ರಾಮನಗರದಲ್ಲಿ ‘ದಳ’ಪತಿಯನ್ನು ಎದುರಿಸಲು ಬಿಜೆಪಿಯ ‘ಸೈನಿಕ’ ರೆಡಿ..!!?

kumaraswamy-cp-yogeshwar

ಎಚ್​.ಡಿ ಕುಮಾರಸ್ವಾಮಿ ಅವರು ಎರಡು ಕ್ಷೇತ್ರದಲ್ಲಿ ಗೆದ್ದನಂತರ ರಾಜಕೀಯ ಹೆಜ್ಜೆಯನ್ನೇ ಇಟ್ಟಿದ್ದಾರೆ. ತಾವುಗೆದ್ದ ಚನ್ನಪಟ್ಟಣವನ್ನು ತಾವೇ ಉಳಿಸಿಕೊಂಡು ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಈ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್​ನ ದಳಪತಿಯನ್ನಾಗಿ ಯಾರನ್ನು ನಿಲ್ಲಿಸುತ್ತಾರೆ ಎನ್ನುವುದು ಇನ್ನು ಫೈನಲ್​ ಆಗದೇ ಇದ್ದು ಯಾರನ್ನು ಅಖಾಡಕ್ಕೆ ಇಳಿಸುತ್ತಾರೆ ಎನ್ನುವ ಕುತೂಹಲ ಇದೆ.

yogeshwar

ಯಾಕಂದ್ರೆ ಈ ಬಾರಿ ಚುನಾವಣೆಯಲ್ಲಿ ಕೆಲವು ಪ್ರಭಾವಿ ಜೆಡಿಎಸ್​ ಶಾಸಕರು ಸೋಲನ್ನು ಅನುಭವಿಸಿರುವ ಕಾರಣದಿಂದ ಅವರಲ್ಲಿ ಯಾರದರೊಬ್ಬರನ್ನು ನಿಲ್ಲಿಸುತ್ತಾರ ಅಥವಾ ತಮ್ಮ ಧರ್ಮ ಪತ್ನಿಯನ್ನ ಇಲ್ಲ ತಮ್ಮ ಸಹೋದರನ ಮಗನಾದ ಪ್ರಜ್ವಲ್​ನನ್ನು ನಿಲ್ಲಿಸುತ್ತಾರ ನೆನ್ನುವ ಕೂತೂಹಲ ಮನೆ ಮಾಡಿದೆ.

ಇತ್ತ ಕಮಲ ಪಾಳಯದಲ್ಲಿ ಚನ್ನಪಟ್ಟಣದಲ್ಲಿ ಪರಾಭವಗೊಂಡಿರುವ ಸಿಪಿ ಯೋಗೀಶ್ವರ್​ ಅವರನ್ನು ಕಣಕ್ಕೆ ಇಳಿಸುವುದು ಬಹುತೇಕ ಖಚಿತವಾಗಿದ್ದು, ದಳಪತಿಯ ವಿರುದ್ಧದ ಹೋರಾಟಕ್ಕೆ ಸೈನಿಕನನ್ನು ಇಳಿಸಲಿದೆ ಎನ್ನುವ ಮಾಹಿತಿ ಬಿಜೆಪಿ ವಲಯದಿಂದ ಹೊರ ಬಿದ್ದಿದೆ.

HDK - CP yogeeshwar

ಈಗಾಗಲೆ ಮುಖ್ಯಮಂತ್ರಿಯಾಗಿರುವ ಎಚ್​.ಡಿ ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ಹೋಗದೇ ಇದ್ದರೂ ಕೂಡ ಅವರನ್ನು ರಾಮನಗರ ಕ್ಷೇತ್ರದ ಜನ ಆರಿಸಿ ಕಳಿಸಿದ್ದಾರೆ. ಹಾಗಾಗಿ ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣ ನನಗೆ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದ್ದು, ಅವರುಗಳನ್ನು ನಾನು ಅವಳಿ ನಗರಗಳಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಹೇಳಿದ್ದರು.

