kumarswamy emotionalಒಂದು ಮಾತನ್ನು ನಾನು ನಿಮಗೆ ನೀಡುತ್ತೇನೆ, ಒಂದು ಬಾರಿ ನೀವು ನನಗೆ ಅಧಿಕಾರವನ್ನು ನೀಡಿ ನಾನು ಮನೆ ಮನೆಯಲ್ಲಿ ಕುಮಾರಣ್ಣನ ಫೋಟೋ ಹಾಕಿಕೊಳ್ಳುವಂತಹ ಆಡಳಿತವನ್ನು ನೀಡುತ್ತೇನೆ ಎಂದು ಹೇಳುತ್ತ ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಭಾವುಕರಾದರು.

ನನಗೆ 113 ಸ್ಥಾನಗಳನ್ನು ಗೆಲ್ಲುವಂತೆ ಆಶಿರ್ವಾದ ಮಾಡಿ ನಾನು ನಿಮ್ಮ ಮನೆ ಕಾಯುತ್ತೇನೆ…!!! ನನ್ನ ಜನ ಹೇಗೆ ಬದುಕುತ್ತಿದ್ದಾರೆ ಎನ್ನುವುದರ ಬಗ್ಗೆ ತಿಳಿದಿದೆ ಹಾಗಾಗಿ ಅವರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡುವ ಕೆಲಸ ನನ್ನ ಮೇಲಿದೆ. ನನಗೆ ಅಧಿಕಾರ ಬೇಕೆಂದು ನಾನು ರಾಜಕಾರಣ ಮಾಡುತ್ತಿಲ್ಲ. ಆದರೆ ನನ್ನ ಜನ ಪಡುತ್ತಿರುವ ಕಷ್ಟಕ್ಕೆ ಸ್ಪಂದಿಸುವುದಕ್ಕಾಗಿ ನಾನು ಇಂದು ನಿಮ್ಮ ಮುಂದೆ ನಿಂತಿದ್ದೇನೆ. ನೀವು ನನಗೆ 113 ಸ್ಥಾನಗಳನ್ನು ಗೆಲ್ಲುವಂತೆ ಆಶಿರ್ವಾದ ಮಾಡಿ, ನಾನು ಸರ್ಕಾರ ರಚನೆ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಬಿಜೆಪಿ, ಕಾಂಗ್ರೆಸ್​ ಮನೆಬಾಗಿಲಿಗೆ ಹೋಗುವುದಿಲ್ಲ. ಬದಲಾಗಿ ನಿಮ್ಮ ಮನೆಗಳನ್ನು ಕಾಯುವ ಕೆಲಸ ಮಾಡುತ್ತೇನೆ ಎಂದರು.

ನಾನು ಮಣ್ಣಾಗುವುದೇ ರಾಮನಗರದಲ್ಲಿ!!! ನನಗೆ ಇವತ್ತು ಸಂದಿಗ್ದ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ, ಕ್ಷೇತ್ರದಲ್ಲಿ ಹೆಚ್ಚು ಸಮಹ ಕೊಡುವುದಕ್ಕೆ ಆಗುತ್ತಿಲ್ಲ ಆದರೆ ಒಂದು ಮಾತನ್ನ ಹೇಳುತ್ತೇನೆ ನಾನು ಕೊನೆಗೆ ಮಣ್ಣಾಗುವುದೇ ಈ ರಾಮನಗರದಲ್ಲಿ, ನನಗೆ ಕ್ಷೇತ್ರಕ್ಕೆ ಬಂದು ಹೆಚ್ಚು ಪ್ರಚಾರಕ್ಕೆ ಮಾಡುವುದಕ್ಕೆ ಆಗದಿದ್ದರೂ ನನ್ನ ಜನ ನನ್ನನ್ನು ಗೆಲ್ಲಿಸಿದ್ದೀರಿ. ನಾನು ಕ್ಷೇತ್ರಕ್ಕೆ ಬರದೇ ನಿಮಗೆ ಹಣ ನೀಡಿ ಮತ ಪಡೆದುಕೊಂಡಿಲ್ಲ. ನೀವೆ ಹಣ ಹಾಕಿ ನನ್ನನ್ನು ಗೆಲ್ಲಿಸಿದ್ದೀರಿ ಹಾಗಾಗಿ ನಾನು ಕೊನೆ ಉಸಿರು ಇರುವವರೆಗೂ ರಾಮನಗರವೇ ನನ್ನ ಕ್ಷೇತ್ರ ನಾನು ಮಣ್ಣಾಗುವುದು ರಾಮನಗರದಲ್ಲೇ ಎಂದರು.

