R R ನಗರ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಜೆಡಿಎಸ್​ ಸಾಥ್​ – ಬಿಜೆಪಿ ಸೋಲಿಸಲು ಮುನಿರತ್ನ ರಣತಂತ್ರ…!!!

munirathna rr nagara

ರಾಜರಾಜೇಶ್ರಿ ಚುನಾವಣೆ ಅಕ್ರಮ ಗುರುತಿನ ಚೀಟಿ ಸಿಕ್ಕ ಕಾರಣದಿಂದಾಗಿ ಚುನಾವಣಾ ಆಯೋಗ ಮುಂದೂಡಿದ್ದು ಈ ಕ್ಷೇತ್ರದಲ್ಲಿ ಈಗ ಚುನಾವಣಾ ತಯಾರಿ ನಡೆಯುತ್ತಿದೆ. ಚುನಾವಣೆಗು ಮುನ್ನ ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ ಮೂರು ಪಕ್ಷಗಳು ಕೂಡ ಸ್ಪರ್ಧೆ ಮಾಡಿದ್ದವು ಆದರೆ ಈಗ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಜಿದ್ದಾ ಜಿದ್ದಿನ ಕಣ ಏರ್ಪಡಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

munirathna dk suresh

ಕಾಂಗ್ರೆಸ್​ನೊಂದಿಗೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಿರುವ ಜೆಡಿಎಸ್​ ಅನಿವಾರ್ಯವಾಗಿ ಕಾಂಗ್ರೆಸ್​ ಅಭ್ಯರ್ಥಿಗೆ ಸಪೋರ್ಟ್ ಮಾಡುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್​ ಅಭ್ಯರ್ಥಿ ಆಗಿರುವ ಮುನಿರತ್ನ ಅವರು ಈ ಕ್ಷೇತ್ರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಡಿಕೆ ಸುರೇಶ್​ ಕಾಂಗ್ರೆಸ್​ನಿಂದ ಮುನಿರತ್ನ ನಿಲ್ಲುವುದು ಪಕ್ಕಾ ಎಂದು ಹೇಳಿದ್ದಾರೆ.

hd kumaraswamy

ಡಿಕೆ ಸುರೇಶ್​ ಮತ್ತು ಮುನಿರತ್ನ ಅವರು ಈಗಾಗಲೇ ಕುಮಾರಸ್ವಾಮಿ ಅವರ ಜೊತೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ. ತಮ್ಮ ವಿರುದ್ಧ ಜೆಡಿಎಸ್​ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಜೆಡಿಎಸ್​ ಕ್ಯಾಂಡಿಡೆಟ್​ ಹಾಕದೇ ಇದ್ದರೆ ಕೆಟ್ಟ ಹೆಸರು ಬರುತ್ತದೆ ಎಂದು ಯೋಚಿಸಿರುವ ಜೆಡಿಎಸ್​ ನಾಯಕರು ಡಮ್ಮಿ ಕ್ಯಾಂಡಿಡೆಟ್​ ಅನ್ನು ಕಣಕ್ಕಿಳಿಸಲು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

amulyaಆದರೆ ಬಿಜೆಪಿ ತೊರೆದು ಜೆಡಿಎಸ್​ ಪಕ್ಷಕ್ಕೆ ಬಂದಿದ್ದ ಅಮೂಲ್ಯ ಅವರ ಮಾವ ರಾಮಚಂದ್ರ ಅವರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎನ್ನುವುದೇ ಕುತೂಹಲವಾಗಿದೆ. ಸರ್ಕಾರ ಇರುವ ಕಾರಣ ಇವರಿಗೆ ಬೇರೆ ಯಾವುದಾದರೂ ಜವಾಬ್ದಾರಿನ್ನು ನೀಡಿ ಸಮಾದಾನಪಡಿಸಬಹುದು. ಇಲ್ಲವೇ ಯಾವ ನಿರ್ಧಾರ ತೆಗೆದುಕೊಂಡರು ನಮಗೆ ಏನು ಆಗುವುದಿಲ್ಲ ಎಂದು ಅವರನ್ನು ನಿರ್ಲಕ್ಷಿಸಬಹುದು. ಇಲ್ಲ ಅವರನ್ನೇ ಅಭ್ಯರ್ಥಿಯನ್ನಾಗಿ ನಿಲ್ಲುವಂತೆ ಬಿ ಫಾರಂ ಅನ್ನು ಕೂಡ ನೀಡಬಹುದು.

