ಬಹಳ ದಿನಗಳಿಂದ ಸುದ್ದಿಯಲ್ಲಿದ್ದ ಬಾಲಿವುಡ್ ನ ನಟ, ನಟಿಯರು ಸದ್ಯದಲ್ಲಿಯೇ ವೆಡ್ ಲಾಕ್ ಆಗಲಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಸಂಚಲನವನ್ನು ಮೂಡಿಸಿದ್ದ ರಣವೀರ್ ಸಿಂಗ್ ಮತ್ತು ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಕೊನೆಗೂ ಸತಿ ಪತಿಗಳಾಗಲು ನಿರ್ಧರಿಸಿದ್ದಾರೆ.

ಇದಕ್ಕೂ ಮೊದಲು ದೀಪಿಕಾ ರಣಬೀರ್ ಕಪೂರ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಭಾರಿ ಚರ್ಚೆ ಹುಟ್ಟುಹಾಕಿತ್ತು. ಅಲ್ಲದೇ ಅವರಿಬ್ಬರೂ ದಂಪತಿಗಳಾಗುತ್ತಾರೆ ಎಂಬ ಸುದ್ದಿಯೂ ಬಾಲಿವುಡ್ ನಲ್ಲಿ ಹುಟ್ಟಿಕೊಂಡಿತ್ತು. ಆದರೆ ಅದು ಈಡೇರಲಿಲ್ಲ. ಇದಾದ ಬಳಿಕ ರಣವೀರ್ ಮತ್ತು ದೀಪಿಕಾ ಸಾಕಷ್ಟು ಸಿನೆಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಅವರ ನಡುವೆ ಏನೋ ಗುಪ್ತ್ ಗುಪ್ತ್ ನಡೆಯುತ್ತಿದೆ ಎಂಬ ಸುದ್ದಿಯೂ ಆಗಾಗ್ಗೆ ಕೇಳಿಬರುತ್ತಿತ್ತು.

ಆದರೆ ಇದೀಗ ಈ ಎಲ್ಲಾ ಗಾಸಿಪ್ ಹಾಗೂ ಬಿಸಿ ಬಿಸಿ ಚರ್ಚೆಗೆ ತೆರೆ ಬಿದ್ದಿದೆ. ರಣವೀರ್ ಹಾಗೂ ದೀಪಿಕಾ ಸದ್ಯದಲ್ಲಿಯೇ ವೆಡ್ ಲಾಕ್ ಗೆ ಒಳಗಾಗಲಿದ್ದಾರೆ. ಫಿಲ್ಮ್ ಫೇರ್ ವರದಿಯ ಪ್ರಕಾರ, ಇದೇ ವರ್ಷ ನವೆಂಬರ್ 10ರಂದು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಧಿಕೃತವಾಗಿ ದಂಪತಿಗಳಾಗಲಿದ್ದಾರೆ.

ಇವರಿಬ್ಬರ ಮದುವೆ ಸುದ್ದಿಯೇನು ಇಂದು ನಿನ್ನೆಯದಲ್ಲ. ಸಾಕಷ್ಟು ತಿಂಗಳಿನಿಂದಲೂ ಬಾಲಿವುಡ್ ನಲ್ಲಿ ಹರಿದಾಡುತ್ತಿತ್ತು. ದೀಪಿಕಾ ಮನೆಯವರಿಂದ ರಣವೀರ್ ಗೆ ದುಬಾರಿ ವೆಚ್ಚದ ಗಿಫ್ಟ್ ನೀಡಲಾಯಿತು. ರಣವೀರ್ ಮನೆಯಿಂದ ದೀಪಿಕಾಗೂ ಇದೇ ರೀತಿಯ ಗಿಫ್ಟ್ ನೀಡಲಾಯಿತು ಎಂಬೆಲ್ಲಾ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿತ್ತು. ಅಲ್ಲದೇ ಈ ಇಬ್ಬರು ಜೋಡಿಗಳು ಮದುವೆ ಶಾಪಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ ಎಂಬೆಲ್ಲಾ ಗಾಸಿಪ್ ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಮದುವೆಯ ದಿನಾಂಕ ಘೋಷಣೆ ಮಾಡುವ ಮೂಲಕ ಈ ಎಲ್ಲಾ ಗಾಸಿಪ್ ಹಾಗೂ ಊಹಾಪೋಹ ಸುದ್ದಿಗಳಿಗೆ ತೆರೆ ಎಳೆಯಲಾಗಿದೆ. ಆದರೂ ಕೂಡ ಈ ಕುರಿತು ರಣವೀರ್ ಅಥವಾ ದೀಪಿಕಾ ಅಧಿಕೃತವಾಗಿ ಹೇಳಿಲ್ಲ.

