ಜಗತ್ತಿನಲ್ಲೇ ಅತ್ಯಂತ ಜನಪ್ರಿಯವಾದ ಬೇರು ತರಕಾರಿಗಳಲ್ಲಿ ಕ್ಯಾರೆಟ್ ಕೂಡ ಒಂದಾಗಿದೆ. ಇದನ್ನು ಬಳಸುವುದರಿಂದ ದೇಹದ ಆರೋಗ್ಯದ ಸಾಕಷ್ಟು ಧನಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಕ್ಯಾರೆಟ್ ಅನ್ನು ಹಸಿಯಾಗಿ ತರಕಾರಿಯಾಗಿ, ಜ್ಯೂಸ್, ಪಲ್ಯ, ಸಾಂಬಾರು ಹೀಗೆ ನಾನಾ ಬಗೆಯ ತಿಂಡಿಗಳಲ್ಲಿ ಬಳಸಲಾಗುತ್ತದೆ.

ಕ್ಯಾರೆಟ್ ಕೂಡ ನಾನಾ ಬಣ್ಣಗಳಲ್ಲಿ ಲಭ್ಯವಿದೆ. ಕೇಸರಿ, ಹಳದಿ, ನೇರಳೆ ಮತ್ತು ಬಿಳಿ ಬಣ್ಣದಲ್ಲೂ ಸಿಗುತ್ತದೆ. ಕ್ಯಾರೆಟ್ ನಲ್ಲಿ ನೈಸರ್ಗಿಕವಾಗಿ ಮನುಷ್ಯನ ದೇಹಕ್ಕೆ ಬೇಕಾದ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಸಿಗುತ್ತದೆ. ಇದರ ಜೊತೆಗೆ ಫೈಬರ್ಸ್ ಮತ್ತು ಮಿನರಲ್ಸ್ ಗಳೂ ಸಿಗುತ್ತದೆ.

ಪ್ರತಿನಿತ್ಯ ಒಂದು ಲೋಟ ಹಸಿ ಕ್ಯಾರೆಟ್ ಜ್ಯೂಸನ್ನು ಕುಡಿಯುವುದರಿಂದ ದೇಹದ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಅಷ್ಟೇ ಅಲ್ಲದೇ, ದೇಹದ ನರಮಂಡಲವನ್ನು ಹೆಚ್ಚು ಬಲಗೊಳಿಸುತ್ತದೆ. ಮೆದುಳು ಮತ್ತು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಸಕ್ಕರೆ ಕಾಯಿಲೆಯನ್ನು ನಿವಾರಕವಾಗಿಯೂ ಕೆಲಸ ಮಾಡುತ್ತದೆ.

ಕ್ಯಾರೆಟ್ ಅನ್ನು ಹಸಿಯಾಗಿ, ಬೇಯಿಸಿ, ಅಡುಗೆಗಳನ್ನು ಮಾಡಿಯೂ ತಿನ್ನುತ್ತಾರೆ. ಇದನ್ನು ಸೌಂದರ್ಯ ವರ್ಧಕವಾಗಿಯೂ ಕೂಡ ಬಳಸಲಾಗುತ್ತದೆ. ಇದನ್ನು ಹಸಿಯಾಗಿ ತಿನ್ನುವುದರಿಂದ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ಅಲ್ಲದೇ ಕ್ಯಾನ್ಸರ್ ರೋಗವನ್ನು ತಡೆಗಟ್ಟುವುದು. ರಕ್ತದೊತ್ತಡ, ಹೃದಯ ರೋಗ ನಿವಾರಕವೂ ಆಗಿದೆ.

ಜ್ಯೂಸ್, ಹಲ್ವ, ಕರಿ, ಪಲಾವ್, ಸಾಂಬಾರ್, ಚಾಟ್ಸ್, ಒಬ್ಬಟ್ಟು ಹೀಗೆ ಮೊದಲಾದವುಗಳಲ್ಲಿ ಕ್ಯಾರೆಟ್ ಬಳಕೆ ಮಾಡಲಾಗುತ್ತದೆ. ಇದೆಲ್ಲವನ್ನು ತಿಂದು ಬೇಜಾರಾದವರಿಗೆ ಒಂದು ಹೊಸ ರೆಸಿಪಿ ಇಲ್ಲಿದೆ ನೋಡಿ.

