ಸ್ಯಾಂಡಲ್ ವುಡ್ : ಸ್ಯಾಂಡಲ್ ವುಡ್ ನ ರಾಧಾ ರಮಣ ಧಾರಾವಾಹಿ ಖ್ಯಾತಿಯ ಸ್ಕಂದ ಅಶೋಕ್ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ನಿನ್ನೆಯಷ್ಟೇ ಅಶೋಕ್ ಹಾಗೂ ಶಿಖಾ ಪ್ರಸಾದ್ ಅವರ ಹಳದಿ ಶಾಸ್ತ್ರಗಳು ನಡೆದಿದ್ದು ನಾಳೆ ಮೆಹಂದಿ ಹಾಗೂ ಸಂಗೀತ್ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿದೆ .

ಹೀಗಿರುವಾಗ, ಅದ್ಧೂರಿ ಹಾಗೂ ವಿಭಿನ್ನವಾಗಿ ನಡೆಯುತ್ತಿರುವ ಸ್ಕಂದ ಅಶೋಕ್ ಅವರ ಮದುವೆಗೆ ಸಾಕಷ್ಟು ಗಣ್ಯರು ಹಾಗೂ ರಾಜಕೀಯ ವ್ಯಕ್ತಿಗಳು ಭಾಗಿ ಆಗಲಿದ್ದಾರೆ. ಈಗಾಗಲೇ ಆಮಂತ್ರಣ ಪತ್ರಗಳನ್ನು ಗಣ್ಯರಿಗೆ ಹಾಗೂ ಸ್ನೇಹಿತರಿಗೆ ತಲುಪಿಸಿದ್ದು ಆಮಂತ್ರಣ ಪತ್ರವು ಕೂಡ ತುಂಬಾ ವಿಶೇಷವಾಗಿದೆ.ಹೌದು, ಐದು ವಿಭಿನ್ನ ರೀತಿಯಲ್ಲಿ ರಮಣ್-ಶಿಖಾ ವಿವಾಹ ಆಮಂತ್ರಣವನ್ನು ಪ್ರಿಂಟ್ ಮಾಡಿಸಿದ್ದು ನೋಡುಗರನ್ನು ಆಕರ್ಷಣೆ ಮಾಡುತ್ತಿದೆ. ಹಾಗಾದರೆ ರಮಣ ಹಾಗೂ ಶಿಖಾ ಪ್ರಸಾದ್ ಅವರ ಮದುವೆ ಇನ್ವಿಟೇಷನ್ ವಿಶೇಷತೆಗಳು ಏನೇನಿದೆ. ಅವರ ಇನ್ವಿಟೇಷನ್ ಕಾರ್ಡ್ ಹೇಗಿದೆ ಅಂತೀರಾ..? ಖಂಡಿತ ಹೇಳ್ತೀವಿ ಮುಂದೆ ಓದಿ..ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ವಿಭಿನ್ನವಾಗಿ ಪ್ರಿಂಟ್ ಮಾಡಿಸುವುದು ಚಾಲ್ತಿಯಲ್ಲಿದೆ. ಎಲ್ಲರಿಗಿಂತಲೂ ವಿಭಿನ್ನವಾಗಿರುವ ಇನ್ವಿಟೇಶನ್ ಕೊಟ್ಟು ಮದುವೆಗೆ ಸ್ನೇಹಿತರನ್ನು ಹಾಗೂ ಬಂಧುಗಳನ್ನು ಆಹ್ವಾನ ಮಾಡಬೇಕೆನ್ನುವುದು ಎಲ್ಲರ ಆಸೆಯಾಗಿರುತ್ತದೆ .ಅದೇ ರೀತಿಯಲ್ಲಿ ಸ್ಕಂದ ಅಶೋಕ್ ಅವರ ಮದುವೆ ಆಮಂತ್ರಣ ಪತ್ರಿಕೆ ಕೂಡ ತುಂಬಾ ಸ್ಪೆಷಲ್ ಆಗಿದೆ.