anitha- DKS

ಈ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಹೊರಗಿನವರಿಗೆ ಮಣೆ ಹಾಕಿದರೆ ಆಗ ಬಿಜೆಪಿಗೆ ಕೊಂಚ ಅವಕಾಶ ಸಿಗಲಿದೆ. ಇನ್ನು ಈ ಕ್ಷೇತ್ರದಲ್ಲಿ ಕಾಂಗ್ರೆಸ್​ ತನ್ನ ಸ್ಥಾನಕ್ಕೆ ಸ್ಪರ್ಧಿಸುತ್ತದೆಯೋ ಇಲ್ಲವೋ ಎನ್ನುವುದು ಗೊತ್ತಿಲ್ಲ. ಒಂದು ವೇಳೆ ರಾಜರಾಜೇಶ್ವರಿ ನಗರ ಬಿಟ್ಟುಕೊಡದ ಸಿಟ್ಟಿನಿಂದ ಡಿಕೆ ಶಿವಕುಮಾರ್​ ಅವರು ಏನಾದರೂ ಇಲ್ಲಿಗೆ ಪ್ರಭಲ ಆಕಾಂಕ್ಷಿಯನ್ನು ಕಣಕ್ಕಿಳಿಸಿದರೆ ಆಗ ಬಿಜೆಪಿಯ ಗೆಲುವಿನ ದಾರಿ ಸುಗಮವಾಗುತ್ತದೆ.

dk-shivakumar

ಬಿಜೆಪಿಯವರು ಕಾಂಗ್ರೆಸ್​ ವಿರೋಧಿಸಿಕೊಂಡು ಬಂದಿದ್ದ ಜೆಡಿಎಸ್​ ಈಗ ಅವರೊಟ್ಟಿಗೆ ಸೇರಿ ಸರ್ಕಾರ ಮಾಡಿರುವ ವಿಷಯವನ್ನ ಇಟ್ಟುಕೊಂಡೇ ಚುನಾವಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಚುನಾವಣೆಯಲ್ಲಿ ಇಂದು ಇರುವ ಟ್ರೆಂಡ್​ ನಾಳೆಗಾಗಲೇ ಬದಲಾಗುತ್ತದೆ ಹಾಗಾಗಿ ಈ ಕ್ಷೇತ್ರದ ಚುನಾವಣೆ ರೋಚಕವಾಗಿದ್ದು ಏನಾಗುತ್ತದೆ ಎಂದು ಇಡೀ ರಾಜ್ಯದ ಜನ ಕಾದು ನೋಡುತ್ತಿದ್ದಾರೆ.

Please follow and like us:
0
https://kannadadalli.com/wp-content/uploads/2018/05/kumaraswamy-cp-yogeshwar.jpghttps://kannadadalli.com/wp-content/uploads/2018/05/kumaraswamy-cp-yogeshwar-150x100.jpgKannadadalli Editorರಾಜಕೀಯ2018 re election,cp yogeeshwar,dk shivakumar,HD kumarswamy,ramanagraರಾಮನಗರದಲ್ಲಿ ‘ದಳ’ಪತಿಯನ್ನು ಎದುರಿಸಲು ಬಿಜೆಪಿಯ ‘ಸೈನಿಕ’ ರೆಡಿ..!!? ಎಚ್​.ಡಿ ಕುಮಾರಸ್ವಾಮಿ ಅವರು ಎರಡು ಕ್ಷೇತ್ರದಲ್ಲಿ ಗೆದ್ದನಂತರ ರಾಜಕೀಯ ಹೆಜ್ಜೆಯನ್ನೇ ಇಟ್ಟಿದ್ದಾರೆ. ತಾವುಗೆದ್ದ ಚನ್ನಪಟ್ಟಣವನ್ನು ತಾವೇ ಉಳಿಸಿಕೊಂಡು ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್​ನ ದಳಪತಿಯನ್ನಾಗಿ ಯಾರನ್ನು ನಿಲ್ಲಿಸುತ್ತಾರೆ ಎನ್ನುವುದು ಇನ್ನು ಫೈನಲ್​ ಆಗದೇ ಇದ್ದು ಯಾರನ್ನು ಅಖಾಡಕ್ಕೆ ಇಳಿಸುತ್ತಾರೆ ಎನ್ನುವ ಕುತೂಹಲ ಇದೆ. ಯಾಕಂದ್ರೆ ಈ ಬಾರಿ ಚುನಾವಣೆಯಲ್ಲಿ ಕೆಲವು ಪ್ರಭಾವಿ ಜೆಡಿಎಸ್​ ಶಾಸಕರು ಸೋಲನ್ನು...ಕನ್ನಡಿಗರ ವೆಬ್​ ಚಾನೆಲ್​