kumbalakayi halwa

ಕುಂಬಳಕಾಯಿ ಒಂದು ವಿಶೇಷವಾದ ತರಕಾರಿ, ಈ ಕುಂಬಳ ಕಾಯಿ ತಿನ್ನುವುದರಿಂದ ಪುರುಷತ್ವ ಹೆಚ್ಚಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಕಾರ್ಬೊಹೈಡ್ರೇಟ್, ಸಕ್ಕರೆ, ಫೈಬರ್, ವಿಟಮಿನ್ ಗಳು,ಕ್ಯಾಲ್ಸಿಯಂ, ಪೊಟಾಷಿಯಂ, ಸೋಡಿಯಂ ಮೊದಲಾದವುಗಳನ್ನು ಹೊಂದಿರುವ ತರಕಾರಿ ಎಂದರೆ ಕುಂಬಳಕಾಯಿ.

boodukumbalakaiಕುಂಬಳಕಾಯಿ ಸೇವನೆಯಿಂದ ಮೂತ್ರಕೋಶ ಶುದ್ಧಿ, ಉರಿ ಮೂತ್ರ,ಕರುಳ ಸಂಬಂಧಿಸಿದ ರೋಗಗಳು, ಪಿತ್ತ, ಕೊಬ್ಬು ಕರಗಿವಿಕೆ ಮೊದಲಾದವುಗಳನ್ನು ನಿವಾರಣೆ ಮಾಡುತ್ತದೆ. ಹೀಗಾಗಿ ತರತರದ ಅಡುಗೆಗಳಲ್ಲಿ ಕುಂಬಳಕಾಯಿ ಬಳಸುವರು.
ಈ ಕುಂಬಳಕಾಯಿಯಿಂದ ಅನೇಕ ರೀತಿಯ ತಿನಿಸುಗಳು ಮತ್ತು ಅಡುಗೆಗಳನ್ನು ತಯಾರಿಸುತ್ತಾರೆ. ಖಾರಕ್ಕಿಂತ ಸಿಹಿ ಇಷ್ಟ ಪಡುವವರಿಗೆ ಕುಂಬಳಕಾಯಿ ಸಿಹಿ ಖಾದ್ಯವಾದ ಕುಂಬಳ ಕಾಯಿ ಹಲ್ವಾದ ರೆಸಿಪಿ ಇಲ್ಲಿದೆ.

ಕುಂಬಳಕಾಯಿ ಹಲ್ವ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ…? ಮುಂದೆ ಓದಿ ಹಂತ ಹಂತವಾಗಿ ಮತ್ತು ನಿಮ್ಮ ಮನೆಯಲ್ಲಿ ಟ್ರೈ ಮಾಡಿ…!kumbalakayi halwa

ಕುಂಬಳ ಕಾಯಿ ಹಲ್ವ ತಯಾರಿಸಲು ಬೇಕಾಗುವ ಸಾಮಗ್ರಿಗಳು…

ತುರಿದ ಕುಂಬಳಕಾಯಿ ೧ ಕಪ್, ಗೋಡಂಬಿ, ಸಕ್ಕರೆ ೧ ಕಪ್, ತುಪ್ಪ ೪-೫ ಚಮಚ, ಉಪ್ಪು ಒಂದು ಚಿಟಕೆ

ಮಾಡುವ ವಿಧಾನ:-

budu-kumbalakayi-halwa-recipe

ಒಂದು ದಪ್ಪ ತಳದ ಪಾತ್ರೆಗೆ ತುರಿದ ಕುಂಬಳಕಾಯಿ ಹಾಕಿ ಬೇಯಿಸಿ. ಆಗ ಕುಂಬಳಕಾಯಿ ನೀರು ಬಿಡುತ್ತದೆ. ಆ ಬನೀರನ್ನು ಇನ್ನೊಂದು ಪಾತ್ರೆಗೆ ಬಗ್ಗಿಸಿಕೊಳ್ಳಿ. ಕುಂಬಳಕಾಯಿ ಹದ್ವಾಗಿ ಬೇಯುವ ತನಕ ಹೀಗೆ ಮಾಡಿ.

