ರಾಜ್ಯದಲ್ಲಿ ಮೇ ತಿಂಗಳು ನಡೆದ ವಿಧಾನ ಸಭಾ ಚುನಾವಣೆಗೆ ಎಷ್ಟು ಖರ್ಚಾಗಿರಬಹುದು ಎಂದು ಊಹಿಸಿ ನೋಡೋಣ. ನಮ್ಮಂಥಹ ಸಾಮಾನ್ಯ ಜನರು ಲಕ್ಷಗಳನ್ನೇ ನೋಡಿಲ್ಲ. ಅಂತಹದರಲ್ಲಿ ಚುನಾವಣೆ ವೆಚ್ಚವನ್ನ ಊಹಿಸುವಷ್ಟು ಕಲ್ಪನಾ ಶಕ್ತಿ ನಮ್ಮಲ್ಲಿ ಇಲ್ಲ ಎಂದು ಮೂಗು ಮುರಿಯಬಹುದು.

ಹೌದು ಸ್ವಾಮಿ ನಾವು ಲಕ್ಷಗಳನ್ನೇ ಜೀವನದಲ್ಲಿ ನೋಡಿದವರಲ್ಲ. ಆದರೆ ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಒಂದು ಅಂದಾಜಿ ಪ್ರಕಾರ 5,500 ರಿಂದ 6,000 ಕೋಟಿಯವರೆಗೆ ಹಣ ಖರ್ಚಾಗಿದೆಯಂತೆ. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ತಲಾ 700 ರಿಂದ 800 ಕೋಟಿ ರೂ. ಯನ್ನು ಕೇವಲ ಚುನಾವಣಾ ಪ್ರಚಾರ ಮಾಡುವ ಸಲುವಾಗಿ ಖರ್ಚು ಮಾಡಿದೆಯಂತೆ.

jds-logo

ಖರ್ಚು ಮಾಡುವಲ್ಲಿ ನಮ್ಮ ದೊಡ್ಡ ಗೌಡರೇನು ಹಿಂದೆ ಉಳಿದಿಲ್ಲ. ಒಂದು ಅಂದಾಜಿನ ಪ್ರಕಾರ, ಜೆಡಿಎಸ್ ಪಕ್ಷ ಕೂಡ 200 ರಿಂದ 300 ಕೋಟಿ ರೂ. ಯನ್ನು ಖರ್ಚು ಮಾಡಿದೆಯಂತೆ. ಪಕ್ಷಗಳನ್ನು ಹೊರತು ಪಡಿಸಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು 3,000 ಕೋಟಿ ರೂ.ವರೆಗೂ ಚುನಾವಣೆಗಾಗಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

ಇಷ್ಟೆಲ್ಲಾ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿರುವ ಚುನಾವಣಾ ಆಯೋಗ ಸರ್ಕಾರದ ಖರ್ಚಿನಲ್ಲೇ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಚುನಾವಣಾ ಆಯೋಗವೇ ಹಣ ಭರಿಸಿದರೆ ಹೇಗೆ? ಎಂದು ಚಿಂತನೆ ನಡೆಸುತ್ತಿದೆಯಂತೆ.

ಒಂದು ವೇಳೆ ಹಾಗೇನಾದರೂ ಮಾಡಿದ ಪಕ್ಷದಲ್ಲಿ ಚುನಾವಣೆ ಸಂದರ್ಭದಲ್ಲಿ ಹಂಚಲ್ಪಡುವ ಕಪ್ಪು ಹಣವನ್ನು ನಿಯಂತ್ರಣ ಮಾಡಿದಂತಾಗುತ್ತದೆ ಎಂಬುದು ಚುನಾವಣಾ ಆಯೋಗದ ಲೆಕ್ಕಾಚಾರ. ಆದರೆ ನಮ್ಮ ದೇಶದಲ್ಲಿ ರಂಗೋಲಿ ಕೆಳಗೆ ನುಸಿಯುವವರೇ ಹೆಚ್ಚಲ್ಲವೇ?

ಹಾಗೇನಾದರೂ ಚುನಾವಣಾ ಆಯೋಗ ಚುನಾವಣಾ ಪ್ರಚಾರಕ್ಕೂ ಹಣ ಒದಗಿಸಿದರೆ ಅಭ್ಯರ್ಥಿಗಳಲ್ಲೇ ಸ್ಪರ್ಧೆ ಮಾಡಲು ಪೈಪೋಟಿ ಎದುರಾದರೂ ಯಾವುದೇ ಅನುಮಾನವಿಲ್ಲ. ಹಾಗಂತೇನು ಪ್ರಸ್ತುತ ಕಡಿಮೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಕಡಿಮೆ ಇದೆ ಎಂದಲ್ಲ. ಮತ್ತಷ್ಟು ಹೆಚ್ಚಾಗಲೂಬಹುದು ಎಂದಷ್ಟೇ.

