dodda AAlada mara

ಮಮತೆಯ ಗಾಳಿ ಬೀಸಿ, ಅಕ್ಕರೆಯ ಕರೆಯೋಲೆ ನೀಡುವ ಆಲದ ಮರ, ಹುಳಹುಪ್ಪಟೆ, ಹಕ್ಕಿ ಪಕ್ಷಿ, ಮಂಗಗಳಿಗೆ ತವರು ನೆಲೆಯ ಬೀಡು. ಅದೇಷ್ಟೊ ಬಿಸಿ ಗಾಳಿ ಉಂಡು, ರಪ ರಪ ಹೊಡೆಯುವ ಮಳೆಗೆ ಮೈಯೊಡ್ಡಿ ತಾಪವಾದರೂ, ಪರರ ಖುಷಿಯಲ್ಲೆ ಸಿಹಿ ಉಂಡ ಮರವೇ ಈ ಆಲದ ಮರ.ಕಣ್ಣು ಹಾಯಿಸಿದಷ್ಟು ಕಾಣುವ ಹಚ್ಚ ಹಸಿರಿನ ಮರ, ಸಿಕ್ಕ ಜಾಗದಲ್ಲೆಲ್ಲಾ ಹರಡಿಕೊಂಡಿರುವ ಮರದ ಬೃಹತ್ ಆಕಾರ.

ಯಾವುದು ಬೇರು ಯಾವುದು ರಂಬೆ, ಕೊಂಬೆ ಅನ್ನೊದು ಕೂಡ ತಿಳಿಯದಷ್ಟು ದೈತ್ಯಾಕಾರವಾಗಿ ಬೆಳೆದು ನಿಂತಿದೆ ದೊಡ್ಡ ಆಲದ ಮರ.ಪಾರಂಪರಿಕ ಸ್ಥಳವಾಗಿ, ಬಿಂಬಿತವಾಗಿ, ಬೆಂಗಳೂರಿನ ಹೆಮ್ಮೆಯಾಗಿ, ಅಪರೂಪದಲ್ಲಿ ಅಪರೂಪ ತಾಣವಾಗಿರುವ ದೊಡ್ಡ ಆಲದ ಮರವನ್ನ ನೋಡೋದೆ ಒಂದು ಖುಷಿಯ ಅನುಭವ.

ಒಂದು ಸುಂದರ ತಾಣಕ್ಕೆ ಹೊಗಬೇಕು, ಒಂದೇ ದಿನದಲ್ಲಿ ಹೋಗಿ ಬರುವಂತೆ ಇರಬೇಕು, ಎಂದು ಬಯಸುವವರಿಗೆ ದೊಡ್ಡ ಆಲದ ಮರಕ್ಕೆ ಅದ್ಭುತ ಪ್ರವಾಸ ಮಾಡಬಹುದು. ಕಬ್ಬನ್ ಪಾರ್ಕ್, ಲಾಲ್‍ಬಾಗ್, ನಂತಹ ಬೆಂಗಳೂರಿನಲ್ಲಿ ಭೇಟಿ ನೀಡುವ ಉದ್ಯಾನವನಗಳಲ್ಲಿ ದೊಡ್ಡ ಆಲದ ಮರ ಕೂಡ ಉದ್ಯಾನವನ ಮತ್ತು ಪ್ರವಾಸಿತಾಣ.ಹೌದು, ಒಂದು ದಿನ ಸಮಯವಿದ್ದರೆ ಸಾಕು ದೊಡ್ಡ ಆಲದ ಮರಕ್ಕೆ ಬೇಟಿ ನೀಡುವುದು ಸೂಕ್ತಕರ.

