ಶುಭಮಸ್ತು ನಿತ್ಯ ಪಂಚಾಂಗ

ದಿನಾಂಕ : 19, ಜುಲೈ 2018
ಸಂವತ್ಸರ : ವಿಳಂಬನಾಮ ಸಂವತ್ಸರ
ಆಯನಂ : ದಕ್ಷಿಣಾಯನ
ಋತು : ಗ್ರೀಷ್ಮ ಋತು
ಮಾಸ : ಆಷಾಢ ಮಾಸ
ಪಕ್ಷ : ಶುಕ್ಲಪಕ್ಷ
ವಾರ : ಗುರುವಾರ

ತಿಥಿ : ಸಪ್ತಮಿ 06-26PM
ನಕ್ಷತ್ರ : ಹಸ್ತಾ – 01-16PM
ಯೋಗ : ಶಿವ
ಕರಣ : ಗರಜ

ರಾಹುಕಾಲ :  02-05 PM to 03-41 PM
ಗುಳಿಕ ಕಾಲ : 09-18 AM to 10-54AM
ಯಮಗಂಡ ಕಾಲ : 06-07 AM to 07-42 AM
ಸೂರ್ಯೋದಯ : 06-04 AM
ಸೂರ್ಯಾಸ್ತ: 06-52 PM

*********

||ನಾಹಂ ಕರ್ತಾ ಹರಿಃ ಕರ್ತಾಃ||
||ಸರ್ವಂ ಶ್ರೀಕೃಷ್ಣಾರ್ಪಣಮಸ್ತು||

*********

ದಿನಾಂಕ 19, ಜುಲೈ, 2018 ಗುರುವಾರ ಗುರುವಿನ ದೃಷ್ಟಿ ನಿಮಗೆ ಇದೆಯೆಂದು ತಿಳಿಯಬೇಕೆ ಹಾಗಾದರೆ ನೋಡಿ

ಮೇಷ

mesha- Ariesಮನೆಯ ಸದಸ್ಯರ ಸೋಮಾರಿತನದಿಂದ ನೀವು ರೋಸಿ ಹೋಗುತ್ತೀರಿ, ಸ್ಥಳ ಬದಲಾವಣೆ ಸಾಧ್ಯತೆ, ದೂರದ ಊರಿಗೆ ಹೋಗಬೇಕಾದವರು ಎಚ್ಚರದಿಂದಿರಿ.

ವೃಷಭ

taurus- vrushabha

ದಿನವಿಡೀ ಒಬ್ಬರೇ ಇರಲು ಬಯಸುವಿರಿ, ಸಂಜೆಯ ವೇಳೆಯಲ್ಲಿ ಸ್ವಲ್ಪ ಸಮಾಧಾನ ಸಿಗುತ್ತದೆ, ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ.

ಮಿಥುನ

gemini - mithuna

ಕಂಡ ಕಂಡವರಿಗೆಲ್ಲ ಸಹಾಯ ಮಾಡಲು ಹೋಗಬೇಡಿ ನೀವು ಮೋಸಹೋಗಬೇಕಾಗುತ್ತದೆ. ಅನಿರೀಕ್ಷಿತ ಯಶಸ್ಸು ಖಂಡಿತವಾಗಿ ಸಿಗುತ್ತದೆ, ಗುರುವಿನ ದೃಷ್ಟಿ ನಿಮ್ಮಮೇಲಿದೆ.

ಕರ್ಕಾಟಕ

cancer - karkataka

ಹಿರಿಯರಿಂದ ಗೌರವಿಸಲ್ಪಡುವಿರಿ, ಮಕ್ಕಳ ಆಸೆಯಂತೆ ಕೆಲ ಅಗತ್ಯ ವಸ್ತುಗಳನ್ನು ಖರೀದಿಸುವಿರಿ, ಒಟ್ಟಾರೆ ಶುಭದಿನವಾಗಿದೆ.

ಸಿಂಹ

leo- simha

ನಿಮ್ಮ ದಿಟ್ಟವಾದ ನಿಲುವನ್ನು ಕಂಡು ಕೆಲವರು ಮರುಳಾಗುತ್ತಾರೆ, ಎಲ್ಲರಿಗೂ ಒಳಿತನ್ನು ಮಾಡುವಂತಹ ಅವಕಾಶ ಬರುವ ಸಾಧ್ಯತೆಗಳಿವೆ, ಸದ್ಗುರು ದರ್ಶನ ಪಡೆಯಿರಿ.

ಕನ್ಯಾ

virgo - kanya

ತೃತೀಯ ವ್ಯಕ್ತಿಗಳ ಮಾತಿಗೆ ಬೆಲೆಕೊಡಲು ಹೋಗದಿರಿ, ನಿಮ್ಮ ಕಾರ್ಯಗಳು ಸುಗಮವಾಗಿ ಸಾಗುತ್ತದೆ, ಗುರುವಿನ ದೃಷ್ಟಿ ನಿಮಗಿದೆ.

ತುಲಾ

Libra-tula

ಆತ್ಮಿಯರ ಗೌರವಕ್ಕೆ ನೀವು ಪಾತ್ರರಾಗುತ್ತೀರಿ, ಸಮಾಜದ ಒಳಿತಿಗಾಗಿ ಕೈ ಜೋಡಿಸುವಿರಿ, ಅಪವಾದಗಳು ಬರಬಹುದು ಜಾಗೃತರಾಗಿರಿ.

