ಮೇಷರಾಶಿ

meshaಪದೇ ಪದೆ ಸೋಲುಗಳು ಎಂಬ ನಿರಾಶಾವಾದದಿಂದ ದಿನ ಆರಂಭಿಸದಿರಿ. ಎಲ್ಲದಕ್ಕೂ ಕಾಲನಾಮಕ ಪರಮಾತ್ಮ ಕಾರಣನಾದ್ದರಿಂದ ಆತನನ್ನು ಅನನ್ಯ ಭಕ್ತಿಯಿಂದ ಭಜಿಸಿ. ಒಳಿತಾಗುವುದು. ಈ ದಿನ ಯಾವುದೇ ವಿಚಾರಕ್ಕೂ ಸಿಟ್ಟು ಮಾಡುವುದುಒಳ್ಳೆಯದಲ್ಲ. ಅದರಲ್ಲೂ ಅನಗತ್ಯ ವಿಚಾರಗಳಲ್ಲಿ ಅಸಮಾಧಾನ ತೋರಿಸಬೇಡಿ. ಶಾಂತಿ ಹಾಗೂ ಸಮಾಧಾನ ಬಹಳ ಮುಖ್ಯ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

ವೃಷಭರಾಶಿ

vrushabhaನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಯಶಸ್ಸಿಗೆಕೆಲಸ ಮಾಡುವ ಸ್ಥಳದಲ್ಲಿ ಎಂಥದೋ ಕಿರಿಕಿರಿ- ತೊಂದರೆ ಆಗುತ್ತಿದ್ದರೆ ಈ ದಿನ ನಡೆಯುವ ಮಹತ್ವದ ಬೆಳವಣಿಗೆಯೊಂದು ಆ ಸಮಸ್ಯೆಗಳನ್ನು ಕೊನೆಗೊಳಿಸಿ, ನೆಮ್ಮದಿ ನೀಡುತ್ತದೆ.ಎದುರಿಗಿರುವ ವ್ಯಕ್ತಿ ಯಾರು, ಅವರ ಗೌರವ ಏನು ಎಂಬುದನ್ನು ತಿಳಿದುಕೊಂಡು ಮಾತನಾಡಿ, ನಾಲಗೆ ಹಿಡಿತ ಕಳೆದುಕೊಂಡು ಮಾತನಾಡಿ, ಆ ನಂತರ ಬೇಸರ ಮಾಡಿಕೊಂಡರೂ ಪ್ರಯೋಜನಕ್ಕೆ ಬರುವುದಿಲ್ಲ
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

ಮಿಥುನರಾಶಿ

mithunaನಿಷ್ಠುರವಾದಿ ಲೋಕಕ್ಕೆ ವಿರೋಧಿ ಎಂಬುದು ಜನಜನಿತವಾಗಿದೆ. ಹಾಗಾಗಿ ನೀವು ನಿಮ್ಮ ವಿಚಾರಗಳನ್ನು ಪರರ ಮುಂದೆ ಹೇಳುವಾಗ ಎರಡು ಬಾರಿ ಚಿಂತಿಸಿ ವಿಚಾರಗಳನ್ನು ಮಂಡಿಸಿ. ಇಲ್ಲದೆ ಇದ್ದಲ್ಲಿ ವೃಥಾ ಅಪವಾದಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ನೀವು ಕೆಲಸ ಮಾಡುವಾಗ ತೋರುವ ಶ್ರದ್ಧೆ, ನಿಷ್ಟೆಯನ್ನು ಅದೇ ಪ್ರಮಾಣದಲ್ಲಿ ಇತರರು ಸಹ ತೋರಿಸಬೇಕು ಎಂಬ ನಿರೀಕ್ಷೆ ಈ ದಿನ ನಿಮ್ಮ ಪಾಲಿಗೆ ದುಬಾರಿಯಾಗಿ ಪರಿಣಮಿಸಲಿದೆ. ನಿಮ್ಮ ಜತೆ ಕೆಲಸಮಾಡುವವರಿಗೆ ಬೇಕಾದ ಸಹಾಯ ಮಾಡಲು ಹಿಂತೆಗೆಯಬೇಡಿ
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