ದೊಡ್ಡ ಆಲದ ಮರದ ಪ್ರವಾಸ ಪ್ರಕೃತಿಯ ವಿಸ್ಮಯವನ್ನು ಅನಾವರಣಗೊಳಿಸುತ್ತ ನಿಮ್ಮೆಲ್ಲ ಒತ್ತಡಗಳು, ದುಗುಡಗಳನ್ನು ಒಂದು ಕ್ಷಣದಲ್ಲಿ ಮರೆಸು ಬಿಡುತ್ತದೆ.ದೊಡ್ಡ ಆಲದ ಮರದ ಮಹತ್ವದ ಬಗ್ಗೆ ಹೇಳುವುದಾದರೆ ಭಾರತದ ನಮ್ಮ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿರುವುದರಿಂದ ಆಲದ ಮರವನ್ನು ಪೂಜಿಸಲಾಗುತ್ತದೆ. ಆಲದ ಮರÀವೆಂದರೆ ಹಳ್ಳಿಗಾಡಿನ ಶಾಸ್ವಕೋಶ ಎಂಬ ಪೂಜ್ಯ ಭಾವನೆ ಇದೆ. ಅಶುದ್ಧ ಗಾಳಿಯನ್ನು ಶುದ್ಧ ಮಾಡುವುದರಲ್ಲಿ ಆಲದ ಮರದ ಪಾತ್ರ ಮಹತ್ವದು.

bigg banyan tree

ಬೆಂಗಳೂರಿನಿಂದ 28 ಕಿಮೀಗಳಷ್ಟು ದೂರದಲ್ಲಿರುವ ರಾಜರಾಜೇಶ್ವರಿ ಡೆಂಟಲ್ ಕಾಲೇಜ್ ಪಕ್ಕದ ರಸ್ತೆಯಲ್ಲಿ ಕೆಲವು ಕಿಮೀ ಕ್ರಮಿಸಿದರೆ ಕೇತೋಹಳ್ಳಿ ಎಂಬ ಗ್ರಾಮಕ್ಕೆ ಒಳಪಡುವ ಈ ದೊಡ್ಡ ಆಲದ ಮರ ಕಣ್ಣಿಗೆ ಕಾಣುತ್ತದೆ. ಸರಿಸುಮಾರು 400 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ.ಭಾರತದ ಪುರಾತನ ಮರಗಳಲ್ಲಿ ಮೊದಲನೆಯದು ತಿಮ್ಮಮ್ಮ ಮರಿಮನು ಆಲದ ಮರ ಆಂಧ್ರಪ್ರದೇಶದ ಅನಂತ್‍ಪುರ ಜಿಲ್ಲೆಯಲ್ಲಿದೆ, ಎರಡನೆಯದು ದ ಗ್ರೇಟ್ ಆಲದ ಮರ ಕೊಲ್ಕತ್ತದಲ್ಲಿದೆ. ಮೂರನೆಯದು ಆದ್ಯಾರ್ ಆಲದ ಮರ ಚೆನ್ನೈನ್ಲಲ್ಲಿದೆ. ಪ್ರಸ್ತುತ 4ನೇ ಸ್ಥಾನದಲ್ಲಿ ಬೆಂಗಳೂರಿನ ದೊಡ್ಡ ಆಲದ ಮರ ಇದೆ.

ಈ ಮರವೂ 95 ಅಡಿಗಳಷ್ಟು ಎತ್ತರವಾಗಿದ್ದು ಮೇಲ್ಭಾಗವು 120 ಮೀ ವ್ಯಾಪ್ತಿಯ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಏಕೈಕ ಆಲದ ಮರ ಸುಮಾರು 3 ಎಕರೆಗಳಷ್ಟು ಪ್ರದೇಶವನ್ನು ಬಾಚಿಕೊಂಡಿತ್ತು.. ಆಲದ ಮರ ದಿನದಿಂದ ದಿನಕ್ಕೆ ವಿಸ್ತರಿಸುತ್ತ ಹೋಗಿ ಈಗ 4 ಎಕ್ಕರೆಗಳಷ್ಟು ವಿಸ್ತೀರ್ಣ ಹೊಂದಿದೆ. ಎಲ್ಲಾ ರಂಬೆ ಕೊಂಬೆಗಳನ್ನು ಅಳೆದಾಗ ಇದರ ಒಟ್ಟಾರೆ ಸುತ್ತಳತೆ 250 ಮೀಗಳಷ್ಟಿದೆ ಎಂದು ತಿಳಿದು ಬಂದಿದೆ.

