ತಿಪಟೂರು: ತಾಲೂಕಿನ ಕುಂದೂರು ಗ್ರಾಮದ ದಿಲೀಪ್(12) ಎಂಬ ಬಾಲಕ ಫೆಬ್ರವರಿ 11 ರಿಂದ ಕಾಣೆಯಾಗಿದ್ದು, ಪೋಷಕರು ಆತಂಕಗೊಂಡಿದ್ದು, ಮಗನ ಸುಳಿವು ಸಿಕ್ಕರೆ ತಕ್ಷಣ ತಿಳಿಸುವಂತೆ ಕೋರಿದ್ದಾರೆ.

ಕುಂದೂರು ಗ್ರಾಮದ ಮಂಜುನಾಥ್, ವನಜಾಕ್ಷಿ ದಂಪತಿಗಳ ಮಗನಾದ ದಿಲೀಪ್ ಫೆಬ್ರವರಿ 11 ರಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಶಾಲೆಗೆ ತೆರಳುವುದಾಗಿ ಹೇಳಿ ಮನೆಯಿಂದ ಹೋದವನು ಇದುವರೆವಿಗೂ ಮನೆಗೆ ಬಂದಿರುವುದಿಲ್ಲ. ಮಗ ಶಾಲೆಯಿಂದ ಹಿಂದಿರುಗದೆ ಇದ್ದಾಗ ಗಾಬರಿಗೊಂಡ ಪೋಷಕರು ಶಾಲೆಯಲ್ಲಿ ವಿಚಾರಿಸಿದಾಗ ಆತ ಈ ದಿನ ಶಾಲೆಗೆ ಬಂದಿಲ್ಲ‌ ಎಂದು ತಿಳಿದುಬಂದಿದೆ. ಇದರಿಂದ ಆತಂಕಗೊಂಡ ಪೋಷಕರು ದಿಲೀಪ್ ಸ್ನೇಹಿತರು ಹಾಗೂ ತಮ್ಮ ಪರಿಚಯಸ್ಥರು, ಬಂಧುಗಳೆಲ್ಲರನ್ನೂ ವಿಚಾರಿಸುತ್ತಲೇ ಇದ್ದಾರೆ.

ದಿಲೀಪ್ ಮನೆಯಿಂದ ಹೊರಡುವ ವೇಳೆ ಬಿಳಿ ಮತ್ತು ಕಪ್ಪು ಚೆಕ್ಸ್ ಶರ್ಟ್ , ಆತನಿಗೆ ಕನ್ನಡ ಭಾಷೆ ಮಾತನಾಡಲು ಬರುತ್ತದೆಂದು ಪೋಷಕರು ತಿಳಿಸಿದ್ದಾರೆ.

ದಿಲೀಪ್ ಎಲ್ಲಾದರೂ ಕಂಡುಬಂದಲ್ಲಿ, ಆತನ‌ ಸುಳಿವು ಸಿಕ್ಕಲ್ಲಿ ತಕ್ಷಣ ಹತ್ತಿರ ಪೊಲೀಸ್ ಠಾಣೆಗೆ, ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ಅಥವಾ ದಿಲೀಪ್ ಪೋಷಕರ ದೂರವಾಣಿ ಸಂಖ್ಯೆ
9743879958, 6363468596 ಗೆ ಸಂಪರ್ಕಿಸಲು ‌ಕೋರಿದ್ದಾರೆ.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
https://kannadadalli.com/wp-content/uploads/2019/02/missing.jpeghttps://kannadadalli.com/wp-content/uploads/2019/02/missing-150x100.jpegKannadadalli Editorಸುದ್ದಿತಿಪಟೂರು: ತಾಲೂಕಿನ ಕುಂದೂರು ಗ್ರಾಮದ ದಿಲೀಪ್(12) ಎಂಬ ಬಾಲಕ ಫೆಬ್ರವರಿ 11 ರಿಂದ ಕಾಣೆಯಾಗಿದ್ದು, ಪೋಷಕರು ಆತಂಕಗೊಂಡಿದ್ದು, ಮಗನ ಸುಳಿವು ಸಿಕ್ಕರೆ ತಕ್ಷಣ ತಿಳಿಸುವಂತೆ ಕೋರಿದ್ದಾರೆ. ಕುಂದೂರು ಗ್ರಾಮದ ಮಂಜುನಾಥ್, ವನಜಾಕ್ಷಿ ದಂಪತಿಗಳ ಮಗನಾದ ದಿಲೀಪ್ ಫೆಬ್ರವರಿ 11 ರಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಶಾಲೆಗೆ ತೆರಳುವುದಾಗಿ ಹೇಳಿ ಮನೆಯಿಂದ ಹೋದವನು ಇದುವರೆವಿಗೂ ಮನೆಗೆ ಬಂದಿರುವುದಿಲ್ಲ. ಮಗ ಶಾಲೆಯಿಂದ ಹಿಂದಿರುಗದೆ ಇದ್ದಾಗ ಗಾಬರಿಗೊಂಡ ಪೋಷಕರು ಶಾಲೆಯಲ್ಲಿ ವಿಚಾರಿಸಿದಾಗ ಆತ...ಕನ್ನಡಿಗರ ವೆಬ್​ ಚಾನೆಲ್​