ನನಗಿದು ಪುನರ್​ಜನ್ಮ ನಾನಿರುದೇ ಜನಸೇವೆಗಾಗಿ..!!! ತಮ್ಮ ಸ್ವ ಕ್ಷೇತ್ರ ರಾಮನಗರದಲ್ಲಿ ವಿಕಾಸವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಭಾವುಕರಾಗಿಯೇ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಇಲ್ಲಿಯವರೆವಿಗೂ ಕ್ಷೇತ್ರದ ಜನ ನನ್ನ ಕೈ ಬಿಟ್ಟಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ನನ್ನ ದೇಹವನ್ನು ದಂಡಿಸುತ್ತಿದ್ದೇನೆ. ವೈದ್ಯರು ನನಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದರೂ ಕೂಡ ನಾನು ಕಾಲಿಗೆ ಚಕ್ರ ಕಟ್ಟಕೊಂಡವನಂತೆ ತಿರುಗುತ್ತಿದ್ದೇನೆ ಅದೆಕ್ಕೆಲ್ಲ ಮುಖ್ಯ ಕಾರಣವೇ ನಿಮ್ಮ ಸೇವೆ ಮಾಡುವುದು. ನನಗಿದು ಎರಡನೇ ಜನುಮ, ನಾನು ಕೆಲ ದಿನಗಳ ಹಿಂದೆಯೇ ಹೋಗಬೇಕಾಗಿತ್ತು ಆದರೆ ಆ ದೇವರು ನಿಮ್ಮ ಸೇವೆ ಮಾಡುವುದಕ್ಕಾಗಿಯೇ ನನಗೆ ಮತ್ತೊಂದು ಜನುಮ ನೀಡಿದ್ದಾನೆ. ಅದಕ್ಕಾಗಿಯೇ ನಾನು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಇದು ನನ್ನ ಎರಡನೇ ಜನ್ಮ ಎಂದು ಹೇಳುತ್ತೇನೆ.

ನನ್ನನ್ನು ಸೋಲಿಸುವುದಕ್ಕಾಗಿ ಕಾಂಗ್ರೆಸ್​ ಹಣದ ಹೊಳೆಯನ್ನೇ ಅರಿಸುತ್ತಿದೆ!!! ಕಾಂಗ್ರೆಸ್​ನವರು ಈ ಕ್ಷೇತ್ರದಲ್ಲಿ ಗೆಲ್ಲುವುದಕ್ಕಾಗಿಯೇ ಬಂದು ಇಲ್ಲಿ ಲಕ್ಷಾಂತರ ರೂಪಾಯಿ ಸುರಿಯುತ್ತಿದ್ದಾರೆ ಆದರೆ ನೀವು ಅದಕ್ಕೆ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲವಲ್ಲ ಎಂದು ನನ್ನ ಕಾರ್ಯಕರ್ತರು ನನ್ನ ಬಳಿ ಹೇಳುತ್ತಾರೆ. ಅವರೇನು ಆ ದುಡ್ಡನ್ನು ಕಷ್ಟಪಟ್ಟು ದುಡಿದು ಏನು ತಂದು ಕೋಡುತ್ತಿಲ್ಲ ಅವರು ಕೊಡುತ್ತಿರವು ದುಡ್ಡು ನಮ್ಮ ಪ್ರಕೃತಿ ಸಂಪತ್ತನ್ನು ಲೂಟಿ ಹೊಡೆದಿರುವ ದುಡ್ಡನ್ನ, ಇಲ್ಲಿ ನಿಲ್ಲಬೇಕಿಂದಿರುವ ಕಾಂಗ್ರೆಸ್​ ಮುಖಂಡ ಅಣ್ಣ ತಮ್ಮಂದಿರ ಜೊತೆ ಸೇರಿಕೊಂಡು ಗ್ರಾನೈಟ್​ ವ್ಯವಹಾರ ಮಾಡಿರು ದುಡ್ಡನ್ನೇ ಇಲ್ಲಿ ತಂದು ಹಂಚುತ್ತಿರುವುದು. ಮೂರು ಲಕ್ಷ ಅಲ್ಲಾ 30 ಲಕ್ಷ ಬೇಕಾದರೂ ತೆಗೆದುಕೊಳ್ಳಿ ಅವರೇನು ಧರ್ಮಕ್ಕೆ ಕೊಡುತ್ತಿಲ್ಲ ಎನ್ನುವ ಮೂಲಕ ಕಾಂಗ್ರೆಸ್​ನವರು ಹಣದ ಹೊಳೆಯನ್ನು ಹರಿಸುತ್ತಿದ್ದಾರೆ ಎಂದರು.

Loading…

Please follow and like us:
0
https://kannadadalli.com/wp-content/uploads/2018/03/kumarswamy-emotional.jpghttps://kannadadalli.com/wp-content/uploads/2018/03/kumarswamy-emotional-150x100.jpgKannadadalli Editorರಾಜಕೀಯಸುದ್ದಿHD Devegowda,HD Kumaraswamy,JDS,kumarawamy,ramanagaraಒಂದು ಮಾತನ್ನು ನಾನು ನಿಮಗೆ ನೀಡುತ್ತೇನೆ, ಒಂದು ಬಾರಿ ನೀವು ನನಗೆ ಅಧಿಕಾರವನ್ನು ನೀಡಿ ನಾನು ಮನೆ ಮನೆಯಲ್ಲಿ ಕುಮಾರಣ್ಣನ ಫೋಟೋ ಹಾಕಿಕೊಳ್ಳುವಂತಹ ಆಡಳಿತವನ್ನು ನೀಡುತ್ತೇನೆ ಎಂದು ಹೇಳುತ್ತ ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಭಾವುಕರಾದರು. ನನಗೆ 113 ಸ್ಥಾನಗಳನ್ನು ಗೆಲ್ಲುವಂತೆ ಆಶಿರ್ವಾದ ಮಾಡಿ ನಾನು ನಿಮ್ಮ ಮನೆ ಕಾಯುತ್ತೇನೆ…!!! ನನ್ನ ಜನ ಹೇಗೆ ಬದುಕುತ್ತಿದ್ದಾರೆ ಎನ್ನುವುದರ ಬಗ್ಗೆ ತಿಳಿದಿದೆ ಹಾಗಾಗಿ ಅವರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡುವ ಕೆಲಸ ನನ್ನ...ಕನ್ನಡಿಗರ ವೆಬ್​ ಚಾನೆಲ್​