ಸ್ಯಾಂಡಲ್ ವುಡ್ : ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧ ರಮಣ ಧಾರಾವಾಹಿಯ ನಾಯಕ ನಟ ಸ್ಕಂದ ಅಶೋಕ್ ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರಂತೆ. ಅರೇ ಹೌದಾ..? ರಮಣ್ ಮದುವೆ ಆಗ್ತಿದ್ದಾರಾ..? ಹಾಗಾದ್ರೆ ರಮಣ್ ರಿಯಲ್ ಲೈಫ್ ನ ರಾಧ ಯಾರು ಅಂತೀರಾ..? ಖಂಡಿತ ಹೇಳ್ತೀವಿ ಮುಂದೆ ಓದಿ..

ಹೌದು, ರಮಣ (ಸ್ಕಂದ ಅಶೋಕ್) ಮದುವೆಯಾಗುತ್ತಿರುವ ಹುಡುಗಿ ಹೆಸರು ‘ಶಿಕಾ ಪ್ರಸಾದ್’. ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ಶಿಕಾ ಅವರನ್ನು ಸ್ಕಂದ ಅವರು ನಾಲ್ಕು ವರೆ ವರ್ಷದಿಂದ ಪ್ರೀತಿ ಮಾಡುತ್ತಿದ್ದು, ಇದೀಗ ಆಕೆಯ ಜೊತೆ ಹಸೆಮಣೆ ಏರಲು ಸಿದ್ಧರಾಗಿದ್ದಾರೆ.ಅಂದಹಾಗೆ, ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿರುವ ಶಿಕಾ ಹಾಗೂ ಸ್ಕಂದ ಇದೇ ತಿಂಗಳ ಅಂದರೆ ಮೇ 30 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಲಿರುವುದಾಗಿ ತಿಳಿದುಬಂದಿದೆ.

ಒಟ್ಟಾರೆ ಹೇಳೋದಾದ್ರೆ ರಾಧಾರಮಣ ಧಾರವಾಹಿಯ ಮೂಲಕ ಸುದ್ದಿಯಲ್ಲಿರುವ ಸ್ಕಂದ (ರಮಣ್) ಈಗ ಮದುವೆಯಾಗುತ್ತಿರೋದು ಸಂತಸದ ವಿಷಯವೇ ಆಗಿದ್ದರೂ ಕೂಡ ಕೆಲ ಹುಡುಗಿಯರಿಗೆ ಬೇಸರವಾಗೋದು ಸಹ ನಿಶ್ಚಿತ. ಯಾಕಂದ್ರೆ ಈ ಧಾರಾವಾಹಿಯ ಮೂಲಕ ಅದೆಷ್ಟೋ ಹುಡುಗಿಯರ ಮನಗೆದ್ದಿದ್ದ ನಟ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಕೊಂಚ ಬೇಸರ ತಂದಿದ್ಯಂತೆ.

Please follow and like us:
0
https://kannadadalli.com/wp-content/uploads/2018/05/56564753.jpghttps://kannadadalli.com/wp-content/uploads/2018/05/56564753-150x100.jpgSindhuಸಿನೆಮಾರಮಣನ ಮದುವೆ,ರಾಧಾ ರಮಣ,ಶಿಕಾ,ಸ್ಕಂದ ಅಶೋಕ್,ಸ್ಯಾಂಡಲ್ ವುಡ್ಸ್ಯಾಂಡಲ್ ವುಡ್ : ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧ ರಮಣ ಧಾರಾವಾಹಿಯ ನಾಯಕ ನಟ ಸ್ಕಂದ ಅಶೋಕ್ ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರಂತೆ. ಅರೇ ಹೌದಾ..? ರಮಣ್ ಮದುವೆ ಆಗ್ತಿದ್ದಾರಾ..? ಹಾಗಾದ್ರೆ ರಮಣ್ ರಿಯಲ್ ಲೈಫ್ ನ ರಾಧ ಯಾರು ಅಂತೀರಾ..? ಖಂಡಿತ ಹೇಳ್ತೀವಿ ಮುಂದೆ ಓದಿ.. ಹೌದು, ರಮಣ (ಸ್ಕಂದ ಅಶೋಕ್) ಮದುವೆಯಾಗುತ್ತಿರುವ ಹುಡುಗಿ ಹೆಸರು ‘ಶಿಕಾ ಪ್ರಸಾದ್’. ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್...ಕನ್ನಡಿಗರ ವೆಬ್​ ಚಾನೆಲ್​