ಬಾಂಬ್ ಸಿಡಿಸಿದ ಎಚ್.ಡಿ.ಕೆ – ಒಬ್ಬ ಶಾಸಕನಿಗೆ 100 ಕೋಟಿ ಹಣ, ಸಂಪುಟ ಸಚಿವ ಸ್ಥಾನ ನೀಡುವುದಕ್ಕೆ ಸಿದ್ದರಾದ ಬಿಜೆಪಿ..!

HD Kumaraswamy

ಬಿಜೆಪಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡುವುದಕ್ಕಾಗಿ ಒಬ್ಬೊಬ್ಬ ಶಾಸಕನಿಗೆ 100 ಕೋಟಿ ಹಣ ನೀಡಲು ಸಿದ್ದವಾಗಿದ್ದು ಅದರ ಜೊತೆಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದಾರೆ ಎಂದು ಎಚ್.ಡಿ ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. ಹಾಗಾದರೆ ಬಿಜೆಪಿಯವರು ನೂರು ಕೋಟಿ ಹಣ ನೀಡುತ್ತಾರೆ ಎಂದರೆ ಅದನ್ನು ಬ್ಲಾಕ್ ಆಗಿ ನೀಡುತ್ತಾರೋ ಅಥವಾ ವೈಟ್ ಆಗಿ ನೀಡುತ್ತಾರೋ ಎನ್ನುವುದನ್ನ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ದೇಶದ ಬೇರೆ ಬೇರೆ ಕಡೆ ಸರ್ಕಾರ ರಚನೆ ಮಾಡುವುದಕ್ಕೆ ಬಿಜೆಪಿ ಬಹುಮತ ಪಡೆದ ಸರ್ಕಾರಗಳನ್ನು ಹಿಂದಿಕ್ಕಿ ಬೇರೆ ಬೇರೆ ಪಕ್ಷಗಳೊಂದಿಗೆ ಸರ್ಕಾರ ರಚನೆ ಮಾಡಿದ್ದಾರೆ. ಆದರೆ ಇದೇ ರೀತಿ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ರಚನೆ ಮಾಡುವುದಕ್ಕೆ ಅಡ್ಡಗಾಲು ಹಾಕಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ. ಸ್ವತಂತ್ರ ಬಂದ ನಂತರ ಇಡೀ ಭಾರತದ ಇತಿಹಾಸದಲ್ಲಿ ಸಾಂವಿಧಾನಿಕ ಸಂಸ್ಥೆಗಳಾದ ಐಟಿ ಮತ್ತು ಇಡಿ, ಸಿಬಿಐ ಸಂಸ್ಥೇಗಳನ್ನು ಈ ರೀತಿ ಬಳಸಿಕೊಂಡಿಲ್ಲ ಎಂದು ಹೇಳಿದ್ದಾರೆ.

HDD HDK

ಜಾತ್ಯಾತೀತ ಮತ್ತು ಕೋಮುವಾದಿ ಎನ್ನುವ ಅಂಶಗಳಿಂದ ನಾನು ನಮ್ಮ ತಂದೆಯವರ ಮಾತನ್ನು ಮೀರುವುದಿಲ್ಲ, ಅವರ ಮಾರ್ಗದರ್ಶನದಲ್ಲಿ ನಾನು ಸರ್ಕಾರವನ್ನು ರಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ನನಗೆ ಈ ಕೋಮುವಾದ ಮತ್ತು ಜಾತ್ಯತೀತ ತತ್ವದಲ್ಲಿ ಯಾವುದೇ ನಂಬಿಕೆ ಇಲ್ಲ.

ಆದರೆ ನಮ್ಮ ತಂದೆ ಅರು ರಾಜಕೀಯದಲ್ಲಿ ಈ ಜಾತ್ಯಾತೀತ ಮತ್ತು ಕೋಮುವಾದವನ್ನು ವಿರೋಧಿಸಿಕೊಂಡು ಬಂದಿದ್ದಾರೆ. ಕಳೆದ ಬಾರಿ ನಾನು ಬಿಜೆಪಿಯೊಂದಿಗೆ ಸರ್ಕಾರ ಮಾಡಿದ ಕಾರಣದಿಂದಾಗಿ ನಮ್ಮ ತಂದೆಯವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಗ ಮಾಡಿದ ತಪ್ಪನ್ನು ಸರಿಮಾಡಿಕೊಳ್ಳಲು ಈಗ ಅವಕಾಶ ಸಿಕ್ಕಿದೆ ಹಾಗಾಗಿ ನಮಗೆ ಅಧಿಕಾರ ಮುಖ್ಯವಲ್ಲ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಹೋಗುವ ಪ್ರಮೆಯವೇ ಇಲ್ಲ, ಆದರೆ ಬಿಜೆಪಿ ಕೂಡ ತಮಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

HD-Kumaraswamyನಮಗೂ ಕೂಡ ಬಿಜೆಪಿ ಕಾಂಗ್ರೆಸ್ ನಲ್ಲಿ ಅನೇಕ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ, ಪಕ್ಷಕೆ ಏನಾದರೂ ತೊಂದರೆ ಆದರೆ ಆಗ ಜೆಡಿಎಸ್ ಏನೆಂದು ನಾವೂ ಕೂಡ ತೋರಿಸುತ್ತೇವೆ ಎಂದು ಕುಮಾರಸ್ವಾಮಿ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.

HD Kumaraswamy and HD Revanna
HD Kumaraswamy and HD Revanna

Please follow and like us:
0
https://kannadadalli.com/wp-content/uploads/2018/04/kumaraswamy.jpghttps://kannadadalli.com/wp-content/uploads/2018/04/kumaraswamy-150x100.jpgKannadadalli EditorರಾಜಕೀಯBJP,Congress,HD kumarswamy,hdk press meetಬಾಂಬ್ ಸಿಡಿಸಿದ ಎಚ್.ಡಿ.ಕೆ - ಒಬ್ಬ ಶಾಸಕನಿಗೆ 100 ಕೋಟಿ ಹಣ, ಸಂಪುಟ ಸಚಿವ ಸ್ಥಾನ ನೀಡುವುದಕ್ಕೆ ಸಿದ್ದರಾದ ಬಿಜೆಪಿ..! ಬಿಜೆಪಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡುವುದಕ್ಕಾಗಿ ಒಬ್ಬೊಬ್ಬ ಶಾಸಕನಿಗೆ 100 ಕೋಟಿ ಹಣ ನೀಡಲು ಸಿದ್ದವಾಗಿದ್ದು ಅದರ ಜೊತೆಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದಾರೆ ಎಂದು ಎಚ್.ಡಿ ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. ಹಾಗಾದರೆ ಬಿಜೆಪಿಯವರು ನೂರು ಕೋಟಿ ಹಣ ನೀಡುತ್ತಾರೆ ಎಂದರೆ ಅದನ್ನು ಬ್ಲಾಕ್ ಆಗಿ ನೀಡುತ್ತಾರೋ...ಕನ್ನಡಿಗರ ವೆಬ್​ ಚಾನೆಲ್​