ಮೇಷ

mesha
ನಮ್ಮ ಮಕ್ಕಳು ಕನ್ನಡಿಯೊಳಗಿನ ಪ್ರತಿಬಿಂಬದಂತೆ. ಹೊರಗೆ ನಾವು ಕಾಣುತ್ತಿದ್ದರೆ, ಒಳಗೆ ನಮ್ಮ ಪ್ರತಿಬಿಂಬವಿರುವುದಿಲ್ಲ, ಮಕ್ಕಳ ಪ್ರತಿಬಿಂಬವಿರುತ್ತದೆ. ಅವರನ್ನು ತಿದ್ದುವುದು, ತೀಡುವುದು, ನಮಗೆ ಬೇಕಾಗಿರುವ ಹಾಗೆ ಪರಿವರ್ತಿಸಿಕೊಳ್ಳುವುದು, ನಮ್ಮನ್ನೇ ಪರಿವರ್ತಿಸಿಕೊಂಡಂತೆ.ಅನೇಕ ರೀತಿಯ ಒತ್ತಡಗಳ ನಡುವೆಯೂ ಯಶಸ್ಸಿನ ದಾರಿಯನ್ನು ಕಂಡುಕೊಳ್ಳಲು ಸುದಿನವಾಗಿದೆ. ಅಂತೆಯೇ ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದ್ದು ಮೌನ ತಾಳಿ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ವೃಷಭ

vrushabhaಹಣಕಾಸಿನ ವಿಷಯದಲ್ಲಿ, ಆಭರಣಗಳ ವಿಷಯದಲ್ಲಿ ಹತ್ತಿರದ ಬಂಧುಗಳೇ ನಿಮಗೆ ಸುಳ್ಳು ಹೇಳಿ ನಿಮ್ಮ ದಿಕ್ಕು ತಪ್ಪಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅವರು ಹೇಳಿದ್ದು ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಚಾರ. ಆದರೆ, ಅದೇ ಸುಳ್ಳನ್ನು ನಂಬಿ ಮೋಸ ಹೋಗದಂತೆ ಎಚ್ಚರ ವಹಿಸುವುದು ನಿಮಗೆ ಹಿತಕರ.ಹಣಕಾಸಿನ ವ್ಯವಸ್ಥೆ ಉತ್ತಮವಾಗಿರುವುದರಿಂದ ಬಹು ಬಂಡವಾಳದ ಉದ್ಯಮವನ್ನು ಆರಂಭಿಸಲು ತೊಡಗುವಿರಿ. ಇದಕ್ಕೆ ನಿಮ್ಮ ಸಂಗಾತಿಯ ಮತ್ತು ಸ್ನೇಹಿತರ ಬೆಂಬಲ ದೊರೆಯುವುದು.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಮಿಥುನ

mithunaಸಂಬಂಧಗಳ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನಿಸಿದಷ್ಟೂ ಗೋಜಲುಗೋಜಲಾಗಿ ಕಾಣಿಸಲು ಆರಂಭಿಸುತ್ತದೆ. ತಿಳಿನೀರಿನಲ್ಲಿ ಕಾಣಿಸುವ ಪ್ರತಿಬಿಂಬದಷ್ಟೇ ಸಂಬಂಧಗಳು ಸ್ಪಷ್ಟವಾಗಿರುತ್ತವೆ. ಗಾಳಿಯೊಂದಿಗೆ ಗುದ್ದಾಡಿ ಮೈಮನವನ್ನು ನುಗ್ಗು ಮಾಡಿಕೊಳ್ಳುವ ಬದಲು, ಸಂಧಾನವೆಂಬ ಸಾಧನವನ್ನು ಹಿಡಿದು ಬದುಕನ್ನು ನಡೆಸುವುದು ಉತ್ತಮ.ಪ್ರಯಾಣದಲ್ಲಿ ವಾಹನವನ್ನು ಚಲಿಸುವಾಗ ಎಡ ಮತ್ತು ಬಲಬದಿಯ ವಾಹನಗಳನ್ನು ಗಮನಿಸಿ. ಸ್ನೇಹಿತರ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳಿತಾಗುವುದು
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಕರ್ಕಾಟಕ

