ಮದುವೆ ಎಂದರೆ ಇಂದು ಕೆಲ ಯುವ ಜನರು ಮೂಗು ಮುರಿಯುತ್ತಾರೆ. ಮದುವೆ ಕೆಲವೊಮ್ಮೆ ಗುಲಾಗಿಯಷ್ಟೇ ಸುಂದರವಾಗಿದ್ದರೆ ಕೆಲವೊಮ್ಮೆ ಗುಲಾಬಿ ಹೂವಿನ ಜೊತೆಗೆ ಇರುವ ಮುಳ್ಳಿನಂತೆ ಭಾಸವಾಗುತ್ತದೆ. ಆದರೆ ಒಂದು ವಯಸ್ಸಿಗೆ ಬಂದ ನಂತರ ಸಂಗಾತಿಯ ಜೊತೆಗೆ ಅನಿವಾರ್ಯವಾಗಿ ಜೀವನ ಹಂಚಿಕೊಳ್ಳಲೇಬೇಕಾಗುತ್ತದೆ.

ಈ ರೀತಿ ಮದುವೆಯಾಗುವುದರಿಂದ ವ್ಯಕ್ತಿಯ ಹೃದಯ ರೋಗ ಮತ್ತು ಪಾರ್ಶ್ವವಾಯುವಿನಂತಹ ರೋಗಗಳನ್ನು ಪಡೆಯಲು ಸಹಾಯ ಮಾಡುವುದಂತೆ. ಹೀಗೆ ಹೇಳಿದ್ದು ಯಾವುದೋ ಅಡುಗೂಲಜ್ಜಿಯಲ್ಲ. ಬದಲಾಗಿ ಸಂಶೋಧಕರು ಹೇಳಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ನಡೆಸಿದ ಒಂದು ವ್ಯಾಪಕ ಸಂಶೋಧನೆಗಾಗಿ 42 ರಿಂದ 77ರ ವಯಸ್ಸಿನ ಎರಡು ಮಿಲಿಯನ್ ಜನರನ್ನು ಸಮೀಕ್ಷೆ ಮಾಡಲಾಯಿತು. ಅದರ ಪ್ರಕಾರ, ಹೃದಯ ರೋಗ ಮತ್ತು ಪಾರ್ಶ್ವವಾಯು ರೋಗದ ಹಿಂಸೆಯ ಪ್ರಮಾಣವನ್ನು ಗಣನೀಯವಾಗಿ ಕಡೆಮೆಗೊಳಿಸಿದೆ ಎಂದು ವೈದ್ಯಕೀಯ ಪತ್ರಿಕೆ ಹಾರ್ಟ್ ನಲ್ಲಿ ವರದಿಯಾಗಿದೆ.

ಈ ಅಧ್ಯಯನವನ್ನು ಯುರೋಪ್, ಉತ್ತರ ಅಮೆರಿಕ, ಮಧ್ಯ ಪೂರ್ವ ಮತ್ತು ಏಷ್ಯಾಗಳಲ್ಲಿ ನಾನಾ ವಿಧದ ಜನಸಂಖ್ಯೆಯನ್ನು ಪರೀಕ್ಷಿಸಿ ಈ ಫಲಿತಾಂಶಕ್ಕೆ ಬರಲಾಗಿದೆ.

ವಿಚ್ಛೇದನದ ಒಕ್ಕೂಟ, ವಿಚ್ಛೇದಿತ, ವಿಧವೆಯರು ಅಥವಾ ಎಂದಿಗೂ ಮದುವೆಯಾಗದೆ ಇರುವ ಜನರಿಗೆ ಹೋಲಿಸಿದರೆ, ಶೇಕಡಾ 42ರಷ್ಟು ಜನರು ಹೃದಯರಕ್ತನಾಳದ ಕಾಯಿಲೆ ಮತ್ತು ಶೇಕಡಾ 16ರಷ್ಟು ಪರಿಧಮನಿಯ ಹೃದಯ ರೋಗದಿಂದ ನರಳುತ್ತಿದ್ದಾರಂತೆ.

