ಬೆಂಗಳೂರು: ವೀರಶೈವ ಹಾಗೂ ಲಿಂಗಾಯತ ಸಮುದಾಯಗಳ ನಡುವಿನ ಧರ್ಮ ಸಂಘರ್ಷ ಬಗೆಹರಿಸುವ ನಿಟ್ಟಿನಲ್ಲಿ ಪ್ರತ್ಯೇಕ ಧರ್ಮ ಸ್ಥಾನಮಾನ ಬೇಡಿಕೆ ಕುರಿತಂತೆ ಅಧ್ಯಯನ ನಡೆಸಲು ರಾಜ್ಯ ಅಲ್ಪಸಂಖ್ಯಾತರ ಆಯೋಗ ರಚಿಸಿರುವ ಸಮಿತಿಯ ಮೊದಲ ಸಭೆ ಇಂದು ನಡೆಯಲಿದೆ.

ಒಂದು ತಿಂಗಳಲ್ಲಿ ವರದಿ ನೀಡುವಂತೆ  ಆಯೋಗ ಸೂಚಿಸಿದ್ದು. ಇಂದು(ಶನಿವಾರ) ನಡೆಯವ ಮೊದಲ ಸಭೆಯ ನಂತರ ವೀರಶೈವ ಮತ್ತು ಲಿಂಗಾಯತ ಸಮುದಾಯಗಲ ಮುಖಂಡರನ್ನು ಆಹ್ವಾನಿಸಿ ಸಮಿತಿಯ ಅಭಿಪ್ರಯಾ ಪಡೆಯುವ ಸಾಧ್ಯತೆಗಳಿವೆ . ಆದರೆ  ಸ್ವತಂತ್ರ ಧರ್ಮ ವಿಚಾರವನ್ನು ರಾಜ್ಯ ಸರಕಾರ ಆಯೋಗಕ್ಕೆ ಶಿಫಾರಸ್ಸು ಮಾಡಿರುವುದು ಹಾಗೂ ಆಯೋಗ ಸಮಿತಿ ರಚಿಸಿರುವುದನ್ನು ಅಖಿಲ ಭಾರತ ವೀರಶೈವ ಮಹಾಸಭೆಯು ತೀವ್ರವಾಗಿ ವಿರೋಧಿಸಿದೆ. ಜತೆಗೆ ಈ ಸಮಿತಿ ಆಯೋಗಕ್ಕೆ ನೀಡುವ ವರದಿ ಹಾಗೂ ಆಯೋಗ ಸರಕಾರಕ್ಕೆ ನೀಡುವ ಶಿಫಾರಸ್ಸನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಮಹಾಸಬೆ ಈಗಾಗಲೇ ಹೇಳಿದೆ.

ಸಚಿವ ಎಂ.ಬಿ. ಪಾಟೀಲ್​ ನೇತೃತ್ವದ ಲಿಂಗಾಯತ ಸ್ವತಂತ್ರ ಹೋರಾಟ ಸಮಿತಿಯ ಸರಕಾರ ನಿಲುವನ್ನು ಸ್ವಾಗತಿಸಿದೆ. ಯಾವುದೇ ಸಂದರ್ಭದಲ್ಲೂ ಸಮಿತಿ ಎದುರು ತನ್ನ ಅಭಿಪ್ರಾಯ ಮಂಡಿಸಲು ಸಿದ್ಧವಿರುವುದಾಗಿ ಪ್ರಕಟಿಸಿದೆ.

ನಿವೃತ್ತ  ನ್ಯಾಯಾಧೀಶ ನ್ಯಾ.ಎಚ್​.ಎನ್​. ನಾಗಮೋಹನ್​ ದಾಸ್​ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಈ ಸಮಿತಿಯ ಸಭೆ ಬೆಳಗ್ಗೆ 11 ಕ್ಕೆ ವಿಕಾಸಸೌಧದಲ್ಲಿ ನಡೆಯಲಿದೆ. ಸಿ.ಎಸ್​. ದ್ವಾರಕಾನಾಥ್​, ಎಸ್​.ಜಿ ಸಿದ್ದರಾಮಯ್ಯ, ಮುಜಾಫರ್​ ಅಸಾದಿ, ಪುರುಷೋತ್ತಮ ಬಿಳಿಮಲೆ ರಾಮಕೃಷ್ಣ ಮರಾಠೆ ಹಾಗೂ ಸರಜೂ ಕಾಟ್ಕರ್​ ಈ ಸಮಿತಿಯ ಸದಸ್ಯರಾಗಿದ್ದಾರೆ.  ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಹಾಗೂ ಹೊಸ ಧರ್ಮದ ಮಾನ್ಯತೆ  ನೀಡುವ ವಿಚಾರವಾಗಿ ಈ ಸಮಿತಿ ಅಧ್ಯಯನ ನಡೆಸಲಿದೆ.

ವೀರಶೈವ ಹಾಗೂ ಲಿಂಗಾಯತ ಧರ್ಮದ ತಳಹದಿ, ಈ ಪೈಕಿ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಅನುಸರಿಸಬೇಕಾದ ನಿಯಮಗಳು, ಈ ಧರ್ಮಕ್ಕೆ ಇರುವ ಹಿನ್ನೆಲೆ ಮತ್ತಿತರ ವಿಷಯಗಳ ಕುರಿತು ವರದಿ ತಯಾರಿಸಲು ಅನುಸರಿಸಬೇಕಾದ ರೂಪುರೇಷೆ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಸಮಿತಿಯ ಉನ್ನತ ಮೂಲಗಳು ತಿಳಿಸಿವೆ.

Please follow and like us:
0
https://kannadadalli.com/wp-content/uploads/2018/01/photo.jpghttps://kannadadalli.com/wp-content/uploads/2018/01/photo-150x100.jpgPrashanthಬೆಂಗಳೂರುರಾಜಕೀಯಸುದ್ದಿಬೆಂಗಳೂರು: ವೀರಶೈವ ಹಾಗೂ ಲಿಂಗಾಯತ ಸಮುದಾಯಗಳ ನಡುವಿನ ಧರ್ಮ ಸಂಘರ್ಷ ಬಗೆಹರಿಸುವ ನಿಟ್ಟಿನಲ್ಲಿ ಪ್ರತ್ಯೇಕ ಧರ್ಮ ಸ್ಥಾನಮಾನ ಬೇಡಿಕೆ ಕುರಿತಂತೆ ಅಧ್ಯಯನ ನಡೆಸಲು ರಾಜ್ಯ ಅಲ್ಪಸಂಖ್ಯಾತರ ಆಯೋಗ ರಚಿಸಿರುವ ಸಮಿತಿಯ ಮೊದಲ ಸಭೆ ಇಂದು ನಡೆಯಲಿದೆ. ಒಂದು ತಿಂಗಳಲ್ಲಿ ವರದಿ ನೀಡುವಂತೆ  ಆಯೋಗ ಸೂಚಿಸಿದ್ದು. ಇಂದು(ಶನಿವಾರ) ನಡೆಯವ ಮೊದಲ ಸಭೆಯ ನಂತರ ವೀರಶೈವ ಮತ್ತು ಲಿಂಗಾಯತ ಸಮುದಾಯಗಲ ಮುಖಂಡರನ್ನು ಆಹ್ವಾನಿಸಿ ಸಮಿತಿಯ ಅಭಿಪ್ರಯಾ ಪಡೆಯುವ ಸಾಧ್ಯತೆಗಳಿವೆ . ಆದರೆ  ಸ್ವತಂತ್ರ...ಕನ್ನಡಿಗರ ವೆಬ್​ ಚಾನೆಲ್​