ಎಚ್​.ಡಿ.ದೇವೇಗೌಡರಿಗೆ ಬಹಿರಂಗ ಸವಾಲೆಸದ ಬಿ.ಎಸ್​.ಯಡಿಯೂರಪ್ಪ

bs yadiyurappa

ಚುನಾವಣೆಗು ಮುನ್ನ ಬಹುಮತ ಬರದಿದ್ದಲ್ಲಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಮತ್ತೆ ಚುನಾವಣೆಗೆ ಹೋಗುತ್ತೇವೆ ಎಂದಿದ್ದ ನೀವು ಈಗ ಕಾಂಗ್ರೆಸ್​ ಜೊತೆ ಸೇರಿ ಮೈತ್ರಿ ಸರ್ಕಾರ ಮಾಡುತ್ತೀದ್ದೀರಿ. ನಿಮಗೆ ತಾಖತ್​ ಇದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಗೆ ಬಿ.ಎಸ್.ಯಡಿಯೂರಪ್ಪ ಸವಾಲೆಸೆದಿದ್ದಾರೆ.

BS_Yeddyurappa

ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿರುವ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಜೆಡಿಎಸ್​, ರೈತರ ಖಾಸಗಿ ಸಾಲ ಮನ್ನಾ ಮಾಡುವುದಾಗಿಯೂ ಹೇಳಿದ್ದಾರೆ, ಈಗ ಮನ್ನಾ ಮಾಡದಿದ್ದರೆ ರೈತ ಸಮುದಾಯವನ್ನು ಬೀದಿಗಿಳಿಸಿ‌ ಹೋರಾಟ ನಡೆಸುತ್ತೇನೆ, ರಾಜ್ಯ ಬಂದ್, ಬೆಂಗಳೂರು ಬಂದ್ ಗೆ ಕರೆ ನೀಡಿ ಜೆಡಿಎಸ್​ನ ನಿಜ ಬಣ್ಣವನ್ನು ಬಟಾ ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ನಗರದ ಮೌರ್ಯ ವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿ ಬಿಜೆಪಿ ನಾಯಕರು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ವಿರೋಧಿಸಿ ಬಿಜೆಪಿಯಿಂದ ಕರಾಳ ದಿನಾಚರಣೆಯನ್ನು ಆಚರಿಸುವ ವೇಳೆ ಮಾತನಾಡಿದ ಯಡಿಯೂರಪ್ಪ, ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತಿದ್ದಾರೆ. ಬಹುಮತವಿಲ್ಲದಿದ್ದರೆ ವಿರೋಧಪಕ್ಷದಲ್ಲಿ ಕೂರುತ್ತೇವೆ, ಜನರ ಮುಂದೆ ಹೋಗುತ್ತೇವೆ ಎಂದಿದ್ದವರು ಈಗ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಮಾತಿನಂತೆ ವಿಧಾನಸಭೆ ವಿಸರ್ಜಿಸಿ ಬನ್ನಿ ನಾವು 150 ಸ್ಥಾನ ಪಡೆಯುತ್ತೇವೆ, ಇಲ್ಲಿದಿದ್ದರೆ ನೀವು ಹೇಳಿದಂತೆ ಕೇಳುತ್ತೇವೆ ಎಂದು ದೇವೇಗೌಡರಿಗೆ ನೇರ ಸವಾಲೆಸೆದರು.

bs yadiyurappa

ಏನು ಸಾಧನೆ ಮಾಡಿದ್ದೀರಿ‌ ಎಂದು ಇಲ್ಲಿಗೆ ಬರುತ್ತಿದ್ದೀರಿ, ‌ಮೋದಿ ಕನಸಿನಂತೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತವಾಗಿದೆ, ಯಾರ ವಿಜಯೋತ್ಸವ ಆಚರಿಸಲು ಬರುತ್ತಿದ್ದೀರಿ, ಕುಮಾರಸ್ವಾಮಿ ವಿಜಯೋತ್ಸವ ಆಚರಿಸಲು ಬರಿತ್ತಿದ್ದೀರಾ? ರಾಜ್ಯದಲ್ಲಿ ನಿಮ್ಮ ಅಡ್ರೆಸ್ ಇಲ್ಲ, ಈಗ ಯಾರ ಜೊತೆ ಹೋಗಲು ಇಲ್ಲಿಗೆ ಬರುತ್ತೀರಾ, ಏನು ಕುಮಾರಸ್ವಾಮಿ ಜೊತೆ ಹೋಗುತ್ತೀರಾ ಎಂದು ಸೋನಿಯಾ ಹಾಗು ರಾಹುಲ್ ಗಾಂಧಿಯನ್ನು ಯಡಿಯೂರಪ್ಪ ಪ್ರಶ್ನಿಸಿದರು.

