ಅತಂತ್ರ ವಿಧಾನಸಭೆ ಆದ್ರೂ ನಮ್ಮದೇ ಅಧಿಕಾರ ನಾವು ಬಿಜೆಪಿ, ಕಾಂಗ್ರೆಸ್ ಜೊತೆ ಕೈ ಜೋಡಿಸಲ್ಲ -ಎಚ್‍ಡಿ ದೇವೇಗೌಡ

ಈ ಬಾರಿ ಅತಂತ್ರ ವಿಧಾನಸಭೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಒಪ್ಪಿಕೊಂಡಿದ್ದಾರೆ. ಇಲ್ಲಿಯವರೆವಿಗೂ 113 ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿಕೊಂಡಿದ್ದ ಜೆಡಿಎಸ್ ಇದೀಗ ಅತಂತ್ರ ವಿಧಾನಸಭೆಯೇ ಅಸ್ಥಿತ್ವಕ್ಕೆ ಬರುವುದು ಎಂದು ಒಪ್ಪಿಕೊಂಡಿದೆ.

ಅತಂತ್ರ ವಿಧಾನಸಭೆಯಾದರೂ ಕೂಡ ನಮ್ಮದೇ ಸರ್ಕಾರ ಅದಕ್ಕೆ ಬೇಕಾದ ಎಲ್ಲಾ ಲೆಕ್ಕಾಚಾರಗಳು ನಮ್ಮ ಬಳಿ ಇವೆ ಎಂದು ದೇವೇಗೌಡರು ಬಂಗಳೂರಿನಲ್ಲಿ ಹೇಳಿದ್ದಾರೆ. ಈ ಬಾರಿ ಜೆಡಿಎಸ್ 70 ರಿಂದ 80 ಸೀಟು ಗೆಲ್ಲಲಿದ್ದು ಬಿಎಸ್‍ಪಿ 3 ರಿಂದ ನಾಲ್ಕು ಸೀಟು ಗೆಲ್ಲಲಿದ್ದಾರೆ. ಪಕ್ಷೇತರರು 10 ರಿಂದ 12 ಸೀಟು ಗೆಲ್ಲುತ್ತಾರೆ. ಬಹುಮತಕ್ಕೆ ಬೇಕಾಗಿರುವ ಉಳಿದ ಸೀಟುಗಳನ್ನು ನಾವು ಆಮೇಲೆ ಕವರ್ ಅಪ್  ಮಾಡುತ್ತೇವೆ ಎನ್ನುವ ಮೂಲಕ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಮುನ್ನುಡಿ ಬರೆದಿದ್ದಾರೆ.

ಹಿಂದೂಸ್ತಾನ್ ಟೈಮ್ಸ್‍ಗೆ ನೀಡಿದ ಸಂದರ್ಶನದಲ್ಲಿ ದೇವೆಗೌಡರು ಈ ಮಾಹಿತಿಯನ್ನ ಹಂಚಿಕೊಂಡಿದ್ದಾರೆ ಎನ್ನುವ ಮಾಹಿತಿ ಈಗ ಹೊರಬಿದ್ದಿದೆ.

mayagowdaಜೆಡಿಎಸ್ ಮೂರನೇ ಸ್ಥಾನಕ್ಕೂ ಬರುವುದಿಲ್ಲ ಎಂದು ಹೇಳಿಕೊಂಡು ತಿರುಗುತ್ತಿರುವವರಿಗೆ ಶಾಕ್ ನೀಡಲಿದ್ದೇವೆ ಎಂದು ಎರಡೂ ರಾಷ್ಟ್ರಿಯ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ. ನಾನು ಈಗಾಗಲೇ ಮಾತು ಕೊಟ್ಟಂತೆ ಕಾಂಗ್ರೆಸ್ ಮತ್ತು ಬಿಜೆಪಿಯವ ಜೊತೆ ಸೇರಿ ಯಾವುದೇ ಕಾರಣಕ್ಕೂ ಸರ್ಕಾರ ರಚಿಸುವುದಿಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಮೂರು ರಾಜಕೀಯ ಪಕ್ಷಗಳು ನಮ್ಮದೇ ಸರ್ಕಾರ ಎಂದು ಎಲ್ಲಾ ಕಡೆ ಹೇಳಿಕೊಂಡು ತಿರುಗುತ್ತಿವೆ ಆದರೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಷಯ ನಮಗೆ ಸ್ಪಷ್ಟವಾಗಿ ಗೊತ್ತಾಗುವುದೇ 15 ರ ಪಲಿತಾಂಶದ ನಂತರ.

