ಮಳೆಗಾಲ ಬೇರೆ ಪ್ರಾರಂಭವಾಗಿದೆ. ಯಾವಾಗ ಮಳೆ ಶುರುವಾಗಿ ಯಾವಾಗ ನಿಲ್ಲುತ್ತದೆ ಎಂಬುದು ತಿಳಿಯುವುದೇ ಇಲ್ಲ. ಆದರೆ ಹೊರಗೆ ಮಳೆ ಬರುತ್ತಿರುವುದನ್ನು ನೋಡುತ್ತಿದ್ದರೆ, ಬಿಸಿ ಬಿಸಿಯಾಗಿ ಸ್ಪೈಸಿಯಾದ ಆಹಾರವನ್ನು ತಿನ್ನಬೇಕೆನಿಸುವುದು ಸಹಜವೇ ಬಿಡಿ.

ಹೊರಗೆ ಸುರಿಯುತ್ತಿರುವ ಸಂಜೆಯ ವೇಳೆಯಲ್ಲಿ ಬಿಸಿ ಬಿಸಿ ಟೀ ಅಥವಾ ಕಾಫಿ ಜೊತೆ ಬಿಸಿ ಬಿಸಿ ಸ್ನ್ಯಾಕ್ಸ್ ಇದ್ದರೆ ಎಷ್ಟು ಚೆಂದ ಅಲ್ವಾ? ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಬಾಯಿ ಚಪಲ ಮಾತ್ರ ಇರುತ್ತದೆ. ಅದೇ ಕಾರಣಕ್ಕಾಗಿ ನಾವು ಇಂದು ನಿಮಗೆ ಸಂಜೆ ವೇಳೆ ಮಾಡಬಹುದಾಗಿ ಸ್ನ್ಯಾಕ್ಸ್ ತಿಂಡಿಯ ರೆಸಿಪಿಯನ್ನು ನೀಡುತ್ತಿದ್ದೇವೆ.

ಸಾಮಾನ್ಯವಾಗಿ ಆಲೂಗೆಡ್ಡೆ ಎಂದರೆ ಮಕ್ಕಳಿಗೆ ಇಷ್ಟವಾಗುತ್ತದೆ. ಬಾಯಿಗೆ ಅಷ್ಟೇನೂ ರುಚಿ ಕೊಡದಿದ್ದರೂ ಕೂಡ ರುಚಿ ರುಚಿಯಾದ ಆಹಾರವನ್ನು ತಯಾರು ಮಾಡಬಹುದು. ಅದರಲ್ಲಿ ಆಲೂಗೆಡ್ಡೆ ಸಮೋಸ ಕೂಡ ಒಂದು.

ಆಲೂಗೆಡ್ಡೆ ಸಮೋಸಾ ಮಾಡಲು ಬೇಕಾಗುವ ಸಾಮಗ್ರಿಗಳು:

 

ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಹಸಿ ಬಟಾಣಿ  (ಒಣ ಬಟಾಣಿಯನ್ನು ಬೇಯಿಸಿ ಕೂಡ ಬಳಸಬಹುದು), ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹೆಚ್ಚಿದ ಹಸಿಮೆಣಸಿನಕಾಯಿ, ಗರಂ ಮಸಾಲ, ಸಾಸಿವೆ,  ಜೀರಿಗೆ, ಎಣ್ಣೆ, 2-3 ಚಮಚ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಅಜ್ವಾನ (ಓಂಕಾಳು), ಇಂಗು.

ಮಾಡುವ ವಿಧಾನ:

ಪಾತ್ರೆಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಓಂಕಾಳು, ಬಿಸಿ ಎಣ್ಣೆ, ನೀರು, ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.

10-15 ನಿಮಿಷ ಹಿಟ್ಟನ್ನು ನೆನೆಯಲು ಬಿಡಿ.

