ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಎಂದೇ ಖ್ಯಾತಿ ಪಡೆದವರು ನಟಸಾರ್ವಭೌಮ, ವರ ನಟ ಡಾ. ರಾಜ್ ಕುಮಾರ್ ಅವರು. ಅವರು ಹುಟ್ಟಿದ್ದು ತಮಿಳುನಾಡು ಕರ್ನಾಟಕ ಗಡಿ ಭಾಗವಾದ ಗಾಜನೂರು ಎಂಬಲ್ಲಿ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ.

ಅಣ್ಣಾವ್ರು ತಾವು ಬದುಕಿರುವವರೆಗೂ ಗಾಜನೂರಿನ ಬಗ್ಗೆ ತುಂಬಾ ಅಭಿಮಾನವನ್ನು ಹೊಂದಿದ್ದರು. ಅವರ ಮನಸ್ಸು ಯಾವಾಗಲೂ ಇಲ್ಲೇ ಇರುತ್ತಿತ್ತು. ಆದರೆ ದೇಹ ಮಾತ್ರ ಬೆಂಗಳೂರಿನಲ್ಲಿ ಇತ್ತು. ಈ ಗಾಜನೂರಿಗೆ ಕನ್ನಡ ಚಿತ್ರರಂಗಕ್ಕೆ ಅಪ್ರತಿಮ, ಅಗಾಧ ವ್ಯಕ್ತಿತ್ವ ಹೊಂದಿರುವ ಮಹೋನ್ನತ ವ್ಯಕ್ತಿಯನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಈ ಗಾಜನೂರಿಗಿದೆ.

ಅಂತಹ ಕೀರ್ತಿವಂತ ಮಹಾನ್, ಅಪ್ರತಿಮ ನಟ ಹುಟ್ಟಿನ ಮನೆಯಲ್ಲಿ ಈಗ ದೊಡ್ಡ ಮನೆ ಕುಟುಂಬದ ಕುಡಿಯ ಚಿತ್ರವೊಂದರ ಚಿತ್ರೀಕರಣ ನಡೆಯಲಿದೆ. ಈಗಾಗಲೇ ನಿಮಗೆ ತಿಳಿದಿರಬೇಕು. ಅಣ್ಣಾವ್ರು ನಟಿಸಿದ ಸಿನೆಮಾ ಕೂಡ ಅವರು ಹುಟ್ಟಿದ ಮನೆಯಲ್ಲೇ ಚಿತ್ರೀಕರಣ ಮಾಡಲಾಗಿತ್ತು. ಕನ್ನಡ ಚಿತ್ರರಂಗದ ಎವರ್ ಗ್ರೀನ್ ಚಿತ್ರ ಸಂಪತ್ತಿಗೆ ಸವಾಲ್.

ಈ ಚಿತ್ರದ ಚಿತ್ರೀಕರಣವನ್ನು ಗಾಜನೂರಿನಲ್ಲಿ ಅದರಲ್ಲೂ ಅಣ್ಣಾವ್ರು ಹುಟ್ಟಿದ ಮನೆಯಲ್ಲೇ ಚಿತ್ರೀಕರಣ ಮಾಡಲಾಗಿತ್ತು. ಈಗ ಇದೇ ಗಾಜನೂರಿನಲ್ಲಿರುವ ಅಣ್ಣಾವ್ರು ಹುಟ್ಟಿ ಬೆಳೆದ ಮನೆಯಲ್ಲಿ ಡಾ. ರಾಜ್ ಅವರ ಮೊಮ್ಮಗನ ನೂತನ ಚಿತ್ರದ ಚಿತ್ರೀಕರಣ ನಡೆಯಲಿದೆ.

ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ವಿನಯ್ ರಾಜ್ ಕುಮಾರ್ ಅವರು ಅಭಿನಯಿಸುತ್ತಿರುವ ಗ್ರಾಮಾಯಣ ಚಿತ್ರದ ಚಿತ್ರೀಕರಣ ಇದೇ ಗಾಜನೂರಿನಲ್ಲಿ ಇರುವ ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ನಡೆಯಲಿದೆ.

