ತುರುವೇಕೆರೆ: ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಕಳ್ಳತನ ನಡೆಯುತ್ತಿರುವುದಕ್ಕೆ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಶಾಸಕ ಎ.ಎಸ್. ಜಯರಾಮ್ ಆರೋಪಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ದೇವಾಲಯಗಳಲ್ಲಿ ದೇವರ ಹುಂಡಿ ಹಣ ಕಳುವಾಗುತ್ತಿದ್ದರೂ ಪೊಲೀಸ್ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗದೆ ಇರುವ ಕಾರಣ ಘಟನೆ ಮರುಕಳಿಸುತ್ತಿದೆ. ಈ ಬಗ್ಗೆ ಈಗಾಗಲೇ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ತಾಲ್ಲೂಕು ಮಟ್ಟದ ಸಿಪಿಐ, ಪಿಎಸ್ಐ ಹಾಗೂ ಪೊಲೀಸರಿಗೆ ದೇವಾಲಯಗಳು ಸೇರಿದಂತೆ ಎಲ್ಲಿಯೂ ಕಳ್ಳತನವಾಗದಂತೆ ಎಚ್ಚರಿಕೆ ವಹಿಸಲು, ರಾತ್ರಿ ವೇಳೆ ಗಸ್ತು ತಿರುಗುವಂತೆ ಸೂಕ್ತ ನಿರ್ದೇಶನ ನೀಡುವಂತೆ
ಹೇಳಿದ್ದೇನೆ ಎಂದರು.

ಭಕ್ತಾಧಿಗಳು ದೇವರ ಸೇವೆಗೆಂದು ನೀಡಿರುವ ಹಣ ಕಳ್ಳರ ಪಾಲಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಈಗಾಗಲೇ ದಂಡಿನಶಿವರ ಶ್ರೀ ಹೊನ್ನಾದೇವಿ ದೇವಾಲಯದಲ್ಲಿ, ಸಿ.ಎಸ್.ಪುರ ಹೋಬಳಿ ಮಣಿಕುಪ್ಪೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಳುವಾಗಿದೆ. ದುಂಡದ ಶ್ರೀ ಬೊಮ್ಮಲಿಂಗೇಶ್ವರ ದೇವಸ್ಥಾನದಲ್ಲಿ ಕಳುವು ಮಾಡಲು ಕಳ್ಳರು ಪ್ರಯತ್ನಿಸಿದ್ದು, ಯುವಕರ ಸಮಯಪ್ರಜ್ಞೆಯಿಂದ ಕಳ್ಳತನ ನಡೆದಿಲ್ಲ ಎಂದ ಅವರು, ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಮುಜರಾಯಿ ದೇವಾಲಯಗಳಲ್ಲಿರುವ ಹುಂಡಿಯನ್ನು ಕೂಡಲೇ ತೆಗೆದು ಅದರಲ್ಲಿರುವ ಹುಂಡಿ ಹಣವನ್ನು ಸರ್ಕಾರದ ಖಾತೆಗೆ ಜಮಾಗೊಳಿಸುವಂತೆ ಸಂಬಂಧಿಸಿದ ತಹಸೀಲ್ದಾರ್ ಅವರಿಗೆ ಸೂಚಿಸಿದ್ದೇನೆ ಎಂದರು.

ಮುಜರಾಯಿ ಇಲಾಖೆಗೆ ಸಂಬಂಧಪಡದ ದೇವಾಲಯಗಳಲ್ಲಿ ಆಯಾ ದೇವಸ್ಥಾನದ ಧರ್ಮದರ್ಶಿ ಮಂಡಳಿ ಕೂಡಲೇ ತಮ್ಮ ದೇವಸ್ಥಾನದ ಹುಂಡಿಯನ್ನು ತೆಗೆದು ಅದರಲ್ಲಿರುವ ಹಣವನ್ನು ದೇವಸ್ಥಾನದ ಖಾತೆಗೆ ಜಮಾ ಮಾಡಿಕೊಳ್ಳುವಂತೆ ಶಾಸಕರು ಮನವಿ ಮಾಡಿದ್ದಾರೆ.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
https://kannadadalli.com/wp-content/uploads/2019/02/IMG-20190211-WA0003-565x683.jpghttps://kannadadalli.com/wp-content/uploads/2019/02/IMG-20190211-WA0003-150x100.jpgKannadadalli Editorಸುದ್ದಿತುರುವೇಕೆರೆ: ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಕಳ್ಳತನ ನಡೆಯುತ್ತಿರುವುದಕ್ಕೆ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಶಾಸಕ ಎ.ಎಸ್. ಜಯರಾಮ್ ಆರೋಪಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ದೇವಾಲಯಗಳಲ್ಲಿ ದೇವರ ಹುಂಡಿ ಹಣ ಕಳುವಾಗುತ್ತಿದ್ದರೂ ಪೊಲೀಸ್ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗದೆ ಇರುವ ಕಾರಣ ಘಟನೆ ಮರುಕಳಿಸುತ್ತಿದೆ. ಈ ಬಗ್ಗೆ ಈಗಾಗಲೇ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ತಾಲ್ಲೂಕು ಮಟ್ಟದ ಸಿಪಿಐ, ಪಿಎಸ್ಐ ಹಾಗೂ ಪೊಲೀಸರಿಗೆ ದೇವಾಲಯಗಳು...ಕನ್ನಡಿಗರ ವೆಬ್​ ಚಾನೆಲ್​