ಕಟಕರಾಶಿ

karkatakaಐಷಾರಾಮಿ ಜೀವನ ಸಾಗಿಸುವ ಕನಸಿರಲಿ. ಆದರೆ ಅದಕ್ಕೆ ಶ್ರಮದ ಬೆವರಿನ ಹನಿ ಹರಿಸಿದಾಗ ಮಾತ್ರ ಸುಖ ದೊರೆಯುವುದು. ಒಂದು ದೃಢ ನಿರ್ಧಾರದಿಂದ ಕಾರ್ಯ ಪ್ರವೃತ್ತರಾಗಿ. ಒಳಿತಾಗುವುದು. ತುರ್ತು ಅಥವಾ ಅನಿವಾರ್ಯ ಅಲ್ಲದಿದ್ದರೆ ಪ್ರಯಾಣ ಮಾಡಲೇಬೇಡಿ. ಇನ್ನು ವಾಹನ ಚಾಲನೆಯಂತೂ ಬೇಡವೇ ಬೇಡ. ಅಥವಾ ಬಹಳ ಎಚ್ಚರಿಕೆಯಿಂದ ಚಲಾಯಿಸಿ. ಹುಡುಗಾಟಿಕೆ ಮಾಡಲು ಹೋಗಬೇಡಿ. ಬಹಳ ಕುತೂಹಲದದಿಂದ ನಿರೀಕ್ಷೆ ಮಾಡುತ್ತಿದ್ದ ಶುಭ ವಾರ್ತೆಯೊಂದು ಕೇಳಿಬರುತ್ತದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

ಸಿಂಹರಾಶಿ

simhaನೀವು ಜೀವನದ ಮಧುರವಾದ ಕ್ಷ ಣಗಳನ್ನು ಕಾಣುವಿರಿ. ವೈಯಕ್ತಿಕ ಹಾಗೂ ಕೌಟುಂಬಿಕವಾಗಿ ಉನ್ನತ ಸ್ಥಾನಕ್ಕೆ ಏರಲು ನಿಮಗೆ ವಿಫುಲ ಅವಕಾಶಗಳು ದೊರೆಯುತ್ತವೆ. ತಾಯಿ ವರ್ಗದವರ ಆರೋಗ್ಯದ ಕಡೆ ಗಮನ ನೀಡಿ.ರಾಜಕಾರಣದಲ್ಲಿ ಇರುವವರಿಗೆ ಇಷ್ಟು ದಿನದ ಒತ್ತಡ ಕಳೆಯುವ ಅವಕಾಶ ದೊರೆಯುತ್ತದೆ. ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ. ಇಷ್ಟು ಸಮಯ ನಿಮ್ಮನ್ನು ವಿರೋಧಿಸುತ್ತಿದ್ದವರು ಸಹ ಸ್ನೇಹಿತರಾಗುವ ಸಾಧ್ಯತೆ ಇದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

ಕನ್ಯಾರಾಶಿ

kanyaಹೊಸ ಉತ್ಸಾಹದೊಂದಿಗೆ ಕೆಲಸ ಆರಂಭ ಮಾಡುವಿರಿ. ಆದರೆ ಹಿಂದಿನ ಅನುಭವಗಳ ಸಾಧಕ ಬಾಧಕಗಳನ್ನು ಅರಿತು ಮುಂದುವರೆಯುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಬರಬೇಕಿದ್ದ ಹಣ ತಡೆಯಾಗಿದೆ ಎಂಬ ಚಿಂತೆ ಈ ದಿನ ಸ್ವಲ್ಪ ಮಟ್ಟಿಗೆ ಕರಗುತ್ತದೆ. ಹೊಸ ಬೆಳಕೊಂದು ಕಾಣಿಸಿಕೊಳ್ಳುತ್ತದೆ. ಬಹಳ ಕಾಲದಿಂದ ಆರಂಭ ಮಾಡಬೇಕು ಅಂದುಕೊಂಡಿದ್ದ ವ್ಯವಹಾರ ಶುರು ಮಾಡಲು ಸೂಕ್ತ ಅವಕಾಶ ದೊರೆಯಲಿದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

