ರಾಮನಗರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಕಣಕ್ಕೆ…!!!

Anitha Kumaraswamy

ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ತವು ಗೆದ್ದ ಎರಡು ಕ್ಷೇತ್ರಗಳಲ್ಲಿ ಚನ್ನಪಟ್ಟಣವನ್ನು ಇಟ್ಟುಕೊಂಡು ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ ಈಗ ನಡೆಯುವ ಚುನಾವಣೆಗೆ ಜೆಡಿಎಸ್ ​ನಿಂದ ಅನಿತ ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

Anitha Kumaraswamy

ಈ ಬಗ್ಗೆ ಮಾತನಾಡಿರುವ ಅನಿತಾ ಕುಮಾರಸ್ವಾಮಿ ಅವರು ‘ರಾಮನಗರದ ಜನತೆ ಕುಮಾರಸ್ವಾಮಿ ಅವರ ಮೇಲಿನಷ್ಟೇ ಪ್ರೀತಿಯನ್ನು ಇಟ್ಟಿದ್ದಾರೆ ಎಂದು ಹೇಳಿದ್ದು, ರಾಮನಗರ ಕ್ಷೇತ್ರದ ಜನರು ನಾನೇ ಸ್ಪರ್ಧೆ ಮಾಡುವಂತೆ ಒತ್ತಡವನ್ನು ಹಾಕುತ್ತಿದ್ದಾರೆ’ ಎಂದು ಹೇಳಿದ್ದಾರೆ

Anitha Kumaraswamyರಾಮನಗರ ನನಗೆ ಸ್ವಂತ ಮನೆ ಇದ್ದಹಾಗೇ ಆ ಕ್ಷೇತ್ರವನ್ನು ಬೇರಾರಿಗೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಅವರು ನಾನೇ ಈ ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿದ್ದಾರೆ. ಇನ್ನು ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳನ್ನು ಅಭಿವೃದ್ದಿಪಡಿಸುವುದು ನಮ್ಮ ಮುಖ್ಯ ಗುರಿ. ಈ ಎರಡೂ ಕ್ಷೇತ್ರಗಳ ನೀರಾವರಿ ಯೋಜನೆಗೆ ಒತ್ತು ನೀಡುವುದಾಗಿ ಅವರು ಹೇಳಿದ್ದಾರೆ.

jds-logo

ಜೆಡಿಎಸ್​ನಿಂದ ಸೋತಿರುವ ಘಟಾಬುಘಟಿ ನಾಯಕರಲ್ಲಿ ಒಬ್ಬರನ್ನು ಈ ಕ್ಷೇತ್ರದಿಂದ ಇಳಿಸಬಹುದು ಎಂದು ಹೇಳಲಾಗುತ್ತಿದ್ದರೂ ಕೂಡ ಅನಿತ ಕುಮಾರಸ್ವಾಮಿ ಅವರ ಸ್ಪಷ್ಟನೆಯಿಂದ ಅವರೇ ಈ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನುವುದಂತು ಖಚಿತವಾಗಿದೆ.

anitha- DKS

ಇನ್ನು ರಾಮನಗರದ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯುವುದು ಪಕ್ಕಾ ಆಗಿದ್ದು ಚನ್ನಪಟ್ಟಣದಲ್ಲಿ ಆದ ಸೋಲಿಗೆ ಸೇಡು ತೀರಿಸಿಕೊಳ್ಳಲು ಶತ ಪ್ರಯತ್ನ ಮಾಡಲಿದ್ದಾರೆ. ಆದರೆ ಸಿಪಿ ಯೋಗೀಶ್ವರ್​ ತಮ್ಮ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದು ಅದು ರಾಮನಗರದ ಕ್ಷೇತ್ರದ ಜನರ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದೇ ಅನುಮಾನವಾಗಿದೆ.

Please follow and like us:
0
https://kannadadalli.com/wp-content/uploads/2018/06/Anitha-Kumaraswamy.jpghttps://kannadadalli.com/wp-content/uploads/2018/06/Anitha-Kumaraswamy-150x100.jpgKannadadalli Editorಸುದ್ದಿanitha kumarswamy,JDS,jds candidet,ramanagaraರಾಮನಗರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಕಣಕ್ಕೆ...!!! ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ತವು ಗೆದ್ದ ಎರಡು ಕ್ಷೇತ್ರಗಳಲ್ಲಿ ಚನ್ನಪಟ್ಟಣವನ್ನು ಇಟ್ಟುಕೊಂಡು ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ ಈಗ ನಡೆಯುವ ಚುನಾವಣೆಗೆ ಜೆಡಿಎಸ್ ​ನಿಂದ ಅನಿತ ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಅನಿತಾ ಕುಮಾರಸ್ವಾಮಿ ಅವರು ‘ರಾಮನಗರದ ಜನತೆ ಕುಮಾರಸ್ವಾಮಿ ಅವರ ಮೇಲಿನಷ್ಟೇ ಪ್ರೀತಿಯನ್ನು ಇಟ್ಟಿದ್ದಾರೆ ಎಂದು ಹೇಳಿದ್ದು, ರಾಮನಗರ ಕ್ಷೇತ್ರದ ಜನರು ನಾನೇ...ಕನ್ನಡಿಗರ ವೆಬ್​ ಚಾನೆಲ್​