 

ಆದರೆ ಈ ಇಬ್ಬರೂ ಮದುವೆ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಚ್ಚುಕಟ್ಟಾಗಿ ಇರಬೇಕೆಂದು ಬಯಸಿ ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಹಾಗಾಗಿ ಸಾಕಷ್ಟು ದಿನಾಂಕಗಳನ್ನು ತಲಾಶ್ ಮಾಡಿ ಅಂತಿಮವಾಗಿ ಮದುವೆ ದಿನಾಂಕವನ್ನು ನಿಗದಿ ಮಾಡಲಾಗಿದೆಯಂತೆ.

ಆದರೆ ಮದುವೆಯನ್ನು ಏಲ್ಲಿ ಮಾಡಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಇನ್ನೂ ಖಚಿತ ಮಾಹಿತಿ ದೊರೆತಿಲ್ಲ. ಬೆಂಗಳೂರು ಅಥವಾ ಇಟಲಿಯಲ್ಲಿ ಮದುವೆ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ.

ಈ ಹಿಂದೆ ಖ್ಯಾತ ಕ್ರಿಕೆಟ್ ತಾರೆ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಜೋಡಿಯಂತೆ ಇವರೂ ಕೂಡ ಗುಟ್ಟಾಗಿ ಮದುವೆ ಮಾಡಿಕೊಂಡು ಬಂದು ಭರ್ಜರಿಯಾಗಿ ಪಾರ್ಟಿ ಕೊಡುತ್ತಾರಾ ಎಂಬುದು ಕೂಡ ತಿಳಿದಿಲ್ಲ.

ಆದರೆ ಈ ಎರಡು ಕುಟುಂಬಗಳು ಮದುವೆಗಾಗಿ ಶಾಪಿಂಗ್ ನಲ್ಲಿ ತುಂಬಾ ಬ್ಯುಸಿಯಾಗಿರುವುದಂತೂ ಸತ್ಯ. ಇದೇ ಕಾರಣಕ್ಕಾಇ ದೀಪಿಕಾ ಯಾವುದೇ ಸಿನೆಮಾಕ್ಕೂ ಕಾಲ್ ಶೀಟ್ ನೀಡಿಲ್ಲವಂತೆ. ಆದರೆ ರಣವೀರ್ ಮಾತ್ರ ಎರಡು ಸಿನೆಮಾಗಳ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ. ಇದರ ಜೊತೆ ಜೊತೆಯಲ್ಲಿ ಮದುವೆ ಶಾಪಿಂಗ್ ಕೂಡ ಮಾಡುತ್ತಿದ್ದಾರಂತೆ ರಣವೀರ್.

ಏನೇ ಆಗಲಿ ಈ ಜೋಡಿಗೆ ನಮ್ಮದೊಂದು ಆಲ್ ದಿ ಬೆಸ್ಟ್.

 

 

Please follow and like us:
0
https://kannadadalli.com/wp-content/uploads/2018/06/maxresdefault-1-5-1024x576.jpghttps://kannadadalli.com/wp-content/uploads/2018/06/maxresdefault-1-5-150x100.jpgSowmya KBಸಿನೆಮಾಬಹಳ ದಿನಗಳಿಂದ ಸುದ್ದಿಯಲ್ಲಿದ್ದ ಬಾಲಿವುಡ್ ನ ನಟ, ನಟಿಯರು ಸದ್ಯದಲ್ಲಿಯೇ ವೆಡ್ ಲಾಕ್ ಆಗಲಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಸಂಚಲನವನ್ನು ಮೂಡಿಸಿದ್ದ ರಣವೀರ್ ಸಿಂಗ್ ಮತ್ತು ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಕೊನೆಗೂ ಸತಿ ಪತಿಗಳಾಗಲು ನಿರ್ಧರಿಸಿದ್ದಾರೆ. ಇದಕ್ಕೂ ಮೊದಲು ದೀಪಿಕಾ ರಣಬೀರ್ ಕಪೂರ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಭಾರಿ ಚರ್ಚೆ ಹುಟ್ಟುಹಾಕಿತ್ತು. ಅಲ್ಲದೇ ಅವರಿಬ್ಬರೂ ದಂಪತಿಗಳಾಗುತ್ತಾರೆ ಎಂಬ ಸುದ್ದಿಯೂ ಬಾಲಿವುಡ್ ನಲ್ಲಿ ಹುಟ್ಟಿಕೊಂಡಿತ್ತು. ಆದರೆ ಅದು...ಕನ್ನಡಿಗರ ವೆಬ್​ ಚಾನೆಲ್​