ಅಷ್ಟರಲ್ಲಿ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಇಂಗು ಹಾಕಿ. ಒಗ್ಗರಣೆ ಸಿಡಿದ ಮೇಲೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಬಾಡಿಸಿ.

ಈರುಳ್ಳಿ ಬೆಂದ ಮೇಲೆ ಬೇಯಿಸಿದ ಬಟಾಣಿ, ಬೇಯಿಸಿ ಹೆಚ್ಚಿದ ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ಉಪ್ಪು, ಗರಂ ಮಸಾಲ ಹಾಕಿ ಮುಗುಚಿ.

ಕಲಸಿದ ಗೋಧಿ ಹಿಟ್ಟನ್ನು ಲಟ್ಟಿಸಿ. ಚಪಾತಿ ತರ ಉಟ್ಟಿಸಿ.

ಮಧ್ಯ ಕತ್ತರಿಸಿ. ಕತ್ತರಿಸಿದ ಭಾಗಕ್ಕೆ ನೀರು ತಾಗಿಸಿ, ತ್ರಿಕೋನ ಆಗುವಂತೆ ಅಂಟಿಸಿ.

ಬಾಯಿ ತೆರೆದಿರುವ ಕಡೆ ಆಲೂಗಡ್ಡೆ ಪಲ್ಯ ತುಂಬಿಸಿ ಅದನ್ನು ಮುಚ್ಚಿ.

ಕಾದ ಎಣ್ಣೆಯಲ್ಲಿ ಹಾಕಿ ಹೊಂಬಣ್ಣ ಬರುವವರೆಗೂ ಕರಿದು ತೆಗೆದರೆ ಬಿಸಿ ಬಿಸಿ ಸಮೋಸ ಟೊಮೆಟೊ ಸಾಸ್ ಜೊತೆ ಸವಿಯಲು ಸಿದ್ಧ.

-ಅಶ್ವಿನಿ ವಿನಾಯಕPlease follow and like us:
0
https://kannadadalli.com/wp-content/uploads/2018/07/Potato_Samosas_8.jpghttps://kannadadalli.com/wp-content/uploads/2018/07/Potato_Samosas_8-150x100.jpgSowmya KBತಿಂಡಿ-ತಿನಿಸುevening snacks,potato samosa,rainy day,snacksಮಳೆಗಾಲ ಬೇರೆ ಪ್ರಾರಂಭವಾಗಿದೆ. ಯಾವಾಗ ಮಳೆ ಶುರುವಾಗಿ ಯಾವಾಗ ನಿಲ್ಲುತ್ತದೆ ಎಂಬುದು ತಿಳಿಯುವುದೇ ಇಲ್ಲ. ಆದರೆ ಹೊರಗೆ ಮಳೆ ಬರುತ್ತಿರುವುದನ್ನು ನೋಡುತ್ತಿದ್ದರೆ, ಬಿಸಿ ಬಿಸಿಯಾಗಿ ಸ್ಪೈಸಿಯಾದ ಆಹಾರವನ್ನು ತಿನ್ನಬೇಕೆನಿಸುವುದು ಸಹಜವೇ ಬಿಡಿ. ಹೊರಗೆ ಸುರಿಯುತ್ತಿರುವ ಸಂಜೆಯ ವೇಳೆಯಲ್ಲಿ ಬಿಸಿ ಬಿಸಿ ಟೀ ಅಥವಾ ಕಾಫಿ ಜೊತೆ ಬಿಸಿ ಬಿಸಿ ಸ್ನ್ಯಾಕ್ಸ್ ಇದ್ದರೆ ಎಷ್ಟು ಚೆಂದ ಅಲ್ವಾ? ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಬಾಯಿ ಚಪಲ ಮಾತ್ರ ಇರುತ್ತದೆ. ಅದೇ ಕಾರಣಕ್ಕಾಗಿ ನಾವು ಇಂದು...ಕನ್ನಡಿಗರ ವೆಬ್​ ಚಾನೆಲ್​