ಮಹಿಳೆಯರು ಸಾಮಾನ್ಯವಾಗಿ ಗರ್ಭಿಣಿಯಾದಾಗ ಅಧಿಕ ರಕ್ತದೊತ್ತಡ ಅತವಾ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಾರೆ. ಮಹಿಳೆ ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಯ ದೇಹದಲ್ಲಿ ಉಂಟಾಗುವ ಹಾರ್ಮೋನ್ ಸಮಸ್ಯೇ ಇದಕ್ಕೆ ಕಾರಣ. ಒಂದು ವೇಳೆ ಉದ್ಯೋಗಸ್ಥ ಮಹಿಳೆಯಾದರೆ ಕೆಲಸದ ಒತ್ತಡದ ಪರಿಣಾಮವಾಗಿಯೂ ರಕ್ತದೊತ್ತಡದ ಸಮಸ್ಯೆ ಉಂಟಾಗಬಹುದು.

ಈ ರಕ್ತದೊತ್ತಡವನ್ನು ಸಾಮಾನ್ಯವಾಗಿ ಮನೆ ಮದ್ದಿನ ಮೂಲಕವೂ ನಿವಾರಣೆ ಮಾಡಿಕೊಳ್ಳಬಹುದು. ನೀರಿಗೆ ನಿಂಬೆರಸವನ್ನು ಮಿಶ್ರಣ ಮಾಡಿಕೊಂಡು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೇ ದೇಹದ್ಲಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚು ಮಾಡುತ್ತದೆ.

ನೀರಿನಲ್ಲಿ ನಿಂಬೆ ಹಣ್ಣಿನ ರಸವನ್ನು ಕೇವಲ ಗರ್ಭಿಣಿ ಸ್ರೀಯರು ಮಾತ್ರವಲ್ಲದೇ ಸಾಮಾನ್ಯ ಮನುಷ್ಯರೂ ಸೇವನೆ ಮಾಡಬಹುದು. ನೀರಿನಲ್ಲಿ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ಜೀರ್ಣ ಕ್ರಿಯೆಯನ್ನು ಹೆಚ್ಚು ಮಾಡುತ್ತದೆ.

ತಾಯಿ ಮತ್ತು ಶಿಶುವಿನ ಮೂಳೆಗಳ ಆರೋಗ್ಯವನ್ನು ವೃದ್ಧಿಸುವ ಸಾಮರ್ಥ್ಯ ಈ ನಿಂಬೆ ಹಣ್ಣಿನ ಮಿಶ್ರಣದ ನೀರಿಗಿದೆ. ಗರ್ಭಿಣಿ ಸ್ರೀಯರಲ್ಲಿ ಸಾಮಾನ್ಯವಾಗಿ ಕಾಲುಗಳಲ್ಲಿ ಸೆಳೆತ ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ ನಿಂಬೆ ಹಣ್ಣಿನ ರಸ ಮಿಶ್ರಿತ ನೀರನ್ನು ಕುಡಿಯುವುದರಿಂದ ನೋವು ನಿವಾರಣೆಯಾಗುತ್ತದೆ.

ಸಾಮಾನ್ಯವಾಗಿ ಗರ್ಭಿಣಿಯರಿಗೆ ಹೆಚ್ಚಾಗಿ ಆಹಾರ ಸೇವನೆ ಮಾಡಬೇಕೆನಿಸುವುದಿಲ್ಲ. ಹೆಚ್ಚು ಸಮಯ ವಾಕರಿಕೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆಹಾರವನ್ನು ವ್ಯಜ್ಯ ಮಾಡಬೇಕೆನಿಸಯತ್ತದೆ. ಆದರೆ ಕೆಲವು ಗರ್ಭಿಣಿಯರು ಹೆಚ್ಚು ಆಹಾರವನ್ನು ಸೇವನೆ ಮಾಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಹೊಟ್ಟೆಯಲ್ಲಿ ಉರಿ, ಎದೆಯುರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

Pregnant Woman

ಆಗ ನಿಂಬೆ ಹಣ್ಣಿನ ರಸದ ಜೊತೆಗೆ ನೀರನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ. ಇದನ್ನು ಅಗತ್ಯಕ್ಕಿಂತ ಹೆಚ್ಚಾಗಿ ಕುಡಿಯುವದರಿಂದ ಸಮಸ್ಯೆ ಉಲ್ಬಣವಾಗುವ ಸಾಧ್ಯತೆಯೂ ಇರುತ್ತದೆ.

 Please follow and like us:
0
https://kannadadalli.com/wp-content/uploads/2018/05/ಜಹಗಜ.pnghttps://kannadadalli.com/wp-content/uploads/2018/05/ಜಹಗಜ-150x100.pngSowmya KBಆರೋಗ್ಯlemon,lemon juice,lemon juice for pregnant womenಮಹಿಳೆಯರು ಸಾಮಾನ್ಯವಾಗಿ ಗರ್ಭಿಣಿಯಾದಾಗ ಅಧಿಕ ರಕ್ತದೊತ್ತಡ ಅತವಾ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಾರೆ. ಮಹಿಳೆ ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಯ ದೇಹದಲ್ಲಿ ಉಂಟಾಗುವ ಹಾರ್ಮೋನ್ ಸಮಸ್ಯೇ ಇದಕ್ಕೆ ಕಾರಣ. ಒಂದು ವೇಳೆ ಉದ್ಯೋಗಸ್ಥ ಮಹಿಳೆಯಾದರೆ ಕೆಲಸದ ಒತ್ತಡದ ಪರಿಣಾಮವಾಗಿಯೂ ರಕ್ತದೊತ್ತಡದ ಸಮಸ್ಯೆ ಉಂಟಾಗಬಹುದು. ಈ ರಕ್ತದೊತ್ತಡವನ್ನು ಸಾಮಾನ್ಯವಾಗಿ ಮನೆ ಮದ್ದಿನ ಮೂಲಕವೂ ನಿವಾರಣೆ ಮಾಡಿಕೊಳ್ಳಬಹುದು. ನೀರಿಗೆ ನಿಂಬೆರಸವನ್ನು ಮಿಶ್ರಣ ಮಾಡಿಕೊಂಡು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೇ ದೇಹದ್ಲಲಿ ರೋಗ...ಕನ್ನಡಿಗರ ವೆಬ್​ ಚಾನೆಲ್​