karkatakaಮನಸ್ಸಿಲ್ಲದಿದ್ದರೂ, ನಮ್ಮ ಕೈಲಾಗದಿದ್ದರೂ, ಮಾಡಲು ಅಸಾಧ್ಯವೆನಿಸಿದರೂ ನಮ್ಮ ಸುತ್ತಲಿನವರಿಗಾಗಿ ಮತ್ತು ನಮಗಾಗಿ ಕೆಲವೊಂದು ಕೆಲಸವನ್ನು ಮಾಡಲೇಬೇಕಾಗುತ್ತದೆ. ಶ್ರದ್ಧೆಯಿಂದ ಮಾಡಿದ ಯಾವುದೇ ಕೆಲಸವೂ ವ್ಯರ್ಥವಾಗುವುದಿಲ್ಲ ಮತ್ತು ಪ್ರತಿಯೊಂದರಲ್ಲಿಯೂ ಅನುಕೂಲತೆ ಇದೆ ಎಂಬುದು ನಿಮಗೆ ಕ್ರಮೇಣ ಅರ್ಥವಾಗುತ್ತದೆ.ಕೆಲವು ಹಿತೈಷಿಗಳ ಪ್ರಯತ್ನದಿಂದ ನಿಮ್ಮ ಮನಸ್ಸಿಗೆ ಒಪ್ಪುವ ಹೊಸ ಕೆಲಸವು ನಿಮಗೆ ದೊರಕುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಸಿಂಹ

simhaಬುಗುರಿಗೆ ದಾರವನ್ನು ಸರಿಯಾಗಿ ಸುತ್ತಿದಷ್ಟೇ ಚೆಂದವಾಗಿ ದಾರವನ್ನು ಬಿಟ್ಟಾಗಲೂ ತಿರುಗುತ್ತದೆ. ದಾರದ ಹಿಡಿದ ಸಡಿಲವಾದಷ್ಟೂ ಅಥವಾ ಅಸ್ತವ್ಯಸ್ತವಾದಷ್ಟೂ ಬುಗುರಿ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಇದೇ ಸಂಗತಿ ನಮ್ಮ ಮಕ್ಕಳುಮರಿಗಳಿಗೂ ಅನ್ವಯವಾಗುತ್ತದೆ. ನೋಡಲು ಎಲ್ಲ ಚೆಂದವೇ, ಮಾತುಗಳೂ ಅಷ್ಟೇ ವಿನಯವಂತಿಕೆಯಾಗಿರುತ್ತದೆ.ಅನಾವಶ್ಯಕ ವಾದ, ವಿವಾದಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಇಬ್ಬರ ಜಗಳ ತೀರಿಸಲು ಹೋಗಿ ನೀವೇ ಪೆಟ್ಟು ಮಾಡಿಕೊಳ್ಳುವಿರಿ. ಆರೋಗ್ಯದ ತಪಾಸಣೆಗಳನ್ನು ಸಕಾಲದಲ್ಲಿ ಮಾಡಿಸಿ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಕನ್ಯಾ

kanyaಬೊಗಸೆಯಲ್ಲಿ ಹಿಡಿದ ನೀರಿನಷ್ಟೇ ನಮ್ಮಲ್ಲಿರುವ ಅರಿವು ಮತ್ತು ಜ್ಞಾನ. ಬೊಗಸೆ ಖಾಲಿಯಾದಷ್ಟೂ ತುಂಬಿಸಿಕೊಳ್ಳುತ್ತಿರಬೇಕು, ಜ್ಞಾನದಾಹವನ್ನು ಮೊಗೆಮೊಗೆದು ಇಂಗಿಸಿಕೊಳ್ಳುತ್ತಿರಬೇಕು. ಬದುಕು ನಾವಂದುಕೊಂಡಿದ್ದಕ್ಕಿಂತ ಚೆಂದವಾಗಿಯೇ ಇರುತ್ತದೆ, ಅದನ್ನು ನಾವೇ ಏಕೆ ಸಲ್ಲದ ಆಸೆಗಳ ಬೆನ್ನತ್ತಿ ಹಾಳು ಮಾಡಿಕೊಳ್ಳಬೇಕು. ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ತುಲಾ

tulaದೈವಲೀಲೆಯೋ, ಪರಿಸ್ಥಿತಿಯೇ ನಿಮ್ಮನ್ನು ಆ ಸ್ಥಿತಿಗೆ ತಳ್ಳಿತೋ ಅಥವಾ ನಿಮ್ಮ ನಿರ್ಧಾರವೇ ಅಚಲವಾಗಿತ್ತೋ… ಅಂತೂ ಮರಳಿ ಗಳಿಸಿದ ಉದ್ಯೋಗವನ್ನು ಕಳೆದುಕೊಳ್ಳುವಂಥ ಯಾವುದೇ ಕೆಲಸಕ್ಕೆ ಕೈಹಾಗಬೇಡಿ. ವಿಧಿಲಿಖಿತ ಏನಿರುತ್ತದೋ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ವೃಶ್ಚಿಕ