ವೃಶ್ಚಿಕ

scorpiyo - vruschika

ಮನೆಯ ಸದಸ್ಯರೊಂದಿಗೆ ಅತ್ಯಂತ ಸಂತಸದಿಂದ ಸಮಯ ಕಳೆಯುವಿರಿ, ಕೆಲ ಕನಸುಗಳು ಸಾಕಾರಗೊಳ್ಳುವ ಸಾಧ್ಯತೆಗಳಿವೆ, ಇಷ್ಟ ದೇವರ ಪ್ರಾರ್ಥಿಸಿ.

ಧನು

sagittarius- dhanassu

ಹೊಟ್ಟೆ ನೋವು ಕಾಣಿಸುವುದು ಅಥವಾ ಆ್ಯಸಿಡಿಟಿಯಂತಹ ಸಮಸ್ಯೆ ಕಾಣಿಸುತ್ತದೆ, ಉದ್ಯೋಗದಲ್ಲಿ ಕಾಲೆಳೆಯಲು ಕಾಯುತ್ತಿರುತ್ತಾರೆ, ಎಚ್ಚರಿಕೆಯಿಂದ ಇರಿ, ಗಣಪತಿಯ ಪ್ರಾರ್ಥಿಸಿ.

ಮಕರ
capricorn - makhara

ಕೆಲವು ದಿನಗಳಲ್ಲಿ ಇಂದು ಸ್ವಲ್ಪ ಮಟ್ಟಿಗೆ ಯಶಸ್ಸು ಸಿಗುತ್ತದೆ, ಮನಸ್ಸನ್ನು ಹತೋಟಿಯಲ್ಲಿರುವಂತೆ ನೋಡಿಕೊಳ್ಳಬೇಕು, ಒಟ್ಟಾರೆ ಸುದಿನ, ಗುರುವಿನ ಅನುಗ್ರಹ ಪ್ರಾಪ್ತಿ.

ಕುಂಭ

Aquarius - kumbha raashi

ನಿಮ್ಮ ನಿಲುವನ್ನು ನೀವೆ ತೆಗೆದುಕೊಂಡು ಮುಂದೆಸಾಗಿ ಯಶಸ್ಸು ಶೀಘ್ರವಾಗಿ ಸಿಗದಿದ್ದರೂ ಶುಭವಾಗಿ ಸಿಗುತ್ತದೆ, ಇಂದು ಸ್ವಲ್ಪ ಹಣವ್ಯಯವಾಗುತ್ತದೆ.

ಮೀನ

fiskene-meena

ಇಕ್ಕಟ್ಟಿಗೆ ಸಿಲುಕಿ ಕೊಳ್ಳುವ ಸಾಧ್ಯತೆಗಳಿವೆ, ಅನಾರೋಗ್ಯ ಇರುವರಿಗೆ ಇಂದು ಆರೋಗ್ಯ ಉತ್ತಮ, ತಾಯಿಯ ಮಾತನ್ನು ತಳ್ಳಿಹಾಕಬೇಡಿ. ಸಮಾಧಾನ ತಂದುಕೊಳ್ಳಿ.

ಸರ್ವೇ ಜನಾಃ ಸುಖಿನೋ ಭವಂತು
ಜ್ಯೋ||ವಿ|| ವಿನಯ್ ಕುಮಾರ್ ಕಣ್ಣಿ
ಮೊ.8660831231

Please follow and like us:
0
https://kannadadalli.com/wp-content/uploads/2018/07/daily-horoscope-e1530383943380.jpghttps://kannadadalli.com/wp-content/uploads/2018/07/daily-horoscope-150x100.jpgKannadadalli Editorಸುದ್ದಿdaily astrology,daily horoscope,ದಿನ ಭವಿಷ್ಯ,ರಾಶಿ ಭವಿಷ್ಯಶುಭಮಸ್ತು ನಿತ್ಯ ಪಂಚಾಂಗ ದಿನಾಂಕ : 19, ಜುಲೈ 2018 ಸಂವತ್ಸರ : ವಿಳಂಬನಾಮ ಸಂವತ್ಸರ ಆಯನಂ : ದಕ್ಷಿಣಾಯನ ಋತು : ಗ್ರೀಷ್ಮ ಋತು ಮಾಸ : ಆಷಾಢ ಮಾಸ ಪಕ್ಷ : ಶುಕ್ಲಪಕ್ಷ ವಾರ : ಗುರುವಾರ ತಿಥಿ : ಸಪ್ತಮಿ 06-26PM ನಕ್ಷತ್ರ : ಹಸ್ತಾ - 01-16PM ಯೋಗ : ಶಿವ ಕರಣ : ಗರಜ ರಾಹುಕಾಲ :  02-05 PM to 03-41 PM ಗುಳಿಕ ಕಾಲ : 09-18 AM to 10-54AM ಯಮಗಂಡ ಕಾಲ : 06-07 AM...ಕನ್ನಡಿಗರ ವೆಬ್​ ಚಾನೆಲ್​