ಕನ್ನಡ ತಾಯಿ ಮಕ್ಕಳುಸಿನಿಮಾ: ಸಾಮಾಜಿಕ ಜಾಲತಾಣಗಳಲ್ಲಿ ಕಲೆಗಾರರ ಬೀಡು ಮೈಸೂರು ಹುಡುಗರು ಮೋಡಿ ಮಾಡಿದ್ಧಾರೆ. “ಕನ್ನಡ ತಾಯಿ ಮಕ್ಕಳು” ಆಲ್ಬಮ್ ಸಾಂಗ್ ಟೀಸರ್ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿಯಾಗಿತ್ತು. ಒಂದಷ್ಟು ವೆಬ್ ಸೈಟ್ಗಳಲ್ಲಿ ಇಂದು ಟೀಸರ್ ಬಿಡುಗಡೆ ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ಬಹು ನಿರೀಕ್ಷಿತ “ಕನ್ನಡ ತಾಯಿ ಮಕ್ಕಳು” ಆಲ್ಬಮ್ ಸಾಂಗ್ ಟೀಸರ್ ಬಿಡುಗಡೆಯಾಗಿದೆ.

ತನಿಷ್ ಫಿಲಂನ್ಸ್ ಅರ್ಪಿಸುತ್ತಿರುವ ಈ ಹಾಡಿಗೆ ಸಾಹಿತ್ಯ – ರಚನೆ – ನಿರ್ದೇಶನ ಮಾಡಿರುವುದು ವಿಜಯ್ ವೀರಪ್ಪ. ಇನ್ನು ಈ ಹಾಡಿಗೆ ರಾಗ ಸಂಯೋಜನೆ ಮಾಡಿರುವುದು ನಿತಿನ್ ಸಾಲಿ, ಅಕ್ಷಿತ್ ಟಿ. ಪಿ ಛಾಯಾಗ್ರಹಣ – ಸಂಕಲನ – ಡಿಜಿಟಲ್ ಆಪ್ಟಿಕಲ್ಸ್ ಜವಾಬ್ದಾರಿ ಹೊತ್ತಿದ್ದು, ಪ್ರಯಾಗ್ ಜೆ ಕೋರೆ ಯಂತಹ ಗಾಯಕ ಕಂಠ ನೀಡಿದ್ದಾರೆ. ಇತ್ತ ಹಾಡಿನ ಸೌಂಡ್ಸ್ ವಿಭಾಗದ ಕೈಂಕರ್ಯವನ್ನು ಆರ್ ಕೆ ಸ್ಟುಡಿಯೋ ನಿರ್ವಹಿಸಿದೆ.
ವಿಜಯ್ ವೀರಪ್ಪ (ಮಿತುನ್)ಇನ್ನು ಈ ಮೈಸೂರು ಹುಡುಗರ ವಿನೂತನ ಪ್ರಯತ್ನದ ನಿರ್ವಹಣಾ ತಂಡದಲ್ಲಿ ದಿನೇಶ್ ಬಿ. ಎಂ, ಚೇತನ್ ಮನೋಜ್ , ಶ್ರೀನಿವಾಸ್ ಕಲಾವಿದ, ಶ್ರೇಯಸ್, ಮಂಜುನಾಥ್ ಅಭಿ , ಸುಬ್ಬು ಹುಣಸೂರು ಕೈ ಜೋಡಿಸಿದ್ದಾರೆ.
ಸದ್ಯ ಈ ಹಾಡು ಟ್ರೆಂಡಿಂಗ್ ಆಗುವ ಲಕ್ಷಣಗಳು ದಟ್ಟವಾಗಿದ್ದು, ನವೆಂಬರ್ 1 ರಂದು “ಕನ್ನಡ ತಾಯಿ ಮಕ್ಕಳು” ನಾನ್ ಕನ್ನಡಿಗರಿಗೆ ಕನ್ನಡ ಕಲಿಯಿರಿ ಎಂಬ ಅಭಿಯಾನಕ್ಕೆ ಮರುನಾಂದಿ ಹಾಡುವುದು ಖಚಿತ ಎನ್ನುತ್ತಿದ್ದಾರೆ ನೆಟ್ಟಿಗರು.
https://youtu.be/LAbOlMBb_lU

Please follow and like us:
0
https://kannadadalli.com/wp-content/uploads/2018/10/IMG-20181024-WA0005-1024x581.jpghttps://kannadadalli.com/wp-content/uploads/2018/10/IMG-20181024-WA0005-150x100.jpgKannadadalli Editorಸಿನೆಮಾಸಿನಿಮಾ: ಸಾಮಾಜಿಕ ಜಾಲತಾಣಗಳಲ್ಲಿ ಕಲೆಗಾರರ ಬೀಡು ಮೈಸೂರು ಹುಡುಗರು ಮೋಡಿ ಮಾಡಿದ್ಧಾರೆ. “ಕನ್ನಡ ತಾಯಿ ಮಕ್ಕಳು” ಆಲ್ಬಮ್ ಸಾಂಗ್ ಟೀಸರ್ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿಯಾಗಿತ್ತು. ಒಂದಷ್ಟು ವೆಬ್ ಸೈಟ್ಗಳಲ್ಲಿ ಇಂದು ಟೀಸರ್ ಬಿಡುಗಡೆ ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ಬಹು ನಿರೀಕ್ಷಿತ “ಕನ್ನಡ ತಾಯಿ ಮಕ್ಕಳು” ಆಲ್ಬಮ್ ಸಾಂಗ್ ಟೀಸರ್ ಬಿಡುಗಡೆಯಾಗಿದೆ. ತನಿಷ್ ಫಿಲಂನ್ಸ್ ಅರ್ಪಿಸುತ್ತಿರುವ ಈ ಹಾಡಿಗೆ ಸಾಹಿತ್ಯ - ರಚನೆ - ನಿರ್ದೇಶನ ಮಾಡಿರುವುದು...ಕನ್ನಡಿಗರ ವೆಬ್​ ಚಾನೆಲ್​