ಚುನಾವಣಾ ಆಯೋಗದ ಲೆಕ್ಕಾಚಾರದ ಪ್ರಕಾರ, ಚುನಾವಣಾ ಆಯೋಗವೇ ಚುನಾವಣಾ ಪ್ರಚಾರಕ್ಕೆ ಹಣ ಒದಗಿಸಿದರೆ 1,500 ಕೋಟಿ ರೂ. ಯಲ್ಲಿ ಇಡೀ ಚುನಾವಣೆ ಪ್ರಕ್ರಿಯೆಯನ್ನೇ ಮಾಡಿ ಮುಗಿಸಬಹುದಂತೆ.

ಕಾಂಗ್ರೆಸ್ ಪಾಳಯದಲ್ಲಿ ಆಪರೇಷನ್: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಹೊಣೆಯನ್ನು ಹೊತ್ತಿರುವ ವೇಣುಗೋಪಾಲ್ ಅವರನ್ನು ಕೇರಳಕ್ಕೆ ವರ್ಗಾಯಿಸಲು ಚಿಂತನೆ ನಡೆಯುತ್ತಿದೆಯಂತೆ. ಆ ಜಾಗಕ್ಕೆ ಗುಲಾಂ ನಬಿ ಆಜಾದ್ ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ.

ಕೇರಳದಲ್ಲಿ ಲೋಕ ಸಭಾ ಚುನಾವಣೆಯ ನೇತೃತ್ವವನ್ನು ವೇಣುಗೋಪಾಲ್ ಅವರು ವಹಿಸಿಕೊಳ್ಳಲಿರುವುದರಿಂದ ಅವರಿಗೆ ಸ್ವಲ್ಪ ಸಮಯ ರೆಸ್ಟ್ ಕೊಡುವ ಸಲುವಾಗಿ ಈ ನಿರ್ಧಾರ ಮಾಡಲಾಗಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿರುವುದರಿಂದ ಸಂಬಂಧ ಎಚ್. ಡಿ. ದೇವೇಗೌಡರ ಜೊತೆ ಮಾತುಕತೆ ನಡೆಸುವುದಾಗಿ ಉನ್ನತ ಮೂಲಗಳು ತಿಳಿಸಿವೆ. ಆದರೆ ಯಾವ ವೇಳೆಗೆ ಈ ಆಪರೇಷನ್ ನಡೆಯಲಿದೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಹಾಗಾಗಿ ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.Please follow and like us:
0
https://kannadadalli.com/wp-content/uploads/2018/05/evm-vvpat.jpghttps://kannadadalli.com/wp-content/uploads/2018/05/evm-vvpat-150x100.jpgSowmya KBಸುದ್ದಿassembly election,election commission,JDS,national party fundರಾಜ್ಯದಲ್ಲಿ ಮೇ ತಿಂಗಳು ನಡೆದ ವಿಧಾನ ಸಭಾ ಚುನಾವಣೆಗೆ ಎಷ್ಟು ಖರ್ಚಾಗಿರಬಹುದು ಎಂದು ಊಹಿಸಿ ನೋಡೋಣ. ನಮ್ಮಂಥಹ ಸಾಮಾನ್ಯ ಜನರು ಲಕ್ಷಗಳನ್ನೇ ನೋಡಿಲ್ಲ. ಅಂತಹದರಲ್ಲಿ ಚುನಾವಣೆ ವೆಚ್ಚವನ್ನ ಊಹಿಸುವಷ್ಟು ಕಲ್ಪನಾ ಶಕ್ತಿ ನಮ್ಮಲ್ಲಿ ಇಲ್ಲ ಎಂದು ಮೂಗು ಮುರಿಯಬಹುದು. ಹೌದು ಸ್ವಾಮಿ ನಾವು ಲಕ್ಷಗಳನ್ನೇ ಜೀವನದಲ್ಲಿ ನೋಡಿದವರಲ್ಲ. ಆದರೆ ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಒಂದು ಅಂದಾಜಿ ಪ್ರಕಾರ 5,500 ರಿಂದ 6,000 ಕೋಟಿಯವರೆಗೆ ಹಣ ಖರ್ಚಾಗಿದೆಯಂತೆ. ರಾಜ್ಯದಲ್ಲಿ...ಕನ್ನಡಿಗರ ವೆಬ್​ ಚಾನೆಲ್​