ಆರೋಗ್ಯವೇ ಭಾಗ್ಯ ಅಲ್ಲವೇ…. ಕೋಟಿ ಕೋಟಿ ಇದ್ರೂ ಕೂಡ ಆರೋಗ್ಯ ಸಂಪತ್ತಿನ ಮುಂದೆ ಎಲ್ಲವೂ ತೃಣ ಸಮಾನ.

low-bp

ನಾವೆಲ್ಲಾ  ಎಷ್ಟೇ ಶ್ರೀಮಂತರಿದ್ರೂ ಕೂಡ ಆರೋಗ್ಯ ಮಾತ್ರ ಚೆನ್ನಾಗಿರ ಬೇಕು ಅನ್ನೋದು  ಮಾತ್ರ ದೊಡ್ಡ ಆಶಯ. ಅಂದಾ ಹಾಗೇ  ಇಂದಿನ ಫಾಸ್ಟ್ ಯುಗದಲ್ಲಿ ನೊಡಲು ಎಲ್ರೂ  ಮೇಲ್ನೋಟಕ್ಕೆ ಚೆನ್ನಾಗೇ ಕಾಣ್ತಿರುತ್ತಾರೆ. ಆದರೆ ಆರೋಗ್ಯ ಮಾತ್ರ ಅವರನ್ನೂ ಗೌಪ್ಯವಾಗಿಯೇ ನೋಯಿಸುತ್ತಿರುತ್ತದೆ. ಅದರಲ್ಲೂ ಬಹುತೇಕರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ ಎಂದ್ರೆ ರಕ್ತದ ಒತ್ತಡ. ಕೆಲವರಿಗೆ ಇದು ಗಮನಕ್ಕೆ ಬಂದ್ರೂ ಕೂಡ ನೆಗ್ಲೆಟ್ ಮಾಡ್ತಾರೆ.

ಸಮಸ್ಯೆ ಬಹಳಷ್ಟೂ ಇದ್ರೂ ಕೆಲವೊಬ್ಬರಿಗೆ ಕೇರ್ ಮಾಡಲು ಸಮಯವಿರುವುದಿಲ್ಲ. ಆದರೆ ಜೀವ  ಮಾರಕ ರೋಗ ಬಂದ್ರೆ ನಾವೂ ಖಂಡಿತವಾಗಿಯೇ ಕೇರ್ ಮಾಡಲೇ ಬೇಕಲ್ವೆನ್ರಿ….ಹಾಗಿದ್ದರೆ  ಯಾವುದೇ ತ್ರಾಸವಿಲ್ಲದೇ, ಸೂಪರ್-ಸಿಂಪಲ್ ಟಿಪ್ಸ್ ನಿಮ್ಮುಂದೆ.

low bpಜನರನ್ನು ಇಂದು ಹೆಚ್ಚು ಕಾಡುತ್ತಿರುವ ಹೆಚ್ಚು ರಕ್ತದ ಒತ್ತಡ ಸಮಸ್ಯೆಯಂತೆ ಕಡಿಮೆ ರಕ್ತದ ತ್ತಡವೂ ಕೂಡ ಹೆಚ್ಚಿನವರನ್ನು ಕಾಡುತ್ತಿದೆ. ಆದರೆ ಇದು ಅನೇಕರ ಗಮನಕ್ಕೆ ಬರುತ್ತಿಲ್ಲ. ಲೋ ಬಿಪಿ ಸಮಸ್ಯೆ ಎನ್ನುವುದು ಹೆಚ್ಚಿನವರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಇದರಿಂದ ಮುಂದೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಆರೋಗ್ಯ ಸಮಸ್ಯೆಯಾದ ಲೋ ಬಿಪಿಗೆ ಕಾರಣ ಹಾಗೂ ಪರಿಹಾರಗಳನ್ನು ಇಲ್ಲಿ ತಿಳಿಸಿಕೊಡುತ್ತೇವೆ.

ಯಾವಾಗ ಕಾಡುತ್ತದೆ

dehydration

*ನಿರ್ಜಲೀಕರಣ : ಲೋ ಬಿಪಿಗೆ ಡೀಹೈಡ್ರೇಶನ್ ಒಂದು ಪ್ರಮುಖ ಕಾರಣವಾಗಿದೆ. ಅತ್ಯಂತ ಕಡಿಮೆ ನೀರು ಕುಡಿಯುವುದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ಲೋ ಬಿಪಿ ಸಮಸ್ಯೆಯನ್ನು ತಂದೊಡ್ಡುತ್ತದೆ. ಆದ್ದರಿಂದ ಅತ್ಯಧಿಕ ಪ್ರಮಾಣದಲ್ಲಿ ನೀರಲು ಸೇವನೆ ಮಾಡುವುದರಿಂದ ನಿರ್ಜಲೀಕರಣವನ್ನು ತಡೆಯಬಹುದಾಗಿದೆ. ಇದರಿಂದ ಲೋ ಬಿಪಿ ಸಮಸ್ಯೆಯೂ ಕೂಡ ಕಡಿಮೆಯಾಗುತ್ತದೆ.

