siddaramaiah

ಸಿದ್ದರಾಮಯ್ಯ ಪರವಾಗಿ ಬಾದಮಿಯಲ್ಲಿ ಪ್ರಚಾರ ಮಾಡುವುದಿಲ್ಲ ಎಂದು ಶಾಕ್ ನೀಡಿದ ನಟ ಕಿಚ್ಚಾ ಸುದೀಪ್…!!!

sudeep siddu

ಬಾದಾಮಿಯಲಿ ಕಿಚ್ಚ ಸುದೀಪ್ ಅವರು ಸಿಎಂ ಸಿದ್ದರಾಮಯ್ಯನವರ ಪರವಾಗಿ ಬಾದಾಮಿಯಲ್ಲಿ ಚುನಾವಣ ಪ್ರಚಾರ ಮಾಡುತ್ತಾರೆ ಎಂದು ಕೆಲ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು, ಮತ್ತೊಂದೆಡೆ ಶ್ರೀರಾಮುಲು ಅವರ ಪರವಾಗಿ ರಾಕಿಂಗ್ ಸ್ಟಾರ್ ಯಶ್ ಬಾದಾಮಿಗೆ ಪ್ರಚಾರಕ್ಕೆ ಬರುತ್ತಾರೆಂದು ಹೇಳಲಾಗುತ್ತಿತ್ತು.

ಆದರೆ ಸಿದ್ದರಾಮಯ್ಯನವರಿಗೆ ಈಗ ಬರಸಿಡಿಲು ಬಡಿತಂತಾಗಿದೆ..! ಏಕೆಂದರೆಡ ವಾಲ್ಮಿಕಿ ಜನಾಂಗದ ಮತಗಳನ್ನು ಸೆಳೆಯಬೇಕಾದರೆ ಆ ಜನಾಂಗದ ನಾಯಕ ನಟರಾದ ಸುದೀಪ್ ಅವರನ್ನು ಕರೆದುಕೊಂಡು ಹೋಗಿ ಪ್ರಚಾರ ಮಾಡಿಸಿದರೆ ಆ ಜನಾಂಗದ ಮತ್ತು ಅವರ ಅಭಿಮಾನಿಗಳ ಓಟುಗಳು ಕಾಂಗ್ರೆಸ್‍ಗೆ ಓಟು ಬೀಳುತ್ತದೆ ಎನ್ನುವ ಸಿದ್ದರಾಮಯ್ಯನವರ ಈಕ್ವೆಷನ್ ಈಗ ಉಲ್ಟಾ ಹೊಡದಿದೆ.

ಸಿಎಂ ಸಿದ್ದರಾಮಯ್ಯಪರವಾಗಿ ಸುದೀಪ್ ಪ್ರಚಾರ ಮಾಡುತ್ತಾರೆ ಎಂದು ಹೇಳುತ್ತಿರುವುದು ಮಾದ್ಯಮ ಸೃಷ್ಠಿಯಷ್ಟೆ, ನಾನು ಶ್ರೀರಾಮುಲು ಅವರನ್ನು ಅನೇಕ ವರ್ಷಗಳಿಂದ ಬಲ್ಲೆ ನಾನು ಅವರ ವಿರುದ್ಧ ಪ್ರಚಾರಕ್ಕೆ ಬಾದಾಮಿಗೆ ಹೋಗುತ್ತಿಲ್ಲ.

ಈ ಸುದ್ದಿ ಮಾಡುವುದಕ್ಕಿನ್ನ ಮೊದಲು ಮಾಧ್ಯಮಗಳು ನನ್ನನ್ನು ಒಂದು ಮಾತು ಕೇಳಿದ್ದರೆ ತಪ್ಪು ಸುದ್ದಿ ಇಷ್ಟೋಂದು ಮಹತ್ವ ಪಡೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಶ್ರೀರಾಮುಲು ಅವರಿಗೆ ಶುಭ ಕೋರಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿದ್ದು ಕಾಂಗ್ರೆಸ್ ಅಥವಾ ಮಾಧ್ಯಮಗಳಾ..???

