hithesh army

ಒಬ್ಬ ಯೋಧನ ಮಗ ತನ್ನ ತಂದೆಯಂತೆ ಒಬ್ಬ ಮಹಾನ್​ ಯೋಧನಾಗ ಬಯಸುತ್ತಾನೆ, ಆದರೆ ಎಷ್ಟು ಜನ ಆ ಕೆಲಸವನ್ನು ಮಾಡುತ್ತಾರೆ. ಆದರೆ ಕಾರ್ಗಿಲ್​ ಯುದ್ಧದಲ್ಲಿ ಸಾವನ್ನಪ್ಪಿದ ಬಚ್ಚನ್​ ಸಿಂಗ್​ ಲ್ಯಾನ್ಸ್​ ನಾಯಕ್​ ಅವರ ಮಗ ಇಂದು ಭಾರತೀಯ ಸೈನ್ಯವನ್ನು ಸೇರುವುದರ ಮೂಲಕ ತಮ್ಮ ತಂದೆಯಂತೆ ದೇಶ ಸೇವೆಗೆ ತನ್ನ ಜೀವವನ್ನು ಮುಡಿಪಾಗಿಟ್ಟಿದ್ದಾನೆ.

lieutenant_hitesh_kumar_with_his_mother

ಕಾರ್ಗಿಲ್​ ಯುದ್ಧದಲ್ಲಿ ತಮ್ಮ ತಂದೆ ಸಾಯುವಾಗ ಹಿತೇಶ್​ ಕುಮಾರ್​ಗೆ ಕೇವಲ ಆರು ವರ್ಷ ಮಾತ್ರ, ರಜಪೂತ್​ ರೈಫಲ್ಸ್​ನ 2ನೇ ಬೆಟಾಲಿಯನ್​ನಲ್ಲಿ ಬಚ್ಚನ್​ ಸಿಂಗ್​ ಲ್ಯಾನ್ಸ್​ ನಾಯ್ಕ್​ ಆಗಿದ್ದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಂದರೆ ಜೂನ್ 12, 1999ರ ರಾತ್ರಿ ಟೊಲೊಲಿಂಗ್‌ ನಲ್ಲಿ ಪಾಕಿಸ್ತಾನ ಸೈನಿಕರ ಗುಂಡೇಟಿಗೆ ಹುತಾತ್ಮರಾದ ಲ್ಯಾನ್ಸ್‌ ನಾಯಕ್ ಬಚನ್‌ ಸಿಂಗ್ ಅವರ ಪುತ್ರ ಹಿತೇಶ್ ಕುಮಾರ್, ತಮ್ಮ ತಂದೆ ಸೇವೆ ಸಲ್ಲಿಸಿದ ರಜಪೂತ್ ರೈಫಲ್ಸ್‌ನ 2ನೇ ಬೆಟಾಲಿಯನ್ ಅನ್ನೇ ಸೇರಿದ್ದಾರೆ.

lieutenant_hitesh_kumar army

ಇನ್ನು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವೀರಮರಣವನ್ನಪ್ಪಿದ ಬಚನ್ ಸಿಂಗ್ ಸ್ಮರಣಾರ್ಥ ಮುಜಾಫರ್‌ನಗರದಲ್ಲಿ ಸಿವಿಲ್ ಲೈನ್ ಪ್ರದೆಶಕ್ಕೆ ಅವರ ಹೆಸರನ್ನೇ ಇಡಲಾಗಿದೆ.

ಈ ಘಟನೆಯಾಗಿ 19 ವರ್ಷಗಳ ಬಳಿಕ ಪುತ್ರ ಹಿತೇಶ್ ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಪಾಸ್ ಔಟ್ ಆಗಿ ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ. ಅಲ್ಲದೇ ತಮ್ಮ ತಂದೆಯ ಕನಸೂ ಕೂಡ ನನಸಾಗಿದ್ದು, ದೇಶಕ್ಕೆ ಅತ್ಯಂತ ಪ್ರಮಾಣಿಕವಾಗಿ ತಮ್ಮ ಸೇವೆ ಸಲ್ಲಿಸುವುದಾಗಿ ಹಿತೇಶ್​ ಹೇಳಿದ್ದಾರೆ.

army

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿರುವ ಬಚನ್ ಸಿಂಗ್ ಪುತ್ರ ಹಿತೇಶ್, ‘‘19 ವರ್ಷಗಳಿಂದ ಭಾರತ ಸೇನೆಯನ್ನು ಸೇರುವ ಕನಸು ಕಾಣುತ್ತಿದ್ದೆ. ಅದು ನನ್ನ ತಾಯಿಯ ಕನಸು ಕೂಡ ಆಗಿತ್ತು. ಇದೀಗ ಆ ಅವಕಾಶ ನನಗೆ ಸಿಕ್ಕಿದ್ದು, ಹೆಮ್ಮೆ ಮತ್ತು ಪ್ರಾಮಾಣಿಕತೆಯಿಂದ ದೇಶದ ಸೇವೆ ಮಾಡಲು ಗಮನ ಹರಿಸುತ್ತೇನೆ’’ ಎಂದು ಹೇಳಿದ್ದಾರೆ.