bigg baniyan tree

ಸಾವಿರಕ್ಕೂ ಹೆಚ್ಚು ವೈಮಾನಿಕ ಬೇರುಗಳನ್ನು ಈ ಬೃಹತ್ ವೃಕ್ಷ ಹೊಂದಿದೆ. ಸುಮಾರು ವರ್ಷಗಳ ಹಿಂದೆ ಮರದ ಮುಖ್ಯ ಬೇರು ನೈಸರ್ಗಿಕ ರೋಗ ಪೀಡಿತವಾಗಿ ನಾಶಗೊಂಡಿತು. ಅನೇಕ ರಂಬೆ ಕೊಂಬೆಗಳ ಆಧಾರ ಮತ್ತು ಫೋಷಣೆಯಲ್ಲಿ ಪ್ರಬಲವಾಗಿ ಮತ್ತು ಹೆಚ್ಚು ವೇಗವಾಗಿ ಬೆಳೆಯುತ್ತಿದೆ.

ಉದ್ಯಾನವನದ ಮರದ ಸುತ್ತಲು ಬ್ಯಾರಿಕೇಡ್ ಹಾಕಿದ್ದು ಬೆಳೆಯುತ್ತಿರುವ ಮರವನ್ನ ಹಿಡಿದಿಟ್ಟಂತೆ ಆಗಿದೆ. ಮರದ ಬಿಳಿಲುಗಳು ಸೀಮಿತ ಚೌಕಟ್ಟಿನ ಪಾರ್ಕ್ ಆವರಣವನ್ನು ದಾಟಿ ಹೋಗುತ್ತಿದೆ. ಅದನ್ನು ತೆಗೆದು ಮತ್ತು ಇಳೆ ಬಿಟ್ಟಿರುವ ಮರಕ್ಕೆ ಗೊಬ್ಬರ ಹಾಕಿ ಪೋಷಣೆ ಮಾಡಿದರೆ ನಾಲ್ಕನೇ ಸ್ಥಾನದಲ್ಲಿರುವ ಮರ ಒಂದನೇ ಸ್ಥಾನಕ್ಕೇರುವುದರಲ್ಲಿ ಯಾವುದೇ ಸಂಶಯವಿಲ್ಲ.

Big-Baniyan-Tree-Bangalore

ದೊಡ್ಡ ಆಲದ ಮರವು ಒಂದು ಅದ್ಭುತ ದೃಶ್ಯಕಾವ್ಯ. ಇಡೀ ಪ್ರದೇಶವನ್ನು ಒಳಗೊಂಡ ಏಕೈಕ ಮರ ಎಂಬುದನ್ನು ಗಮನಿಸ ಬೇಕಾಗುತ್ತದೆ. ಉದ್ಯಾನವನದ ಆವರಣದಲ್ಲಿ ಮುನೇಶ್ವರ ದೇವಾಲಯವಿದೆ. ತುಂಬ ವರ್ಷಗಳ ಹಿಂದೆ ಇಲ್ಲಿ ಯಾರೋ ಮುನೇಶ್ವರ ವಿಗ್ರಹವನ್ನು ರಾತ್ರೋರಾತ್ರಿ ತಂದಿಟ್ಟಿದ್ದರಂತೆ.. ಅದು ಈಗಲೂ ದೇವಾಲಯದ ಹೊರಗಡೆ ಇದೆ. ರಾತ್ರಿ 8 ಗಂಟೆ ನಂತರ ಮುನಿಗಳು, ಋಷಿಗಳು, ದೆವ್ವಗಳು ಓಡಾತ್ತಿರುತ್ತವೆ ಎಂದು ನಂಬಿದ್ದು ಅದರಂತೆ ಜನರು ಓಡಾಡುವುದಿಲ್ಲ.