ಸಾಯುವ ಅಪಾಯವು ವಿವಾಹಿತ-ಅಲ್ಲದವರಿಗೆ ಶೇಕಡಾ 42ರಷ್ಟಿದ್ದರೆ, ಪರಿಧಮನಿಯ ಹೃದಯ ಕಾಯಿಲೆ ಮತ್ತು ಸ್ಟ್ರೋಕ್ ನಿಂದ ಶೇಕಡಾ 55 ರಷ್ಟು ಜನರಿಗೆ  ಹೆಚ್ಚಾಗಿದೆ. ಪುರುಷರು ಮತ್ತು ಮಹಿಳೆಯರ ಫಲಿತಾಂಶಗಳು ಒಂದೇ ಆಗಿದ್ದು, ಸ್ಟ್ರೋಕ್ ಖಾಯಿಲೆಗೆ ಪುರುಷರೇ ಹೆಚ್ಚು ಒಳಗಾಗುವ ಸಾಧ್ಯತೆಯಿದೆ.

“ಈ ಸಂಶೋಧನೆ ಹೃದಯ ರಕ್ತನಾಳದ ಕಾಯಿಲೆಯ ಅಪಾಯದ ಮೌಲ್ಯಮಾಪನವನ್ನು ಪರಿಗಣಿಸಬೇಕು ಎಂದು ಸೂಚಿಸಬಹುದು” ಎಂದು ಬ್ರಿಟನ್ ನಲ್ಲಿ ಸ್ಟೋಕ್-ಆನ್-ಟ್ರೆಂಟ್ ನಲ್ಲಿರುವ ರಾಯಲ್ ಸ್ಟೋಕ್ ಆಸ್ಪತ್ರೆಯ ಕಾರ್ಡಿಯಾಲಜಿ ಸಂಶೋಧನಾಧಿಕಾರಿ ಚುನ್ ವೈ ವಾಂಗ್ ನೇತೃತ್ವದ ತಂಡವೊಂದು ತೀರ್ಮಾನಿಸಿತು.

ಮನುಷ್ಯನ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಧೂಮಪಾನ ಮತ್ತು ಮಧುಮೇಹ ಎಂದು ಮುಂದುವರಿದ ವಯಸ್ಸು ಇವೆಲ್ಲವೂ ಹೃದಯರಕ್ತನಾಳದ ರೋಗದ ನಾಲ್ಕನೇ ಭಾಗದಷ್ಟು “ಅಪಾಯದ ಅಂಶಗಳಲ್ಲಿ” ಒಂದು ಎಂದು ಸಾಬೀತಾದ ಗುಂಪಿಗೆ ಸೇರಿದವುಗಳಾಗಿವೆ.

ಲಿವಿಂಗ್ ಟು ಗೆದರ್, ವಿವಾಹದ ಬಂಧನದೊಂದಿಗೆ ವಾಸಿಸುವ ಅಥವಾ ಅಂತಹ ಯಾವುದೇ ಸಂಭವನೀಯ ಸಂಬಂಧಗಳು ಹೆಚ್ಚು ಪ್ರಭಾವ ಬೀರುವ ಅಂಶಗಳಾಗಿವೆ ಎಂದು ಹೇಳುತ್ತಾರೆ. ಆದರೆ ವಾಂಗ್ ಮತ್ತು ಸಹೋದ್ಯೋಗಿಗಳು ಪರಿಶೀಲಿಸಿದ 34ಕ್ಕೂ ಅಧ್ಯಯನಗಳಲ್ಲಿ ಹೆಚ್ಚಿನವು ದಂಪತಿಗಳು ಅಥವಾ ಸಲಿಂಗಕಾಮಿಗಳ ಒಕ್ಕೂಟದಿಂದ ಗುರುತಿಸಿಕೊಂಡವರಲ್ಲ. ಆದ್ದರಿಂದ ಸಂಖ್ಯಾಶಾಸ್ತ್ರೀಯವಾಗಿ, ಅಂತಹ ವ್ಯವಸ್ಥೆಗಳು ಮದುವೆಯಾಗುವುದಕ್ಕೆ ಸಮನಾಗಿವೆ ಎಂದು ಹೇಳಲು ಸಾಧ್ಯವಿಲ್ಲ.

