ಕಾಂಗ್ರೆಸ್‍ನಲ್ಲಿ ಶುರುವಾಗಿದೆ ಉಪಮುಖ್ಯಮಂತ್ರಿ ರೇಸ್..!!! ಒಬ್ಬರಿಗೆ ಕೊಟ್ರೆ ಇನ್ನೊಬ್ಬರಿಗೆ ಸಿಟ್ಟು..!!?

dcm
ಯಡಿಯೂರಪ್ಪನವರ ರಾಜೀನಾಮೆ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಲಿದ್ದು ಈ ಸರ್ಕಾರದಲ್ಲಿ ಈಗಾಗಲೆ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವವರು ತೆರೆಮರೆಯಲ್ಲಿ ಲಾಬಿ ಮಾಡುತ್ತಿದ್ದಾರೆ ಮತ್ತೊಂದೆಡೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಬಾರೀ ಪೈಪೋಟಿ ಶುರುವಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷದ ನಾಯಕನನ್ನಾಗಿ ನೇಮಿಸಲಾಗಿದ್ದು ಡಿಸಿಎಂ ಹುದ್ದೆಗೆ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ತ್ರಿಕೋನ ಪೈಪೋಟಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

parameshwarಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಎರಡು ಬಾರಿ ಅಧಿಕಾರಕ್ಕೆ ತಂದರೂ ಕೂಡ ಮುಖ್ಯಮಂತ್ರಿ ಭಾಗ್ಯವಂತೂ ಸಿಗಲಿಲ್ಲ ಹಾಗಾಗಿ ಈ ಬಾರಿ ನನಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಕಾಂಗ್ರೆಸ್ನ ರಾಜ್ಯಾಧ್ಯಕ್ಷ ಡಾ. ಜಿ. ಪರಮೇಶ್ವರ್ದ್ ಅವರು ಪಟ್ಟು ಹಿಡಿದಿದ್ದಾರೆ. ಕಳೆದ ಬಾರಿ ತಾವು ಸೋತ ಕಾರಣವನ್ನಿಟ್ಟು ಸಿಎಂ ಸ್ಥಾನವನ್ನು ತಪ್ಪುವಂತೆ ಮಾಡಿದ್ದಾರೆ.

ಆದರೆ ಈ ಅವಕಾಶವನ್ನು ಬಿಟ್ಟರೆ ಮತ್ತೆಂದು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಆಗುವ ಕನಸು ಕನಸಾಗಿಯೇ ಉಳಿಯುತ್ತದೆ ಎಂದು ಏನಾದರೂ ಮಾಡಿ ದಲಿತ ನಾಯಕರಿಗೆ ಡಿಸಿಎಂ ಸಿಗಲೇಬೇಕು ಎನ್ನುವ ಕಾರಣದಿಂದ ಅವರು ಈ ಬಾರಿ ಡಿಸಿಎಂ ಹುದ್ದೆಗೆ ಬಾರೀ ಪೈಪೋಟಿ ನೀಡಿದ್ದಾರೆ.

dk shivakumarಡಿ.ಕೆ. ಶಿವಕುಮಾರ್ ಅವರು ಕೂಡ ಈ ಸರ್ಕಾರದಲ್ಲಿ ನಾನು ಡಿಸಿಎಂ ಆಗಲೇ ಬೇಕು ಎಂದು ಕುಳಿತಿದ್ದಾರೆ ಎಂದು ತಿಳಿದು ಬಂದಿದೆ, ಏಕೆಂದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸಕಾರ ರಚನೆಯಲ್ಲಿ ನನ್ನ ಪಾತ್ರವೇ ಹೆಚ್ಚು ಹಾಗಾಗಿ ಈ ಬಾರಿ ನನಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡವನ್ನು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳ ಮಾತಾಗಿದೆ. ಈಗಾಗಲೇ ಚುನಾವಣೆ ವೇಳೆ ಸಿದ್ದರಾಮಯ್ಯ ಅವರ ನಂತರ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದ ಡಿಕೆ ಶಿವಕುಮಾರ್ ಅವರು ಏನಾದರೂ ಮಾಡಿ ಅಧಿಕಾರದ ಗದ್ದುಗೆಯನ್ನು ಹೇರಲೇ ಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ.

