ಮುಂಬೈ:
 ಸಿನಿಮಾರಂಗದ ನಟ-ನಟಿಯರು ತಮ್ಮ ಕೈಲಾದ ಸಹಾಯವನ್ನು ಕಷ್ಟದಲ್ಲಿರುವ ಜನರಿಗೆ ಮಾಡುತ್ತಿರುತ್ತಾರೆ. ಈಗ ಬಾಲಿವುಡ್ ನಟಿ ಆಲಿಯಾ ಭಟ್ ಅವರಿಂದ ಮಂಡ್ಯದ ಗ್ರಾಮವೊಂದಕ್ಕೆ ಬೆಳಕಿನ ಭಾಗ್ಯ ಲಭಿಸಿದೆ.

alia-Bhatt

ಹೌದು, ಕರ್ನಾಟಕದ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿರುವ 40 ಕುಟುಂಬಗಳಿಗೆ ಆಲಿಯಾ ಭಟ್ ರಿಂದ ವಿದ್ಯುತ್ ದೊರೆತಿದೆ. ಇದೇ ವರ್ಷ ಆರಂಭವಾದ `ಮಿ ವಾರ್ಡ್ ರೋಬ್ ಈಸ್ ಸು ವಾರ್ಡ್ ರೋಬ್’ ಸ್ಟೈಲ್ಕ್ರಾಕರ್ ನೈಟ್ ಮಾರ್ಕೆಟ್ ನಲ್ಲಿ ನಡೆಸಲಾದ ಅಭಿಯಾನದ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ತಮ್ಮ ಒಂದು ವಿಶೇಷವಾದ ಬಟ್ಟೆಯನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು.

alia-bhatt

ಬೆಂಗಳೂರು ಮೂಲದ ಎಆರ್ ಓಎಚ್‍ಎ ಸಂಸ್ಥೆಯೊಂದು ಸಂಸ್ಥೆ `ಲಿಟರ್ ದ ಲೈಟರ್’ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಇದು ಪ್ಲಾಸ್ಟಿಕ್ ಬಾಟಲ್‍ಗಳನ್ನ ಮರುಬಳಕೆ ಮಾಡಿ ಬಳಿಕ ಅದರಿಂದ ವಿದ್ಯುತ್ ಇಲ್ಲದ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೋಲಾರ್ ದೀಪಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ.

Alia-bhat

ಈ ಸಂಸ್ಥೆ `ಲಿಟರ್ ದ ಲೈಟರ್’ ಕಾರ್ಯಕ್ರಮದಡಿಯಲ್ಲಿ ಚಾರಿಟಿಗಾಗಿ ಆಲಿಯಾ ಭಟ್ ಅವರನ್ನ ಸಂಪರ್ಕಿಸಿದೆ. ಆಗ ಆಲಿಯಾ ಭಟ್ ಮಾರಾಟಕ್ಕಿಟ್ಟಿದ್ದ ಬಟ್ಟೆಯಿಂದ ಬಂದ ಹಣವನ್ನು ಈ ಸಂಸ್ಥೆಗೆ ನೀಡಿದ್ದಾರೆ. ಅವರು ನೀಡಿದ ಹಣದಿಂದ 40 ಕುಟುಂಬಗಳಿಗೆ ಈ ಸಂಸ್ಥೆ ಸೋಲಾರ್ ದೀಪಗಳನ್ನು ಒದಗಿಸಿದ್ದಾರೆ.