ಕ್ಯಾರೆಟ್ ಉಂಡೆಗೆ ಬೇಕಾಗುವ ಸಾಮಗ್ರಿಗಳು:

ಕ್ಯಾರೆಟ್ ತುರಿ, ಸಕ್ಕರೆ, ರವೆ, ಏಲಕ್ಕಿ, ದ್ರಾಕ್ಷಿ, ಗೋಡಂಬಿ, ತೆಂಗಿನಕಾಯಿ ತುರಿ, ತುಪ್ಪ, ಸ್ವಲ್ಪ ಉಪ್ಪು.

ಮಾಡುವ ವಿಧಾನ:

ಪಾತ್ರೆಯನ್ನು ಬಿಸಿಗಿಟ್ಟು ತುಪ್ಪ ಹಾಕಿ. ತುಪ್ಪ ಬಿಸಿಯಾದ ಮೇಲೆ ರವೆ ಹಾಕಿ ಹುರಿಯಿರಿ.

ಕೆಂಪಾದ ಮೇಲೆ ಇನ್ನೊಂದು ಪಾತ್ರೆಗೆ ಬಗ್ಗಿಸಿ.

ಅದೇ ಪಾತ್ರೆಗೆ ಕ್ಯಾರೆಟ್ ತುರಿ ಹಾಕಿ ನೀರಿನ ಅಂಶ ಹೋಗುವವರೆಗೆ ಹುರಿಯಿರಿ.

ನಂತರ ಸಕ್ಕರೆ ಹಾಕಿ ನೀರು ಬಿಡುವ ತನಕ ಕೈಯ್ಯಾಡಿಸಿ.

ತೆಂಗಿನಕಾಯಿ ತುರಿ, ಹುರಿದ ರವೆ ಹಾಕಿ ಕರಡಿ.

ದಪ್ಪಗಾಗುತ್ತಿದ್ದಂತೆ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ ಹುರಿದು ಹಾಕಿ. ಎಲಕ್ಕಿ ಪುಡಿಯನ್ನು ಹಾಕಿ ಮುಗುಚಿ ಕೆಳಗಿಳಿಸಿ.

ಸ್ವಲ್ಪ ತಣ್ಣಗಾದ ಮೇಲೆ ಉಂಡೆ ಮಾಡಿದರೆ ರುಚಿಯಾದ ಶುಚಿಯಾದ ಉಂಡೆ ರೆಡಿ.

-ಅಶ್ವಿನಿ ವಿನಾಯಕ

Please follow and like us:
0
https://kannadadalli.com/wp-content/uploads/2018/07/maxresdefault-1-5.jpghttps://kannadadalli.com/wp-content/uploads/2018/07/maxresdefault-1-5-150x100.jpgSowmya KBತಿಂಡಿ-ತಿನಿಸುcarrot,carrot laddu,eys,healthy for bodyಜಗತ್ತಿನಲ್ಲೇ ಅತ್ಯಂತ ಜನಪ್ರಿಯವಾದ ಬೇರು ತರಕಾರಿಗಳಲ್ಲಿ ಕ್ಯಾರೆಟ್ ಕೂಡ ಒಂದಾಗಿದೆ. ಇದನ್ನು ಬಳಸುವುದರಿಂದ ದೇಹದ ಆರೋಗ್ಯದ ಸಾಕಷ್ಟು ಧನಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಕ್ಯಾರೆಟ್ ಅನ್ನು ಹಸಿಯಾಗಿ ತರಕಾರಿಯಾಗಿ, ಜ್ಯೂಸ್, ಪಲ್ಯ, ಸಾಂಬಾರು ಹೀಗೆ ನಾನಾ ಬಗೆಯ ತಿಂಡಿಗಳಲ್ಲಿ ಬಳಸಲಾಗುತ್ತದೆ. ಕ್ಯಾರೆಟ್ ಕೂಡ ನಾನಾ ಬಣ್ಣಗಳಲ್ಲಿ ಲಭ್ಯವಿದೆ. ಕೇಸರಿ, ಹಳದಿ, ನೇರಳೆ ಮತ್ತು ಬಿಳಿ ಬಣ್ಣದಲ್ಲೂ ಸಿಗುತ್ತದೆ. ಕ್ಯಾರೆಟ್ ನಲ್ಲಿ ನೈಸರ್ಗಿಕವಾಗಿ ಮನುಷ್ಯನ ದೇಹಕ್ಕೆ ಬೇಕಾದ ವಿಟಮಿನ್ ಎ, ವಿಟಮಿನ್...ಕನ್ನಡಿಗರ ವೆಬ್​ ಚಾನೆಲ್​