ಸ್ಯಾಂಡಲ್ ವುಡ್ ನಲ್ಲಿ ಮೋಹಕತಾರೆ ಎನಿಸಿಕೊಂಡಿರುವ ನಟಿ ರಮ್ಯಾ ಅವರು ರಾಜಕೀಯದಿಂದ ಮತ್ತೆ ನಟನೆಯತ್ತ ಮರಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ಮಂಡ್ಯ ಜಿಲ್ಲೆಯಿಂದ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾದರು. ಇದಾದ ನಂತರ ಬಹುತೇಕ ರಾಜಕೀಯ ಕ್ಷೇತ್ರದಲ್ಲಿ ಬ್ಯೂಸಿಯಾಗಿ ಬಿಟ್ಟರು.

ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳಿಂದ ಕಾಣಿಸಿಕೊಳ್ಳಲೇ ಇಲ್ಲ. ಈ ಬಾರಿಯ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಟಿ ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನೀಡಲಾಯಿತು. ಹಾಗಾಗಿ ರಾಜಕೀಯದಲ್ಲಿ ಮತ್ತಷ್ಟು ಬ್ಯೂಸಿಯಾಗಿ ಬಿಟ್ಟರು. ಹೀಗಾಗಿ ಬಣ್ಣದ ಲೋಕಕ್ಕೆ ಮೋಹಕ ತಾರೆ ಗುಡ್ ಬೈ ಹೇಳಿದರು ಎಂದೇ ಅವರ ಅಭಿಮಾನಿಗಳು ಭಾವಿಸಿದ್ದರು.

ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆಯದೇ ಮೈತ್ರಿ ಸರ್ಕಾರವನ್ನು ಮಾಡಬೇಕಾಯಿತು. ಮೋದಿ ಸರ್ಕಾರದ ಮೇಲೆ ಕಣ್ಣಿಟ್ಟಿರುವ ದೇವೇಗೌಡರು ಮೋದಿ ವಿರುದ್ಧ ಮಹಾಘಟ ಬಂಧನವನ್ನು ರಚನೆ ಮಾಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋ

ಕಸಭಾ ಚುನಾವಣೆಯಲ್ಲೂ ಈ ಮಹಾ ಮೈತ್ರಿಯನ್ನು ಮುಂದುವರೆಸುವ ಯೋಜನೆಯೂ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಮಹಾಮೈತ್ರಿ ಮುಂದುವರೆದದ್ದೇ ಆದರೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಬೇಕಾಗುತ್ತದೆ. ಏಕೆಂದರೆ ಮಂಡ್ಯ ಜೆಡಿಎಸ್ ನ ಭದ್ರಕೋಟೆ ಎಂಬುದನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಾಬೀತು ಪಡಿಸಿದೆ.

ramya

ಇದೇ ಕಾರಣಕ್ಕಾಗಿಯೇ ನಟಿ ರಮ್ಯಾ ಅವರು ಚಿತ್ರರಂಗಕ್ಕೆ ಮತ್ತೆ ಮತ್ತೆ ಮರಳುವ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೂ ಕೂಡ ರಕ್ಷಿತ್ ಶೆಟ್ಟಿ ಅಭಿನಯದ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲೂ ನಟಿ ರಮ್ಯಾ ಅವರು ರಕ್ಷಿತ್ ಶೆಟ್ಟಿಯವರ ಟ್ವೀಟ್ ಗೆ ಮತ್ತೆ ಸ್ಯಾಂಡಲ್ ವುಡ್ ಕಡೆ ಮರಳುವುದಾಗಿ ಸೂಚನೆ ನೀಡಿದ್ದರು.

ಒಂದು ವೇಳೆ ನಟಿ ರಮ್ಯಾ ಅವರು ಮರಳಿ ಬಂದರೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಧೂಳು ಎಬ್ಬಿಸಲಿದ್ದಾರೆ ಎಂಬುದು ಮಾತ್ರ ಸತ್ಯ. ಇದಕ್ಕಾಗಿಯೇ ರಮ್ಯಾ ಅವರ ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.Please follow and like us:
0
https://kannadadalli.com/wp-content/uploads/2018/03/60763454.jpghttps://kannadadalli.com/wp-content/uploads/2018/03/60763454-150x100.jpgSowmya KBಸಿನೆಮಾback to film industry,cute star,ramya,sandalwoodಸ್ಯಾಂಡಲ್ ವುಡ್ ನಲ್ಲಿ ಮೋಹಕತಾರೆ ಎನಿಸಿಕೊಂಡಿರುವ ನಟಿ ರಮ್ಯಾ ಅವರು ರಾಜಕೀಯದಿಂದ ಮತ್ತೆ ನಟನೆಯತ್ತ ಮರಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ಮಂಡ್ಯ ಜಿಲ್ಲೆಯಿಂದ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾದರು. ಇದಾದ ನಂತರ ಬಹುತೇಕ ರಾಜಕೀಯ ಕ್ಷೇತ್ರದಲ್ಲಿ ಬ್ಯೂಸಿಯಾಗಿ ಬಿಟ್ಟರು. ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳಿಂದ ಕಾಣಿಸಿಕೊಳ್ಳಲೇ ಇಲ್ಲ. ಈ ಬಾರಿಯ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಟಿ ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು...ಕನ್ನಡಿಗರ ವೆಬ್​ ಚಾನೆಲ್​