karunada kannadigara balagaದುಬೈನಲ್ಲಿರುವ ಕನ್ನಡಿಗರನ್ನು ಒಟ್ಟುಗೂಡಿಸಿ ಯುಎಇ ಯಲ್ಲಿ ಕನ್ನಡಿಗರನ್ನು ಒಟ್ಟು ಗೂಡಿಸುತಿದ್ದ ದುಬೈ ಕನ್ನಡಿಗರ ಬಳಗ ಇನ್ನು ಮುಂದೆ ಕರುನಾಡ ಕನ್ನಡಿಗರ ಬಳಗ ಎಂದು ಮರುನಾಮಕರಣ ಮಾಡಿದ್ದಿ ಇದರಲ್ಲಿ ಯುಎಇಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕನ್ನಡಿಗರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ.


ಈ ಗ್ರೂಪ್​ ಯುಎಇಯ ಎಲ್ಲ ಕನ್ನಡಿಗರನ್ನು ಒಟ್ಟುಗೂಡಿಸಿ ಅವರಿಗೆ ಸಹಾಯ ಮಾಡುವಂತಹ ಕೆಲಸ ಮಾಡುತ್ತಿದೆ. ಕರ್ನಾಟಕದಿಂದ ಕೆಲಸ ಹರಸಿ ದುಬೈಗೆ ಹೋಗುವಂತಹ ನಮ್ಮ ಯುವಕ ಯುವತಿಯರನ್ನು ಒಟ್ಟು ಗೂಡಿಸಿ ಒಬ್ಬರಿಗೊಬ್ಬರು ಸಹಾಯ ಮಾಡುವಂತಹ ಕೆಲಸ ಮಾಡುತ್ತಿದೆ.

ಕೇವಲ ಕನ್ನಡಿಗರನ್ನು ಒಟ್ಟಗೂಡಿಸುವುದಲ್ಲದೇ ಕನ್ನಡವೇ ಇಲ್ಲದ ಊರಿನಲ್ಲಿ ಪುಟ್ಟ ಕರ್ನಾಟಕವನ್ನು ಆಗಾಗ ನಿರ್ಮಿಸುತ್ತಿರುತ್ತದೆ, ಅಂದರೆ ಈ ಬಳಗವು ಕೆಲ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕರ್ನಾಟಕದ ಮೂಲೆ ಮೂಲೆ ಇಂದ ಯುಎಇಗೆ ಬಂದಿರುವವರನ್ನು ಒಂದೆಡೆ ಸೇರಿಸಿ ಅಲ್ಲಿ ಪುಟ್ಟ ಕರ್ನಾಟಕವನ್ನು ನಿರ್ಮಿಸುತ್ತಾರೆ.

ಈಗಾಗಲೇ ಯುಎಇಯಲ್ಲಿನ ಕನ್ನಡಿಗರಿಗಾಗಿ ಕರುನಾಡ ಕನ್ನಡಿಗರ ಬಳಗದಿಂದ  ಮೂರು ವಾಟ್ಸಾಪ್​ ಗ್ರೂಪ್​ಗಳಿದ್ದು ಇದರಲ್ಲಿ 2 ಗ್ರೂಪ್​ಗಳು ಸಾಮಾನ್ಯವಾಗಿದ್ದು ಈ ಗ್ರೂಪ್​ನಲ್ಲಿ ಮಹಿಳೆಯರು ಮತ್ತು ಪುರುಷರು ಇರುತ್ತಾರೆ. ಇದರ ಜೊತೆಗೆ ಒಂದು ಗ್ರೂಪ್​ ಮಹಿಳೆಯರಿಗಾಗಿಯೇ ಕ್ರಿಯೇಟ್​ ಮಾಡಿದ್ದು ಇದರಲ್ಲಿ ಮಹಿಳೆಯರು ಮಾತ್ರ ಇರುತ್ತಾರೆ. ಈ ಗ್ರೂಪ್​ಗಳ ಅಡ್ಮೀನ್​ಗಳಾಗಿ ಪೀಟರ್​ ಜೋಯ್ಸನ್​, ನಾಸೀರ್​ ಜಮಾದರ್​, ಶ್ರೀಮತಿ ಯಮುನಾ ಮನೋಜ್​ ಕುಮಾರ್ (ಮಹಿಳಾ ವಾಟ್ಸಾಪ್​ ಗ್ರೂಪ್​ಗೆ)​, ಅಡ್ಮಿನ್​ಗಳಾಗಿರುತ್ತಾರೆ.