ಮತ್ತೊಂದೆಡೆ ಕಾಂಗ್ರೆಸ್‍ನ ಲೋಕಸಭೆಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ರಾಜ್ಯ ರಾಜಕಾರಣಕ್ಕೆ ಮರಳುವ ಹಿಂಗಿತವನ್ನು ವ್ಯಕ್ತಪಡಿಸಿ ದಲಿತ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

khargemallikarjunಇನ್ನು ಈಗಾಗಲೇ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರುಗಳಾಗಿದ್ದವರೂ ಕೂಡ ಈ ರೇಸ್‍ನಲ್ಲಿದ್ದು ನಮಗೆ ಮತ್ತೆ ಸಚಿವ ಸ್ಥಾನ ಬೇಕು ಎಂದಿದ್ದರೆ, ಕಳೆದ ಚುನಾವಣೆಯಲ್ಲಿ ಸಚಿವ ಸ್ಥಾನ ಸಿಗದವರು ಕೂಡ ಈ ಸರ್ಕಾರದಲ್ಲಿ ಆದರೂ ನಮಗೆ ಸಚಿವ ಸ್ಥಾನ ನೀಡಿ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

mk_s_dks_gp_collageಈ ಅಧಿಕಾರದ ಆಸೆಯಿಂದ ಕಿತ್ತಾಡಿಕೊಳ್ಳುತ್ತಿರುವ ಕಾಂಗ್ರೆಸ್‍ನವರು ಅಧಿಕಾರ ವಂಚಿತರನ್ನು ಹೇಗೆ ಸಂಬಾಳಿಸುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ವಿಶ್ವಾಸ ಮತದವರೆವಿಗೂ ಕಾಂಗ್ರೆಸ್ ಜೆಡಿಎಸ್ ಶಾಸಕರ ಕೈ ಕಾಲು ಕಟ್ಟಿ ವಿಶ್ವಾಸ ಮತಯಾಚನೆಯಲ್ಲಿ ಗೆದ್ದರಬಹುದು ಆದರೆ ಮುಂದಿನ ಸಕಾರದಲ್ಲಿ ಇನ್ನು ಯಾವ ಹೈ ಡ್ರಾಮ ನಡೆಯುತ್ತದೆಯೋ ಎಂಬುದನ್ನ ಕಾದುನೋಡಬೇಕಿದೆ.

Please follow and like us:
0
https://kannadadalli.com/wp-content/uploads/2018/05/dcm.jpghttps://kannadadalli.com/wp-content/uploads/2018/05/dcm-150x100.jpgKannadadalli EditorಲೇಖನDeputy Chief Minister's Race begins in Congress,dk shivakumar,dr.g parameshwar,mallikarjuna khargeಕಾಂಗ್ರೆಸ್‍ನಲ್ಲಿ ಶುರುವಾಗಿದೆ ಉಪಮುಖ್ಯಮಂತ್ರಿ ರೇಸ್..!!! ಒಬ್ಬರಿಗೆ ಕೊಟ್ರೆ ಇನ್ನೊಬ್ಬರಿಗೆ ಸಿಟ್ಟು..!!? ಯಡಿಯೂರಪ್ಪನವರ ರಾಜೀನಾಮೆ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಲಿದ್ದು ಈ ಸರ್ಕಾರದಲ್ಲಿ ಈಗಾಗಲೆ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವವರು ತೆರೆಮರೆಯಲ್ಲಿ ಲಾಬಿ ಮಾಡುತ್ತಿದ್ದಾರೆ ಮತ್ತೊಂದೆಡೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಬಾರೀ ಪೈಪೋಟಿ ಶುರುವಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷದ ನಾಯಕನನ್ನಾಗಿ ನೇಮಿಸಲಾಗಿದ್ದು ಡಿಸಿಎಂ ಹುದ್ದೆಗೆ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ...ಕನ್ನಡಿಗರ ವೆಬ್​ ಚಾನೆಲ್​