karnataka-bjp-protest1

ಹಿಂದೆ ಸಿದ್ದು ಅಧಿಕಾರದಲ್ಲಿದ್ದಾಗ ಹೈಕಮಾಂಡ್ ಗೆ ಹಣ ನೀಡುತ್ತಿದ್ದರು ಎನ್ನುವ ಕಾರಣಕ್ಕೆ ಅವರಿಗೆ ಆಧ್ಯತೆ ನೀಡುತ್ತಿದ್ದರು, ಈಗ ಸರ್ಕಾರ ರಚನೆ ವೇಳೆ ಸಿದ್ದರಾಮಯ್ಯ ಅವರನ್ನು ಸರ್ಕಾರ ರಚನೆ ಸಂಬಂಧ ಮಾತುಕತೆಗೆ ದೆಹಲಿಗೆ ಕರೆಯಲಿಲ್ಲ, ಆ ಮೂಲಕ ನಿಮಗೆ ಅಪಮಾನ ಮಾಡಿದ‌ ಪಕ್ಷದಲ್ಲಿ‌ ಹೇಗೆ ಇರುತ್ತೀರ? ಕುರುಬ ಸಮುದಾಯವನ್ನು, ನಿಮ್ಮನ್ನು ಉಪಯೋಗ ಮಾಡಿಕೊಳ್ಳದೇ ಇದ್ದಿದ್ದರೆ ಕಾಂಗ್ರೆಸ್ 50 ಸ್ಥಾನ ಗೆಲ್ಲುತ್ತಿರಲಿಲ್ಲ, ಆದರೂ ಸಿದ್ದರಾಮಯ್ಯ ಹಾಗು ಪರಮೇಶ್ವರ್ ಅವರನ್ನು ದೆಹಲಿಗೆ ಕರೆಯದೇ ಅವಮಾನ ಮಾಡಿದೆ ಎಂದು ಟೀಕಿಸಿದರು.

devegowda

ಯಾವ ಪುರುಷಾರ್ಥಕ್ಕೆ‌ ಬೇರೆ ರಾಜ್ಯದ ಸಿಎಂಗಳನ್ನು ಕರೆದಿದ್ದೀರಿ. ಮೋದಿ ವಿರುದ್ಧ ಗುಂಪು ಕಟ್ಟಲು ಹೊರಟಿದ್ದಾರೆ, ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತಿದ್ದು, ರಾಜ್ಯದ 28 ಸ್ಥಾನ ಗೆಲ್ಲೋಣ, ಜನ ನಮ್ಮೊಂದಿಗೆ ಇದ್ದಾರೆ. ಇನ್ನು ಹತ್ತು ಸ್ಥಾನ ಕೊಡಬೇಕಿತ್ತು, ಅನ್ಯಾಯ ಮಾಡಿದೆವು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಯಾವ ದೇವರು ದಿಂಡರ ಬಳಿ ಹೋದರೂ ಇವರು ಇನ್ನು ಮೂರು ತಿಂಗಳೂ ಇರಲ್ಲ, ಸಂಪುಟ ರಚನೆಯೇ ಅನುಮಾನ ಎಂದರು.

ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ, ವೃದ್ಧಾಪ್ಯ ವೇತನ ಆರು ಸಾವಿರಕ್ಕೆ‌ ಹೆಚ್ಚಳ ಎಂದಿದ್ದರು ಈಗ ನಾವು ಯಾವಾಗ ಇದೆಲ್ಲಾ ಬರಲಿದೆ ಎಂದು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

Please follow and like us:
0
https://kannadadalli.com/wp-content/uploads/2018/05/exfxpkmkjs-1526522902-1024x538.jpghttps://kannadadalli.com/wp-content/uploads/2018/05/exfxpkmkjs-1526522902-150x100.jpgKannadadalli Editorರಾಜಕೀಯbjp protest against congress and jds,BS yadiyurappaಎಚ್​.ಡಿ.ದೇವೇಗೌಡರಿಗೆ ಬಹಿರಂಗ ಸವಾಲೆಸದ ಬಿ.ಎಸ್​.ಯಡಿಯೂರಪ್ಪ ಚುನಾವಣೆಗು ಮುನ್ನ ಬಹುಮತ ಬರದಿದ್ದಲ್ಲಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಮತ್ತೆ ಚುನಾವಣೆಗೆ ಹೋಗುತ್ತೇವೆ ಎಂದಿದ್ದ ನೀವು ಈಗ ಕಾಂಗ್ರೆಸ್​ ಜೊತೆ ಸೇರಿ ಮೈತ್ರಿ ಸರ್ಕಾರ ಮಾಡುತ್ತೀದ್ದೀರಿ. ನಿಮಗೆ ತಾಖತ್​ ಇದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಗೆ ಬಿ.ಎಸ್.ಯಡಿಯೂರಪ್ಪ ಸವಾಲೆಸೆದಿದ್ದಾರೆ. ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿರುವ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಜೆಡಿಎಸ್​, ರೈತರ ಖಾಸಗಿ...ಕನ್ನಡಿಗರ ವೆಬ್​ ಚಾನೆಲ್​