army

ಪುತ್ರ ಸೇನೆಗೆ ಸೇರುತ್ತಿರುವುದರ ಕುರಿತು ಹೆಮ್ಮೆಯಿಂದ ಮಾತನಾಡಿರುವ ಬಚನ್ ಸಿಂಗ್ ಪತ್ನಿ ಮತ್ತು ಹಿತೇಶ್ ತಾಯಿ ಕಮಶೇ ಬಾಲಾ ಅವರು, ‘‘ಬಚನ್ ಹುತಾತ್ಮರಾದ ಬಳಿಕ ಜೀವನ ಕಷ್ಟಕರವಾಗಿತ್ತು. ನನ್ನ ಇಬ್ಬರು ಮಕ್ಕಳನ್ನು ಬೆಳೆಸಲು ನಾನು ತುಂಬಾ ಶ್ರಮಪಟ್ಟಿದ್ದೇನೆ. ಹಿತೇಶ್ ಇದೀಗ ಸೇನೆಗೆ ನಿಯೋಜನೆಗೊಂಡಿರುವುದು ಹೆಮ್ಮೆ ಎನಿಸಿದೆ. ಆತನ ತಮ್ಮ ಹೇಮಂತ್ ಕುಡಾ ಸೇನೆ ಸೇರಲು ಸಜ್ಜಾಗುತ್ತಿದ್ದಾನೆ’’ ಎಂದು ಸಂತಸ ವ್ಯಕ್ತಪಡಿಸಿದರು.

ಸೈನಿಕರು

ಭಾರತ ಸೇನೆಗೆ ಸೇರಿ ತಮ್ಮ ತಂದೆಯಂತೆಯೇ ನಾಡಿನ ರಕ್ಷಣೆಗೆ ಹೊರಟು ನಿಂತಿರುವ ನಮ್ಮ ಸೈನಿಕ ಹಿತೇಶ್​ ಅವರಿಗೆ ನಮ್ಮದೊಂದು ಸಲಾಂ, ಭಾರದಲ್ಲಿ ಈ ತಂದೆ ಮಗನ ಹೆಸರು ಇನ್ನು ಎತ್ತರಕ್ಕೆ ತಲುಪಲಿ ಎಂದು ಆಶಿಸೋಣ ಜೈ ಹಿಂದ್​….

Please follow and like us:
0
https://kannadadalli.com/wp-content/uploads/2018/06/hithesh-army.jpghttps://kannadadalli.com/wp-content/uploads/2018/06/hithesh-army-150x100.jpgKannadadalli Editorಭಾರತಸುದ್ದಿbachan singh,hithesh,karghil,Kargil martyr's son joins dad's battalionಒಬ್ಬ ಯೋಧನ ಮಗ ತನ್ನ ತಂದೆಯಂತೆ ಒಬ್ಬ ಮಹಾನ್​ ಯೋಧನಾಗ ಬಯಸುತ್ತಾನೆ, ಆದರೆ ಎಷ್ಟು ಜನ ಆ ಕೆಲಸವನ್ನು ಮಾಡುತ್ತಾರೆ. ಆದರೆ ಕಾರ್ಗಿಲ್​ ಯುದ್ಧದಲ್ಲಿ ಸಾವನ್ನಪ್ಪಿದ ಬಚ್ಚನ್​ ಸಿಂಗ್​ ಲ್ಯಾನ್ಸ್​ ನಾಯಕ್​ ಅವರ ಮಗ ಇಂದು ಭಾರತೀಯ ಸೈನ್ಯವನ್ನು ಸೇರುವುದರ ಮೂಲಕ ತಮ್ಮ ತಂದೆಯಂತೆ ದೇಶ ಸೇವೆಗೆ ತನ್ನ ಜೀವವನ್ನು ಮುಡಿಪಾಗಿಟ್ಟಿದ್ದಾನೆ. ಕಾರ್ಗಿಲ್​ ಯುದ್ಧದಲ್ಲಿ ತಮ್ಮ ತಂದೆ ಸಾಯುವಾಗ ಹಿತೇಶ್​ ಕುಮಾರ್​ಗೆ ಕೇವಲ ಆರು ವರ್ಷ ಮಾತ್ರ, ರಜಪೂತ್​ ರೈಫಲ್ಸ್​ನ...ಕನ್ನಡಿಗರ ವೆಬ್​ ಚಾನೆಲ್​