ಏಕಾದಶಿ ಉಪವಾಸದ ಲೇಖನ ಮಾಲೆ -2

ವರ್ಷದ 24 ಏಕಾದಶಿಗಳಲ್ಲಿ ತುಂಬಾ ಶ್ರೇಷ್ಠವಾದದ್ದು ಮೂರು. ಅವುಗಳಲ್ಲಿ 1. ಆಷಾಡದ ಮೊದಲ ಏಕಾದಶಿ, 2. ವೈಕುಂಠ ಏಕಾದಶಿ, 2. ಬೀಷ್ಮ ಏಕಾದಶಿ. ಈ ದಿನಗಳಲ್ಲಿ ಉಪವಾಸ ಮಾಡಿದರೆ ತುಂಬಾ ಶ್ರೇಷ್ಠ. ಉಪವಾಸ ನಿಯಮಗಳು ಹಲವು ರೀತಿಯಾಗಿದೆ.

ಉಪ ಎಂದರೆ ಹತ್ತಿರ, ವಾಸ ಅಂದರೆ ಇರುವುದು. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಕೆಟ್ಟ ಯೋಚನೆಯನ್ನು ಮಾಡದೇ ಭಗವಂತನ ಸಮೀಪ ಇರುವುದು. ಅದು ಹೇಗೆಂದರೆ ಕೆಲವರು ಉಪವಾಸವನ್ನೇ ಒಂದು ಪರಮ ಔಷಧ ಎಂದು ಭಾವಿಸಿ ನಿರಾಹಾರವಾಗಿ ಇರುತ್ತಾರೆ.

ಈ ಸಮಯದಲ್ಲಿ ಧ್ಯಾನ, ಭಜನೆ, ಸಹಸ್ರನಾಮ ಪಠಣ ಮಾಡಿದರೆ ಉತ್ತಮ. ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸವನ್ನು ಆಚರಿಸುತ್ತಾರೆ. ಉಪವಾಸವೆಂದರೆ ಕೇವಲ ಆಹಾರವನ್ನು ತ್ಯಜಿಸುವುದು ಮಾತ್ರವಲ್ಲದೇ ಅದರ ಜೊತೆಗೆ ಕೀರ್ತನೆಗಳನ್ನು ಕೇಳುವುದು. ಭಜನೆ ಮಾಡುವುದು. ಜಪವನ್ನು ಮಾಡುವುದು. ದೇವರಿಗೆ ಪೂಜೆಯನ್ನು ಮಾಡುವುದು. ದೇವಸ್ಥಾನಕ್ಕೆ ಹೋಗುವುದು. ದಾನವನ್ನು ನೀಡುವುದೂ ಸೇರಿದಂತೆ ಹಲವು ಒಳ್ಳೆಯ ಕೆಲಸವನ್ನು ಮಾಡಬೇಕು.

krishna

ಉಪವಾಸ ಮಾಡುವವರು ಯಾವ ದಿನ ಸೂರ್ಯೋದಯಕ್ಕೆ ಏಕಾದಶಿ ಇರುತ್ತದೋ ಅದೇ ದಿನ ವ್ರತ ಆಚರಿಸಬೇಕು. ಹಲವರಿಗೆ ಈ ಕುರಿತಾಗಿ ಗೊಂದಲಗಳಿವೆ. ಸೂರ್ಯೋದಯಕ್ಕೆ (ಸೂರ್ಯೋದಯವಾಗಿ ಒಂದೇ ನಿಮಿಷದ ತನಕ) ಏಕಾದಶಿ ಇದ್ದು, ನಂತರ ದ್ವಾದಶಿ ಬಂದರೆ ಅದೇ ದಿನದಂದು ಉಪವಾಸ ವ್ರತವನ್ನು ಆಚರಿಸಬೇಕು.

bhagavdageetha

ಉಪವಾಸ ಮಾಡುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ಮಹಾಭಾರತದಲ್ಲಿ ಭೀಮನ ಸಂದೇಹಗಳನ್ನು ದೂರ ಮಾಡಲು ನಾಲ್ಕು ರೀತಿಯ ನಿಯಮಗಳನ್ನು ತಿಳಿಸಿದ್ದಾನೆ.

ಅವು ಯಾವುವೆಂದರೆ

೧) ನೀರನ್ನೂ ಸಹ ಕುಡಿಯದೇ ಮರುದಿನ ಸೂರ್ಯೋದಯವಾಗಿ ದೈವಾರಾಧನೆ ಆಗುವವರೆಗೂ ಭಕ್ತಿ ಶ್ರದ್ಧೆಯಿಂದ ಉಪವಾಸ ಮಾಡುವುದು.

೨) ಕೇವಲ ದ್ರವ ಪಾದಾರ್ಥಗಳಾದ ಹಾಲು ನೀರನ್ನು ಮಾತ್ರ ಸೇವಿಸುತ್ತಾ ದೇವರನ್ನು ನೆನೆದು ಉಪವಾಸ ಮಾಡುವುದು.