vruschikaಅತಿಯಾದ ಆತ್ಮವಿಶ್ವಾಸ, ಅತಿಯಾದ ಭಂಡತನ ನಮ್ಮ ಬಾಳಿಯ ಗುರಿಯನ್ನೇ ಬದಲಿಸುತ್ತದೆ. ಇಟ್ಟ ಗುರಿಯಿಂದ ಲಕ್ಷ್ಯ ಬೇರೆಗೆ ಹರಿದಂತೆಲ್ಲ ಬಿಟ್ಟ ಬಾಣ ಗುರಿ ತಪ್ಪುತ್ತಾ ಹೋಗುತ್ತದೆ. ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ.ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಧನುಸ್ಸು

dhanassuಸಂಕಷ್ಟಗಳು ನೆರಳಿನಂತೆ ನಮ್ಮ ಬಾಳಿನುದ್ದಕ್ಕೂ ಹಿಂಬಾಲಿಸಿಕೊಂಡು ಬರುತ್ತಲೇ ಇರುತ್ತವೆ. ಅದರ ಬಗ್ಗೆ ತಲೆಕೆಡಿಸಿಕೊಂಡಷ್ಟೂ ನೆರಳು ನಮ್ಮನ್ನು ಹಿಂಬಾಲಿಸುವ ಬದಲು, ಆ ನೆರಳನ್ನೇ ನಾವು ಹಿಂಬಾಲಿಸಲು ಪ್ರಯತ್ನಿಸುತ್ತೇವೆ. ಇದರಿಂದ ಆಗುವ ಲಾಭವಾದರೂ ಯಾವುದು? ಕಾಂಗ್ರೆಸ್ ಗಿಡವನ್ನು ಕಿತ್ತುಹಾಕಿದಂತೆ,ಶೀಲತೆಯಿಂದ ನಡೆದರೆ ಯಶಸ್ಸು ಕಾಣುವಿರಿ. ಉಭಯ ಮನೆತನದ ಹಿರಿಯರ ಒಪ್ಪಿಗೆ ಪಡೆಯುವುದರಿಂದ ಜೀವನ ಉತ್ತಮವಾಗಿರುವುದು.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಮಕರ

makharaಮೇಷ ಅತಿಯಾದ ಉತ್ಸಾಹ ನಿಮ್ಮನ್ನು ಅನಗತ್ಯ ತೊಂದರೆಯಲ್ಲಿ ಸಿಲುಕಿಸಿಬಿಡುತ್ತದೆ. ಕೆಲವರಿಗೆ ಅದು ತೋರಿಕೆಯಂತೆ ಕಂಡರೆ, ಕೆಲವರಿಗೆ ಅಸಹ್ಯ ಹುಟ್ಟಿಸುತ್ತದೆ. ಆದ್ದರಿಂದ ಆ ಉತ್ಸಾಹವನ್ನು ಹತ್ತಿಕ್ಕಿಕೊಳ್ಳಿ, ನಿಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳಿ. ಬೇರೆಯವರ ಕಾಳಜಿ ನಿಮಗೆ ಬೇಡವೇ ಬೇಡ. ನಿಮ್ಮ ಹತ್ತಿರದವರಿಗೆ ಸಹಾಯ ಮಾಡಬೇಕೆನಿಸಿದರೂ ಮಾಡಬೇಡಿ.ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಆಂಜನೇಯ ದೇವಸ್ಥಾನಕ್ಕೆ ತಪ್ಪದೇ ಹೋಗಿ ಬನ್ನಿ. ಭಗವಂತ ನಿಮಗೆ ಅಭಯ ನೀಡುವನು.
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಕುಂಭ

kumbhaಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಉದರ ಶೂಲೆ ಸಂಬಂಧ ನಿರ್ಜಲೀಕರಣದಿಂದಾಗಿ ಸುಸ್ತಾಗುವಿರಿ. ಅದಕ್ಕೆ ಸೂಕ್ತ ಔಷಧೋಪಚಾರ ನಡೆಸಿ. ಹಣಕಾಸಿನ ಸ್ಥಿತಿ ಸಾಧಾರಣ ಮಟ್ಟದ್ದಾಗಿರುತ್ತದೆ.ನಿಮ್ಮ ಆಂತರ್ಯದ ಕನ್ನಡಿಯ ಮುಂದೆ ನಿಂತುಕೊಳ್ಳಿ. ಆತ್ಮವಿಮರ್ಶೆಗೆ ಇದು ಸಕಾಲ. ಪರಿಸ್ಥಿತಿ ಎಂಥ ಸಂದರ್ಭವನ್ನು ತಂದಿಡುತ್ತದೆಂದರೆ, ನಿಮ್ಮಲ್ಲೇ ಗೊಂದಲ ಸೃಷ್ಟಿಸಿಬಿಡುತ್ತದೆ, ತಪ್ಪು ನಿರ್ಣಯ ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತದೆ
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