ತುಲಾರಾಶಿ

tulaಸಾಫಲ್ಯತೆಗಳು ಒಂದೇ ಏಟಿಗೆ ಸಿಗಬೇಕೆಂಬ ನಿಮ್ಮ ಯೋಜನೆ ಸಾಧುವಾದರೂ ಅದಕ್ಕೆ ಪೂರಕವಾದ ಕ್ರಿಯಾಶೀಲತೆ ರೂಢಿಸಿಕೊಳ್ಳಿ. ಮಕ್ಕಳು ಮತ್ತು ಮಡದಿ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.ನಿಮ್ಮ ಶತ್ರುಗಳು ಹೆಣೆಯುತ್ತಿರುವ ಬಲೆಗೆ ಬೀಳದಂತೆ ಎಚ್ಚರ ವಹಿಸಿ. ಸಿಹಿಯಾದ ಮಾತುಗಳಿಗೆ ಮರುಳಾಗಿ, ಆ ನಂತರ ದುಃಖ ಪಡುವಂತಾಗಿದೆ. ಸರಿ-ತಪ್ಪುಗಳನ್ನು ಮೆದುಳಿನ ಮೂಲಕವೇ ಆಲೋಚಿಸಬೇಕು. ಹೃದಯದ ಮಾತು ಕೇಳುತ್ತೇನೆ ಎಂಬುದು ಇಂಥ ಸಂದರ್ಭದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

ವೃಶ್ಚಿಕರಾಶಿ

vruschikaಕಷ್ಟದಲ್ಲಿರುವವರಿಗೆ ಪುಕ್ಕಟೆ ಸಲಹೆ ಕೊಡುವವರು ಅನೇಕ ಮಂದಿ. ಆದರೆ ನಿಮ್ಮ ಕಷ್ಟಕ್ಕೆ ಮರುಗಿ ಸಹಕಾರ ನೀಡುವ ಜನ ವಿರಳ. ಆದರೆ ದೈವದ ಅನುಗ್ರಹದಿಂದ ನಿಮಗೆ ಒಳಿತಾಗುವುದು.ನಿಮಗೆ ಈ ದಿನ ಹಲವು ವಿಚಾರಗಳನ್ನು ಹೇಳಿಕೊಳ್ಳಬೇಕು ಎನಿಸುತ್ತದೆ. ಆದರೆ ಯಾರ ಜತೆಗೆ ಮತ್ತು ಯಾವ ವಿಚಾರವನ್ನು ಹೇಳಿಕೊಳ್ಳುತ್ತಿದ್ದೀರಿ ಎಂಬುದರ ಬಗ್ಗೆ ಬಹಳ ಎಚ್ಚರಿಕೆ ತೆಗೆದುಕೊಳ್ಳಿ. ವೈಯಕ್ತಿಕ ವಿಚಾರಗಳನ್ನು ಹೇಳಿಕೊಂಡರೆ ನಿಮಗೇ ಸಮಸ್ಯೆ ಆಗಲಿದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