ಯಾರೇ ಕರ್ನಾಟಕದಿಂದ ಯುಎಇಗೆ ಉದ್ಯೋಗ ಹರಸಿ ಹೋದರು ಅಂತವರಿಗೆ ಸಹಾಯ, ಸಲಹೆ ನೀಡುವಂತಹ ಕೆಲಸವನ್ನು ಈ ಗ್ರೂಪ್​ ಮಾಡುತ್ತಿದ್ದು. ಕರ್ನಾಟಕದಲ್ಲಿ ಕಷ್ಟ ಎಂದು ತಿಳಿದರು ಕೂಡ ಇಲ್ಲಿನ ಈ ಕರುನಾಡ ಕನ್ನಡಗರ ಬಳಗ ಸಹಾಯ ಅಸ್ತ ನೀಡುತ್ತಾ ಬಂದಿದೆ. ಇಲ್ಲಿಯವರೆವಗೂ ತಮ್ಮನ್ನು ಸಪೋರ್ಟ್​ ಮಾಡಿಕೊಂಡು ಬಂದಿದ್ದ ಕನ್ನಡಿಗರು ಇದೇ ರೀತಿ ಸಪೋರ್ಟ್​ ಮಾಡಿ ಎಂದು ಈ ಗ್ರೂಪ್​ ನ ಮುಖ್ಯಸ್ಥರಾದ ಪೀಟರ್​ ಜೊಯ್ಸನ್​ ಮನವಿ ಮಾಡಿದ್ದಾರೆ.

Please follow and like us:
0
https://kannadadalli.com/wp-content/uploads/2018/02/dubai.jpghttps://kannadadalli.com/wp-content/uploads/2018/02/dubai-150x100.jpgKannadadalli Editorಅಂತಾರಾಷ್ಟ್ರೀಯdubai kannadigara balaga,dubai kannadigas,UAE kannadigasದುಬೈನಲ್ಲಿರುವ ಕನ್ನಡಿಗರನ್ನು ಒಟ್ಟುಗೂಡಿಸಿ ಯುಎಇ ಯಲ್ಲಿ ಕನ್ನಡಿಗರನ್ನು ಒಟ್ಟು ಗೂಡಿಸುತಿದ್ದ ದುಬೈ ಕನ್ನಡಿಗರ ಬಳಗ ಇನ್ನು ಮುಂದೆ ಕರುನಾಡ ಕನ್ನಡಿಗರ ಬಳಗ ಎಂದು ಮರುನಾಮಕರಣ ಮಾಡಿದ್ದಿ ಇದರಲ್ಲಿ ಯುಎಇಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕನ್ನಡಿಗರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ. ಈ ಗ್ರೂಪ್​ ಯುಎಇಯ ಎಲ್ಲ ಕನ್ನಡಿಗರನ್ನು ಒಟ್ಟುಗೂಡಿಸಿ ಅವರಿಗೆ ಸಹಾಯ ಮಾಡುವಂತಹ ಕೆಲಸ ಮಾಡುತ್ತಿದೆ. ಕರ್ನಾಟಕದಿಂದ ಕೆಲಸ ಹರಸಿ ದುಬೈಗೆ ಹೋಗುವಂತಹ ನಮ್ಮ ಯುವಕ ಯುವತಿಯರನ್ನು ಒಟ್ಟು ಗೂಡಿಸಿ ಒಬ್ಬರಿಗೊಬ್ಬರು...ಕನ್ನಡಿಗರ ವೆಬ್​ ಚಾನೆಲ್​