ಜನರು ಇಂದು ಹೆಚ್ಚಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಫಿಟ್ ಆಗಿ ಇರಬೇಕೆಂದು ವ್ಯಾಯಾಮ, ಯೋಗ, ಧ್ಯಾನದ ಜೊತೆಗ ಜಿಮ್ ಗೆ ನಿಯಮಿಯವಾಗಿ ಹೋಗುತ್ತಾರೆ. ಆ ಮೂಲಕ ಆರೋಗ್ಯವಂತ ದೇಹವನ್ನು ಕಾಪಾಡಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ.

ಇಂತಹ ಕಸರತ್ತು ಮಾಡಲು ಮತ್ತೊಂದಷ್ಟು ಟಿಪ್ಸ್ ಗಳನ್ನು ನಾವು ಇಂದು ನಿಮಗೆ ನೀಡುತ್ತೇವೆ. ಪರಿಮಾಣಕಾರಿಯಾಗಿ ದಪ್ಪ ದೇಹವನ್ನು ಕರಗಿಸಿಕೊಂಡು ಫಿಟ್ ಅಂಡ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಿ.

ಬ್ಲಾಕ್ ಕಾಫಿಯನ್ನು ಕುಡಿಯುವುದರಿಂದ ಸಾಧ್ಯವಾದಷ್ಟು ಬೇಗ ತಳ್ಳಗಾಗಬಹುದು. ಇದರಲ್ಲಿ ಅತ್ಯಂತ ಕಡಿಮೆ ಕ್ಯಾಲೋರಿ ಅಂಶವಿರುತ್ತದೆ. ಮಾಮೂಲಿ ಕಾಫಿಗಿಂತಲೂ ಭಿನ್ನವಾಗಿರುತ್ತದೆ. ಇದು 4.7ರಷ್ಟು ಕ್ಯಾಲೋರಿಯನ್ನು ಹೊಂದಿರುತ್ತದೆ. ಆದರೆ ದಿನ ಬಳಕೆ ಮಾಡುವ ಕಾಫಿಯಲ್ಲಿ 56.6ರಷ್ಟು ಕ್ಯಾಲೋರಿ ಇರುತ್ತದೆ. ಇದರಲ್ಲಿ ಹಾಲು, ಸಕ್ಕರೆ, ಕ್ರೀಮ್ ಇರುವುದಿಲ್ಲ. ದೇಹದ ಆರೋಗ್ಯಕ್ಕೂ ಒಳ್ಳೆಯದು.

ನೆನಪಿನ ಶಕ್ತಿ ವೃದ್ಧಿ ಮತ್ತು ತೂಕ ಕಡಿಮೆ ಮಾಡುತ್ತದೆ: ಕೆಫೀನ್ ನಿಮ್ಮ ಮೆದುಳಿನ ಡೋಪಮೈನ್ ಮಟ್ಟವನ್ನು ಹೆಚ್ಚಿಸಲು ಅನುವು ಮಾಡಿಕೊಡುವ ಒಂದು ಪ್ರಚೋದಕವಾಗಿದೆ. ಈ ಕಾರಣದಿಂದ, ಬ್ಲಾಕ್ ಕಾಫಿಯು ಮೆದುಳಿನ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಕೆಫೀನ್ ನ ಪ್ರಚೋದಕ ಪರಿಣಾಮಗಳು ಮೆದುಳಿನಲ್ಲಿ ನಿಲ್ಲುವುದಿಲ್ಲ. ಇದು ನಿಮ್ಮ ಮೆಟಬಾಲಿಕ್ ದರವನ್ನು ಹೆಚ್ಚಿಸುತ್ತದೆ. ಅಂದರೆ ಕೆಫೀನ್ ನ ಸಹಾಯದಿಂದ ನಿಮ್ಮ ದೇಹವು ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ.