ಮೀನ

meenaತಾಂತ್ರಿಕ ವರ್ಗ ಮತ್ತು ವೈದ್ಯಕೀಯ ರಂಗದಲ್ಲಿರುವವರಿಗೆ ವಿಶೇಷ ಅನುಕೂಲತೆಗಳು ಉಂಟಾಗುವವು. ನಿಮ್ಮ ಸಾಮಾಜಿಕ ಕಾಳಜಿ ಮತ್ತು ಸೇವೆಯನ್ನುಜನರು ಕೊಂಡಾಡುವರು.ಇದಕ್ಕೆಲ್ಲ ಕಾಲವೇ ಉತ್ತರ ನೀಡಲಿದೆ. ದೂರ ಪ್ರಯಾಣ ಕೈಗೊಂಡರೆ ಸುರಕ್ಷತೆಯ ಕಡೆಗೆ ಗಮನವಿಡಿ. ನೀರಿನೊಂದಿಗೆ ಚೆಲ್ಲಾಟ ಬೇಡವೇಬೇಡ. ಷೇರು ಮಾರುಕಟ್ಟೆಯಲ್ಲಿ ಹೂಡುವ ಚಿಂತನೆ ಹೊಂದಿದ್ದರೆ ಇದು ಸಕಾಲ
ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ
ಪಂಡಿತ್ ಶೇಷಾದ್ರಿ ಭಟ್
9663053736

Please follow and like us:
0
https://kannadadalli.com/wp-content/uploads/2018/10/IMG-20181019-WA0000-512x683.jpghttps://kannadadalli.com/wp-content/uploads/2018/10/IMG-20181019-WA0000-150x100.jpgKannadadalli Editorಆಧ್ಯಾತ್ಮದಿನ ಭವಿಷ್ಯ,ರಾಶಿ ಭವಿಷ್ಯಮೇಷ ನಮ್ಮ ಮಕ್ಕಳು ಕನ್ನಡಿಯೊಳಗಿನ ಪ್ರತಿಬಿಂಬದಂತೆ. ಹೊರಗೆ ನಾವು ಕಾಣುತ್ತಿದ್ದರೆ, ಒಳಗೆ ನಮ್ಮ ಪ್ರತಿಬಿಂಬವಿರುವುದಿಲ್ಲ, ಮಕ್ಕಳ ಪ್ರತಿಬಿಂಬವಿರುತ್ತದೆ. ಅವರನ್ನು ತಿದ್ದುವುದು, ತೀಡುವುದು, ನಮಗೆ ಬೇಕಾಗಿರುವ ಹಾಗೆ ಪರಿವರ್ತಿಸಿಕೊಳ್ಳುವುದು, ನಮ್ಮನ್ನೇ ಪರಿವರ್ತಿಸಿಕೊಂಡಂತೆ.ಅನೇಕ ರೀತಿಯ ಒತ್ತಡಗಳ ನಡುವೆಯೂ ಯಶಸ್ಸಿನ ದಾರಿಯನ್ನು ಕಂಡುಕೊಳ್ಳಲು ಸುದಿನವಾಗಿದೆ. ಅಂತೆಯೇ ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದ್ದು ಮೌನ ತಾಳಿ. ಬ್ರಾಹ್ಮೀಣಿ ದುರ್ಗಾಂಬಿಕಾ ಜ್ಯೋತಿಷ್ಯ ಭವನ ಪಂಡಿತ್ ಶೇಷಾದ್ರಿ ಭಟ್ 9663053736 ವೃಷಭ ಹಣಕಾಸಿನ ವಿಷಯದಲ್ಲಿ, ಆಭರಣಗಳ ವಿಷಯದಲ್ಲಿ ಹತ್ತಿರದ ಬಂಧುಗಳೇ ನಿಮಗೆ...ಕನ್ನಡಿಗರ ವೆಬ್​ ಚಾನೆಲ್​