ಒಬ್ಬರ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳಲು ಮತ್ತು ಒಬ್ಬ ವ್ಯಕ್ತಿಯ ನಿಯಮಿತ ಆರೋಗ್ಯದ ಬಗೆಗೆ ಕಾಳಜಿ ವಹಿಸುವುದರಿಂದ ಬಹುಶಃ ವಿವಾಹಿತರಿಗೇ ಹೆಚ್ಚು ಅನುಕೂಲವಾಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.

ಏಕಾಂಗಿಯಾಗಿ ಜೀವಿಸುವುದಕ್ಕಿಂತ ಜೋಡಿಯಾಗಿ ಜೀವಿಸುವುದು ಹೆಚ್ಚು ಅಪೇಕ್ಷಣೀಯವಾಗಿರುತ್ತದೆ ಎಂದು ಭಾವಿಸಲಾಗಿದೆ. ಹಿಂದಿನ ಸಂಶೋಧನೆಯು ಸಹ ದಂಪತಿಗಳಾಗಿ ವಾಸಿಸುವ ಜನರಲ್ಲಿ ಬುದ್ಧಿಮಾಂಧ್ಯತೆಯ ಪ್ರಮಾಣ ಕಡಿಮೆ ಎಂಬುದನ್ನು ತೋರಿಸಿದೆ.

Please follow and like us:
0
https://kannadadalli.com/wp-content/uploads/2018/06/1737497-marriage-1529396919-440-640x480-e1529408125365.jpghttps://kannadadalli.com/wp-content/uploads/2018/06/1737497-marriage-1529396919-440-640x480-150x100.jpgSowmya KBಆರೋಗ್ಯಮದುವೆ ಎಂದರೆ ಇಂದು ಕೆಲ ಯುವ ಜನರು ಮೂಗು ಮುರಿಯುತ್ತಾರೆ. ಮದುವೆ ಕೆಲವೊಮ್ಮೆ ಗುಲಾಗಿಯಷ್ಟೇ ಸುಂದರವಾಗಿದ್ದರೆ ಕೆಲವೊಮ್ಮೆ ಗುಲಾಬಿ ಹೂವಿನ ಜೊತೆಗೆ ಇರುವ ಮುಳ್ಳಿನಂತೆ ಭಾಸವಾಗುತ್ತದೆ. ಆದರೆ ಒಂದು ವಯಸ್ಸಿಗೆ ಬಂದ ನಂತರ ಸಂಗಾತಿಯ ಜೊತೆಗೆ ಅನಿವಾರ್ಯವಾಗಿ ಜೀವನ ಹಂಚಿಕೊಳ್ಳಲೇಬೇಕಾಗುತ್ತದೆ. ಈ ರೀತಿ ಮದುವೆಯಾಗುವುದರಿಂದ ವ್ಯಕ್ತಿಯ ಹೃದಯ ರೋಗ ಮತ್ತು ಪಾರ್ಶ್ವವಾಯುವಿನಂತಹ ರೋಗಗಳನ್ನು ಪಡೆಯಲು ಸಹಾಯ ಮಾಡುವುದಂತೆ. ಹೀಗೆ ಹೇಳಿದ್ದು ಯಾವುದೋ ಅಡುಗೂಲಜ್ಜಿಯಲ್ಲ. ಬದಲಾಗಿ ಸಂಶೋಧಕರು ಹೇಳಿದ್ದಾರೆ. ಕಳೆದ ಎರಡು ದಶಕಗಳಲ್ಲಿ...ಕನ್ನಡಿಗರ ವೆಬ್​ ಚಾನೆಲ್​