ಇಂದಿನಿಂದ ಬಜೆಟ್ ಎಫೆಕ್ಟ್- ಯಾವುದೆಲ್ಲಾ ದುಬಾರಿ, ಯಾವುದೆಲ್ಲಾ ಅಗ್ಗ? ಇಲ್ಲಿದೆ ಕಂಪ್ಲಿಟ್ ಡಿಟೇಲ್ಸ್.

ಏಪ್ರಿಲ್ 1 ರಿಂದ ಹೊಸ ವಿತ್ತಿಯ ವರ್ಷ ಆರಂಭವಾಗಲಿದೆ. 2018 -19ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪ ಮಾಡಲಾಗಿರುವ ಹಲವಾರು ಅಂಶಗಳು
ಜಾರಿಗೆ ಬಂದಿರುವ ಕಾರಣ ಒಂದಿಷ್ಟು ಸರಕು ಸೇವೆಗಳ ಬೆಲೆಗಳಲ್ಲಿ ವ್ಯತ್ಯಾಸ ಕಂಡುಬರಲಿದೆ.

ಗೋಡಂಬಿ ಮೇಲಿನ ಇರುವ ಅಬಕಾರಿ ಸುಂಕ ಶೇ.5 ರಿಂದ ಶೇ 2.5 ರವರೆಗೆ ಇಳಿಕೆಯಾಗಲಿದೆ. ಇನ್ನೂ ಸೋಲಾರ್ ಉಪಕರಣಗಳ ಮೇಲಿನ ದರ ಕಡಿತಗೊಂಡಿದೆ.
ಶ್ರವಣ ಸಾಧನಗಳ ಮೇಲಿನ ಸುಂಕ ಸಂಪೂರ್ಣ ಕಡಿತವಾಗಿದ್ದು ಇಟ್ಟಿಗೆ, ಸೆರಾಮಿಕ್,ಟೈಲ್ಸ್ ವಸ್ತುಗಳ ಮೇಲೆ ಶೇ 7.5 ಇಳಿಕೆಯಾಗಲಿದೆ

ಇನ್ನೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಬೆಲೆಯಲ್ಲಿ ಏರಿಕೆ ಕೂಡ ಆಗಿದೆ. ಚಾರ್ಜರ್ ಶೇ 10, ಸ್ಮಾರ್ಟ್ ವಾಚ್ಗಳು ಶೇ. 20, ಎಲ್ ಸಿ ಡಿ/ ಎಲ್ ಇ ಡಿ/ಒ ಎಲ್ ಇ ಡಿ  ಟಿವಿಗಳ ಬೆಲೆಯಲ್ಲಿ ಶೇ 15. ಹಾಗೇಯೆ ಗೃಹ ಅಲಂಕಾರಿಕ ವಿದ್ಯುದ್ವೀಪಗಳು ಶೇ.20 ರಷ್ಟು ಏರಿಕೆಯಾಗಲಿದೆ. ಆಟೋ ಮೊಬೈಲ್ಗಳ ಪಟ್ಟಿಯಲ್ಲಿ ನೋಡುವುದಾದರೆ ಕಾರು ಬೈಕ್ ಗಳ ಬಿಡಿ ಭಾಗಗಳು ಶೇ 15 ರಷ್ಟು ಟ್ರಕ್ ಮತ್ತು ಬಸ್ ಗಳ ಟಯರ್ ಗಳಲ್ಲಿ ಶೇ 15 ಕ್ಕೆ ಏರಿಕೆಯಾಗಲಿದೆ.

ಆರೆಂಜ್ ಜ್ಯೂಸ್ ಶೇ 3 ರಷ್ಟು, ಪ್ರೂಟ್ ಜ್ಯೂಸ್ ಮತ್ತು ತರಕಾರಿ ಜ್ಯೂಸ್ ಶೇ.50 ಕಚ್ಚಾ ಅಡುಗೆ ಎಣ್ಣೆ ಶೇ 30 ಮತ್ತು ಸಂಸ್ಕರಿಸಿದ ಅಡುಗೆ ಎಣ್ಣೆ ಶೇ 35 ಕ್ಕೆ  ಏರಿಕೆಯಾಗಲಿದೆ. ಸುಗಂಧ ದ್ರವ್ಯ, ಡಿಯೋಡ್ರೆಂಟ್ ಶೇ.20, ಸೌಂದರ್ಯ ವರ್ಧಕಗಳು ಶೇ 20 ದಂತ ಶುದ್ದಿಗೆ ಬಳಸುವ ವಸ್ತುಗಳು ಶೇ 20, ಶೇವಿಂಗ್ ಕ್ರೀಮ್  ಶೇ 20 ಕ್ಕೆ ಏರಿಗೆಯಾಗಲಿದೆ. ಬಟ್ಟೆಗಳು, ಪಾದರಕ್ಷೆಗಳು ಶೇ 20, ಪಾದರಕ್ಷೆಗಳ ಬಿಡಿಭಾಗಗಳು ಶೇ 15 ಕ್ಕೆ ಏರಿಕೆಯಾಗಲಿದೆ. ಹಾಸಿಗೆ, ದಿಂಬು, ಮಕ್ಕಳ ಆಟಿಕೆಗಳು, ವಿಡೀಯೋ ಗೇಮ್, ಸಿಗರೇಟ್ ಲೈಟರ್ ಗಳ ಮೇಲೂ ಕೂಡ ಶೇ 20 ರಷ್ಟು ಏರಿಕೆಯಾಗಲಿದೆ

Loading…

Please follow and like us:
0
https://kannadadalli.com/wp-content/uploads/2018/04/budjet-e1530780421736.jpghttps://kannadadalli.com/wp-content/uploads/2018/04/budjet-150x100.jpgManjulaಸುದ್ದಿdudget,priceಇಂದಿನಿಂದ ಬಜೆಟ್ ಎಫೆಕ್ಟ್- ಯಾವುದೆಲ್ಲಾ ದುಬಾರಿ, ಯಾವುದೆಲ್ಲಾ ಅಗ್ಗ? ಇಲ್ಲಿದೆ ಕಂಪ್ಲಿಟ್ ಡಿಟೇಲ್ಸ್. ಏಪ್ರಿಲ್ 1 ರಿಂದ ಹೊಸ ವಿತ್ತಿಯ ವರ್ಷ ಆರಂಭವಾಗಲಿದೆ. 2018 -19ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪ ಮಾಡಲಾಗಿರುವ ಹಲವಾರು ಅಂಶಗಳು ಜಾರಿಗೆ ಬಂದಿರುವ ಕಾರಣ ಒಂದಿಷ್ಟು ಸರಕು ಸೇವೆಗಳ ಬೆಲೆಗಳಲ್ಲಿ ವ್ಯತ್ಯಾಸ ಕಂಡುಬರಲಿದೆ. ಗೋಡಂಬಿ ಮೇಲಿನ ಇರುವ ಅಬಕಾರಿ ಸುಂಕ ಶೇ.5 ರಿಂದ ಶೇ 2.5 ರವರೆಗೆ ಇಳಿಕೆಯಾಗಲಿದೆ. ಇನ್ನೂ ಸೋಲಾರ್ ಉಪಕರಣಗಳ ಮೇಲಿನ ದರ...ಕನ್ನಡಿಗರ ವೆಬ್​ ಚಾನೆಲ್​