“ರಾಜ್ಯದ ಬ್ಯಾಂಕುಗಳಲ್ಲಿ ಬರೀ ಹಿಂದಿ, ತೆಲುಗಿನವರೇ ತುಂಬಿಕೊಂಡಿದ್ದಾರೆ.‌ ಅವರಿಗೆ ಕನ್ನಡ ಬರುವುದಿಲ್ಲ. ಕನ್ನಡಿಗ ಅಧಿಕಾರಿಗಳನ್ನು ಗ್ರಾಮೀಣ ಪ್ರದೇಶದ ಬ್ಯಾಂಕುಗಳಿಗೆ ನೇಮಿಸಬೇಕು” ಎನ್ನುವುದು ಗ್ರಾಮೀಣ ಬ್ಯಾಂಕ್ ಗ್ರಾಹಕರ ಬೇಡಿಕೆ.

ಆದರೆ ವಾಸ್ತವವಾಗಿ ಬ್ಯಾಂಕಿಂಗ್ ಪರೀಕ್ಷೆ ಬರೆಯುವ ಕನ್ನಡಿಗರು ಬಹಳ ಕಡಿಮೆ. ಬ್ಯಾಂಕ್ ಅಧಿಕಾರಿ ಸ್ನೇಹಿತರೊಬ್ಬರು ಹೇಳಿದ ಪ್ರಕಾರ ಅವರು ಆಯ್ಕೆಯಾದ 2013ನೇ ಬ್ಯಾಚ್ ನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಅಂದಾಜು ಎರಡು ಸಾವಿರ ಕನ್ನಡಿಗ ಅಭ್ಯರ್ಥಿಗಳ ಪೈಕಿ ಹುದ್ದೆಗೆ ಆಯ್ಕೆಯಾಗಿದ್ದು ಕೇವಲ 6 ಮಂದಿ ಮಾತ್ರ!! ಇದಕ್ಕೆ ಕಾರಣ ಬ್ಯಾಂಕಿಂಗ್ ಪರೀಕ್ಷೆಗಳ ಬಗ್ಗೆ ನಮ್ಮ ವಿದ್ಯಾರ್ಥಿಗಳಿಗೆ ಇರುವ ಮಾಹಿತಿ ಕೊರತೆ. ಬಹುತೇಕ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಎಕ್ಸಾಮ್ ಗೆ ಏನು ಓದಬೇಕು, ಸಿಲಬಸ್ ಏನು? ಎನ್ನುವುದೇ ಗೊತ್ತಿಲ್ಲ.

Bank Examಹೀಗಿರುವಾಗ ಹುದ್ದೆಗೆ ಅರ್ಜಿ ಸಲ್ಲಿಸುವುದು, ಹುದ್ದೆ ಗಿಟ್ಟಿಸಿಕೊಳ್ಳುವ ಮಾತು ದೂರವೇ ಬಿಡಿ.
ಹೀಗಾಗಿ ರಾಜ್ಯದ ಬ್ಯಾಂಕುಗಳಲ್ಲಿ ಕನ್ನಡಿಗ ಅಧಿಕಾರಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು, ಕನ್ನಡಿಗರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಬ್ಯಾಂಕ್ ಪರೀಕ್ಷೆ ತೆಗೆದುಕೊಳ್ಳುವಂತೆ ಮಾಡಬೇಕು, ಬ್ಯಾಂಕ್ ಪರೀಕ್ಷೆ ಬಗ್ಗೆ ನಮ್ಮ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು
ಎಂಬ ಆಲೋಚನೆ ಹೊಳೆಯಿತು.

Bank Examಅದರ ಫಲವಾಗಿ *ವಿಜಯ ಕರ್ನಾಟಕ,* *ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು,* *ಎಕ್ಸೆಲೆಂಟ್ ಕೋಚಿಂಗ್ ಸೆಂಟರ್* ಸಹಯೋಗದೊಂದಿಗೆ *ಅಕ್ಟೋಬರ್ 16ರ* ಮಂಗಳವಾರ ಉಚಿತ ಬ್ಯಾಂಕಿಂಗ್ ಪರೀಕ್ಷಾ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೇವೆ. ತುಮಕೂರಿನ ಕುವೆಂಪು ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಬ್ಯಾಂಕ್ ಕ್ಷೇತ್ರದ ವಿವಿಧ ಸಂಪನ್ಮೂಲ ವ್ಯಕ್ತಿಗಳು, ಹಿರಿಯ ಅಧಿಕಾರಿಗಳು ಮಾರ್ಗದರ್ಶನ ಮಾಡಲಿದ್ದಾರೆ.

*ಪ್ರವೇಶ ಉಚಿತ ಯಶಸ್ಸು ಖಚಿತ*
ಆಸಕ್ತ ವಿದ್ಯಾರ್ಥಿಗಳು, ಪೋಷಕರು, ಅಭ್ಯರ್ಥಿಗಳು ಬನ್ನಿ ಭಾಗವಹಿಸಿ, ನಿಮ್ಮ ಸ್ನೇಹಿತರಿಗೂ ತಿಳಿಸಿ, ಅವರನ್ನೂ ಕರೆತನ್ನಿ. ಹೆಚ್ಚಿನ ಮಾಹಿತಿಗಾಗಿ 9481098621 ಸಂಪರ್ಕಿಸಿ.

Please follow and like us:
0
https://kannadadalli.com/wp-content/uploads/2018/02/Bank-Exam.jpghttps://kannadadalli.com/wp-content/uploads/2018/02/Bank-Exam-150x100.jpgKannadadalli Editorಸುದ್ದಿFree banking coching,tumkur,vidyavaahini college,ಇಬಿಪಿಎಸ್,ಎಕ್ಸಾಮ್,ಬ್ಯಾಂಕ್'ರಾಜ್ಯದ ಬ್ಯಾಂಕುಗಳಲ್ಲಿ ಬರೀ ಹಿಂದಿ, ತೆಲುಗಿನವರೇ ತುಂಬಿಕೊಂಡಿದ್ದಾರೆ.‌ ಅವರಿಗೆ ಕನ್ನಡ ಬರುವುದಿಲ್ಲ. ಕನ್ನಡಿಗ ಅಧಿಕಾರಿಗಳನ್ನು ಗ್ರಾಮೀಣ ಪ್ರದೇಶದ ಬ್ಯಾಂಕುಗಳಿಗೆ ನೇಮಿಸಬೇಕು' ಎನ್ನುವುದು ಗ್ರಾಮೀಣ ಬ್ಯಾಂಕ್ ಗ್ರಾಹಕರ ಬೇಡಿಕೆ. ಆದರೆ ವಾಸ್ತವವಾಗಿ ಬ್ಯಾಂಕಿಂಗ್ ಪರೀಕ್ಷೆ ಬರೆಯುವ ಕನ್ನಡಿಗರು ಬಹಳ ಕಡಿಮೆ. ಬ್ಯಾಂಕ್ ಅಧಿಕಾರಿ ಸ್ನೇಹಿತರೊಬ್ಬರು ಹೇಳಿದ ಪ್ರಕಾರ ಅವರು ಆಯ್ಕೆಯಾದ 2013ನೇ ಬ್ಯಾಚ್ ನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಅಂದಾಜು ಎರಡು ಸಾವಿರ ಕನ್ನಡಿಗ ಅಭ್ಯರ್ಥಿಗಳ ಪೈಕಿ ಹುದ್ದೆಗೆ ಆಯ್ಕೆಯಾಗಿದ್ದು ಕೇವಲ 6...ಕನ್ನಡಿಗರ ವೆಬ್​ ಚಾನೆಲ್​