Alia-bhat

ಈ ಯೋಜನೆಯ ಬಗ್ಗೆ ಮಾತನಾಡಿದ ಅಲಿಯಾ, “ಭಾರತದಲ್ಲಿ ಅನೇಕ ಕುಟುಂಬಗಳು ಕತ್ತಲೆಯಲ್ಲಿ ಜೀವಿಸುತ್ತಿವೆ. ಅವರಿಗೆ ಮನೆಗಳನ್ನು ಬೆಳಗಿಸಲು ಹೊಸ ಮತ್ತು ಸಮರ್ಥನೀಯ ಮಾರ್ಗ ಇದಾಗಿದ್ದು, ಪರಿಸರ ಸ್ನೇಹಿ ಸೌರ ದೀಪಗಳಾಗಿವೆ. ಈ ಸಂಸ್ಥೆ ಸ್ಥಳೀಯ ಸಮುದಾಯಗಳೊಂದಿಗೆ ಕೆಲಸ ಮಾಡುತ್ತದೆ. ಇದರಿಂದ ಸಮುದಾಯದವರ ಜೀವನ ಗುಣಮಟ್ಟವನ್ನು ಸುಧಾರಿಸಿದೆ. ಕಿಕ್ಕೇರಿ ಗ್ರಾಮದ 200 ಜನರಿಗೆ ಈ ಯೋಜನೆಯಿಂದ ಪ್ರಯೋಜನವಾಗಿದೆ ಎಂದು ಹೇಳಿದ್ದಾರೆ.

Alia Bhatt Ranbir Kapoor

ಆಲಿಯಾ ಭಟ್ ಇತ್ತೀಚೆಗೆ ಮೇಘನಾ ಗುಲ್ಜಾರ್ ಅವರ `ರಾಜಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ರಣವೀರ್ ಸಿಂಗ್ ಅಭಿನಯದ `ಜೊಯಾ ಅಖ್ತರ್ ಗಲ್ಲಿ ಬಾಯ್’ ನ್ಲಲೂ ನಟಿಸುತ್ತಿದ್ದಾರೆ. ಸದ್ಯಕ್ಕೆ ಆಲಿಯಾ ಅಯನ್ ಮುಖರ್ಜಿಯವರ `ಬ್ರಹ್ಮಸ್ತರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಮೌನಿ ರಾಯ್, ಅಮಿತಾಬ್ ಬಚ್ಚನ್, ಕಲಾಂಕ್, ವರುಣ್ ಧವನ್, ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ಸೇರಿದಂತೆ ತಾರಾ ಬಳಗವಿದೆ.

ವರದಿ- ಮೋಹನ್​
Please follow and like us:
0
https://kannadadalli.com/wp-content/uploads/2018/07/Alia-bhat.jpghttps://kannadadalli.com/wp-content/uploads/2018/07/Alia-bhat-150x100.jpgKannadadalli Editorಸಿನೆಮಾಆಲಿಯಾ ಭಟ್​,ಕಿಕ್ಕೇರಿ,ಮಂಡ್ಯಮುಂಬೈ: ಸಿನಿಮಾರಂಗದ ನಟ-ನಟಿಯರು ತಮ್ಮ ಕೈಲಾದ ಸಹಾಯವನ್ನು ಕಷ್ಟದಲ್ಲಿರುವ ಜನರಿಗೆ ಮಾಡುತ್ತಿರುತ್ತಾರೆ. ಈಗ ಬಾಲಿವುಡ್ ನಟಿ ಆಲಿಯಾ ಭಟ್ ಅವರಿಂದ ಮಂಡ್ಯದ ಗ್ರಾಮವೊಂದಕ್ಕೆ ಬೆಳಕಿನ ಭಾಗ್ಯ ಲಭಿಸಿದೆ. ಹೌದು, ಕರ್ನಾಟಕದ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿರುವ 40 ಕುಟುಂಬಗಳಿಗೆ ಆಲಿಯಾ ಭಟ್ ರಿಂದ ವಿದ್ಯುತ್ ದೊರೆತಿದೆ. ಇದೇ ವರ್ಷ ಆರಂಭವಾದ `ಮಿ ವಾರ್ಡ್ ರೋಬ್ ಈಸ್ ಸು ವಾರ್ಡ್ ರೋಬ್’ ಸ್ಟೈಲ್ಕ್ರಾಕರ್ ನೈಟ್ ಮಾರ್ಕೆಟ್ ನಲ್ಲಿ ನಡೆಸಲಾದ ಅಭಿಯಾನದ ಕಾರ್ಯಕ್ರಮದಲ್ಲಿ ಆಲಿಯಾ...ಕನ್ನಡಿಗರ ವೆಬ್​ ಚಾನೆಲ್​