೩) ಕೇವಲ ಹಣ್ಣುಗಳನ್ನು ಮಾತ್ರ ಸೇವಿಸಿ ಉಪವಾಸ ಮಾಡಬಹುದು.

೪) ಅಲ್ಪ ಆಹಾರವನ್ನು ಸೇವಿಸುತ್ತಾ ಆ ದಿನದಂದು ಉಪವಾಸ ವ್ರತವನ್ನು ಆಚರಿಸುವುದು.

ಅವರವರ ದೇಹದ ಶಕ್ತಿಗೆ ಅನುಸಾರವಾಗಿ ಈ ನಿಯಮಗಳಲ್ಲಿ ಯಾವುದಾದರೂ ಒಂದು ಉಪವಾಸ ನಿಯಮವನ್ನು ಆಯ್ಕೆ ಮಾಡಿ ಅನುಸರಿಸುವುದರಿಂದ ಜನ್ಮ ಜನ್ಮದ ಪಾಪಗಳು ತೊಲಗಿ ಮುಕ್ತಿ ದೊರೆಯುತ್ತದೆ ಎಂದು ಮಹಾಭಾರತದಲ್ಲಿ ಶ್ರೀಕೃಷ್ಣನು ಭೀಮನಿಗೆ ಉಪದೇಶ ಮಾಡಿದ್ದಾನೆ.

ಒಟ್ಟಾರೆ ಈ ದಿನಗಳಲ್ಲಿ ಉಪವಾಸ ಮಾಡುವುದರಿಂದ ಶಾಂತಿ, ತಾಳ್ಮೆ ಸಿಗುವುದಲ್ಲದೇ ರಕ್ತದೊತ್ತಡ, ರಕ್ತಹೀನತೆ ಇನ್ನೂ ಅನೇಕ ರೋಗಗಳು ಇದ್ದರೆ ದೂರವಾಗುತ್ತದೆ. ಸಾಧ್ಯವಾದವರು ಅವರವರ ದೇಹದ ಶಕ್ತಿಗೆ ಅನುಸಾರವಾಗಿ ಈ ಉಪವಾಸ ವ್ರತವನ್ನು ಆಚರಿಸಿ ವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗಿ.

ನಿಮಗೆ  ಇತರ ಧಾರ್ಮಿಕ ವಿಚಾರಗಳನ್ನು ತಿಳಿಯುವ ಕುತೂಹಲ ಇದ್ದರೆ ಅದು ಯಾವುದೆಂದು ಕಾಮೆಂಟ್ ಮಾಡಿ ತಿಳಿಸಿ.

-ಜ್ಯೋ||ವಿ|| ವಿನಯ್ ಕುಮಾರ್ ಕಣ್ಣಿ

ಜಂಗಮವಾಣಿ – 8660831231

Please follow and like us:
0
https://kannadadalli.com/wp-content/uploads/2018/07/Ekadashi-Krishna-720x388-e1531122269204.jpghttps://kannadadalli.com/wp-content/uploads/2018/07/Ekadashi-Krishna-720x388-150x100.jpgSowmya KBಆಧ್ಯಾತ್ಮashada,ekadashi,fasting,no food fastingಏಕಾದಶಿ ಉಪವಾಸದ ಲೇಖನ ಮಾಲೆ -2 ವರ್ಷದ 24 ಏಕಾದಶಿಗಳಲ್ಲಿ ತುಂಬಾ ಶ್ರೇಷ್ಠವಾದದ್ದು ಮೂರು. ಅವುಗಳಲ್ಲಿ 1. ಆಷಾಡದ ಮೊದಲ ಏಕಾದಶಿ, 2. ವೈಕುಂಠ ಏಕಾದಶಿ, 2. ಬೀಷ್ಮ ಏಕಾದಶಿ. ಈ ದಿನಗಳಲ್ಲಿ ಉಪವಾಸ ಮಾಡಿದರೆ ತುಂಬಾ ಶ್ರೇಷ್ಠ. ಉಪವಾಸ ನಿಯಮಗಳು ಹಲವು ರೀತಿಯಾಗಿದೆ. ಉಪ ಎಂದರೆ ಹತ್ತಿರ, ವಾಸ ಅಂದರೆ ಇರುವುದು. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಕೆಟ್ಟ ಯೋಚನೆಯನ್ನು ಮಾಡದೇ ಭಗವಂತನ ಸಮೀಪ ಇರುವುದು. ಅದು ಹೇಗೆಂದರೆ ಕೆಲವರು ಉಪವಾಸವನ್ನೇ ಒಂದು...ಕನ್ನಡಿಗರ ವೆಬ್​ ಚಾನೆಲ್​