ಗ್ರಾಮಾಯಣ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಅಪ್ಪಾಜಿಯವರು ಹುಟ್ಟಿದ ಮನೆಯಲ್ಲಿ ಅವರು ಓಡಾಡಿದ ಜಾಗಗಳಲ್ಲಿ ಒಂದೊಂದು ಶಾಟ್ ತೆಗೆದುಕೊಳ್ಳಲಾಗಿದೆಯಂತೆ. ವಿನಯ್ ಅವರ ಮೇಲೆ ಅಪ್ಪಾಜಿಯವರ ಆಶೀರ್ವಾದ ಇರಲಿ ಎಂಬ ಕಾರಣಕ್ಕಾಗಿಯೇ ರಾಘಣ್ಣ ನವರು ಗ್ರಾಮಾಯಣ ಚಿತ್ರತಂಡಕ್ಕೆ ಇಲ್ಲಿಯೇ ಚಿತ್ರೀಕರಣ ಮಾಡಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಅಲ್ಲದೇ, ಚಿತ್ರ ಕಥೆಯೂ ಕೂಡ ಗಾಜನೂರು ಲೊಕೇಷನ್ ಗೆ ಸೂಟ್ ಆಗವುದರಿಂದ ಗಾಜನೂರಿನಲ್ಲೇ ಚಿತ್ರೀಕರಣ ಮಾಡಲು ಯೋಜನೆ ಹಾಕಲಾಗಿದೆಂತೆ. ಗ್ರಾಮಾಯಣಕ್ಕೆ ದೇವನೂರು ಚಂದ್ರು ಆಕ್ಷನ್ ಕಟ್ ಹೇಳುತ್ತಿದ್ದು, ಗ್ರಾಮೀಣ ವಾತಾವರಣದಲ್ಲಿ ಈ ಚಿತ್ರ ಮೂಡಿಬರಲಿದೆ.

Please follow and like us:
0
https://kannadadalli.com/wp-content/uploads/2018/07/RAJAKUMAR-NEW.jpghttps://kannadadalli.com/wp-content/uploads/2018/07/RAJAKUMAR-NEW-150x100.jpgSowmya KBಸುದ್ದಿgajanuru,rajkumar birth place,vinay rajkumarಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಎಂದೇ ಖ್ಯಾತಿ ಪಡೆದವರು ನಟಸಾರ್ವಭೌಮ, ವರ ನಟ ಡಾ. ರಾಜ್ ಕುಮಾರ್ ಅವರು. ಅವರು ಹುಟ್ಟಿದ್ದು ತಮಿಳುನಾಡು ಕರ್ನಾಟಕ ಗಡಿ ಭಾಗವಾದ ಗಾಜನೂರು ಎಂಬಲ್ಲಿ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಅಣ್ಣಾವ್ರು ತಾವು ಬದುಕಿರುವವರೆಗೂ ಗಾಜನೂರಿನ ಬಗ್ಗೆ ತುಂಬಾ ಅಭಿಮಾನವನ್ನು ಹೊಂದಿದ್ದರು. ಅವರ ಮನಸ್ಸು ಯಾವಾಗಲೂ ಇಲ್ಲೇ ಇರುತ್ತಿತ್ತು. ಆದರೆ ದೇಹ ಮಾತ್ರ ಬೆಂಗಳೂರಿನಲ್ಲಿ ಇತ್ತು. ಈ ಗಾಜನೂರಿಗೆ ಕನ್ನಡ ಚಿತ್ರರಂಗಕ್ಕೆ ಅಪ್ರತಿಮ, ಅಗಾಧ ವ್ಯಕ್ತಿತ್ವ...ಕನ್ನಡಿಗರ ವೆಬ್​ ಚಾನೆಲ್​