congress-bjp-jdsದೇವೇಗೌಡರ ಲೆಕ್ಕಾಚಾರದಂತೆ 75 ಸೀಟ್ ಮೇಲೆ ಜೆಡಿಎಸ್ ಗೆದ್ದರೆ ಮಾತ್ರ ಅವರು ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಕೈ ಜೋಡಿಸದೆಯೇ ಸರ್ಕಾರ ರಚನೆ ಮಾಡಬುದು, ಆದರೆ ಅದೇ 65 ಸೀಟ್‍ಗಿಂತ ಕಡಿಮೆ ಬಂದರೆ ಇವರು ಯಾರಾದರೊಬ್ಬಗೆ ಅಂದರೆ ಕಾಂಗ್ರೆಸ್ ಇಲ್ಲ ಬಿಜೆಪಿಗೆ ಸಪೋರ್ಟ ಮಾಡಲೇಬೇಕಾಗುತ್ತದೆ. ಇನ್ನೊಂದು ಮಾಹಿತಿಯ ಪ್ರಕಾರ ಅತಂತ್ರ ವಿಧಾನಸಭೆಯಾಗಿ ಕಾಂಗ್ರೆಸ್ ಅಥವ ಬಿಜೆಪಿ ಜೊತೆ ಕೈ ಜೋಡಿಸುವಂತಹ ಸಮಯ ಬಂದರೆ ಮತ್ತೊಮ್ಮೆ ಜನರ ಮುಂದೆ ಹೋಗಲು ಜೆಡಿಎಸ್ ತೀರ್ಮಾನಿಸಿದೆ ಎನ್ನುವ ಮಾಹಿತಿ ಕೂಡ ಇದೆ.

gowda_kumaraswamy_

Please follow and like us:
0
https://kannadadalli.com/wp-content/uploads/2018/05/news-28-deve-gowda.jpghttps://kannadadalli.com/wp-content/uploads/2018/05/news-28-deve-gowda-150x100.jpgBalajiರಾಜಕೀಯdevegowda,hdd,hdk for cm,JDSಅತಂತ್ರ ವಿಧಾನಸಭೆ ಆದ್ರೂ ನಮ್ಮದೇ ಅಧಿಕಾರ ನಾವು ಬಿಜೆಪಿ, ಕಾಂಗ್ರೆಸ್ ಜೊತೆ ಕೈ ಜೋಡಿಸಲ್ಲ -ಎಚ್‍ಡಿ ದೇವೇಗೌಡ ಈ ಬಾರಿ ಅತಂತ್ರ ವಿಧಾನಸಭೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಒಪ್ಪಿಕೊಂಡಿದ್ದಾರೆ. ಇಲ್ಲಿಯವರೆವಿಗೂ 113 ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿಕೊಂಡಿದ್ದ ಜೆಡಿಎಸ್ ಇದೀಗ ಅತಂತ್ರ ವಿಧಾನಸಭೆಯೇ ಅಸ್ಥಿತ್ವಕ್ಕೆ ಬರುವುದು ಎಂದು ಒಪ್ಪಿಕೊಂಡಿದೆ. ಅತಂತ್ರ ವಿಧಾನಸಭೆಯಾದರೂ ಕೂಡ ನಮ್ಮದೇ ಸರ್ಕಾರ ಅದಕ್ಕೆ ಬೇಕಾದ ಎಲ್ಲಾ ಲೆಕ್ಕಾಚಾರಗಳು ನಮ್ಮ ಬಳಿ ಇವೆ ಎಂದು ದೇವೇಗೌಡರು...ಕನ್ನಡಿಗರ ವೆಬ್​ ಚಾನೆಲ್​