ಮರದ ಬಿಳಿಲುಗಳೆ ಬೇರುಗಳಾಗಿ, ಬೇರುಗಳೆ ಒಂದೊಂದು ಮರದಂತೆ ಬೆಳೆದು ನಿಂತಿರುವುದು ಹಸಿರಿನ ಸುಂದರ ನೋಟವನ್ನು ಕಣ್ಣಿಗೆ ನೀಡುತ್ತದೆ.ಮೊಳಕೆಯೊಡೆದು ಇನ್ನು ಮುಟ್ಟದೇ ಇರುವ ಅಸಂಖ್ಯಾತ ಸಣ್ಣ ಬೇರುಗಳು, ಬಾಗಿರುವ ರಂಬೆಕೊಂಬೆಗಳು ಮರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.ಸೌಂದರ್ಯವನ್ನು ಸವಿಯಲು ನೂರಾರು ಪ್ರವಾಸಿಗರು ಪ್ರತಿನಿತ್ಯ ಇಲ್ಲಿಗೆ ಆಗಮಿಸುತ್ತಾರೆ.

Big-Baniyan-Tree-

ಶಾಂತ ಮತ್ತು ಪ್ರಶಾಂತ ವಾತಾವರಣದಲ್ಲಿ ಒಂದು ವಿಶ್ರಾಂತಿ ದಿನವನ್ನು ಸಂಪೂರ್ಣ ಏಕಾಂತತೆಯಲ್ಲಿ ಕಳೆಯುತ್ತಾರೆ. ಸ್ನೇಹಿತರು, ಮಕ್ಕಳು, ಫ್ಯಾಮಿಲಿಯವರು ಎಲ್ಲಾರು ಇಲ್ಲಿಗೆ ಬೇಟಿ ನೀಡಿ ಸುಮಧುರ ಸಮಯವನ್ನು ಕಳೆಯುತ್ತಾರೆ. ಮತ್ತು ಬಿಪಿ, ಶುಗರ್ ಇರುವವರು ಸೂರ್ಯೋದಯ ಮತ್ತು ಸೂರ್ಯಸ್ತ ಸಮಯದಲ್ಲಿ ವಾಯುವಿಹಾರ ಮಾಡುವವರಿಗೆ ದೊಡ್ಡ ಆಲದ ಮರ ಒಂದು ಅದ್ಭುತ ಸ್ಥಳ.

ಈ ಉದ್ಯಾನವನಕ್ಕೆ ಆಗಮಿಸುವ ಪ್ರವಾಸಿಗರಿಗೆ ಎಲ್ಲಾ ರಿತೀಯ ಅನುಕೂಲವನ್ನು ಪ್ರವಾಸೋಧ್ಯಮ ಮತ್ತು ತೋಟಗಾರಿಕೆ ಇಲಾಖೆ ಮಾಡಿದೆ. ಆವರಣದ ಒಳಗೆ ಹೋಡಾಡಲೂ ಸೂಕ್ತ ದಾರಿ, ಕುಳಿತು ವಿಶ್ರಮಿಸಲು ಕಲ್ಲಿನ ಬೆಂಚುಗಳು, ದಣಿದಾಗ ದಾಹ ನೀಗಿಸಲು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.ವಿಶಾಲ ಆಲದ ಮರದ ಸುತ್ತಮುತ್ತ ಅಂಗಡಿ ಮುಂಗಟ್ಟು, ಸಾಕಷ್ಟು ಉಪಹಾರ ಗೃಹಗಳಿವೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಸಾಕಷ್ಟು ತಿಂಡಿ ತಿನ್ನಿಸುಗಳನ್ನು ಖರೀದಿಸುತ್ತಾರೆ. ಇವರನ್ನು ನಂಬಿಕೊಂಡು ಕೆಲವು ಕುಟುಂಬಗಳು ಅಂಗಡಿ, ಹೋಟೆಲ್, ಮುಂತಾದವುಗಳನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರೆ.

