KSIC-Mysore-Silk-Mysore

ರಾಜ್ಯ ಜೆಡಿಎಸ್ ಕಾಂಗ್ರೆಸ್ ಸರ್ಕಾರ ಇನ್ನು ಟೇಕ್ ಆಫ್ ಆಗದಿದ್ದರೂ ಕೂಡ ರಾಜ್ಯ ರೇಷ್ಮೆ ಸಚಿವ ಸಾ.ರಾ ಮಹೇಶ್ ಅವರು ಚುರುಕಾಗಿ ಕೆಲಸ ಮಾಡುವುದಕ್ಕೆ ಪ್ರಾರಂಬಿಸಿದ್ದಾರೆ.

ಇಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಪ್ರಖ್ಯಾತ ಮೈಸೂರು ಸಿಲ್ಕ್ ಸೀರೆಗಳನ್ನು ಎಲ್ಲಾ ವರ್ಗದವರಿಗೆ ದೊರೆಯುವಂತಹ ಹೋಸ ಯೋಜನೆಯೊಂದನ್ನು ಘೋಷಣೆ ಮಾಡಿದ್ದಾರೆ. ಎಲ್ಲ ವರ್ಗದವರೂ ಕೂಡ ರೇಷ್ಮೆ ಸೀರೆ ಕೊಳ್ಳುವಂತೆ ಆಗಬೇಕು ಅದಕ್ಕಾಗಿ ಮೈಸೂರು ಸಿಲ್ಕ್ ಸೀರೆಗಳನ್ನು ಅರ್ಧ ಬೆಲೆಗೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

sa-ra-mahesh

10000 ಬೆಲೆಯ ಸೀರೆ 5 ಸಾವಿರಕ್ಕೆ, 9 ಸಾವಿರ ಬೆಲೆಯ ಸೀರೆಯನ್ನು 4.500ಕ್ಕೆ ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ ಎನ್ನುವ ಮಾತನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಈ ಯೋಜನೆಯ ಬಗ್ಗೆ ನಿಗಮದ ಜೊತೆ ಚರ್ಚಿಸಿ ಅಂತಿಮವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನುವ ಭರವಸೆಯನ್ನು ನೀಡಿದ್ದಾರೆ.

mysore silk

ಒಂದೊಮ್ಮೆ ಅರ್ಧ ಬೆಲೆಗೆ ಮೈಸೂರ್ ಸಿಲ್ಕ್ ಸೀರೆಗಳು ಸಿಕ್ಕಿದ್ದೇ ಆದಲ್ಲಿ ನಮ್ಮ ಹೆಂಗಸರುಗಳಿಗೆ ಹಬ್ಬವೋ ಹಬ್ಬ. ಈ ಆಫರ್ ಶೀಘ್ರದಲ್ಲೆ ಬರಲಿದೆ ಎಂದು ಹೇಳಿದ್ದಾರೆ ಸಚಿವರು. ಹಾಗೇನಾದರೂ ಆದರೆ ಈ ವರಮಹಲಕ್ಷ್ಮಿ ಹಬ್ಬಕ್ಕೆ ಎಲ್ಲರ ಮನೆಯಲ್ಲಿ ರೇಷ್ಮೆ ಸೀರೆಗಳನ್ನು ಕೊಂಡುಕೊಳ್ಳುವುದಂತೂ ಪಕ್ಕಾ.

ಈ ರೀತಿಯ ಆಫರ್‍ಗಳನ್ನು ನೀಡುವುದರಿಂದ ನಮ್ಮ ಮೈಸೂರು ಸಿಲ್ಕ್ ಸೀರೆಗಳು ಹೆಚ್ಚು ಪ್ರಚಾರಕ್ಕೆ ಬರುವುದರ ಜೊತೆಗೆ, ಬಡವರು ಕೂಡ ರೇಷ್ಮೆ ಸೀರೆಗಳನ್ನು ಕೊಳ್ಳುವಂತೆ ಮಾಡುವುದೇ ಸರ್ಕಾರದ ಉದ್ದೇಶ ಎಂದು ಹೇಳಿದ್ದಾರೆ.

congress jds




Please follow and like us:
0
https://kannadadalli.com/wp-content/uploads/2018/06/KSIC-Mysore-Silk-Mysore.jpghttps://kannadadalli.com/wp-content/uploads/2018/06/KSIC-Mysore-Silk-Mysore-150x100.jpgKannadadalli Editorಸುದ್ದಿcheep now mysore silk,govt gift for ladies,mysore silk saris,varalakshmi festival offer on mysore silk saris.ರಾಜ್ಯ ಜೆಡಿಎಸ್ ಕಾಂಗ್ರೆಸ್ ಸರ್ಕಾರ ಇನ್ನು ಟೇಕ್ ಆಫ್ ಆಗದಿದ್ದರೂ ಕೂಡ ರಾಜ್ಯ ರೇಷ್ಮೆ ಸಚಿವ ಸಾ.ರಾ ಮಹೇಶ್ ಅವರು ಚುರುಕಾಗಿ ಕೆಲಸ ಮಾಡುವುದಕ್ಕೆ ಪ್ರಾರಂಬಿಸಿದ್ದಾರೆ. ಇಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಪ್ರಖ್ಯಾತ ಮೈಸೂರು ಸಿಲ್ಕ್ ಸೀರೆಗಳನ್ನು ಎಲ್ಲಾ ವರ್ಗದವರಿಗೆ ದೊರೆಯುವಂತಹ ಹೋಸ ಯೋಜನೆಯೊಂದನ್ನು ಘೋಷಣೆ ಮಾಡಿದ್ದಾರೆ. ಎಲ್ಲ ವರ್ಗದವರೂ ಕೂಡ ರೇಷ್ಮೆ ಸೀರೆ ಕೊಳ್ಳುವಂತೆ ಆಗಬೇಕು ಅದಕ್ಕಾಗಿ ಮೈಸೂರು ಸಿಲ್ಕ್ ಸೀರೆಗಳನ್ನು ಅರ್ಧ ಬೆಲೆಗೆ ನೀಡಲು ಸರ್ಕಾರ...ಕನ್ನಡಿಗರ ವೆಬ್​ ಚಾನೆಲ್​