ತುಮಕೂರಿನ ಜನತೆಗೊಂದು ಸಿಹಿ ಸುದ್ದಿ. ದೇಶದ ಹೆಮ್ಮೆ ಎನಿಸಿರುವ ಇಸ್ರೋ ಘಟಕವನ್ನು ತುಮಕೂರಿನಲ್ಲಿ ಸ್ಥಾಪನೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಈಗಾಗಲೇ ಎಚ್ ಎಂಟಿ ಘಟಕದ ಜಾಗವನ್ನು ಇಸ್ರೋ ಹಸ್ತಾಂತರ ಮಾಡಲಾಗಿದೆ.

ತುಮಕೂರಿನಲ್ಲಿ ಇಸ್ರೋ ಘಟಕ ನಿರ್ಮಾಣವಾದರೆ ಸುಮಾರು 5,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ತುಮಕೂರಿನ ಸಂಸದ ಎಸ್. ಪಿ. ಮುದ್ದಹನುಮೇಗೌಡ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ಇದೇ ತಿಂಗಳ 14ರಂದು ನಡೆಯಲಿರುವ ಸಮಾರಂಭದಲ್ಲಿ 109 ಎಕರೆ ಪ್ರದೇಶವನ್ನು ಇಸ್ರೋಗೆ ಹಸ್ತಾಂತರ ಮಾಡಲಾಗುವುದು. ಈ ಸಂದರ್ಭದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಕೂಡ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

2016ರಲ್ಲಿ ಕೇಂದ್ರ ಸರ್ಕಾರದ ಸುಪರ್ದಿನಲ್ಲಿ ಇದ್ದ ತುಮಕೂರಿನ ಹಿಂದೂಸ್ತಾನ್ ಮಿಷನ್ ಟೂಲ್ಸ್ (ಎಚ್ ಎಂಟಿ) ಘಟಕವನ್ನು ನಷ್ಟದ ಕಾರಣದಿಂದಾಗಿ ಲಾಕ್ ಔಟ್ ಮಾಡಲಾಗಿತ್ತು. 2012-13ರಲ್ಲಿ ಈ ಕಂಪನಿಗೆ 242 ಕೋಟಿ ರೂ. ನಷ್ಟವನ್ನು ಅನುಭವಿಸಿತ್ತು. ಇದೇ ವರ್ಷ ಕಂಪನಿಗೆ ಕೇವಲ 11 ಕೋಟಿ ರೂಪಾಯಿ ಲಾಭ ಬಂದಿತ್ತು.

ತುಮಕೂರಿನಲ್ಲಿ ಘಟಕವನ್ನು ಮುಚ್ಚಿದ ನಂತರ ಎಚ್ ಟಿಎಂ ಕಂಪನಿಯ ಜಾಗ ಖಾಲಿ ಇತ್ತು. ಹಾಗಾಗಿ ಸಂಸದರಿಗೆ ಕೇಂದ್ರ ಸರ್ಕಾರದ ಮತ್ತೊಂದು ಸಂಸ್ಥೆ ಇಸ್ರೋಗೆ ನೀಡುವಂತೆ ಮನವಿ ಮಾಡಿಕೊಂಡಿತ್ತು. ಹಾಗಾಗಿ ಈ ಸಂಬಂಧ ಅಧಿಕೃತವಾಗಿ ಒಪ್ಪಿಗೆ ಸಿಕ್ಕಿದ ನಂತರ ಎಚ್ ಎಂಟಿ ಜಾಗವನ್ನು ಇಸ್ರೋಗೆ ಹಸ್ತಾಂತರ ಮಾಡಲಾಗುತ್ತಿದೆ.

ಎಚ್ ಎಂಟಿ ಕಂಪನಿಯ 109 ಎಕರೆ ಜಾಗದಲ್ಲಿ ಇಸ್ರೋ ಘಟಕ ಪ್ರಾರಂಭವಾಗಲಿದೆ. ಈ ಘಟಕ ನಿರ್ಮಾಣವಾದರೆ ಸುಮಾರು 5,000 ಉದ್ಯೋಗ ಸೃಷ್ಟಿಯಾಗಲಿದೆ. ಆದರೆ ಇಸ್ರೋದ ಯಾವ ಘಟಕ ನಿರ್ಮಾಣವಾಗಲಿದೆ ಎಂಬುದು ಶೀಘ್ರವೇ ಘೋಷಣೆಯಾಗಲಿದೆ.

  

Please follow and like us:
0
https://kannadadalli.com/wp-content/uploads/2018/07/ISRO-Recruitment-country.jpghttps://kannadadalli.com/wp-content/uploads/2018/07/ISRO-Recruitment-country-150x100.jpgSowmya KBಉದ್ಯೋಗHMT space,ISRO,ISRO unit in Tumkur,job creationತುಮಕೂರಿನ ಜನತೆಗೊಂದು ಸಿಹಿ ಸುದ್ದಿ. ದೇಶದ ಹೆಮ್ಮೆ ಎನಿಸಿರುವ ಇಸ್ರೋ ಘಟಕವನ್ನು ತುಮಕೂರಿನಲ್ಲಿ ಸ್ಥಾಪನೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಈಗಾಗಲೇ ಎಚ್ ಎಂಟಿ ಘಟಕದ ಜಾಗವನ್ನು ಇಸ್ರೋ ಹಸ್ತಾಂತರ ಮಾಡಲಾಗಿದೆ. ತುಮಕೂರಿನಲ್ಲಿ ಇಸ್ರೋ ಘಟಕ ನಿರ್ಮಾಣವಾದರೆ ಸುಮಾರು 5,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ತುಮಕೂರಿನ ಸಂಸದ ಎಸ್. ಪಿ. ಮುದ್ದಹನುಮೇಗೌಡ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಇದೇ ತಿಂಗಳ 14ರಂದು ನಡೆಯಲಿರುವ ಸಮಾರಂಭದಲ್ಲಿ 109 ಎಕರೆ...ಕನ್ನಡಿಗರ ವೆಬ್​ ಚಾನೆಲ್​