dodda AAlada mara

ಆಲದ ಮರ ಒಂದು ಪ್ರೇಕ್ಷಣಿಯ ಸ್ಥಳ ಮಾತ್ರವಲ್ಲದೇ ನೂರಾರು ಪಕ್ಷಿ ಪ್ರಬೇಧಗಳು, ಜೇನು ಹುಳಗಳು ಮತ್ತು ನೂರಾರು ಕೋತಿಗಳಿಗೆ ಆಶ್ರಯ ನೀಡುತ್ತಿದೆ. ಕೋತಿಗಳ ಕಾಟ ತುಸು ಹೆಚ್ಚಿದ್ದು ಪ್ರವಾಸಿಗರು ತಂದಿರುವ ತಿಂಡಿಗಳು ಮತ್ತು ವಸ್ತುಗಳ ಮೇಲೆ ಗಮನ ಇರಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರು ಕೋತಿಯ ಪಾಲಾಗುವುದು ಖಂಡಿತ.

ಇಲ್ಲಿ ಮತ್ತೊಂದು ವಿಷಯ ಗಮನಿಸಬೇಕಾದರೆ ಹದಿಹರೆಯದ ಪ್ರೇಮಿಗಳು ಕೂಡ ಆಗಮಿಸುತ್ತಾರೆ. ಮರದ ಮರೆಯಲ್ಲಿ ಮನ ಬಿಚ್ಚಿ ತಮ್ಮ ಪ್ರೇಮನಿವೇಧನೆ ಮಾಡಿಕೊಳ್ಳುತ್ತಾರೆ. ಈ ಸುಂದರವಾದ ಮರದಲ್ಲಿ ಹೆಸರು, ಚಿತ್ರಗಳನ್ನು ಮತ್ತು ಗೀಚು ಬರಹವನ್ನು ಕೆತ್ತಿದ್ದಾರೆ. ಇವರ ಬುದ್ಧೀಹೀನ ಕೃತ್ಯಗಳಿಂದಾಗಿ ಮರದ ಅಂದವನ್ನು ಹಾಳು ಮಾಡುತ್ತಿದ್ದಾರೆ.

Please follow and like us:
0
https://kannadadalli.com/wp-content/uploads/2018/02/2-25-1490424930.jpghttps://kannadadalli.com/wp-content/uploads/2018/02/2-25-1490424930-150x100.jpgManjulaಮಾಹಿತಿಲೇಖನbengalore bigg baniya tree,big banyan tree,ಆಲದ ಮರ,ಬೆಂಗಳೂರಿನಲ್ಲಿ ನೋಡಬೇಕಾದ ಸ್ಥಳ,ಬೆಂಗಳೂರು,ಬೆಂಗಳೂರು ದೊಡ್ಡ ಆಲದ ಮರಮಮತೆಯ ಗಾಳಿ ಬೀಸಿ, ಅಕ್ಕರೆಯ ಕರೆಯೋಲೆ ನೀಡುವ ಆಲದ ಮರ, ಹುಳಹುಪ್ಪಟೆ, ಹಕ್ಕಿ ಪಕ್ಷಿ, ಮಂಗಗಳಿಗೆ ತವರು ನೆಲೆಯ ಬೀಡು. ಅದೇಷ್ಟೊ ಬಿಸಿ ಗಾಳಿ ಉಂಡು, ರಪ ರಪ ಹೊಡೆಯುವ ಮಳೆಗೆ ಮೈಯೊಡ್ಡಿ ತಾಪವಾದರೂ, ಪರರ ಖುಷಿಯಲ್ಲೆ ಸಿಹಿ ಉಂಡ ಮರವೇ ಈ ಆಲದ ಮರ.ಕಣ್ಣು ಹಾಯಿಸಿದಷ್ಟು ಕಾಣುವ ಹಚ್ಚ ಹಸಿರಿನ ಮರ, ಸಿಕ್ಕ ಜಾಗದಲ್ಲೆಲ್ಲಾ ಹರಡಿಕೊಂಡಿರುವ ಮರದ ಬೃಹತ್ ಆಕಾರ. ಯಾವುದು ಬೇರು ಯಾವುದು ರಂಬೆ, ಕೊಂಬೆ ಅನ್ನೊದು...ಕನ್ನಡಿಗರ ವೆಬ್​ ಚಾನೆಲ್​