. ರಮಣ್ ಮತ್ತು ಶಿಕಾ ಅವರ ಸಂಗೀತ್ ಕಾರ್ಯಕ್ರಮದಲ್ಲಿ ಸಾಕಷ್ಟು ಸಿನಿಮಾ ತಾರೆಯರು ಹಾಗೂ ಕಿರುತೆರೆಯ ಕಲಾವಿದರು ಭಾಗಿ ಆಗಲಿದ್ದಾರೆ.

ಇನ್ನು, ಮೇ 29 ರಂದು ವರಪೂಜೆ ನಡೆಯಲಿದ್ದು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ವರಪೂಜೆ ಸಮಾರಂಭ ಜರುಗಲಿದೆ. ಅದರ ಜೊತೆಯಲ್ಲಿ ಬಳೆ ಶಾಸ್ತ್ರ ಕೂಡ ಅಲ್ಲಿಯೇ ನಡೆಯಲಿದೆ. ಸ್ಕಂದ ಅಶೋಕ್ ಹಾಗೂ ಶಿಕಾ ಪ್ರಸಾದ್ ಮನೆಯ ಹಿರಿಯರೆಲ್ಲರೂ ವರ ಪೂಜೆಯಲ್ಲಿ ಭಾಗಿ ಆಗಲಿದ್ದಾರೆ.ನಾಲ್ಕು ದಿನಗಳು ಈ ಶಾಸ್ತ್ರಗಳೆಲ್ಲವನ್ನು ಮುಗಿಸಿದ ನಂತರ ಮೇ 30 ರಂದು ಬೆಂಗಳೂರು ಅರಮನೆಯಲ್ಲಿ ಆರತಕ್ಷತೆ ನಡೆಯಲಿದೆ. 31 ರಂದು ವಿವಾಹವೂ ಅರಮನೆಯಲ್ಲೇ ನಡೆಯುತ್ತದೆ.

ಸ್ಕಂದ ಅಶೋಕ್ ಹಾಗೂ ಶಿಕಾ ಪ್ರಸಾದ್ ಮದುವೆ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ರಾಜಕೀಯ ಗಣ್ಯರು ಹಾಗೂ ಸಿನಿಮಾ ಸ್ಟಾರ್ ಗಳು ಭಾಗಿ ಆಗಲಿದ್ದಾರೆ. ಡಾ ರಾಜ್ ಕುಮಾರ್, ದೇವಗೌಡ, ರಾಕಿಂಗ್ ಸ್ಟಾರ್ ಯಶ್ ಹೀಗೆ ಸಾಕಷ್ಟು ಗಣ್ಯರ ಕುಟುಂಬದ ಮದುವೆಗಳನ್ನ ಮಾಡಿಸಿದ ಕ್ಲೋವರ್ ಮ್ಯಾನ್ಷನ್ ಹಾಗೂ ಅಫಿಷಿಯಲ್ ಬೆಂಗಳೂರು ಫ್ಯಾಲೆಸ್ ವೆಡ್ಡಿಂಗ್ ಪ್ಲಾನರ್ ನ ಧ್ರುವ ಅವರೇ ಈ ಮದುವೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.ಒಟ್ಟಾರೆ ಹೇಳೋದಾದ್ರೆ ಇಷ್ಟೆಲ್ಲಾ ಕಾರ್ಯಕ್ರಮಗಳೂ ಕೂಡ ಈ ವಾರದಿಂದಲೇ ಆರಂಭವಾಗಲಿದ್ದು ಸ್ಕಂದನ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಕುತೂಹಲ ಮೂಡಿಸುತ್ತಿದೆ ಎಂದರೆ ತಪ್ಪಾಗಲಾರದು.

Please follow and like us:
0
https://kannadadalli.com/wp-content/uploads/2018/05/ಜಜಹಕಜಹಜಕ.pnghttps://kannadadalli.com/wp-content/uploads/2018/05/ಜಜಹಕಜಹಜಕ-150x100.pngSindhuಸಿನೆಮಾರಮಣನ ಮದುವೆ ಸಂಭ್ರಮ,ಶಿಕಾ,ಸ್ಯಾಂಡಲ್ ವುಡ್  ಸ್ಯಾಂಡಲ್ ವುಡ್ : ಸ್ಯಾಂಡಲ್ ವುಡ್ ನ ರಾಧ ರಮಣ ಧಾರಾವಾಹಿ ಖ್ಯಾತಿಯ ನಟ ಸ್ಕಂದ ಅಶೋಕ್ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹು ದಿನದ ಗೆಳತಿ ಶಿಕಾ ಪ್ರಸಾದ್ ಜೊತೆಯಲ್ಲಿ ರಮಣ್ ವಿವಾಹವಾಗುತ್ತಿರುವ ವಿಚಾರ ಎಲ್ಲರಿಗೂ ಈಗಾಗಲೇ ತಿಳಿದಿದೆ. ಅಂದಹಾಗೆ, ಧಾರಾವಾಹಿಗೂ ಮುನ್ನವೇ ಸ್ಕಂದ ಅಶೋಕ್ ಸಾಕಷ್ಟು ಸಿನಿಮಾಗಳಲ್ಲಿಯೂ ಅಭಿನಯ ಮಾಡಿದ್ದಾರೆ. ತಮಿಳು, ತೆಲುಗು ಸೇರಿದಂತೆ ಮಲೆಯಾಳಂ ಚಿತ್ರಗಳಲ್ಲಿಯೂ ಸ್ಕಂದ ಅವರ ಅಭಿನಯವಿದೆ. ಕನ್ನಡದ ‘ಚಾರುಲತಾ'...ಕನ್ನಡಿಗರ ವೆಬ್​ ಚಾನೆಲ್​