water problem in bangloreಬೆಂಗಳೂರು ಐಟಿ ಸಿಟಿಯಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಿಲಿಕಾನ್​ ವ್ಯಾಲಿ ಎಂದೇ ಹೆಸರು ಗಳಿಸಿದೆ ಆದರೆ ಈ ಬೆಂಗಳೂರಿಗೆ ಮುಂದೊಂದು ದಿನ ಗಂಡಾಂತರ ಕಾದಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಸಧ್ಯ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.

ಹೌದು… ಅತಿ ವೇಗವಾಗಿ ಬೆಳೆಯುತ್ತಿರುವ ನಮ್ಮ ಬೆಂಗಳೂರಿನ ಜನರಿಗೆ ಆಘಾತಕಾರಿ ವಿಚಾರವೊಂದು ಬಂದಿದ್ದು ಬೆಂಗಳೂರಿನಲ್ಲಿ ಭಾರೀ ಜಲ ಕ್ಷಾಮ ಎದುರಾಗಲಿದೆ ಎಂದು ತಿಳಿದು ಬಂದಿದೆ. ಪ್ರಪಂಚದ ಮಹಾನಗರಗಳ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿರುವ ಸಿಲಿಕಾನ್​ ಸಿಟಿಯು ಮುಂದೆ ತೀವ್ರ ನೀರಿನ ಕೊರತೆಯನ್ನು ಎದುರಿಸಲಿದೆ ಎಂದು ವಿಶ್ವಸಂಸ್ಥೆ ಮತ್ತು ಏಷ್ಯನ್​ ಡೆವಲಪ್​ಮೆಂಟ್​ ಬ್ಯಾಂಕ್​ ನಡೆಸಿರುವ ಅಧ್ಯಯನದಲ್ಲಿ ಈ ವಿಚಾರ ವ್ಯಕ್ತವಾಗಿದ್ದು ಈ ಸುದ್ದಿಯನ್ನು ಬಿಬಿಸಿ ನ್ಯೂಸ್​ ಪ್ರಕಟಿಸಿದೆ.

ಪ್ರಪಂಚದ ಯಾವ ಯಾವ ನಗರಗಳಲ್ಲಿ ಈ ನೀರಿನ ಕೊರತೆ ಉಂಟಾಗಬಹುದು ಎಂದು ತಿಳಿಸಿರುವ ಈ ವರದಿಯಲ್ಲಿ ಬೆಂಗಳೂರು 2 ನೇ ಸ್ಥಾನದಲ್ಲಿದ್ದು. ಮೊದಲ ಸ್ಥಾನಲ್ಲಿ ದಕ್ಷಿಣ ಆಫ್ರಿಕಾದ ಕೇಪ್​ ಟೌನ್​ ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ನಗರವಾಗಿದೆ. ನಂತರದ ಸ್ಥಾನಗಳನ್ನು ಬೆಂಗಳೂರು, ಬ್ರೆಜಿಲ್​ನ ಸಾವೊಪೊಲೊ, ಚೀನಾದ ಬೀಜಿಂಗ್​ ಸೇರಿದಂತೆ ವಿಶ್ವದ ಬೇರೆ ಬೇರೆ ನಗರಗಳು ಈ ಪಟ್ಟಿಯಲ್ಲಿವೆ.

ನೀರಿನ ಕೊರತೆಗೆ ಕಾರಣಗಳು..!

