sugar cane juiceನಮಗೆ ನಿದ್ರಾ ಹೀನತೆ ಕಾಡುವುದಕ್ಕೆ ಅನೇಕ ಕಾರಣಗಳಿವೆ ಒತ್ತಡದ ಜೀವನ, ಬದಲಾಗುತ್ತಿರುವ ಜೀವನ ಶೈಲಿ, ಅನಿಯಮಿತ ಆಹಾರ ಪದ್ದತಿ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಈ ನಿದ್ರಾ ಹೀನತೆಯು ಬರುತ್ತದೆ. ಈ ನಿದ್ರಾ ಹೀನತೆಯ ಕಾರಣದಿಂದ  ಮನೋರೋಗ, ಖಿನ್ನತೆ, ಉದ್ವೇಗ, ಮರೆಗುಳಿತನ, ಮಧುಮೇಹ, ರಕ್ತದೊತ್ತಡ, ಬೊಜ್ಜು, ಹೃದ್ರೋಗಗಳಿಗೆ ಈ ನಿದ್ರಾಹೀನತೆಯು ಮೂಲ ಕಾರಣ ಆಗುತ್ತದೆ.

sugarcane-juiceಹಾಗಾಗಿ ಈ ನಿದ್ರಾ ಹೀನತೆಯಿಂದ ತಪ್ಪಿಸಿಕೊಳ್ಳಲು ಅನೇಕರು ಮದ್ಯಪಾನ ಮತ್ತು ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಈ ಮದ್ಯಪಾನ ಮತ್ತು ಯಾವಾಗಲೂ ಮಾತ್ರೆಗಳನ್ನು ಸೇವಿಸುವುದರಿಂದ ಕಿಡ್ನಿ ಮತ್ತು ಲಿವರ್​ಗಳಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗು ಆರೋಗ್ಯ ಮತ್ತಷ್ಟು ಜಟಿಲವಾಗುತ್ತದೆ.

ಎಲ್ಲಾ ಮನೋರೋಗಗಳಿಗೂ ಮೂಲವಾಗಿರುವ ನಿದ್ರಾ ಹೀನತೆಗೆ ರಾಮಬಾಣವೊಂದನ್ನು ಭಾರತೀಯ ಮೂಲದ ಸಂಶೋಧಕರ ತಂಡವೊಂದು ಕಡು ಹಿಡಿದಿದೆ. ಈ ಅಧ್ಯಯನದ ಪ್ರಕಾರ ಕಬ್ಬಿನ ಹಾಲಿನಲ್ಲಿ ಒಕ್ಟೋಕೋಸನೊಲ್​ ಎನ್ನುವ ಅಂಶವಿದ್ದು ಈ ಅಂಶವು ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಿ ನಮಗೆ ಸುಖ ನಿದ್ರೆ ಬರಿಸಲು ಸಹಕಾರಿಯಾಗಿದೆಯಂತೆ.

sugar-680x365ಕಬ್ಬಿನ ಹಾಕಲಿನಲ್ಲಿರುವ ಒಕ್ಟೋಕೋಸ್​ ಎನ್ನುವ ಅಂಶವು ನಮ್ಮ ದೇಹದಲ್ಲಿ ಕಾರ್ಟಿಕೊಸ್ಟರೋನ್​ ಎನ್ನುವ ಒತ್ತಡದ ಹಾರ್ಮೊನ್​​ ಪ್ರಮಾಣವನ್ನು ಕಡಿಮೆ ಮಾಡಿ ದೇಹ ಮತ್ತು ಮನಸ್ಸು ಶಾಂತವಾಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ನಮ್ಮಲ್ಲಿ ಒತ್ತಡ ಉದ್ವೇಗ ಕಡಿಮೆಯಾಗಿ ಆರಾಮವಾದ ನಿದ್ದೆ ಬರುವಂತೆ ಮಾಡುತ್ತದೆ.

