ಜಗತ್ತಿನಲ್ಲಿ ಯಾವ ಮನಷ್ಯನು ಸೃಷ್ಟಿ ಮಾಡಲಾಗದಂತಹ ಎಷ್ಟೋ ಅದ್ಭುತವಾದ ಸೃಷ್ಟಿಗಳು ಈ ಪ್ರಪಂಚದಲ್ಲಿವೆ. ಅವುಗಳು ಮನುಕುಲಕ್ಕೆ ಅತ್ಯಾಕರ್ಷಕ ಸೃಷ್ಟಿಯಾಗಿ ಮನಸೂರೆಗೊಳ್ಳುವಂತೆ ಮಾಡುತ್ತವೆ. ಪ್ರಪಂಚದ ಅತ್ಯಂತ ಸುಂದರವಾದ ಸ್ವಾಭಾವಿಕ ಸ್ವ ದೃಶ್ಯಗಳಲ್ಲೊಂದು ಸಾಲಾರ್ ಡೇ ಉಯುನಿ.ನಿಜಕ್ಕು ಇದೊಂದು ಸೌಂದರ್ಯ ಲೋಕ. ಉಪ್ಪು ನೀರಿನಿಂದ ನಿರ್ಮಿತವಾದ ಈ ಸರೋವರ ಕನ್ನಡಿಯನ್ನೆ ನಾಚಿಸುವಂತಿರುವ ನೈಸರ್ಗಿಕ ಭೂಮಿ.

1_UVqeO794bqZ236amyoVgmg

ಇದನ್ನು ನೋಡಲು ಕಣ್ಣೇರಡು ಸಾಲದು ಅನ್ಸುತ್ತೆ, ಅಷ್ಟು ಸುಂದರವಾಗಿ ಕಾಣಿಸುತ್ತದೆ. ನಾವು ಆಕಾಶದಲ್ಲಿ ಇದ್ದಿವೊ ಅಥವಾ ಭೂಮಿಯ ಮೇಲೆ ಇದ್ದಿವೊ ಎಂಬ ಭ್ರಮೆಯನ್ನು ಉಂಟು ಮಾಡುವ ಬೃಹದಾಕಾರದ ಕನ್ನಡಿಯನ್ನು ಬೊಲಿವಿಯಾದ ಸಲಾರ್ ಡಿ ಉಯುನಿಯಲ್ಲಿ ಪ್ರಕೃತಿಯೇ ಸೃಷ್ಟಿಸಿದೆ. ದಕ್ಷಿಣ ಅಮೇರಿಕಾದಲ್ಲಿ ಬೊಲುವಿಯ ದೇಶದಲ್ಲಿ ಜಗತ್ತಿನ ಅತಿ ಬೃಹತ್ ಸರೋವರದಲ್ಲಿ ಅತಿ ದೊಡ್ಡ ಉಪ್ಪಿನ ಭಂಡಾರವಿದೆ.

ಇದೊಂದು ಜಗತ್ತಿನ ಬೃಹತ್ ಉಪ್ಪಿನ ಸರೋವರ. ಜಗತ್ತಿನ ಅತಿ ದೊಡ್ಡ ಉಪ್ಪುಭರಿತ ಸಮತಟ್ಟಾದ ಪ್ರದೇಶ ಎಂಬ ಹೆಗ್ಗಳಿಕೆಗೆ ಸಲಾರ್ ಡಿ ಉಯುನಿ ಪಾತ್ರವಾಗಿದೆ.ಸಮುದ್ರ ಮಟ್ಟದಿಂದ 3656 ಅಡಿಯಷ್ಟು ಎತ್ತರದ ಪ್ರದೇಶದಲ್ಲಿರುವ ಇದು ಅಮೇರಿಕಾ ಖಂಡದ ಬೊಲಿಯಾದ ಪೊಟೋಸಿ ಮತ್ತು ಒರುರೋ ಪ್ರಾಂತ್ಯಕ್ಕೆ ಸೇರಿದೆ. ಸುಮಾರು 11 ಸಾವಿರ ಕಿಮೀ ಸುತ್ತಳತೆ ಹೊಂದಿರುವ ಸಲಾರ್ ಪ್ರದೇಶ ಪ್ರಾಚೀನ ಕಾಲದ ನೂರಾರು ಸರೋವರಗಳು ಪ್ರಾಕೃತಿಕ ಮಾರ್ಪಾಡಿನಿಂದ ಉಂಟಾಗಿದೆ.