water problemವೇಗವಾಗಿ ಬೇಳೆಯುತ್ತಿರುವ ನಗರದಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರಿಗೆ ಲಕ್ಷಾಂತರ ಜನ ಉದ್ಯೋಗಕ್ಕೆ ಬರುತ್ತಿರುವುದು, ನಗರ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಬೆಂಗಳೂರಿನಲ್ಲಿದ್ದ ಕೆರೆಗಳು ಮಾಯವಾದ ಕಾರಣ ಅಂತರ್ಜಲದ ಮಟ್ಟ ತುಂಬಾ ಆಳಕ್ಕ ಹೋಗುತಿದ್ದು ಮಳೆಯ ನೀರು ಎಲ್ಲಿಯೂ ಇಂಗುತ್ತಿಲ್ಲ ಎಂಬುದನ್ನು ವರದಿ ಉಲ್ಲೇಖಿಸಿದೆ. ಇನ್ನು ಜನಸಂಖ್ಯೆ ಹೆಚ್ಚಾದಂತೆ ಬೆಂಗಳೂರಿನಲ್ಲಿ ಲಭ್ಯವಿರುವ ನೀರನ್ನು ಕುಡಿಯಲಲ್ಲಾ ಅದನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಲು ಯೋಗ್ಯವಾಗಿರುವುದಿಲ್ಲ, ಸುಮಾರು 50% ನೀರು ಪೋಲಾಗುತ್ತಿದೆ ಎಂದು ವರದಿ ತಿಳಿಸಿದೆ.

2025ಕ್ಕೆ ಬೆಂಗಳೂರಿದ ಗುಳೆ ಹೊರಡಲಿದ್ದಾರಂತೆ ಜನ..?

ಈ ವರದಿಯ ಪ್ರಕಾರ 2025 ಕ್ಕೆ ನೀರಿನ ಕೊರತೆ ತೀವ್ರವಾಗುವುದರಿಂದ ಇಲ್ಲಿಯ ಜನ ನಗರವನ್ನು ಬಿಟ್ಟು ಬೇರೆ ಕಡೆ ಗುಳೆ ಹೊರಡಲಿದೆ ಎಂದು ವರದಿಯ್ಲಲಿ ಉಲ್ಲೆಖಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ರೀತಿ ಬೆಂಗಳೂರಿನ ಜನಸಂಖ್ಯೆ ಹೆಚ್ಚಾದರೆ ಇಲ್ಲಿ ಇರುವುದಾದರೂ ಹೇಗೆ ಎಂಬ ಪ್ರಶ್ನೆ ನಮ್ಮನ್ನೂ ಕಾಡುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ವಾಯು ಮಾಲಿನ್ಯ ಅತಿಯಾಗಿದ್ದು, ಇಲ್ಲಿನ ಅನೇಕ ಕಾಯಂ ನಿವಾಸಿಗಳು ಉಸಿರಾಟದ ತೊಂದರೆಗಳನ್ನು ಅನುಭವಿಸುತಿದ್ದಾರೆ.

Please follow and like us:
0
https://kannadadalli.com/wp-content/uploads/2018/02/bengaluru.jpghttps://kannadadalli.com/wp-content/uploads/2018/02/bengaluru-150x100.jpgKannadadalli Editorಬೆಂಗಳೂರುಸುದ್ದಿHere's a shocking news for residents of Bangalore,water problem in bangloreಬೆಂಗಳೂರು ಐಟಿ ಸಿಟಿಯಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಿಲಿಕಾನ್​ ವ್ಯಾಲಿ ಎಂದೇ ಹೆಸರು ಗಳಿಸಿದೆ ಆದರೆ ಈ ಬೆಂಗಳೂರಿಗೆ ಮುಂದೊಂದು ದಿನ ಗಂಡಾಂತರ ಕಾದಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಸಧ್ಯ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಹೌದು… ಅತಿ ವೇಗವಾಗಿ ಬೆಳೆಯುತ್ತಿರುವ ನಮ್ಮ ಬೆಂಗಳೂರಿನ ಜನರಿಗೆ ಆಘಾತಕಾರಿ ವಿಚಾರವೊಂದು ಬಂದಿದ್ದು ಬೆಂಗಳೂರಿನಲ್ಲಿ ಭಾರೀ ಜಲ ಕ್ಷಾಮ ಎದುರಾಗಲಿದೆ ಎಂದು ತಿಳಿದು ಬಂದಿದೆ. ಪ್ರಪಂಚದ ಮಹಾನಗರಗಳ ಪಟ್ಟಿಯಲ್ಲಿ...ಕನ್ನಡಿಗರ ವೆಬ್​ ಚಾನೆಲ್​