ರಮಣ್ ಮದುವೆಯ ಆಮಂತ್ರಣ ಪತ್ರಿಕೆ ತುಂಬಾ ಸ್ಪೆಷಲ್ ಆಗಿದೆ. ಐದು ರೀತಿಯ ವಿಭಿನ್ನ ಕಾರ್ಡ್ ಗಳು ಹಾಗೂ ಸಿಹಿ ತಿನಿಸು ಮತ್ತು ಇನ್ವಿಟೇಶನ್ ಬಾಕ್ಸ್ ಓಪನ್ ಮಾಡಿದ ತಕ್ಷಣ ಸುಗಂಧ ಬೀರುವಂತಹ ಹೂವುಗಳನ್ನು ಅದರಲ್ಲಿ ಇರಿಸಲಾಗಿದೆರಾಮಣ್ ಹಾಗೂ ಶಿಖಾ ಪ್ರಸಾದ್ ಮದುವೆ ಬೆಂಗಳೂರಿನ ಪ್ರಮುಖ ಐದು ಸ್ಥಳಗಳಲ್ಲಿ ನಡೆಯುತ್ತಿದೆ. ಆಯಾ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಮದುವೆಯ ಆಮಂತ್ರಣ ಪತ್ರಿಕೆಗಳ ಬಣ್ಣವನ್ನು ಬದಲಿಸಲಾಗಿದೆ. ಹಳದಿ, ಮೆಹೆಂದಿ, ಸಂಗೀತ್, ವರಪೂಜೆ, ರಿಸೆಪ್ಷನ್ ಹಾಗೂ ಮುಹೂರ್ತ ಆರು ಕಾರ್ಯಕ್ರಮಗಳಿಗೆ ಬೇರೆ ಬೇರೆ ಕಾರ್ಡ್ ಗಳನ್ನು ಪ್ರಿಂಟ್ ಮಾಡಿಸಲಾಗಿದ್ದು ವಿಭಿನ್ನ ರೀತಿಯ ಬಣ್ಣಗಳನ್ನು ಹೊಂದಿದೆ.ಇನ್ನು, ಸ್ಕಂದ ಅಶೋಕ್ ಹಾಗೂ ಶಿಖಾ ಪ್ರಸಾದ್ ಅವರ ಮದುವೆ ಆಮಂತ್ರಣ ಪತ್ರಿಕೆ ಒಂದು ಕೆಜಿ ತೂಕದಷ್ಟು ಭಾರವಿದ್ದು ಸುಂದರವಾಗಿ ವಿನ್ಯಾಸವನ್ನು ಮಾಡಲಾಗಿದೆ. ಹೊರಗಿಂದ ನೋಡಿದ ತಕ್ಷಣವೇ ಸೆಳೆಯುವಂತಹ ಬಣ್ಣಗಳಿಂದ ಪ್ರಿಂಟ್ ಮಾಡಿಸಲಾಗಿದೆ.ಒಟ್ಟಾರೆ ಹೇಳೋದಾದ್ರೆ ರಮಣನ ಮದುವೆಯಲ್ಲಿ ಇನ್ವಿಟೇಷನ್ ಕಾರ್ಡ್ ಕೂಡ ಗಮನ ಸೆಳೆದು ಎಲ್ಲರ ಚಿತ್ತ ರಮಣನ ಇನ್ವಿಟೇಷನ್ ನತ್ತ ಎಂಬಂತೆ ಮಾಡಿದೆ. ಅಷ್ಟು ಸದ್ದು ಮಾಡುತ್ತಿದೆ ಈ ಇನ್ವಿಟೇಷನ್ ಕಾರ್ಡ್.

Please follow and like us:
0
https://kannadadalli.com/wp-content/uploads/2018/05/ಜಜಹಕಜಹಜಕ-1.pnghttps://kannadadalli.com/wp-content/uploads/2018/05/ಜಜಹಕಜಹಜಕ-1-150x100.pngSindhuಸಿನೆಮಾರಮಣನ ಮದುವೆ,ರ್ಡ್​,ಸ್ಯಾಂಡಲ್ ವುಡ್ಸ್ಯಾಂಡಲ್ ವುಡ್ : ಸ್ಯಾಂಡಲ್ ವುಡ್ ನ ರಾಧಾ ರಮಣ ಧಾರಾವಾಹಿ ಖ್ಯಾತಿಯ ಸ್ಕಂದ ಅಶೋಕ್ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ನಿನ್ನೆಯಷ್ಟೇ ಅಶೋಕ್ ಹಾಗೂ ಶಿಖಾ ಪ್ರಸಾದ್ ಅವರ ಹಳದಿ ಶಾಸ್ತ್ರಗಳು ನಡೆದಿದ್ದು ನಾಳೆ ಮೆಹಂದಿ ಹಾಗೂ ಸಂಗೀತ್ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿದೆ . ಹೀಗಿರುವಾಗ, ಅದ್ಧೂರಿ ಹಾಗೂ ವಿಭಿನ್ನವಾಗಿ ನಡೆಯುತ್ತಿರುವ ಸ್ಕಂದ ಅಶೋಕ್ ಅವರ ಮದುವೆಗೆ ಸಾಕಷ್ಟು ಗಣ್ಯರು ಹಾಗೂ ರಾಜಕೀಯ ವ್ಯಕ್ತಿಗಳು ಭಾಗಿ ಆಗಲಿದ್ದಾರೆ. ಈಗಾಗಲೇ ಆಮಂತ್ರಣ...ಕನ್ನಡಿಗರ ವೆಬ್​ ಚಾನೆಲ್​