ಹಾಲು ಸಂಪೂರ್ಣ ಆಹಾರ. ನಮ್ಮ ಶರೀರಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಗಳನ್ನು ಒದಗಿಸುತ್ತದೆ. ಬೆಲ್ಲವನ್ನು ಸಕ್ಕರೆಗೆ ಬದಲಿಯಾಗಿ ಬಳಕೆ ಮಾಡಲಾಗುತ್ತದೆ. ಬೆಲ್ಲದಿಂದ ಅನೇಕ ಸಿಹಿ ಪದಾರ್ಥಗಳನ್ನೂ ಮಾಡುತ್ತಾರೆ. ಸಕ್ಕರೆಗಿಂತ ಬೆಲ್ಲವನ್ನು ಸೇವಿಸುವುದರಿಂದ ಹೆಚ್ಚಿನ ಲಾಭವಿದೆ.

ಬಿಸಿ ಬಿಸಿ ಹಾಲಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಸೇವಿಸಿದರೆ ತುಂಬಾ ರುಚಿಕರವಾಗಿರುತ್ತದೆ. ರುಚಿಯಾಗಿರುವುದಷ್ಟೇ ಅಲ್ಲದೇ, ಇತರೆ ಅನಾರೋಗ್ಯ ಸಮಸ್ಯೆ ಸಹ ನಿವಾರಣೆ ಆಗುತ್ತವೆ.

ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಸೇವಿಸುವುದರಿಂದ ಶರೀರದ ತೂಕ ಸಮತೋಲನದಲ್ಲಿರುತ್ತದೆ.

ರಕ್ತಹೀನತೆಯಿಂದ ನರಳುತ್ತಿರುವವರು ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ.

ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸಿದರೆ, ಅದರಲ್ಲಿರುವ ಪೋಷಕಾಂಶಗಳಿಂದ ತಲೆ ಕೂದಲು ಹೊಳಪಾಗುತ್ತವೆ. ಕೂದಲು ಉದುರುವುದು ನಿಂತು ಹೋಗುತ್ತದೆ. ತಲೆಹೊಟ್ಟು ನಿವಾರಣೆಯಾಗುತ್ತದೆ.

ಮಹಿಳೆಯರಿಗೆ ಋತುಚಕ್ರದಲ್ಲಿ ಪೀಡಿಸುವ ವಿವಿಧ ಸಮಸ್ಯೆಗಳು, ಮುಖ್ಯವಾಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಬೆಲ್ಲ ಬೆರೆಸಿದ ಹಾಲಿಗೆ ಪ್ರಾಕೃತಿಕವಾದ ಆಂಟಿ ಬಯಾಟಿಕ್, ಆಂಟಿ ವೈರಲ್ ಗುಣಗಳಿರುತ್ತವೆ. ಆದ್ದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಸೊಂಕುಗಳನ್ನು ಕಡಿಮೆ ಮಾಡುತ್ತದೆ.

ವೃದ್ಧಾಪ್ಯದಲ್ಲಿ ಬಹಳಷ್ಟು ಮಂದಿ ಕೀಲು ನೋವುಗಳ ಸಮಸ್ಯೆಗೆ ಗುರಿಯಾಗುತ್ತಾರೆ. ಅಂತಹವರು ಪ್ರತಿದಿನ ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ನೋವಿನಿಂದ ಉಪಶಮನ ಲಭಿಸುತ್ತದೆ ಮತ್ತು ಕೀಲುಗಳು ದೃಢವಾಗುತ್ತವೆ.

Please follow and like us:
0
https://kannadadalli.com/wp-content/uploads/2018/07/Good-With-Milk-810x486-e1530948204623.jpghttps://kannadadalli.com/wp-content/uploads/2018/07/Good-With-Milk-810x486-150x100.jpgSowmya KBಆರೋಗ್ಯಹಾಲು ಸಂಪೂರ್ಣ ಆಹಾರ. ನಮ್ಮ ಶರೀರಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಗಳನ್ನು ಒದಗಿಸುತ್ತದೆ. ಬೆಲ್ಲವನ್ನು ಸಕ್ಕರೆಗೆ ಬದಲಿಯಾಗಿ ಬಳಕೆ ಮಾಡಲಾಗುತ್ತದೆ. ಬೆಲ್ಲದಿಂದ ಅನೇಕ ಸಿಹಿ ಪದಾರ್ಥಗಳನ್ನೂ ಮಾಡುತ್ತಾರೆ. ಸಕ್ಕರೆಗಿಂತ ಬೆಲ್ಲವನ್ನು ಸೇವಿಸುವುದರಿಂದ ಹೆಚ್ಚಿನ ಲಾಭವಿದೆ. ಬಿಸಿ ಬಿಸಿ ಹಾಲಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಸೇವಿಸಿದರೆ ತುಂಬಾ ರುಚಿಕರವಾಗಿರುತ್ತದೆ. ರುಚಿಯಾಗಿರುವುದಷ್ಟೇ ಅಲ್ಲದೇ, ಇತರೆ ಅನಾರೋಗ್ಯ ಸಮಸ್ಯೆ ಸಹ ನಿವಾರಣೆ ಆಗುತ್ತವೆ. ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ...ಕನ್ನಡಿಗರ ವೆಬ್​ ಚಾನೆಲ್​