sugarcane-juice

ಇಷ್ಟೇ ಅಲ್ಲದೇ ಕಬ್ಬಿನ ಹಾಲಿನ ಸೇವನೆಯು ನಮ್ಮ ಯಕೃತ್ತಿನ ಆರೋಗ್ಯವನ್ನು ಕೂಡ ವೃದ್ದಿಸುತ್ತದೆ, ಇದರಿಂದ ಯಕೃತ್ತಿನ ಡಿಟೊಕ್ಸಿಫಿಕೇಷನ್​ ಪ್ರೋಸೆಸ್​ ಅನ್ನು ಹೆಚ್ಚು ಮಾಡುತ್ತದೆ, ಜೊತೆಗೆ ಕ್ಯಾನ್ಸರ್​, ಹೃದ್ರೋಗ, ಮಧುಮೇಹದಂತ ಇನ್ನು ಅನೇಕ ರೋಗಗಳು ಬರದಂತೆ ನಮ್ಮ ದೇಹವನ್ನು ಕಾಪಾಡುತ್ತದೆ.

sleeping-pillsಇಷ್ಟೆಲ್ಲ ಉಪಯೋಗವಿರುವ ಕಬ್ಬಿನಹಾಲನ್ನು ಬಿಟ್ಟು ಸುಮ್ಮನೆ ಏಕೆ ಮಾತ್ರೆ ಮತ್ತು ಮದ್ಯದ ದಾಸರಾಗುತ್ತೀರಾ.. ಇಂದಿನಿಂದಲೇ ನೀವು ಕಬ್ಬಿನ ಹಾಲನ್ನು ಕುಡಿಯುವುದಕ್ಕೆ ಆರಂಭಿಸಿ ಜೊತೆಗೆ ಯಾರೆಲ್ಲ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಅವರಿಗೆಲ್ಲ ಈ ಮಾಹಿತಿಯನ್ನ ಶೇರ್​ ಮಾಡಿ.

 

Please follow and like us:
0
https://kannadadalli.com/wp-content/uploads/2018/07/sugar-cane-juice.jpghttps://kannadadalli.com/wp-content/uploads/2018/07/sugar-cane-juice-150x100.jpgKannadadalli Editorಆರೋಗ್ಯbenefits of sugarcane milk,Cane milk is a drug for insomnia,sugarcane milk,ಕಬ್ಬಿನ ಹಾಲಿನ ಉಪಯೋಗಗಳು,ಕಬ್ಬಿನ ಹಾಲುನಮಗೆ ನಿದ್ರಾ ಹೀನತೆ ಕಾಡುವುದಕ್ಕೆ ಅನೇಕ ಕಾರಣಗಳಿವೆ ಒತ್ತಡದ ಜೀವನ, ಬದಲಾಗುತ್ತಿರುವ ಜೀವನ ಶೈಲಿ, ಅನಿಯಮಿತ ಆಹಾರ ಪದ್ದತಿ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಈ ನಿದ್ರಾ ಹೀನತೆಯು ಬರುತ್ತದೆ. ಈ ನಿದ್ರಾ ಹೀನತೆಯ ಕಾರಣದಿಂದ  ಮನೋರೋಗ, ಖಿನ್ನತೆ, ಉದ್ವೇಗ, ಮರೆಗುಳಿತನ, ಮಧುಮೇಹ, ರಕ್ತದೊತ್ತಡ, ಬೊಜ್ಜು, ಹೃದ್ರೋಗಗಳಿಗೆ ಈ ನಿದ್ರಾಹೀನತೆಯು ಮೂಲ ಕಾರಣ ಆಗುತ್ತದೆ. ಹಾಗಾಗಿ ಈ ನಿದ್ರಾ ಹೀನತೆಯಿಂದ ತಪ್ಪಿಸಿಕೊಳ್ಳಲು ಅನೇಕರು ಮದ್ಯಪಾನ ಮತ್ತು ಮಾತ್ರೆಗಳ ಮೊರೆ ಹೋಗುತ್ತಾರೆ....ಕನ್ನಡಿಗರ ವೆಬ್​ ಚಾನೆಲ್​