ಸ್ಥಳೀಯ ಭಾಷೆಯಲ್ಲಿ ಸಲಾರ್ ಡಿ ಉಯುನಿಗೆ ಆವರಣ ದ್ವೀಪ ಎನ್ನುವ ಅರ್ಥವಿದೆ ಎನ್ನುತ್ತಾರೆ. ಇಲ್ಲಿರುವ ಉಪ್ಪಿನ ಬೃಹತ್ ಭಂಡಾರದಲ್ಲಿ ವರ್ಷಕ್ಕೆ ಕಡಿಮೆ ಎಂದರೂ 25 ಸಾವಿರ ಟನ್‍ಗು ಹೆಚ್ಚು ಉಪ್ಪನ್ನು ತೆಗೆಯುತ್ತಾರೆ. ಎಷ್ಟೂ ಅಗೆದರು ಉಪ್ಪು ಖಾಲಿಯಾಯಿತು ಎಂಬ ಮಾತೇ ಇಲ್ಲ.

ಸಲಾರ್ ಡೆ ಉಯುನಿಯ ಉಪ್ಪಿನ ಸರೋವರ, ನೈರುತ್ಯ ಬಲ್ಗೇರಿಯಕ್ಕೆ ಹತ್ತಿರ ಪೆರುದೇಶದ ಗಡಿಭಾಗಕ್ಕೆ ಅಂಟಿಕೊಂಡಿದೆ. ಉಪ್ಪಿನ ಮರುಭುಮಿಯ ಎರಡು ಭಾಗದಲ್ಲಿ ಪೋಪೋ ಲೇಕ್ ಮತ್ತು ಉರುಉರು ಎನ್ನುವ ಎರಡು ಸರೋವರಗಳು ಹರಿಯುತ್ತದೆ. ಈ ಸರೋವರಗಳು ಹರಿಯುವುದರಿಂದ ಸತತ ಉಪ್ಪಿನ ಭೂಕೊರೆತದ ಪರಿಣಾಮದಿಂದಾಗಿ ಉಪ್ಪಿನ ಸರೋವರ ಸೃಷ್ಟಿಯಾಗಿದು, ಇನ್ನೂ ಈ ಸರೋವರ 30-40 ಸಹಸ್ರ ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆ ಎಂದು ಊಹಿಸಲಾಗಿದೆ.

ಈ ಸರೋವರದಲ್ಲಿ 10 ಶತಕೋಟಿಗೂ ಹೆಚ್ಚು ಉಪ್ಪು ಹಾಗೂ 10 ಕೋಟಿ ಟನ್‍ಗಳಷ್ಟು ಲೀಥಿಯಂ ಕೂಡ ಇದೆ ಎಂಬುದು ಭೂಗರ್ಭ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಮಣ್ಣಿನಂತೆ ಕಂಡರೂ ಅದರಲ್ಲಿ ಉಪ್ಪೇ ಬಹಳ ಇರುತ್ತದೆ. ಹೀಗಾಗಿ ಇಲ್ಲಿನ ಪ್ರದೇಶದಲ್ಲಿ ಕೆಲವೇ ಜಾತಿಯ ಸಸ್ಯಗಳು ಇಲ್ಲಿ ಬೆಳೆಯುತ್ತದೆ. ಗುಲಾಬಿಯಂತಿರುವ ಗಿಡಗಳು, ಪಾಪಾಸ್‍ಕಳ್ಳಿಯಂತಹ ಸಸ್ಯಗಳನ್ನು ಕಾಣಬಹುದು.

