hd kumarswamy

ಇತ್ತೀಚೆಗೆ ಸಿಎಂ ಕುಮಾರಸ್ವಾಮಿ ಅವರು ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರನ್ನು ಹಾಕುತ್ತ ನಾನು ವಿಷಕಂಠ ವಿಷವನ್ನು ನುಂಗಿ ಜನತೆಗೆ ಅಮೃತವನ್ನು ನೀಡುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆಗೆ ಈಗ ಕಾಂಗ್ರೆಸ್ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

siddaramaiah_13

ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರು ತಮ್ಮ ಆಪ್ತರೊಂದಿಗೆ ‘‘ ತಂದೆ ಮಕ್ಕಳದು ಇದೇ ಆಗೋಯ್ತು, ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಈ ರೀತಿ ಜೆಡಿಎಸ್ನವರು ಮಾಡುತ್ತಿರುವುದೇಕೆ ಎಂದು ತಿಳಿಯುತ್ತಿಲ್ಲ. ಇವರ ಈ ಹೇಳಿಕೆಗಳು ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ಪರಿಣಾಮ ಬೀರಲಿದೆ ಈ ಬಗ್ಗೆ ನಾನು ಈಗಾಗಲೇ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

a manju

ಕಾಂಗ್ರೆಸ್ನ ಎ ಮಂಜು ಅವರು ಕೂಡ ಸುದ್ದಿಗಷ್ಠಿ ನಡೆಸಿ ಮುಖ್ಯಮಂತ್ರಿಗಳ ಈ ಹೇಳಿಕೆ ಸರಿಯಲ್ಲ, ಮುಂದಿನ 5 ವರ್ಷಗಳ ವರೆಗೆ ಅವರೇ ಮುಖ್ಯಮಂತ್ರಿ ಎಂದು ನಾವೇ ಹೇಳಿದ್ದರೂ ಕೂಡ ಅವರ ಬಾಯಲ್ಲಿ ಇಂತಹ ಮಾತುಗಳು ಬಂದಿದ್ದಕ್ಕೆ ಕಾರಣವಿಲ್ಲ. ಇನ್ನಿ ಕಾಂಗ್ರೆಸ್ಗಿನ್ನ ಜೆಡಿಎಸ್ ಪಾಳಯಕ್ಕೆ ಪ್ರಭಲ ಖಾತೆಗಳು ಸಿಕ್ಕಿವೆ.

ಆದರೂ ಕೂಡ ಸಿಎಂ ಈ ರೀತಿ ಹೇಳಿಕೆ ನೀಡುವುದರ ಮೂಲಕ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅನುಕಂಪ ಪಡೆಯುವ ಬರದಲ್ಲಿ ಅವರನ್ನು ಮುಖ್ಯಮಂತ್ರಿ ಮಾಡಿದ ಕಾಂಗ್ರೆಸ್ ಪಕ್ಷವನ್ನೆ ವಿಲನ್ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ ಎಂದು ಅಸಮಧಾನ ಹೊರ ಹಾಕಿದ್ದಾರೆ.

hdk kc venugopalಆದರೆ ಕುಮಾರಸ್ವಾಮಿ ಅವರು ಮೊನ್ನೆಯ ಹೇಳಿಕೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತಿದೆ. ಲೋಕಸಭೆಗೂ ಮುನ್ನವೇ ಸೀಟು ಹಂಚಿಕೆ ಗೊಂದಲ ತಲೆದೋರಲಿದ್ದು ಅದನ್ನು ಈ ಎರಡೂ ಪಕ್ಷಗಳು ಯಾವ ರೀತಿ ಬಗೆಹರಿಸಿಕೊಳ್ಳುತ್ತವೆ ಎಂದು ಕಾದು ನೋಡಬೇದೆ.



Please follow and like us:
0
https://kannadadalli.com/wp-content/uploads/2018/07/hd-kumarswamy.jpghttps://kannadadalli.com/wp-content/uploads/2018/07/hd-kumarswamy-150x100.jpgKannadadalli Editorಸುದ್ದಿhdk tears,kumaraswamy crying,siddaramaiah rebel for hd kumarswamy statement,sidduಇತ್ತೀಚೆಗೆ ಸಿಎಂ ಕುಮಾರಸ್ವಾಮಿ ಅವರು ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರನ್ನು ಹಾಕುತ್ತ ನಾನು ವಿಷಕಂಠ ವಿಷವನ್ನು ನುಂಗಿ ಜನತೆಗೆ ಅಮೃತವನ್ನು ನೀಡುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆಗೆ ಈಗ ಕಾಂಗ್ರೆಸ್ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರು ತಮ್ಮ ಆಪ್ತರೊಂದಿಗೆ ‘‘ ತಂದೆ ಮಕ್ಕಳದು ಇದೇ ಆಗೋಯ್ತು, ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಈ ರೀತಿ...ಕನ್ನಡಿಗರ ವೆಬ್​ ಚಾನೆಲ್​