ಈ ಸುದ್ದಿ ಹಬ್ಬುವುದಕ್ಕೆ ಮಾಧ್ಯಮಗಳಷ್ಟೇ ಪಾತ್ರ ಕಾಂಗ್ರೆಸ್‍ದು ಇದೆ ಎಂದು ಹೇಳಲಾಗುತ್ತಿದೆ. ಕೆಲ ಮಾಧ್ಯಮಗಳು ಸಿದ್ದರಾಮಯ್ಯ ಪರವಾಗಿ ಕಿಚ್ಚ ಸುದೀಪ್ ಪ್ರಚಾರ ಮಾಡುತ್ತಾರೆ. ಈ ಮೂಲಕ ಶ್ರೀರಾಮುಲು ಮತದ ಕೋಟೆಗೆ ಸಿಎಂ ಸಿದ್ದರಾಮಯ್ಯ ಅವರು ಲಗ್ಗೆ ಇಡುತ್ತಾರೆಂದಲ್ಲ ಸುದ್ದಿ ಮಾಡಿದ್ದವು, ಇದಕ್ಕೆ ಕಾರಣವೂ ಇದೆ.

ಕಿಚ್ಚ ಸುದೀಪ್ ಅವರು ಕುಮಾರಸ್ವಾಮಿ ಅವರ ಹುಟ್ಟು ಹಬ್ಬಕ್ಕೆ ತಮ್ಮ ಮನೆಗೆ ಕರೆಸಿ ಕೈ ಯಾರೆ ಅಡುಗೆ ಮಾಡಿ ಬಡಿಸಿದ್ದರು, ಆಗ ಇದೇ ಮಾಧ್ಯಮಗಳು ಕಿಚ್ಚ ಜೆಡಿಎಸ್ ಸೇರಿದರು ಎಂದು ಸುದ್ದಿ ಮಾಡಿದ್ದರು, ನಂತರ ಸಿಸಿಎಲ್ ಕ್ರಿಕೇಟ್ ಟೂರ್ನಿಮೆಂಟ್ ವೇಳೆ ಕಾರ್ಯಕ್ರಮ ಉದ್ಘಾಟನೆಗೆ ಸಿದ್ದರಾಮಯ್ಯನವರನ್ನು ಆಹ್ವಾನಿಸುವುದಕ್ಕೆ ಅವರ ಮನೆಗೆ ಹೋಗಿದ್ದಾಗಲೂ ಕೂಡ ಇದೇ ರೀತಿಯ ಸುದ್ದಿಗಳಾಗಿದ್ದವು.

sudeep - sidduಸಿದ್ದರಾಮಯ್ಯ ಮತ್ತು ಸುದೀಪ್ ನಡುವಿನ ಬಾಂಧವ್ಯ ನೋಡಿ ಕಾಂಗ್ರೆಸ್‍ನವರೇ ಕೆಲವು ಮಾದ್ಯಮಗಳಿಗೆ ತಪ್ಪು ಸಂದೇಶ ನೀಡಿರಬಹುದು, ಆ ಕಾರಣದಿಂದ ವಾಲ್ಮೀಕಿ ಸಮಾಜದ ಮತಗಳನ್ನು ಪಡೆಯಲು ಸಿದ್ದರಾಮಯ್ಯ ಪ್ಲಾನ್ ಮಾಡಿರಬಹುದು ಎಂದು ಸುದ್ದಿಗಳಾಗಿವೆ. ಏಕೆಂದರೆ ಸೋಲಿನ ಭಯದಲ್ಲಿರುವ ಸಿದ್ದರಾಮಯ್ಯ ಎಲ್ಲಾ ರೀತಿಯ ಖಸರತ್ತನ್ನ ಮಾಡುತ್ತಿದ್ದಾರೆ.

