ತುಮಕೂರು: ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಶ್ರೀ ಶಂಕರ ಸೇವಾ ಸಮಿತಿ ವತಿಯಿಂದ ಅಕ್ಟೋಬರ್ ೯ ರಿಂದ ೧೯ ರವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ ಶಾಸ್ತ್ರೋಕ್ತವಾಗಿ ನೆರವೇರುತ್ತಿದ್ದು ಅಕ್ಟೋಬರ್ ೧೭ ರಂದು ಬೆಳಿಗ್ಗೆ ಅಷ್ಟಮಿ ಪ್ರಯುಕ್ತ ಶ್ರೀ ದುರ್ಗಾಹೋಮ ಮತ್ತು ಶ್ರೀ ಶಾರದಮ್ಮನವರಿಗೆ ಶ್ರೀ ದುರ್ಗಾ ಅಲಂಕಾರ ಮಾಡಿ ಭಕ್ತಿ ಸಮರ್ಪಣೆ ಮಾಡಲಾಯಿತು.

Tumkur newsಶ್ರೀ ಶಂಕರ ಸೇವಾ ಸಮಿತಿಯ ಖಜಾಂಚಿ ಬಿ.ಎಸ್.ದಿವಾಕರ್ ಮತ್ತು ಗಿರಿಜಾಂಬ ದಂಪತಿಗಳು ದುರ್ಗಾಹೋಮದ ಸೇವಾಕರ್ತರಾಗಿದ್ದರು. ಅನ್ನಸಂತರ್ಪಣೆಯ ಸೇವೆಯನ್ನು ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘ ಮತ್ತು ಕೈಗಾರಿಕೋದ್ಯಮಿಗಳಾದ ಕುಮಾರವ್ಯಾಸ್ ದಂಪತಿಗಳು, ಶಿಕ್ಷಣ ತಜ್ಞರಾದ ಜಿ.ವಿ.ವಿದ್ಯಾಶಂಕರ್ ದಂಪತಿಗಳು ನಡೆಸಿಕೊಟ್ಟರು. ಮಠಮುದ್ರೆ ಶ್ರೀನಿವಾಸ ಜೋಯಿಸ್ ಮತ್ತು ವೇದ ವಿದ್ವಾಂಸರಾದ ಎಂ.ಕೆ.ನಾಗರಾಜರಾವ್ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದವು.
ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎನ್.ಸತ್ಯನಾರಾಯಣ, ಕಾರ್ಯದರ್ಶಿ ಕೆ.ಹಿರಿಯಣ್ಣ, ಖಜಾಂಚಿ ಬಿ.ವಿ.ಕೃಷ್ಣಮೂರ್ತಿ, ಕಾರ್ಪೋರೇಟರ್ ಸಿ.ಎನ್.ರಮೇಶ್, ಕೈಗಾರಿಕೋದ್ಯಮಿ ಹೆಚ್.ಜಿ.ಚಂದ್ರಶೇಖರ್, ಜಿಲ್ಲಾ ಬ್ರಾಹ್ಮಣ ಸಭಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ರಾಘವೇಂದ್ರ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಜೆ ಭಜನಾ ಕಾರ್ಯಕ್ರಮ ನಡೆಯಿತು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
https://kannadadalli.com/wp-content/uploads/2018/10/IMG-20181017-WA0019-461x683.jpghttps://kannadadalli.com/wp-content/uploads/2018/10/IMG-20181017-WA0019-150x100.jpgKannadadalli Editorಸುದ್ದಿತುಮಕೂರು: ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಶ್ರೀ ಶಂಕರ ಸೇವಾ ಸಮಿತಿ ವತಿಯಿಂದ ಅಕ್ಟೋಬರ್ ೯ ರಿಂದ ೧೯ ರವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ ಶಾಸ್ತ್ರೋಕ್ತವಾಗಿ ನೆರವೇರುತ್ತಿದ್ದು ಅಕ್ಟೋಬರ್ ೧೭ ರಂದು ಬೆಳಿಗ್ಗೆ ಅಷ್ಟಮಿ ಪ್ರಯುಕ್ತ ಶ್ರೀ ದುರ್ಗಾಹೋಮ ಮತ್ತು ಶ್ರೀ ಶಾರದಮ್ಮನವರಿಗೆ ಶ್ರೀ ದುರ್ಗಾ ಅಲಂಕಾರ ಮಾಡಿ ಭಕ್ತಿ ಸಮರ್ಪಣೆ ಮಾಡಲಾಯಿತು. ಶ್ರೀ ಶಂಕರ ಸೇವಾ ಸಮಿತಿಯ ಖಜಾಂಚಿ ಬಿ.ಎಸ್.ದಿವಾಕರ್ ಮತ್ತು ಗಿರಿಜಾಂಬ ದಂಪತಿಗಳು ದುರ್ಗಾಹೋಮದ ಸೇವಾಕರ್ತರಾಗಿದ್ದರು. ಅನ್ನಸಂತರ್ಪಣೆಯ...ಕನ್ನಡಿಗರ ವೆಬ್​ ಚಾನೆಲ್​