ಶಿಕ್ಷಣ ಇಲಾಖೆಯ ಆಯುಕ್ತರು ಶಿಕ್ಷಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. 2008ರ ನಂತರ ನೇಮಕಗೊಂಡ ಪ್ರೌಢಶಾಲಾ ಸಹ ಶಿಕ್ಷಕ ಹುದ್ದೆಗೆ ಬಡ್ತಿ ಪಡೆದ ಶಿಕ್ಷಕರಿಗೆ ವಿಶೇಷ ಭತ್ಯೆಯನ್ನು ಕಡಿತ ಮಾಡಬಾರದು ಎಂಬ ಆದೇಶವನ್ನು ಹೊರಡಿಸಿದ್ದಾರೆ.

2008ರಲ್ಲಿ ನೇನಕಗೊಂಡ ಶಿಕ್ಷಕರು ಹಾಗೂ ಪಸ್ತುತ ಇರುವ ಪ್ರೌಢಶಾಲಾ ಸಹ ಶಿಕ್ಷಕರ ಮೂಲ ವೇತನಕ್ಕೆ ಹೋಲಿಕೆ ಮಾಡಿದರೆ 2008ಕ್ಕಿಂತ ಮೊದಲು ನೇಮಕಗೊಂಡ ಹಾಗೂ ಪ್ರಾಥಮಿಕ ಶಾಲೆಯಿಂದ ಬಡ್ತಿ ಪಡೆದುಕೊಂಡು ಬಂದ ಶಿಕ್ಷಕರ ಮೂಲ ವೇತನ ಕಡಿಮೆ ಇದೆ.

ಇದೇ ಕಾರಣಕ್ಕಾಗಿ ಬಡ್ತಿ ಪಡೆದ ಶಿಕ್ಷಕರಿಗೆ 2012ರವರೆಗೆ ಮಾಸಿಕ 200 ರೂ. ಹಾಗೂ 2012ರ ನಂತರ ಮಾಸಿಕ 400 ರೂ. ವಿಶೇಷ ವೇತನ ಭತ್ಯೆಯನ್ನು ನೀಡಲಾಗುತ್ತಿತ್ತು. ಹಾಗಾಗಿ ರಾಜ್ಯಾದ್ಯಂತ ಶಿಕ್ಷಕರು ವಿರೋಧ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಶಿಕ್ಷಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರ ಎಲ್ಲಾ ಶಿಕ್ಷಕರಿಗೂ ಭತ್ಯೆ ನೀಡುವುದಾಗಿ ಮೌಖಿಕ ಭರವಸೆಯನ್ನು ನೀಡಿತ್ತು. ಇದರ ಆಧಾರದ ಮೇಲೆ ಅಧಿಕಾರಿಗಳು ಭತ್ಯೆ ಮಂಜೂರು ಮಾಡಿದ್ದರು. ಈ ರೀತಿ ಭತ್ಯೆ ಮಂಜೂರು ಮಾಡಿರುವುದಕ್ಕೆ ಮಹಾಲೆಕ್ಕ ಪರಿಶೋಧಕರು ವಿರೋಧ ವ್ಯಕ್ತಪಡಿಸಿದರು.

ಇದೇ ಕಾರಣಕ್ಕಾಗಿ ಕಳೆದ ಒಂದು ವರ್ಷದಿಂದ ಹಲವು ಶಿಕ್ಷಕರ ಮಾಸಿಕ ವೇತನವನ್ನು ತಡೆ ಹಿಡಿದು ವಿಶೇಷ ಭತ್ಯೆಯನ್ನು ಕಡಿತ ಮಾಡಲಾಗುತ್ತಿತ್ತು. ಇದರಿಂದ ಸಾಕಷ್ಟು ಶಿಕ್ಷಕರು ವೇತನವಿಲ್ಲದೇ ಪರದಾಡುವಂತಾಯಿತು.

ವೇತನವಿಲ್ಲದೇ ಅನಾಕೂಲ ಎದುರಿಸುತ್ತಿರುವ ಶಿಕ್ಷಕರಿಗೆ ತೊಂದರೆಯಾಗದಂತೆ ಸಂಬಳವನ್ನು ತಡೆಹಿಡಿಯಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಅವರು ಆದೇಶಿಸಿದ್ದಾರೆ.Please follow and like us:
0
https://kannadadalli.com/wp-content/uploads/2018/07/delhi-schools_647_121616061010-1.jpghttps://kannadadalli.com/wp-content/uploads/2018/07/delhi-schools_647_121616061010-1-150x100.jpgSowmya KBಸುದ್ದಿhigh school teacher,primary school teacher,promotion,special TA DAಶಿಕ್ಷಣ ಇಲಾಖೆಯ ಆಯುಕ್ತರು ಶಿಕ್ಷಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. 2008ರ ನಂತರ ನೇಮಕಗೊಂಡ ಪ್ರೌಢಶಾಲಾ ಸಹ ಶಿಕ್ಷಕ ಹುದ್ದೆಗೆ ಬಡ್ತಿ ಪಡೆದ ಶಿಕ್ಷಕರಿಗೆ ವಿಶೇಷ ಭತ್ಯೆಯನ್ನು ಕಡಿತ ಮಾಡಬಾರದು ಎಂಬ ಆದೇಶವನ್ನು ಹೊರಡಿಸಿದ್ದಾರೆ. 2008ರಲ್ಲಿ ನೇನಕಗೊಂಡ ಶಿಕ್ಷಕರು ಹಾಗೂ ಪಸ್ತುತ ಇರುವ ಪ್ರೌಢಶಾಲಾ ಸಹ ಶಿಕ್ಷಕರ ಮೂಲ ವೇತನಕ್ಕೆ ಹೋಲಿಕೆ ಮಾಡಿದರೆ 2008ಕ್ಕಿಂತ ಮೊದಲು ನೇಮಕಗೊಂಡ ಹಾಗೂ ಪ್ರಾಥಮಿಕ ಶಾಲೆಯಿಂದ ಬಡ್ತಿ ಪಡೆದುಕೊಂಡು ಬಂದ ಶಿಕ್ಷಕರ ಮೂಲ ವೇತನ ಕಡಿಮೆ...ಕನ್ನಡಿಗರ ವೆಬ್​ ಚಾನೆಲ್​