kumbalakayi halwa

ಬೆಂದ ಮೇಲೆ ಸಕ್ಕರೆ, ಉಪ್ಪು, ತುಪ್ಪ ಹಾಕಿ. ಎಲ್ಲವನ್ನು ಕದಡಿ ಮಿಶ್ರಣ ಮಾಡಿ. ಮಿಶ್ರಣ ಹುಡಿ ಹುಡಿಯಾದಮೇಲೆ ತುಪ್ಪದಲ್ಲಿ ಹುರಿದ ಗೋಡಂಬಿ ಹಾಕಿ ಮುಗುಚಿ ಕೆಳಗಿಳಿಸಿದರೆ ರುಚಿಕರವಾದ ಹಲ್ವ ತಿನ್ನಲು ತಯಾರಾಗುತ್ತದೆ.

ಈ ರೀತಿ ಮಾಡಿದ ಕುಂಬಳಕಾಯಿ ಹಲ್ವಾವನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ, ದೊಡ್ಡವರು ಕೂಡ ಈ ಹಲ್ವಾವನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಇದು ಆರೋಗ್ಯಕ್ಕೂ ಒಳ್ಳೆಯದು.

ಅಶ್ವಿನಿ ವಿನಾಯಕ.




Please follow and like us:
0
https://kannadadalli.com/wp-content/uploads/2018/07/kumbalakayi-halwa.jpghttps://kannadadalli.com/wp-content/uploads/2018/07/kumbalakayi-halwa-150x100.jpgKannadadalli Editorತಿಂಡಿ-ತಿನಿಸುkumbalakaayi halwa,wait pumkin halwa,ಕುಂಬಳಕಾಯಿ ಹಲ್ವ,ಬೂದು ಕುಂಬಳಕಾಯಿ ಹಲ್ವ,ಹಲ್ವ,ಹಲ್ವ ಮಾಡುವುದು ಹೇಗೆಕುಂಬಳಕಾಯಿ ಒಂದು ವಿಶೇಷವಾದ ತರಕಾರಿ, ಈ ಕುಂಬಳ ಕಾಯಿ ತಿನ್ನುವುದರಿಂದ ಪುರುಷತ್ವ ಹೆಚ್ಚಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಕಾರ್ಬೊಹೈಡ್ರೇಟ್, ಸಕ್ಕರೆ, ಫೈಬರ್, ವಿಟಮಿನ್ ಗಳು,ಕ್ಯಾಲ್ಸಿಯಂ, ಪೊಟಾಷಿಯಂ, ಸೋಡಿಯಂ ಮೊದಲಾದವುಗಳನ್ನು ಹೊಂದಿರುವ ತರಕಾರಿ ಎಂದರೆ ಕುಂಬಳಕಾಯಿ. ಕುಂಬಳಕಾಯಿ ಸೇವನೆಯಿಂದ ಮೂತ್ರಕೋಶ ಶುದ್ಧಿ, ಉರಿ ಮೂತ್ರ,ಕರುಳ ಸಂಬಂಧಿಸಿದ ರೋಗಗಳು, ಪಿತ್ತ, ಕೊಬ್ಬು ಕರಗಿವಿಕೆ ಮೊದಲಾದವುಗಳನ್ನು ನಿವಾರಣೆ ಮಾಡುತ್ತದೆ. ಹೀಗಾಗಿ ತರತರದ ಅಡುಗೆಗಳಲ್ಲಿ ಕುಂಬಳಕಾಯಿ ಬಳಸುವರು. ಈ ಕುಂಬಳಕಾಯಿಯಿಂದ ಅನೇಕ ರೀತಿಯ ತಿನಿಸುಗಳು ಮತ್ತು ಅಡುಗೆಗಳನ್ನು...ಕನ್ನಡಿಗರ ವೆಬ್​ ಚಾನೆಲ್​