ಹೆರಿಗೆ ರಜೆಗೆ ತೆರಳಿದ ಮಹಿಳಾ ನೌಕರರಿಗೆ ಸಿಹಿ ಸುದ್ಧಿ

ಹೆಣ್ಣು ಮಕ್ಕಳನ್ನ ಕೆಲವರು ತಿರಸ್ಕರಿಸುತ್ತಾರೆ. ಕೆಲವೊಮ್ಮೆ ಈ ಸಮಾಜ ಕೂಡ ತಿರಸ್ಕರಿಸುತ್ತದೆ. ಹೆಣ್ಣು ಮಕ್ಕಳು ಅಂದರೆ ನಾಲ್ಕು ಗೋಡೆಯ ಮಧ್ಯೆ ಮಾತ್ರ ಇರಬೇಕು ಎನ್ನುತ್ತಿದ್ದ ಈ ಸಮಾಜ ಈಗ ಹೆಣ್ಣು ಮಕ್ಕಳ ಪರವಾಗಿಯೇ ನಿಂತಿದೆ. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ರೀತಿಯ ಯೋಜನೆಗಳನ್ನು ಸರ್ಕಾರವು ಕೂಡ ಜಾರಿಗೆ ತಂದಿದೆ.
ಇದೀಗ ಕೇಂದ್ರ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಅನ್ನು ನೀಡಿದೆ. ಹೆರಿಗೆ ರಜೆಗೆ ತೆರಳಿದ ಮಹಿಳಾ ನೌಕರರ ಹೆರಿಗೆ ರಜೆ ಅವಧಿಯನ್ನು ಗ್ರ್ಯಾಚ್ಯುಟಿ ನೀಡುವ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಳ್ಳವಂತೆ ಕೇಂದ್ರ ಸರ್ಕಾರದ ನೂತನ ವಿದೇಯಕವೊಂದನ್ನು ಅಸ್ತು ನೀಡಿದೆ.

ಈ ಹೊಸ ವಿದೇಯಕದಿಂದ ಹೆರಿಗೆ ರಜೆ ಅವಧಿಯನ್ನೂ ಗ್ರ್ಯಾಚ್ಯುಟಿ ನೀಡುವ ಸೇವಾ ಅವಧಿಯನ್ನು ಪರಿಗಣಿಸುವುದು ಮತ್ತು ಆ ಅವಧಿಯನ್ನು ಗ್ರ್ಯಾಚ್ಯುಟಿ ಹಣವನ್ನು ನೌಕರರಿಗೆ ನೀಡವಂತೆ ಹೊಸ ವಿದೇಯಕವೊಂದನ್ನು ಸೃಷ್ಟಿಸಿದೆ. ಹೆರಿಗೆ ರಜೆಗೆ ತೆರಳಿದ ಮಹಿಳಾ ನೌಕರರ ಹೆರಿಗೆ ರಜೆ ಅವಧಿಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿರುವ ಗ್ರಾಚ್ಯುಟಿ ಬಿಲ್ 2017ರ ಷಅನುಸಾರ ಗ್ರ್ಯಾಚ್ಯುಟಿ ನೀಡುವ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.ಕಳೆದ ವರ್ಷವಷ್ಟೆ ಮೆಟರ್ನಿಟಿ ಬೆನಿಫಿಟ್ ಕಾಯಿದೆಯನ್ನು ಅಂಗೀಕರಿಸಿದ್ದ ರಾಜ್ಯ ಸಭೆ ಇತ್ತಿಚಿಗೆ ಲೋಕಸಭೆಯಲ್ಲೂ ಅಂಗೀಕಾರವನ್ನು ನೀಡಿತ್ತು.

Loading…

Please follow and like us:
0
https://kannadadalli.com/wp-content/uploads/2018/03/174559_12d94ee088643523d7e71a26fcf9a6ed_large-e1531561982582.jpghttps://kannadadalli.com/wp-content/uploads/2018/03/174559_12d94ee088643523d7e71a26fcf9a6ed_large-150x100.jpgManjulaಸುದ್ದಿleave.,pragnentಹೆರಿಗೆ ರಜೆಗೆ ತೆರಳಿದ ಮಹಿಳಾ ನೌಕರರಿಗೆ ಸಿಹಿ ಸುದ್ಧಿ ಹೆಣ್ಣು ಮಕ್ಕಳನ್ನ ಕೆಲವರು ತಿರಸ್ಕರಿಸುತ್ತಾರೆ. ಕೆಲವೊಮ್ಮೆ ಈ ಸಮಾಜ ಕೂಡ ತಿರಸ್ಕರಿಸುತ್ತದೆ. ಹೆಣ್ಣು ಮಕ್ಕಳು ಅಂದರೆ ನಾಲ್ಕು ಗೋಡೆಯ ಮಧ್ಯೆ ಮಾತ್ರ ಇರಬೇಕು ಎನ್ನುತ್ತಿದ್ದ ಈ ಸಮಾಜ ಈಗ ಹೆಣ್ಣು ಮಕ್ಕಳ ಪರವಾಗಿಯೇ ನಿಂತಿದೆ. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ರೀತಿಯ ಯೋಜನೆಗಳನ್ನು ಸರ್ಕಾರವು ಕೂಡ ಜಾರಿಗೆ ತಂದಿದೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಅನ್ನು ನೀಡಿದೆ. ಹೆರಿಗೆ...ಕನ್ನಡಿಗರ ವೆಬ್​ ಚಾನೆಲ್​