ಧನಸ್ಸುರಾಶಿ

dhanassuಕಷ್ಟ ಬಂದಾಗ ವೆಂಕಟರಮಣನನ್ನು ಧ್ಯಾನಿಸುವುದು ಸಹಜ. ಅಂತೆಯೆ ಭಗವಂತನು ಸಹ ತನ್ನ ಭಕ್ತರನ್ನು ಕೈಬಿಡುವುದಿಲ್ಲ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ವಿಷ್ಣು ಮಂದಿರಕ್ಕೆ ತುಳಸಿ ಮಾಲೆ ಅರ್ಪಿಸಿ.ನಿಮಗೆ ಇಷ್ಟ ಇಲ್ಲದಿದ್ದರೂ ಬಾಳಾಸಂಗಾತಿಯೋ ಅಥವಾ ಕುಟುಂಬದವರ ಒತ್ತಡಕ್ಕೆ ಕಟ್ಟುಬಿದ್ದು ದೊಡ್ಡ ಮಟ್ಟದ ಖರ್ಚು ಮಾಡಲೇ ಬೇಕಾಗುತ್ತದೆ. ಇನ್ನು ಈಗಾಗಲೇ ಅರ್ಜಿ ಹಾಕಿಕೊಂಡಿದ್ದರೆ ಕೆಲಸದ ಸಂದರ್ಶನಕ್ಕೆ ಕರೆ ಬರುವ ಸಾಧ್ಯತೆ ಇದೆ
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

ಮಕರರಾಶಿ

makharaಹೋರಾಟದಲ್ಲಿ ಗುರುತಿಸಿಕೊಳ್ಳುವ ಜವಾಬ್ದಾರಿ ಬರಬಹುದು. ಸಾಧಕ ಬಾಧಕಗಳನ್ನು ಚಿಂತಿಸಿ ಜವಾಬ್ದಾರಿಯನ್ನು ವಹಿಸಿಕೊಳ್ಳಿ ಮತ್ತು ವಹಿಸಿಕೊಂಡ ಕೆಲಸದಲ್ಲಿ ಯಶಸ್ಸು ಹೊಂದುವಿರಿ.ಅಂದುಕೊಂಡಿದ್ದ ಕೆಲಸಗಳು ಇಷ್ಟು ಸಮಯ ತಡವಾಗುತ್ತಿತ್ತು ಅಂದರೆ ಈಗ ಅದೊಂದು ವೇಗ ಪಡೆದುಕೊಂಡು, ಪೂರ್ಣಗೊಳ್ಳುವ ಸಾಧ್ಯತೆ ಇದೆ. ದಿಢೀರನೇ ಆತ್ಮೀಯರೊಬ್ಬರು ನಿಮ್ಮಲ್ಲಿಗೆ ಬಂದು, ದೂರದ ಊರಿಗೆ ಪ್ರಯಾಣ ಮಾಡುತ್ತಿರುವುದಾಗಿಯೂ ಜತೆಯಲ್ಲಿ ಬರುವಂತೆಯೂ ಕರೆಯುವ ಸಾಧ್ಯತೆ ಇದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

ಕುಂಭರಾಶಿ

kumbhaಅತಿಥಿಗಳ ಆದರಾತಿಥ್ಯದಲ್ಲಿ ದಿನದ ಬಹುಪಾಲು ಕಳೆಯುವ ಸಾಧ್ಯತೆಗಳು ಇರುತ್ತದೆ. ಅದರ ಸಂಗಡ ನಿಮ್ಮ ವೈಯಕ್ತಿಕ ಆಗುಹೋಗುಗಳ ಕಡೆಯೂ ಲಕ್ಷ ್ಯ ಕೊಡುವುದು ಒಳ್ಳೆಯದು. ಖರ್ಚು ಹೆಚ್ಚಾಗುವ ಸಂಭವವಿದೆ.ಕೋರ್ಟು-ಕಚೇರಿಗಳಿಗೆ ಸಂಬಂಧಿಸಿದಂತೆ ಇರುವ ವ್ಯಾಜ್ಯಗಳಲ್ಲಿ ನೀವಂದುಕೊಂಡಂಥ ಬೆಳವಣಿಗೆಗಳು ಆಗಿ, ಮನಸಿಗೆ ಸಮಾಧಾನ ದೊರೆಯುತ್ತದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಅದರಲ್ಲು ಟೆಲಿ ಕಮ್ಯುನಿಕೇಷನ್, ಕಂಪ್ಯೂಟರ್, ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಅಥವಾ ವೃತ್ತಿ- ವ್ಯವಹಾರ ಮಾಡುತ್ತಿರುವವರಿಗೆ ಒಳ್ಳೆ ಸುದ್ದಿ ಕೇಳುವ ಯೋಗ ಇದೆ
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