Pregnant Woman

ಗರ್ಭಾವಸ್ಥೆಯಲ್ಲಿ : ಗರ್ಭಾವಸ್ಥೆಯಲ್ಲಿ ಲೋ ಬಿಪಿ ಸಮಸ್ಯೆ ಕಾಡುವ ಸಂಭವ ಹೆಚ್ಚಿನದ್ದಾಗಿರುತ್ತದೆ. ಆದ್ದರಿಂದ ವೇಳೆ ನಿಮ್ಮ ಬಿಪಿಯನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.

ಹೃದಯ ಸಂಬಂಧೀ ಸಮಸ್ಯೆ : ಹೃದಯ ಸಂಬಂಧೀ ಸಮಸ್ಯೆಗಳಿಂದ ಬಳಲುತ್ತಿದ್ದಾಗಲೂ ಕೂಡ ಲೋ ಬಿಪಿ ಸಮಸ್ಯೆಯು ಹೆಚ್ಚು ಕಾಡುತ್ತದೆ. ಆಗಲೂ ಕೂಡ ಹೆಚ್ಚು ಮುನ್ನೆಚ್ಚರಿಕೆಯನ್ನು ವಹಿಸುವುದು ಅಗತ್ಯವಾಗಿರುತ್ತದೆ.

ಪರಿಹಾರ

ಮನೆಮದ್ದು : ಕೆಲ ಮನೆಮದ್ದುಗಳಿಂದ ಕಡಿಮೆ ರಕ್ತದೊತ್ತಡ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ.

coffee*ದಿನವೂ ಒಂದು ಕಪ್ ಬೀಟ್ರೋಟ್ ಜ್ಯೂಸ್ ಕುಡಿಯಬೇಕು

*ಸ್ಟ್ರಾಂಗ್ ಬ್ಲಾಕ್ ಕಾಫಿ ಕುಡಿಯುವುದರಿಂದಲೂ ಕೂಡ ಕಡಿಮೆ ರಕ್ತದ ತ್ತಡ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ.

*ಬಾದಾಮಿಯನ್ನು ಪೇಸ್ಟ್ ಮಾಡಿ ಬೆಚ್ಚಗಿನ ನೀರಿನಲ್ಲಿ ಕುಡಿಯುವುದು ಕೂಡ ಸಹಕಾರಿಯಾಗಬಲ್ಲದು

*ವ್ಯಾಯಾಮ : ನಿತ್ಯವೂ ಕೂಡ ಕೆಲವು ಸರಳ ವ್ಯಾಯಾಮವನ್ನು ಮಾಡುವುದರಿಂದಲೂ ಕೂಡ ಕಡಿಮೆ ರಕ್ತದ ಒತ್ತಡ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ.

Please follow and like us:
0
https://kannadadalli.com/wp-content/uploads/2018/07/low-bp.jpghttps://kannadadalli.com/wp-content/uploads/2018/07/low-bp-150x100.jpgKannadadalli Editorಆರೋಗ್ಯhome remedy,home remedy for low bp,low bp,what to do for low bpಆರೋಗ್ಯವೇ ಭಾಗ್ಯ ಅಲ್ಲವೇ.... ಕೋಟಿ ಕೋಟಿ ಇದ್ರೂ ಕೂಡ ಆರೋಗ್ಯ ಸಂಪತ್ತಿನ ಮುಂದೆ ಎಲ್ಲವೂ ತೃಣ ಸಮಾನ. ನಾವೆಲ್ಲಾ  ಎಷ್ಟೇ ಶ್ರೀಮಂತರಿದ್ರೂ ಕೂಡ ಆರೋಗ್ಯ ಮಾತ್ರ ಚೆನ್ನಾಗಿರ ಬೇಕು ಅನ್ನೋದು  ಮಾತ್ರ ದೊಡ್ಡ ಆಶಯ. ಅಂದಾ ಹಾಗೇ  ಇಂದಿನ ಫಾಸ್ಟ್ ಯುಗದಲ್ಲಿ ನೊಡಲು ಎಲ್ರೂ  ಮೇಲ್ನೋಟಕ್ಕೆ ಚೆನ್ನಾಗೇ ಕಾಣ್ತಿರುತ್ತಾರೆ. ಆದರೆ ಆರೋಗ್ಯ ಮಾತ್ರ ಅವರನ್ನೂ ಗೌಪ್ಯವಾಗಿಯೇ ನೋಯಿಸುತ್ತಿರುತ್ತದೆ. ಅದರಲ್ಲೂ ಬಹುತೇಕರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ ಎಂದ್ರೆ ರಕ್ತದ ಒತ್ತಡ. ಕೆಲವರಿಗೆ...ಕನ್ನಡಿಗರ ವೆಬ್​ ಚಾನೆಲ್​