ಈ ಕ್ಷೇತ್ರದ ಚುನಾವಣಾ ವಿಚಾರಕ್ಕೆ ಡಿಕೆ ಶಿವಕುಮಾರ್​ ತಮ್ಮ ಡಿಕೆ ಸುರೇಶ್​ ಅವರು ಎಂಟ್ರಿ ಹೊಡೆದಿರುವ ಕಾರಣ ಮುಂದೆ ಏನಾಗುತ್ತದೆ. ಜೆಡಿಎಸ್​ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

jds-congress

ಈ ಅವಕಾಶವನ್ನೇ ಬಳಸಿಕೊಂಡು ಬಿಜೆಪಿ ರಾಮಚಂದ್ರ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನವನ್ನೂ ಕೂಡ ಮಾಡಲಿದೆ. ಒಂದೊಮ್ಮೆ ಹಾಗೇನಾದರೂ ಟಿಕೆಟ್​ ಕೈ ತಪ್ಪಿ ಜೆಡಿಎಸ್​ನಿಂದ ಮರಳಿ ಬಿಜೆಪಿಗೆ ರಾಮಚಂದ್ರ ಅವರು ಏನಾದರೂ ಬಂದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ದೊಡ್ಡ ಪೆಟ್ಟು ಬೀಳಲಿದೆ.

ಆರ್​.ಆರ್​. ನಗರ ಕ್ಷೇತ್ರದಲ್ಲಿ ಜೆಡಿಎಸ್​ಗೂ ಕೂಡ ತನ್ನದೇ ಆದ ಸಾಂಪ್ರದಾಯಿಕ ಮತಗಳು ಇರುವ ಕಾರಣದಿಂದ ಈ ರಾಜಕೀಯ ಹೈಡ್ರಾಮ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

Please follow and like us:
0
https://kannadadalli.com/wp-content/uploads/2018/05/aa-3.pnghttps://kannadadalli.com/wp-content/uploads/2018/05/aa-3-150x100.pngKannadadalli Editorರಾಜಕೀಯಆರ್​ ಆರ್​ ನಗರ ಚುನಾವಣೆ,ಕಾಂಗ್ರೆಸ್​,ಕುಮಾರಸ್ವಾಮಿ ಡಿಕೆ ಬ್ರದರ್ಸ್​,ಜೆಡಿಎಸ್,ಡಿಕೆ ಸುರೇಶ್​,ಬಿಜೆಪಿ,ಮುನಿರತ್ನR R ನಗರ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಜೆಡಿಎಸ್​ ಸಾಥ್​ - ಬಿಜೆಪಿ ಸೋಲಿಸಲು ಮುನಿರತ್ನ ರಣತಂತ್ರ...!!! ರಾಜರಾಜೇಶ್ರಿ ಚುನಾವಣೆ ಅಕ್ರಮ ಗುರುತಿನ ಚೀಟಿ ಸಿಕ್ಕ ಕಾರಣದಿಂದಾಗಿ ಚುನಾವಣಾ ಆಯೋಗ ಮುಂದೂಡಿದ್ದು ಈ ಕ್ಷೇತ್ರದಲ್ಲಿ ಈಗ ಚುನಾವಣಾ ತಯಾರಿ ನಡೆಯುತ್ತಿದೆ. ಚುನಾವಣೆಗು ಮುನ್ನ ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ ಮೂರು ಪಕ್ಷಗಳು ಕೂಡ ಸ್ಪರ್ಧೆ ಮಾಡಿದ್ದವು ಆದರೆ ಈಗ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಜಿದ್ದಾ ಜಿದ್ದಿನ ಕಣ ಏರ್ಪಡಲಿದೆ...ಕನ್ನಡಿಗರ ವೆಬ್​ ಚಾನೆಲ್​