ತುರುವೇಕೆರೆ: ಸಂಘದ ಉಳಿತಾಯ ಮಾಡಿದ ಹಣ ಹಾಗೂ ಸಂಘಕ್ಕೆ ಸರ್ಕಾರದಿಂದ ದೊರೆಯುವ ಸುಪ್ತನಿಧಿಯನ್ನು ಬಳಸಿಕೊಂಡು ಸ್ವಸಹಾಯ ಸಂಘದ ಸದಸ್ಯರು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕೆಂದು ಪಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ನವ್ಯವಿಜಯಕುಮಾರ್ ತಿಳಿಸಿದರು.

ಪಟ್ಟಣದ ಟಿ.ಸುಬ್ರಮಣ್ಯಂ ಪುರಭವನದಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಆಯೋಜಿಸಿದ್ದ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಭಾರತ ಸರ್ಕಾರದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯದ ಶಹರಿ ಸಮೃದ್ಧಿ ಉತ್ಸವದ ಸ್ವಸಹಾಯ ಸಂಘಗಳ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ನೈರ್ಮಲ್ಯ ಕೆಲಸ ಮಾಡುತ್ತಿರುವ ಅರ್ಹ ಫಲಾನುಭವಿಗಳಿಂದ ವಿಶೇಷವಾಗಿ ಸ್ವಸಹಾಯ ಸಂಘ ರಚನೆ ಮಾಡಿ ಅವರ ಸಾಮರ್ಥ್ಯ ವೃದ್ದಿಸುವುದು, ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕೆಂಬುದು ಶಹರಿ ಸಮೃದ್ಧಿ ಉತ್ಸವದ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದರು.

ಸಮುದಾಯ ಸಂಘಟಕ ದೇವರಾಜ್ ಮಾತನಾಡಿ, ಸಾಮಾಜಿಕ ಕ್ರೋಢೀಕರಣ ಮತ್ತು ಸಾಂಸ್ಥಿಕ ಅಭಿವೃದ್ದಿ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ರಚನೆ, ಸಂಘಗಳಿಗೆ ಬ್ಯಾಂಕ್ ಸಂಪರ್ಕ ಕಲ್ಪಿಸುವುದು, ಪ್ರದೇಶ ಹಾಗೂ ನಗರ ಮಟ್ಟದಲ್ಲಿ ಒಕ್ಕೂಟಗಳನ್ನು ರಚಿಸುವುದು, ಸ್ವಸಹಾಯ ಸಂಘದ ಸದಸ್ಯರಿಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಮರ್ಥ್ಯ ಅಭಿವೃದ್ದಿ ಪಡಿಸುವುದು ಯೋಜನೆಯ ಉದ್ದೇಶವಾಗಿದೆ. ನಿಮ್ಮ ಉಳಿತಾಯ ನಿಮ್ಮ ಅಭಿವೃದ್ದಿಗೆ ನೆರವಾಗಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಪಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ನವ್ಯವಿಜಯಕುಮಾರ್ ಹೊರತುಪಡಿಸಿ ಪಪಂ ಅಧ್ಯಕ್ಷರಾಗಲೀ, ಸದಸ್ಯರಾಗಲೀ, ಮುಖ್ಯಾಧಿಕಾರಿಗಳಾಗಲೀ ಪಾಲ್ಗೊಂಡಿರಲಿಲ್ಲ. ಪಟ್ಟಣದ ವಿವಿಧ ಬಡಾವಣೆಗಳ ೩೦ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು. ಸಭೆಯಲ್ಲಿ ಸಮೃದ್ದಿ ಸ್ವಸಹಾಯ ಸಂಘವನ್ನು ರಚಿಸಿ, ಸಂಘಕ್ಕೆ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿಯನ್ನು ನೇಮಕ ಮಾಡಲಾಯಿತು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
https://kannadadalli.com/wp-content/uploads/2019/02/turuvekere-news-2.jpeghttps://kannadadalli.com/wp-content/uploads/2019/02/turuvekere-news-2-150x100.jpegKannadadalli Editorಸುದ್ದಿತುರುವೇಕೆರೆ: ಸಂಘದ ಉಳಿತಾಯ ಮಾಡಿದ ಹಣ ಹಾಗೂ ಸಂಘಕ್ಕೆ ಸರ್ಕಾರದಿಂದ ದೊರೆಯುವ ಸುಪ್ತನಿಧಿಯನ್ನು ಬಳಸಿಕೊಂಡು ಸ್ವಸಹಾಯ ಸಂಘದ ಸದಸ್ಯರು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕೆಂದು ಪಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ನವ್ಯವಿಜಯಕುಮಾರ್ ತಿಳಿಸಿದರು. ಪಟ್ಟಣದ ಟಿ.ಸುಬ್ರಮಣ್ಯಂ ಪುರಭವನದಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಆಯೋಜಿಸಿದ್ದ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಭಾರತ ಸರ್ಕಾರದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯದ ಶಹರಿ ಸಮೃದ್ಧಿ ಉತ್ಸವದ ಸ್ವಸಹಾಯ...ಕನ್ನಡಿಗರ ವೆಬ್​ ಚಾನೆಲ್​