ಬ್ಲಾಕ್ ಕಾಫಿ ಪೋಷಕಾಂಶಗಳ ಗಣಿ: ಬ್ಲಾಕ್ ಕಾಫಿ ಹೆಚ್ಚಿನ ಮಟ್ಟದ ಜೀವಸತ್ವಗಳು, ಖನಿಜಾಂಶಗಳನ್ನು ಹೊಂದಿದೆ. ಜೀವಸತ್ವಗಳು ಮತ್ತು ಪೌಷ್ಟಿಕಾಂಶಗಳ ಶೇಕಡಾವಾರು ಪ್ರಮಾಣವು ಸಣ್ಣದಾಗಿದ್ದರೂ, ಅವುಗಳು ಕೆಲವು ಕಪ್ ಗಳಷ್ಟು ಸೇರ್ಪಡೆಯಾಗುತ್ತವೆ. ಅಮೆರಿಕನ್ನರು ಇದೇ ಕಾರಣದಿಂದ ಹೆಚ್ಚಾಗಿ ಬ್ಲಾಕ್ ಕಾಫಿಯನ್ನು ಸೇವನೆ ಮಾಡುತ್ತಾರೆ. ಅಲ್ಲದೇ ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಆಂಟಿಆಕ್ಸಿಡೆಂಟ್ ಗಳನ್ನು ಉತ್ಪತ್ತಿ ಮಾಡುತ್ತದೆ.

ಕೆಲ ಕಾಯಿಲೆಗಳನ್ನು ತಡೆಯುತ್ತದೆ: ಆಲ್ ಜೈಮರ್, ಬುದ್ಧಿಮಾಂದ್ಯತೆ, ಹೃದಯ ಕಾಯಿಲೆ, ಖಿನ್ನತೆ, ಪಾರ್ಕಿನ್ ಸನ್, ಮಧುಮೇಹ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ.

ನೈಸರ್ಗಿಕ ನೋವು ನಿವಾರಕ: ಬ್ಲಾಕ್ ಕಾಫಿಯಲ್ಲಿರುವ ಕೆಫಿನ್ ದೀರ್ಘಕಾಲದ ನೋವು ನಿವಾರಕವಾಗಿದೆ. ತಾತ್ಕಾಲಿಕವಾಗಿ ನೋವು ನಿವಾರಕವಾಗಿದ್ದು, ಆರೋಗ್ಯಕ್ಕೆ ಸಾಕಷ್ಟು ಅನುಕೂಲಕಾರಿಯಾಗಿದೆ.
Please follow and like us:
0
https://kannadadalli.com/wp-content/uploads/2018/07/145835173.jpghttps://kannadadalli.com/wp-content/uploads/2018/07/145835173-150x100.jpgSowmya KBಆರೋಗ್ಯavoid diesease,black coffee,natural pain killer,weight lossಜನರು ಇಂದು ಹೆಚ್ಚಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಫಿಟ್ ಆಗಿ ಇರಬೇಕೆಂದು ವ್ಯಾಯಾಮ, ಯೋಗ, ಧ್ಯಾನದ ಜೊತೆಗ ಜಿಮ್ ಗೆ ನಿಯಮಿಯವಾಗಿ ಹೋಗುತ್ತಾರೆ. ಆ ಮೂಲಕ ಆರೋಗ್ಯವಂತ ದೇಹವನ್ನು ಕಾಪಾಡಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಇಂತಹ ಕಸರತ್ತು ಮಾಡಲು ಮತ್ತೊಂದಷ್ಟು ಟಿಪ್ಸ್ ಗಳನ್ನು ನಾವು ಇಂದು ನಿಮಗೆ ನೀಡುತ್ತೇವೆ. ಪರಿಮಾಣಕಾರಿಯಾಗಿ ದಪ್ಪ ದೇಹವನ್ನು ಕರಗಿಸಿಕೊಂಡು ಫಿಟ್ ಅಂಡ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಿ. ಬ್ಲಾಕ್ ಕಾಫಿಯನ್ನು ಕುಡಿಯುವುದರಿಂದ ಸಾಧ್ಯವಾದಷ್ಟು ಬೇಗ...ಕನ್ನಡಿಗರ ವೆಬ್​ ಚಾನೆಲ್​