ಮೀನರಾಶಿ

meenaಹೊಸ ಹೊಸ ಸಾಹಸಗಳಿಗೆ ಕೈಹಾಕುವುದರಿಂದ ಅದರಲ್ಲಿ ಯಶಸ್ಸನ್ನು ಕಾಣುವಿರಿ. ಬಂಧು ಬಾಂಧವರು ನಿಮ್ಮ ಸಹಕಾರಕ್ಕೆ ನಿಲ್ಲುವರು. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಒಳಿತಾಗುವುದು.ನೆರವು ಅಥವಾ ಸಹಾಯ ಮಾಡುವವರು ಯಾರೂ ಇಲ್ಲ ಎಂದು ಇನ್ನು ನೀವು ಕೊರಗುತ್ತಾ ಕೂರುವ ಅಗತ್ಯ ಇಲ್ಲ. ನೀವು ಇರಿಸಿಕೊಂಡ ಗುರಿ ಸಾಧಿಸಲು ಎಲ್ಲ ರೀತಿಯ ನೆರವು ಸಿಗುತ್ತದೆ. ಇದರಿಂದ ಅಚ್ಚರಿಯ ಜತೆಗೆ ಸಂತೋಷವೂ ಪಡುತ್ತೀರಿ. ದುಡ್ಡು ಕಾಸಿನ ವ್ಯವಹಾರದಲ್ಲಿ ಅದರಲ್ಲೂ ಬಡ್ಡಿ ವ್ಯವಹಾರ ನಡೆಸುತ್ತಿರುವವರಿಗೆ ಆತಂಕ ಇದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ
ಪಂಡಿತ್ ಸಾಯಿ ದೀಕ್ಷಿತ್
7899892585

Please follow and like us:
0
https://kannadadalli.com/wp-content/uploads/2018/10/IMG-20181025-WA0016-512x683.jpghttps://kannadadalli.com/wp-content/uploads/2018/10/IMG-20181025-WA0016-150x100.jpgKannadadalli Editorಆಧ್ಯಾತ್ಮಮೇಷರಾಶಿ ಪದೇ ಪದೆ ಸೋಲುಗಳು ಎಂಬ ನಿರಾಶಾವಾದದಿಂದ ದಿನ ಆರಂಭಿಸದಿರಿ. ಎಲ್ಲದಕ್ಕೂ ಕಾಲನಾಮಕ ಪರಮಾತ್ಮ ಕಾರಣನಾದ್ದರಿಂದ ಆತನನ್ನು ಅನನ್ಯ ಭಕ್ತಿಯಿಂದ ಭಜಿಸಿ. ಒಳಿತಾಗುವುದು. ಈ ದಿನ ಯಾವುದೇ ವಿಚಾರಕ್ಕೂ ಸಿಟ್ಟು ಮಾಡುವುದುಒಳ್ಳೆಯದಲ್ಲ. ಅದರಲ್ಲೂ ಅನಗತ್ಯ ವಿಚಾರಗಳಲ್ಲಿ ಅಸಮಾಧಾನ ತೋರಿಸಬೇಡಿ. ಶಾಂತಿ ಹಾಗೂ ಸಮಾಧಾನ ಬಹಳ ಮುಖ್ಯ. ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಭವನ ಪಂಡಿತ್ ಸಾಯಿ ದೀಕ್ಷಿತ್ 7899892585 ವೃಷಭರಾಶಿ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಯಶಸ್ಸಿಗೆಕೆಲಸ ಮಾಡುವ ಸ್ಥಳದಲ್ಲಿ ಎಂಥದೋ ಕಿರಿಕಿರಿ- ತೊಂದರೆ ಆಗುತ್ತಿದ್ದರೆ ಈ ದಿನ ನಡೆಯುವ ಮಹತ್ವದ...ಕನ್ನಡಿಗರ ವೆಬ್​ ಚಾನೆಲ್​