ಬಿಗ್ ಬ್ರೇಕಿಂಗ್ – ಬಿಎಸ್‍ವೈ ಮನೆಯಲ್ಲಿ ಪಕ್ಷೇತರ ಶಾಸಕ ಶಂಕರ್ ಪ್ರತ್ಯೆಕ್ಷ !!!

BSY Eshwarappaರಾಜ್ಯದಲ್ಲಿ ರಾಜಕೀಯ ನಾಟಕವೇ ನಡೆಯುತ್ತಿದ್ದು ಈ ಬಾರಿ ಚುನಾವಣೆಯಲ್ಲಿಯಾವುದೇ ಪಕ್ಷಕೆ ಬಹುಮತ ಬಾರದ ಹಿನ್ನೆಲೆಯಲ್ಲಿ ಒಂದೊಂದು ಶಾಸಕರ ಸ್ಥಾನವೂ ಅತ್ಯಂತ ಪ್ರಮುಖವಾಗಿದ್ದು ಪಕ್ಷೇತರ ಶಾಸಕ ಶಂಕರ್ ಇಂದು ಬಿಎಸ್‍ವೈ ಅವರ ಮನೆಯಲ್ಲಿ ಪ್ರತ್ಯೆಕ್ಷವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು ಪಕ್ಷೇತರವಾಗಿ ನಿಂತು ಶಾಸಕರಾಗಿದ್ದ ಸಂಕರ್ ಅವರು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದು ಆ ಕುರಿತು ಮಾತನಾಡುವುದಕ್ಕೆ ಖುದ್ದು ಶಂಕರ್ ಅವರೇನೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಶಂಕರ್ ಅವರು ಕೆಎಸ್ ಈಶ್ವರಪ್ಪನವರ ಸಂಬಂಧಿಯಾಗಿದ್ದು ಅವರ ನೇತೃತ್ವದಲ್ಲಿಯೇ ಬಿಎಸ್‍ವೈ ಅವರ ಮನೆಗೆ ಕರೆತಂದಿದ್ದು ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

BSYಮ್ಯಾಜಿಕ್ ನಂ ಗೆ, 7 ಸ್ಥಾನಗಳು ಬಿಜೆಪಿಗೆ ಬೇಕಿರುವ ಕಾರಣದಿಂದಾಗಿ ಈಗಾಗಲೇ ಖಸರತ್ತನ್ನು ಪ್ರಾರಂಭಿಸಿರುವ ಕಾರಣದಿಂದ ಕಾಂಗ್ರೆಸ್ ವಲಯದಲ್ಲಿ ಮಿಂಚಿನ ಸಂಚಲನ ಪ್ರಾರಂಭವಾಗಿದೆ. ಅದಕ್ಕಾಗಿಯೇ ಕಾಂಗ್ರೆಸ್ ಶಾಸಕರನ್ನು ಕೇರಳಕ್ಕೆ ಶಿಫ್ಟ್ ಮಾಡಲು ಡಿಕೆ ಶಿವಕುಮಾರ್ ಅವರಿಗೆ ಜವಾಬ್ದಾರಿ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಆದರೆ ಈ ಮಹಾ ಹೈ ಡ್ರಾಮ ಯಾವ ಹಂತಕ್ಕೆ ತಲುಪುತ್ತದೆ ಎಂದು ರಾಜ್ಯದ ಜನ ಕಾದು ನೋಡುತ್ತಿದ್ದಾರೆ.
ಈಗಾಗಲೇ ಆಪರೇಷನ್ ಕಮಲಕ್ಕೆ ಕೈ ಹಾಕಿರುವ ಬಿಜೆಪಿ ಅನೇಕ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಈಗಾಗಲೇ ಸಂಪರ್ಕ ಮಾಡುತ್ತಿದ್ದಾರೆ ಎನ್ನುವ ಮಾತರುಗಳು ಕೇಳಿ ಬರುತ್ತಿವೆ.

shamanur

ಇದೇ ವೇಳೆ ಮಾಧ್ಯಮಗಳೋಂದಿಗೆ ಮಾತನಾಡಿರುವ ಶಾಮನೂರು ಶಿವಶಂಕರಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷದ ವೀರಶೈವ ಲಿಂಗಾಯತ ಮುಖಂಡರಾರೂ ಕೂಡ ಬಿಜೆಪಿ ಸೇರುವುದೇ ಇಲ್ಲ ಖಡಾ ಕಂಡಿತವಾಗಿ ಹೇಳಿದ್ದಾರೆ. ಇದೆಲ್ಲ ಬಿಜೆಪಿ ಪಕ್ಷದ ರಾಜಕೀಯ ಸ್ಟ್ರಾಟಜಿ ಅಸ್ಟೆ, ಕಾಂಗ್ರೆಸ್‍ನ ಯಾವುದೇ ವೀರಶೈವ ಲಿಂಗಾಯತ ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಕ್ಕೆ ಸಾಧ್ಯವೇ ಇಲ್ಲಾ ಎಂದು ಹೇಳಿದ್ದಾರೆ.

Please follow and like us:
0
https://kannadadalli.com/wp-content/uploads/2018/03/BSY-Eshwarappa.jpghttps://kannadadalli.com/wp-content/uploads/2018/03/BSY-Eshwarappa-150x100.jpgKannadadalli Editorರಾಜಕೀಯಬಿಗ್ ಬ್ರೇಕಿಂಗ್ - ಬಿಎಸ್‍ವೈ ಮನೆಯಲ್ಲಿ ಪಕ್ಷೇತರ ಶಾಸಕ ಶಂಕರ್ ಪ್ರತ್ಯೆಕ್ಷ !!! ರಾಜ್ಯದಲ್ಲಿ ರಾಜಕೀಯ ನಾಟಕವೇ ನಡೆಯುತ್ತಿದ್ದು ಈ ಬಾರಿ ಚುನಾವಣೆಯಲ್ಲಿಯಾವುದೇ ಪಕ್ಷಕೆ ಬಹುಮತ ಬಾರದ ಹಿನ್ನೆಲೆಯಲ್ಲಿ ಒಂದೊಂದು ಶಾಸಕರ ಸ್ಥಾನವೂ ಅತ್ಯಂತ ಪ್ರಮುಖವಾಗಿದ್ದು ಪಕ್ಷೇತರ ಶಾಸಕ ಶಂಕರ್ ಇಂದು ಬಿಎಸ್‍ವೈ ಅವರ ಮನೆಯಲ್ಲಿ ಪ್ರತ್ಯೆಕ್ಷವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು ಪಕ್ಷೇತರವಾಗಿ ನಿಂತು ಶಾಸಕರಾಗಿದ್ದ ಸಂಕರ್ ಅವರು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದು ಆ ಕುರಿತು ಮಾತನಾಡುವುದಕ್ಕೆ ಖುದ್ದು...ಕನ್ನಡಿಗರ ವೆಬ್​ ಚಾನೆಲ್​