ಸುಮಾರು 20 ಅಡಿ ಎತ್ತರ ಗಿಡವು ವರ್ಷಕ್ಕೆ ಒಂದು ಸೆಂಟಿ ಮೀಟರ್‍ನಷ್ಟು ಬೆಳೆಯುತ್ತದೆ. ಇಷ್ಟೇ ಇಲ್ಲದೇ ಕೊಕ್ಕರೆ, ಹಿಮಕರಡಿ ಹೋಲುವ ಸಾಮಾನ್ಯ ನರಿ, ಹೆಬ್ಬಾತುಗಳು ಈ ಪ್ರದೇಶದಲ್ಲಿ ಕಂಡುಬರುತ್ತದೆ. ಮಳೆ ಸುರಿದಾಗ ಸಲಾರ್‍ನ ಉಪ್ಪುಭರಿತ ಭೂಮಿಯ ಮೇಲೆ ತೆಳುವಾದ ನೀರಿನ ಹೊದಿಕೆ ಸೃಷ್ಟಿಯಾಗುತ್ತದೆ. ಅದು ನೋಡುಗರನ್ನು ದಿಗ್ಬ್ರಮೆಗೊಳಿಸುತ್ತದೆ. ಆಗ ಸೂರ್ಯ, ಮೋಡ, ಬಾನಿನ ಸಂಪೂರ್ಣ ಚಿತ್ರವು ಪ್ರತಿಬಂಬದಂತೆ ಪ್ರತಿಫಲಿಸಲ್ಪಡುತ್ತದೆ. ಮನೋಹರವಾದ ಪ್ರತಿಬಿಂಬವು ಆಕಾಶಕ್ಕೆ ಕನ್ನಡಿ ಹಿಡಿದ ಹಾಗೆ ಕಾಣುತ್ತದೆ. ಉಪ್ಪಿನ ಸರೋವರ ಸ್ಪಟಿಕದಂತೆ ಶುಭ್ರವಾಗಿರುವುದೇ ಇದಕ್ಕೆ ಕಾರಣ. ಕನ್ನಡಿಯಂತೆ ಶುಭ್ರವಾಗಿರುವಾಗಿರುವುದಕ್ಕೆ ಆಕಾಶದ ಪ್ರತಿಬಿಂಬ ಇದ್ದಾಗೆ ಕಾಣುತ್ತದೆ.

ಈ ಭೂಲೋಕದ ಸ್ವರ್ಗವನ್ನು ಕಣ್ತುಂಬಿಕೊಳ್ಳಲ್ಲು ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಇದರ ಮೇಲೆ ನಡೆಯುತ್ತಿದ್ದರೆ ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ಗೊಂದಲಕ್ಕೀಡು ಮಾಡುತ್ತದೆ. ಸರೋವರದಲ್ಲಿ ಯಾವುದೇ ಭಯ, ಆತಂಕವಿಲ್ಲದೆ ಕಾರು, ಬೈಕ್, ಬೈಸಿಕಲ್‍ನ್ನು ನಿಶ್ಚಿಂತೆಯಾಗಿ ಓಡಿಸಬಹುದು. ಇಲ್ಲಿ ಎತ್ತ ಕಣ್ಣಾಯಿಸಿದರು ಉಪ್ಪಿನ ಕಲ್ಲು ಬಂಡೆಗಳೇ ಕಾಣುತ್ತದೆ. ಪ್ರವಾಸಿಗರು ಇಲ್ಲಿ ಸುತ್ತುವರೆದಿರುವ ಉಪ್ಪಿನ ಬಂಡೆಗಳನ್ನು ನೋಡಲು ಜೀಪ್ ಸವಾರಿ ಮಾಡುತ್ತಾರೆ.ಪ್ರವಾಸಿಗಳಿಗಾಗಿ ಉಪ್ಪಿನ ಪದರದಿಂದಲೇ ಕಲ್ಲುಗಳನ್ನು ಮಾಡಿ ಕಟ್ಟಿರುವ ಹೋಟೆಲ್‍ಗಳು ಇಲ್ಲಿವೆ.

ಮೊಟ್ಟ ಮೊದಲ ಬಾರಿಗೆ 1993 ರಲ್ಲಿ ಹೋಟೆಲ್ ತಲೆ ಎತ್ತಿತ್ತು. ನಂತರ ಹೋಟೆಲ್‍ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಬಂದಿದೆ. ಬರೀ ಊಟ, ತಿಂಡಿ, ಕೂಲ್ ಡ್ರಿಂಕ್ಸ್ ಇತರೆ ಮಾರಾಟ ಮಾತ್ರವಲ್ಲದೇ ಉಳಿದುಕೊಳ್ಳಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಸಹ ಹೋಟೆಲ್‍ಗಳು ಮಾಡಿವೆ. ಪ್ರತಿವರ್ಷವೂ ಸುಮಾರು 80 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬೇಟಿ ನೀಡುತ್ತಾರೆ.