ಈಗಾಗಲೇ ಯಶ್ ಕೂಡ ಬಾದಮಿಯಲ್ಲಿ ರಾಮುಲು ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುವುದಿಲ್ಲ, ಮೊಳಕಾಲ್ಮೂರಿನಲ್ಲಿ ಮಾತ್ರ ಪ್ರಚಾರ ಮಾಡಿದ್ದಾರೆ ಎನ್ನುವ ಮಾಹಿತಿ ಯಶ್ ಅವರ ಆಪ್ತ ವಲಯದಿಂದ ತಿಳಿದು ಬಂದಿದೆ.

ಒಟ್ಟಿನಲ್ಲಿ ಬಾದಾಮಿ ಕ್ಷೇತ್ರ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಅವರ ಸ್ಪರ್ಧೆಯಿಂಗ ರಂಗೇರಿದ್ದರೆ, ಸುದೀಪ್ ಮತ್ತು ಯಶ್ ಹೆಸರುಗಳು ಬಂದ ಕಾರಣದಿಂದ ಮತ್ತಷ್ಟು ರಂಗೇರುವುದಕ್ಕೆ ಕಾರಣವಾಗಿದೆ. ಹಾಗಾಗಿ ಸುದೀಪ್ ಅವರ ಈ ನಿರ್ಧಾರ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದ್ದು, ಶಾಕ್ ಮೇಲೆ ಶಾಕ್ ನೀಡಿದಂತಾಗಿದೆ ಸಿದ್ದರಾಮಯ್ಯನವರ ಸ್ಥಿತಿ.

Please follow and like us:
0
https://kannadadalli.com/wp-content/uploads/2018/05/sudeep-siddu.jpghttps://kannadadalli.com/wp-content/uploads/2018/05/sudeep-siddu-150x100.jpgBalajiಸುದ್ದಿbadami,kiccha sudeep,kumarswami,siddaramaiah,sriramulu,sudeepಸಿದ್ದರಾಮಯ್ಯ ಪರವಾಗಿ ಬಾದಮಿಯಲ್ಲಿ ಪ್ರಚಾರ ಮಾಡುವುದಿಲ್ಲ ಎಂದು ಶಾಕ್ ನೀಡಿದ ನಟ ಕಿಚ್ಚಾ ಸುದೀಪ್...!!! ಬಾದಾಮಿಯಲಿ ಕಿಚ್ಚ ಸುದೀಪ್ ಅವರು ಸಿಎಂ ಸಿದ್ದರಾಮಯ್ಯನವರ ಪರವಾಗಿ ಬಾದಾಮಿಯಲ್ಲಿ ಚುನಾವಣ ಪ್ರಚಾರ ಮಾಡುತ್ತಾರೆ ಎಂದು ಕೆಲ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು, ಮತ್ತೊಂದೆಡೆ ಶ್ರೀರಾಮುಲು ಅವರ ಪರವಾಗಿ ರಾಕಿಂಗ್ ಸ್ಟಾರ್ ಯಶ್ ಬಾದಾಮಿಗೆ ಪ್ರಚಾರಕ್ಕೆ ಬರುತ್ತಾರೆಂದು ಹೇಳಲಾಗುತ್ತಿತ್ತು. ಆದರೆ ಸಿದ್ದರಾಮಯ್ಯನವರಿಗೆ ಈಗ ಬರಸಿಡಿಲು ಬಡಿತಂತಾಗಿದೆ..! ಏಕೆಂದರೆಡ ವಾಲ್ಮಿಕಿ ಜನಾಂಗದ ಮತಗಳನ್ನು ಸೆಳೆಯಬೇಕಾದರೆ ಆ ಜನಾಂಗದ ನಾಯಕ...ಕನ್ನಡಿಗರ ವೆಬ್​ ಚಾನೆಲ್​