ಇಲ್ಲಿ ಹೆಚ್ಚು ಕೊರೆಯುವ ಚಳಿಯು ಸದಾ ಇರುತ್ತದೆ. ಬೆಳಗ್ಗೆ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು ಸಂಜೆಯ ನಂತರ ಕುಸಿಯುತ್ತದೆ. ಉಪ್ಪಿನ ಸರೋವರವನ್ನು ಸಂಜೆಯ ಸಮಯದಲ್ಲಿ ವೀಕ್ಷಣೆ ಮಾಡಿದರೆ ಆಕಾಶದಲ್ಲಿರುವ ಸೂರ್ಯನು ಭೂಮಿಯ ಮೇಲೆ ಮುಳುಗುತ್ತಿದ್ದಾನೆನೋ ಅನ್ನಿಸುತ್ತದೆ.

ನೀರು ನೀಲಿ ಬಣ್ಣಕ್ಕೆ ತಿರುಗಿ ಕನ್ನಡಿ ತರಹ ಹೊಳೆಯುತ್ತದೆ. ಒಟ್ಟಾರೆಯಾಗಿ ಸಲಾರ್ ಡಿ ಉಯುನಿ ಉಪ್ಪಿನ ಸರೋವರದ ಭೂಮಿಯ ಮೇಲಿರುವ ತೆಳುವಾದ ನೀರಿನ ಹೊದಿಕೆ ನೋಡುಗರನ್ನು ಮೂಖವಿಸ್ಮಿತರ್ನನಾಗಿ ಮಾಡುತ್ತದೆ. ಬಾನಿನ ಸಂಪೂರ್ಣ ಚಿತ್ರಣ ಇದರ ಮೇಲೆ ಪ್ರತಿಬಿಂಬವಾಗಿ ಪ್ರತಿಫಲಿಸುವುದರಿಂದ ಯಾವುದೋ ಸುಂದರ ನಾಡಿಗೆ ಬಂದಂತಹ ಅನುಭವವಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ.

ಪ್ರಶಾಂತ್ ಎಸ್

Please follow and like us:
0
https://kannadadalli.com/wp-content/uploads/2018/01/1_UVqeO794bqZ236amyoVgmg-1024x545.jpeghttps://kannadadalli.com/wp-content/uploads/2018/01/1_UVqeO794bqZ236amyoVgmg-150x100.jpegKannadadalli EditorಮಾಹಿತಿHow much do you know about the salt lake?,salt,salt lakeಜಗತ್ತಿನಲ್ಲಿ ಯಾವ ಮನಷ್ಯನು ಸೃಷ್ಟಿ ಮಾಡಲಾಗದಂತಹ ಎಷ್ಟೋ ಅದ್ಭುತವಾದ ಸೃಷ್ಟಿಗಳು ಈ ಪ್ರಪಂಚದಲ್ಲಿವೆ. ಅವುಗಳು ಮನುಕುಲಕ್ಕೆ ಅತ್ಯಾಕರ್ಷಕ ಸೃಷ್ಟಿಯಾಗಿ ಮನಸೂರೆಗೊಳ್ಳುವಂತೆ ಮಾಡುತ್ತವೆ. ಪ್ರಪಂಚದ ಅತ್ಯಂತ ಸುಂದರವಾದ ಸ್ವಾಭಾವಿಕ ಸ್ವ ದೃಶ್ಯಗಳಲ್ಲೊಂದು ಸಾಲಾರ್ ಡೇ ಉಯುನಿ.ನಿಜಕ್ಕು ಇದೊಂದು ಸೌಂದರ್ಯ ಲೋಕ. ಉಪ್ಪು ನೀರಿನಿಂದ ನಿರ್ಮಿತವಾದ ಈ ಸರೋವರ ಕನ್ನಡಿಯನ್ನೆ ನಾಚಿಸುವಂತಿರುವ ನೈಸರ್ಗಿಕ ಭೂಮಿ. ಇದನ್ನು ನೋಡಲು ಕಣ್ಣೇರಡು ಸಾಲದು ಅನ್ಸುತ್ತೆ, ಅಷ್ಟು ಸುಂದರವಾಗಿ ಕಾಣಿಸುತ್ತದೆ. ನಾವು ಆಕಾಶದಲ್ಲಿ ಇದ್ದಿವೊ ಅಥವಾ ಭೂಮಿಯ...ಕನ್ನಡಿಗರ ವೆಬ್​ ಚಾನೆಲ್​